ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರ ಕರ್ನಾಟಕದಲ್ಲಿ ಬಂದ್ ಗೆ ಸಂಪೂರ್ಣ ಬೆಂಬಲ

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಹಾವೇರಿ/ಯಾದಗಿರಿ, ಗದಗ: ಜನವರಿ 25 : ಕಳಸಾ ಬಂಡೂರಿ ನಾಲಾ ಯೋಜನೆ, ಮಹದಾಯಿ ನದಿ ನೀರಿಗಾಗಿ ಆಗ್ರಹಿಸಿ ನಡೆಸುತ್ತಿರುವ ಕರ್ನಾಟಕ ಬಂದ್ ಗೆ ಉತ್ತರ ಕರ್ನಾಟಕದಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ.

ಚಿತ್ರಗಳು : ಮಹದಾಯಿಗಾಗಿ ಕರ್ನಾಟಕ ಬಂದ್

Recommended Video

ಮಹದಾಯಿಗಾಗಿ ಕರ್ನಾಟಕ ಬಂದ್ | ಹುಬ್ಬಳ್ಳಿಯಲ್ಲಿ ಬಂದ್ ಬಿಸಿ ಜೋರು | Oneindia Kannada

ಪ್ರಮುಖವಾಗಿ ಉತ್ತರ ಕರ್ನಾಟಕದ ನರಗುಂಸ, ಹಾವೇರಿಮ ಯಾದಗಿರಿಯಲ್ಲಿ ಬಂದ್ ಗೆ ಬೆಂಬಲ ವ್ಯಕ್ತವಾಗಿದ್ದು, ಯಾವುದೇ ರೀತಿಯ ವಾಹನಗಳು ರಸ್ತೆಗಿಳಿಯದೇ ಕರ್ನಾಟಕ ಬಂದ್ ಗೆ ಬೆಂಬಲ ವ್ಯಕ್ತಪಡಿಸಿವೆ. ಯಾದಗಿರಿ, ಹೊಸಪೇಟೆಯಲ್ಲಿ ಪ್ರತಿಭಟನಾಕಾರರು ಉದ್ಯಾನ ಎಕ್ಸ್ಪ್ರೆಸ್ ರೈಲು ತಡೆದು ಪ್ರತಿಭಟನೆ ನಡೆಸಿದ್ದಾರೆ.

ಕರ್ನಾಟಕ ಬಂದ್: ಬೆಂಬಲಕ್ಕಿಂತ ಬೈಗುಳವೇ ಜಾಸ್ತಿ?!ಕರ್ನಾಟಕ ಬಂದ್: ಬೆಂಬಲಕ್ಕಿಂತ ಬೈಗುಳವೇ ಜಾಸ್ತಿ?!

ಅಂತೆಯೇ ಕಳಸಾ-ಬಂಡೂರಿ ಹೋರಾಟದ ಕೇಂದ್ರ ಸ್ಥಾನವಾಗಿರುವ ಗದಗದ ನರಗುಂದದಲ್ಲಿ ಪ್ರತಿಭಟನೆ ಬಿಸಿ ಹೆಚ್ಚಾಗಿದ್ದು, ಮುಂಜಾನೆಯೇ ಪ್ರತಿಭಟನಾಆರರು ವಿಜಯಪುರ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಬೆಂಜಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Karnataka bandh: Good response from every corner of the state

ದಾವಣಗೆರೆಯಲ್ಲೂ ಬೆಳಗ್ಗೆ ಬೀದಿಗಿಳಿದಿರುವ ಸಂಘಟನೆಗಳು ಮಹದಾಯಿ ವಿವಾದ ಇತ್ಯರ್ಥಪಡಿಸುವಂತೆ ಒತ್ತಾಯಿಸಿದ್ದಾರೆ. ರೈತ ಸಂಘಟನೆ ಹಾಗೂ ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಗುತ್ತಿದೆ. ಜಯದೇವ ಸರ್ಕಲ್ ಬಳಿ ಟಯರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ಬಂದ್: ಯಾವ ಸೇವೆ ಇದೆ? ಯಾವುದು ವ್ಯತ್ಯಯ?ಕರ್ನಾಟಕ ಬಂದ್: ಯಾವ ಸೇವೆ ಇದೆ? ಯಾವುದು ವ್ಯತ್ಯಯ?

ನರಗುಂದ ಪಟ್ಟಣದಲ್ಲಿ ಗೋವಾ ಕಾರಿನ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ, ಗೋವಾ ಪಾಟಿಂಗ್ ಕಾರ್ ನೋಡಿ ಆಕ್ರೋಶಗೊಂಡ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದಾರೆ. ಅಂಗಡಿ ಮುಗ್ಗಟ್ಟುಗಳು, ಪೆಟ್ರೋಲ್ ಬಂಕ್, ತರಕಾರಿಗಳು ಹಾಗೂ ಮಾರ್ಕೆಟ್ ಬಂದ್ ಮಾಡಲಾಗಿದೆ. ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.

English summary
In various districts of the state normal life hit as bu, train and other transportation was interrupted and schools and colleges were remaining closed followinf the karnataka bandh called by many pro kannada organizations on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X