ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚನೆ ; ಸಿದ್ದರಾಮಯ್ಯ ಹೇಳಿದ್ದೇನು?
Recommended Video
ಬೆಂಗಳೂರು, ಜುಲೈ 26 : "ಕರ್ನಾಟಕದ ವಿಧಾನಸಭೆ ಬಿಜೆಪಿ ಪಾಲಿಗೆ ಪ್ರಯೋಗಾಲಯವಾಗಿದೆ. ಕಾನೂನಿಗೆ ವಿರುದ್ಧವಾಗಿ ಬಿಜೆಪಿ ಸರ್ಕಾರ ರಚನೆ ಮಾಡುತ್ತಿದೆ" ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಶುಕ್ರವಾರ ಕರ್ನಾಟಕದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ಬಿ. ಎಸ್. ಯಡಿಯೂರಪ್ಪ ರಾಜ್ಯಪಾಲ ವಜುಭಾಯಿ ವಾಲಾರನ್ನು ಭೇಟಿಯಾಗಿ ಸರ್ಕಾರ ರಚನೆ ಹಕ್ಕು ಮಂಡನೆ ಮಾಡಿದರು. ಸಂಜೆ 6 ಗಂಟೆಗೆ ಅವರು ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.
"ಕರ್ನಾಟಕ ಬಿಜೆಪಿ 105 ಸದಸ್ಯ ಬಲವನ್ನು ಮಾತ್ರ ಹೊಂದಿದೆ. ವಿಧಾನಸಭೆಯ ಬಲಾಬಲಕ್ಕಿಂತ ಅರ್ಧದಷ್ಟು ಕಡಿಮೆ ಬಲವಿದೆ" ಎಂದು ಸಿದ್ದರಾಮಯ್ಯ ಟ್ವೀಟ್ ಮೂಲಕ ಹೇಳಿದ್ದು, ಸರ್ಕಾರ ರಚನೆಯನ್ನು ಖಂಡಿಸಿದರು.
"ಬಿಜೆಪಿಗೆ ಬಹುಮತವೇ ಇಲ್ಲ. ಸಂವಿಧಾನದ ಯಾವ ನಿಯಮದ ಅನ್ವಯ ರಾಜ್ಯಪಾಲರು ಸರ್ಕಾರ ರಚನೆ ಮಾಡಲು ಪಕ್ಷಕ್ಕೆ ಆಹ್ವಾನ ನೀಡಿದರು?" ಎಂದು ಸಿದ್ದರಾಮಯ್ಯ ಟ್ವೀಟರ್‌ನಲ್ಲಿ ಪ್ರಶ್ನೆ ಮಾಡಿದರು..

ಪಕ್ಷಕ್ಕೆ ಬಹುಮತವೇ ಇಲ್ಲ
"ಕರ್ನಾಟಕ ವಿಧಾನಸಭೆ ಬಿಜೆಪಿಗೆ ಪ್ರಯೋಗಾಲಯವಾಗಿದೆ. ಬಿಜೆಪಿ ಬೆಂಬಲಿತ ರಾಜ್ಯಪಾಲರು ಸಂವಿಧಾನಕ್ಕೆ ವಿರುದ್ಧ ವಾಗಿ ಸರ್ಕಾರ ರಚನೆ ಮಾಡಲು ಒಪ್ಪಿಗೆ ಕೊಟ್ಟಿದ್ದಾರೆ. ಬಹುಮತವೇ ಇಲ್ಲದ ಪಕ್ಷಕ್ಕೆ ಸಂವಿಧಾನದ ಯಾವ ನಿಯಮದ ಪ್ರಕಾರ ಸರ್ಕಾರ ರಚನೆ ಮಾಡಲು ಒಪ್ಪಿಗೆ ಕೊಡಲಾಗಿದೆ" ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದರು.

105 ಸದಸ್ಯರ ಬಲಮಾತ್ರವಿದೆ
"ಸಂವಿಧಾನದ ಪ್ರಕಾರ ಹೋದರೆ ಬಿಜೆಪಿ ಸರ್ಕಾರ ರಚನೆ ಮಾಡಲು ಸಾಧ್ಯವೇ ಇಲ್ಲ. ಬಿಜೆಪಿಗೆ ಪ್ರಜಾಪ್ರಭುತ್ವದ ಆಶಯದ ಮೇಲೆ ನಂಬಿಕೆ ಇಲ್ಲ ಎಂಬುದು ಇದರಿಂದ ಸಾಬೀತಾಗುತ್ತದೆ. ಬಿಜೆಪಿ 105 ಸದಸ್ಯ ಬಲ ಹೊಂದಿದೆ ಇದು ಬಹುಮತಕ್ಕಿಂತ ಅರ್ಧದಷ್ಟು ಕಡಿಮೆ" ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಸಂಖ್ಯಾಬಲದ ಲೆಕ್ಕದ ವಿವರ
224 ಬಲದ ವಿಧಾನಸಭೆಯಲ್ಲಿ ಬಿಜೆಪಿ ಶಾಸಕರ ಸಂಖ್ಯೆ 105. ಮಳಬಾಗಿಲು ಕ್ಷೇತ್ರದ ಪಕ್ಷೇತರ ಶಾಸಕ ಎಚ್. ನಾಗೇಶ್ ಬೆಂಬಲ ನೀಡಿದರೆ 106. ಬಹುಮತ ಸಾಬೀತಿಗೆ ಬೇಕಾದ ಮ್ಯಾಜಿಕ್ ನಂಬರ್ ಪ್ರಸ್ತುತ 111 (3 ಶಾಸಕರ ಅನರ್ಹತೆ ಬಳಿಕ).

221 ಸದಸ್ಯ ಬಲ
ಸ್ಪೀಕರ್ ರಮೇಶ್ ಕುಮಾರ್ 3 ಶಾಸಕರನ್ನು ಗುರುವಾರ ಅನರ್ಹತೆ ಮಾಡಿದರು. ಇದರಿಂದಾಗಿ ವಿಧಾನಸಭೆ ಬಲ 221ಕ್ಕೆ ಕುಸಿದಿದೆ. ಬಹುಮತ ಸಾಬೀತು ಮಾಡಲು 111 ಮ್ಯಾಜಿಕ್ ನಂಬರ್. ಇಬ್ಬರು ಅನರ್ಹಗೊಂಡ ಬಳಿಕ ಕಾಂಗ್ರೆಸ್ ಬಲ 76, ಜೆಡಿಎಸ್ ಬಲ 37 (ರಾಜೀನಾಮೆ ಕೊಟ್ಟವರು ಸೇರಿ). ಬಿಎಸ್‌ಪಿ 1, ಪಕ್ಷೇತರ 1.












Click it and Unblock the Notifications