Get Updates
Get notified of breaking news, exclusive insights, and must-see stories!

Koppal Elections: ಕೊಪ್ಪಳ ಕ್ಷೇತ್ರದಲ್ಲಿ ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆಯಲ್ಲಿ ಹಿಟ್ನಾಳ: ಬಿಜೆಪಿ ಲೆಕ್ಕಾಚಾರವೇನು?

ಕೊಪ್ಪಳ, ಮಾರ್ಚ್‌, 24: ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಎಲ್ಲಾ ಪಕ್ಷಗಳ ರಾಜಕೀಯ ನಾಯಕರು ಮತದಾರರನ್ನು ತಮ್ಮತ್ತ ಸೆಳೆಯಲು ಭಾರಿ ಕಸರತ್ತು ನಡೆಸುತ್ತಿದ್ದಾರೆ. ಹಾಗಾದರೆ ಭತ್ತದ ಕಣಜ ಅಂತಲೇ ಪ್ರಸಿದ್ಧಿಯಾಗಿರುವ ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಯ ಸದ್ದು ಹೇಗಿದೆ ಎಂದು ತಿಳಿಯೋಣ ಬನ್ನಿ.

ಭತ್ತದ ಕಣಜದ ವಿಶೇಷತೆ ಏನು?

ಭತ್ತದ ಕಣಜ ಎಂದೇ ಖ್ಯಾತಿ ಪಡೆದಿರುವ ಕೊಪ್ಪಳ ಜಿಲ್ಲೆಯನ್ನು 1997ರಲ್ಲಿ ರಚಿಸಲಾಯಿತು. 7,190 ಚದರ ಕಿಲೋ ಮೀಟರ್ ವಿಸ್ತೀರ್ಣ ಹೊಂದಿರುವ ಕೊಪ್ಪಳದಲ್ಲಿ ಹಲವು ಪ್ರವಾಸಿ, ಐತಿಹಾಸಿಕ ಸ್ಥಳಗಳಿವೆ. ಫ್ರೆಂಚರ ಸಹಾಯ ಪಡೆದು ಟಿಪ್ಪು ಸುಲ್ತಾನ್ ನಿರ್ಮಿಸಿದ ಕೊಪ್ಪಳ ಕೋಟೆ ಇಲ್ಲಿನ ಪ್ರಮುಖ ಆಕರ್ಷಣೆಗಳಲ್ಲಿ ಒಂದು.

koppala constituency map

ಜೈನರ ಗುಹಾ ದೇವಾಲಯ ಬಹದ್ದೂರ್ ಬಂಡಿ, 12ನೇ ಶತಮಾನದ ಐತಿಹಾಸಿಕ ಗ್ರಾಮ ಗುಂಡ್ಲವಡ್ಡಿಗೆರಿ, ಮದನೂರು ದೇವಸ್ಥಾನ, ಗವಿಮಠ ಇಲ್ಲಿದೆ. ಇಲ್ಲಿನ ಕಿನ್ನಾಳ ಗ್ರಾಮದಲ್ಲಿ ತಯಾರಾಗುವ ಕಿನ್ನಾಳ ಆಟಿಕೆಗೂ ಕೊಪ್ಪಳ ಪ್ರಸಿದ್ಧವಾಗಿದೆ.

ಅಲ್ಲದೇ ಪಂಪಾವನ, ಹಂಪಿಯ ಮಾತೃಸ್ಥಾನ ಆನೆಗೊಂದಿ, ಕೋಟಿಲಿ೦ಗಗಳ ಕ್ಷೇತ್ರ, ಅಶೋಕನ ಮೂರು ಶಾಸನಗಳು ಈ ಕ್ಷೇತ್ರದಲ್ಲಿವೆ. ಗಂಗಾವತಿ, ಸಿಂಧನೂರು ಮತ್ತು ಸಿರಗುಪ್ಪದಲ್ಲಿ ಅತಿ ದೊಡ್ಡ ಅಕ್ಕಿ ಗಿರಣಿಗಳಿವೆ. ದೇಶದ ದಾಳಿಂಬೆ ಮಾರುಕಟ್ಟೆಯಲ್ಲಿ ಕೊಪ್ಪಳ ನಂಬರ್ ಒನ್. ಸುಮಾರು 10 ರಿಂದ 15 ಬೃಹತ್ ಉಕ್ಕು ಹಾಗೂ ಕಬ್ಬಿಣ ಉತ್ಪಾದನಾ ಕಾರ್ಖಾನೆಗಳಿವೆ.

ಕೊಪ್ಪಳ ಕ್ಷೇತ್ರ ಪರಿಚಯ

ಈಗಾಗಲೇ ರಾಜಕೀಯ ಪಕ್ಷಗಳು ಚುನಾವಣೆಯ ಅಖಾಡವನ್ನು ಸಿದ್ಧಗೊಳಿಸಿವೆ. ಈ ನಡುವೆ ಕೊಪ್ಪಳ ವಿಧಾನಸಭಾ ಕ್ಷೇತ್ರದಿಂದ ಮತ್ತೆ ಸ್ಪರ್ಧಿಸಲು ಬಿಜೆಪಿ ಸಂಸದ ಸಂಗಣ್ಣ ಕರಡಿ ತುದಿಗಾಲಲ್ಲಿ ನಿಂತಿದ್ದಾರೆ. ಮತ್ತೊಂದೆಡೆ ನೋಡುವುದಾದರೆ ಸಂಗಣ್ಣಗೆ ಬಿಜೆಪಿ ಮುಖಂಡ ಸಿ.ವಿ. ಚಂದ್ರಶೇಖರ ತೀವ್ರ ಪೈಪೋಟಿ ನೀಡಲು ಸಜ್ಜಾಗಿದ್ದಾರೆ.

koppal mla k raghavendra hitnal

ಕುತೂಹಲ ಕೆರಳಿಸಿದ ಬಿಜೆಪಿ ಟಿಕೆಟ್‌ ಲೆಕ್ಕಾಚಾರ

ಈ ಹಿನ್ನೆಲೆ ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಯಾರಿಗೆ ಟಿಕೆಟ್ ನೀಡಲಿದೆ ಎನ್ನುವ ಕುತೂಹಲ ಎಲ್ಲಾರಲ್ಲೂ ಮೂಡಿದೆ. ಟಿಕೆಟ್‌ ಘೋಷಣೆಯ ಆಧಾರದ ಮೇಲೆ ಇಲ್ಲಿ ಸೋಲು ಗೆಲುವಿನ ಲೆಕ್ಕಾಚಾರ ನಿರ್ಧಾರ ಆಗುಗುತ್ತದೆ ಎನ್ನುವ ಮಾತುಗಳು ಕೂಡ ಕೇಳಿಬರುತ್ತಿವೆ.

ಕೊಪ್ಪಳ ಕ್ಷೇತ್ರದಿಂದ ಇದುವರೆಗೂ ಕೇವಲ ಒಬ್ಬರೇ ಒಬ್ಬರು ಸಚಿವರಾಗಿದ್ದಾರೆ. ಅದು ಕೇವಲ ಆರು ದಿನ ಮಾತ್ರ ಸಚಿವರಾಗಿದ್ದರು. ಅಚ್ಚರಿ ಅನಿಸಿದರೂ ಇದು ಸತ್ಯವಾಗಿದೆ. ವಿರೂಪಾಕ್ಷಪ್ಪ ಅಗಡಿಯವರು ಮಾತ್ರ 6 ದಿನಗಳ ಕಾಲ ಸಚಿವರಾಗಿ ಕಾರ್ತವ್ಯ ನಿಭಾಯಿಸಿದ್ದರು. ನಂತರ, ಯಾರೂ ಕೂಡ ಸಚಿವರಾಗಿಲ್ಲ.

16 ಬಾರಿ ಚುನಾವಣೆ

ಸಂಗಣ್ಣ ಕರಡಿ ಜೆಡಿಎಸ್‌ನಿಂದ ಆಯ್ಕೆಯಾಗಿ ಆಪರೇಷನ್ ಕಮಲದಿಂದ ಬಿಜೆಪಿಗೆ ಸೇರ್ಪಡೆ ಆಗಿದ್ದರು. ಆದ್ದರಿಂದ 2011ರಲ್ಲಿ ಉಪಚುನಾವಣೆ ನಡೆದಿತ್ತು. 1952ರಿಂದ ಇಲ್ಲಿಯವರೆಗೂ ಕೊಪ್ಪಳ ಕ್ಷೇತ್ರದಲ್ಲಿ 16 ಬಾರಿ ವಿಧಾನಸಭೆಗೆ ಚುನಾವಣೆ ನಡೆದಿದೆ. 2013ರಿಂದ ಇಲ್ಲಿಯವರೆಗೂ ಕಾಂಗ್ರೆಸ್‌ನ ಕೆ.ರಾಘವೇಂದ್ರ ಹಿಟ್ನಾಳ ಅವರೇ ಶಾಸಕರಾಗಿ ಹೊರಹೊಮ್ಮಿದವರಾಗಿದ್ದಾರೆ.

koppala map

ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿ ಹಿಟ್ಲಾಳ

ಇದೀಗ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿರುವ ರಾಘವೇಂದ್ರ ಅವರ ರೇಸ್‌ಗೆ ಅಡ್ಡಗೆರೆ ಹಾಕಲು ಬಿಜೆಪಿಯಿಂದ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸಲು ಪ್ಲಾನ್‌ ನಡೆದಿದೆ ಎನ್ನಲಾಗಿದೆ. ಈ ಹಿನ್ನೆಲೆ ಬಿಜೆಪಿಯಿಂದ ಇದೀಗ ಸಂಸದರಾಗಿರುವ ಸಂಗಣ್ಣ ಕರಡಿಯವರನ್ನು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವಂತೆ ಬೆಂಬಲಿಗರು ಒತ್ತಾಯಿಸಿದ್ದಾರೆ.

ಸಂಗಣ್ಣನವರ ರಾಜಕೀಯದ ಹಾದಿ

ಸಂಗಣ್ಣ ಅವರು 1994ರಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಆಯ್ಕೆಯಾಗಿದ್ದರು. 1999ರಲ್ಲಿ ಜೆಡಿಯುನಿಂದ ಆಯ್ಕೆ ಆಗಿದ್ದರು. 2004ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋಲುಂಡಿದ್ದರು. ನಂತರ 2008ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಆದರೆ ಅದೇ ಸಮಯದಲ್ಲಿ ಜೆಡಿಎಸ್‌ಗೆ ರಾಜೀನಾಮೆ ಕೊಟ್ಟು ಬಿಜೆಪಿ ಸೇರ್ಪಡೆಯಾದರು.

ಬಿಜೆಪಿ ಸೇರಿದ ನಂತರ 2011ರ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಸೋಲುಂಡಿದ್ದರು. ಮತ್ತೆ 2013ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋಲನುಭವಿಸಿದ್ದರು. ಆದರೆ ಅವರು 2014ರಿಂದ ಈವರೆಗೂ ಕೊಪ್ಪಳ ಕ್ಷೇತ್ರದಲ್ಲಿ ಬಿಜೆಪಿ ಸಂಸದರಾಗಿಯೇ ಉಳಿದಿದ್ದಾರೆ.

ಸಚಿವನಾಗಬೇಕೆನ್ನುವ ಆಸೆ ಹೊಂದಿರುವ ಸಂಗಣ್ಣ ಈ ಬಾರಿ ರಾಷ್ಟ್ರ ರಾಜಕಾರಣ ಬಿಟ್ಟು ಮತ್ತೆ ರಾಜ್ಯ ರಾಜಕಾರಣಕ್ಕೆ ಲಗ್ಗೆ ಇಡಲು ನಿರ್ಧರಿಸಿದ್ದಾರೆ. ಇದೇ ಕಾರಣದಿಂದಲೇ ಅವರು ಈ ಬಾರಿಯ ವಿಧಾನಸಭೆಗೆ ಸ್ಪರ್ಧಿಸಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಈಗಾಗಲೇ ಅವರ ಬೆಂಬಲಿಗರು ಟಿಕೆಟ್‌ ನೀಡುವಂತೆ ಹೈಕಮಾಂಡ್‌ಗೆ ಒತ್ತಡ ಹಾಕುತ್ತಲೇ ಇದ್ದಾರೆ.

ಸಂಗಣ್ಣ ಪ್ರತಿಕ್ರಿಯಿಸಿದ್ದು ಹೀಗೆ?

ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದ ಸಂಗಣ್ಣ, ಇಲ್ಲೇ ಸ್ಪರ್ಧಿಸಬೇಕೆಂದು ಕ್ಷೇತ್ರದ ಜನರು ಒತ್ತಾಯ ಮಾಡುತ್ತಿದ್ದಾರೆ. ಆದರೆ ನಾನು ಪ್ರಸ್ತುತ ಲೋಕಸಭಾ ಸದಸ್ಯನಾಗಿದ್ದೇನೆ. ಇನ್ನೂ ನನ್ನ ಸಂಸದ ಹುದ್ದೆಯ ಅವಧಿಯಿದೆ. ಪಕ್ಷ ಒಪ್ಪಿದರೆ ಮಾತ್ರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದು ಹೇಳಿದ್ದಾರೆ.

ಇನ್ನು 2018ರಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಮೊದಲು ಸಿ.ವಿ. ಚಂದ್ರಶೇಖರ್‌ ಅವರಿಗೆ ಟಿಕೆಟ್‌ ಎಂದು ಘೋಷಣೆ ಮಾಡಿದ್ದು, ಅಂತಿಮವಾಗಿ ಸಂಗಣ್ಣ ಕರಡಿ ಪುತ್ರ ಅಮರೇಶ ಕರಡಿಗೆ ಬಿ ಪಾರ್ಮ್‌ ನೀಡಲಾಗಿತ್ತು. ಇದೀಗ ಮತ್ತೆ ಸಿ.ವಿ. ಚಂದ್ರಶೇಖರ್‌ ಅವರು ಚುನಾವಣೆಗೆ ಸ್ಪರ್ಧಿಸಲು ನಿರ್ಧಾರ ಮಾಡಿದ್ದಾರೆ. ಈಗ ನಾನು ಪ್ರಬಲ ಆಕಾಂಕ್ಷಿಯಾಗಿದ್ದು, ಪಕ್ಷ ಯಾರಿಗೇ ಟಿಕೆಟ್ ನೀಡದರೂ ಪಕ್ಷದ ಗೆಲುವಿಗಾಗಿ ಶ್ರಮಿಸುತ್ತೇನೆ ಎಂದು ಹೇಳಿದ್ದಾರೆ.

ಸಮುದಾಯವಾರು ಮತದಾರರ ವಿವರ

ಮತ್ತೊಂದೆಡೆ ನೋಡುವುದಾದರೆ ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಲಿಂಗಾಯತ , ಕುರುಬ ಹಾಗೂ ಮುಸ್ಲಿಂ ಸಮುದಾಯದವರ ಮತಗಳೇ ಅಧಿಕ ಸಂಖ್ಯೆಯಲ್ಲಿವೆ. ಇನ್ನು ರಾಘವೇಂದ್ರ ಹಿಟ್ನಾಳ ಅವರು ಕುರುಬ ಸಮಾಜಕ್ಕೆ ಸೇರಿದವರಾಗಿದ್ದು, ಸಂಗಣ್ಣ ಹಾಗೂ ಸಿ.ವಿ. ಚಂದ್ರಶೇಖತ್‌ ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಚುನಾವಣೆಯಲ್ಲಿ ಜಾತಿ ವಿಚಾರವು ಕೂಡ ಪ್ರಬಲ ಅಸ್ತ್ರ ಆಗಿರುವದರಿಂದ ರಾಘವೇಂದ್ರರ ಓಟಕ್ಕೆ ಯಾರು ಬ್ರೇಕ್ ಹಾಕಲಿದ್ದಾರೆ ಎಂದು ಕಾದುನೋಡಬೇಕಿದೆ.

ಅಷ್ಟೇ ಅಲಲ್ಲದೇ ಸಂಗಣ್ಣ ಕರಡಿ ಅವರು ಜೆಡಿಎಸ್ ಅಥವಾ ಪಕ್ಷೇತರರಾಗಿ ಸ್ಪರ್ಧೆ ಮಾಡಲಿದ್ದಾರೆ ಎನ್ನುವ ವದಂತಿಯೂ ಇದೆ. ಆದರೆ ಅವರು ಬೇರೆ ಪಕ್ಷದಿಂದ ಸ್ಪರ್ಧೆ ಮಾಡಿದರೆ ಪ್ರಸ್ತುತ ಇರುವ ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ. ಈಗಾಗಲೇ ಸಂಗಣ್ಣ ಅವರಿಗೆ 72 ವರ್ಷ ವಯಸ್ಸಾಗಿದ್ದು, ಅವರಿಗೆ ಇದು ಕೊನೆಯ ಅವಕಾಶವಾಗಿದೆ ಎನ್ನಲಾಗಿದೆ. ವಯಸ್ಸಿನ ಲೆಕ್ಕಾಚಾರವನ್ನು ಗಮನಿಸಿದರೆ ಸಂಗಣ್ಣನವರಿಗೆ ಟಿಕೆಟ್ ನಿರಾಕರಿಸುವ ಸಾಧ್ಯತೆ ಹೆಚ್ಚಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಒಟ್ಟಿನಲ್ಲಿ ಸಂಗಣ್ಣ ಕರಡಿಯವರ ನಡೆ ಕತೂಹಲ ಮೂಡಿಸಿದ್ದು, ಬಿಜೆಪಿ ಹೈಕಮಾಂಡ್‌ ಯಾರಿಗೆ ಗಾಳ ಹಾಕುತ್ತದೆ ಎಂಬುದನ್ನು ಕಾದುನೋಡಬೇಕಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+