Get Updates
Get notified of breaking news, exclusive insights, and must-see stories!

ರಾಜ್ಯ ವಿಧಾನಸಭಾ ಚುನಾವಣೆ: ಕಾಂಗ್ರೆಸ್ 2ನೇ ಪಟ್ಟಿ ಬಿಡುಗಡೆ- ಟಿಕೆಟ್ ವಂಚಿತರು ಯಾರು?

ಬೆಂಗಳೂರು ಏಪ್ರಿಲ್ 6: ರಾಜ್ಯ ವಿಧಾನಸಭಾ ಚುನಾವಣೆಗೆ ದಿನಾಂಕ ಹತ್ತಿರವಾಗುತ್ತಿದ್ದಂತೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. 224 ವಿಧಾನಸಭಾ ಕ್ಷೇತ್ರಗಳಿಗೆ ಈಗಾಗಲೇ 124 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿರುವ ಕರ್ನಾಟಕ ಕಾಂಗ್ರೆಸ್, ಇಂದು (ಏಪ್ರಿಲ್ 6) 42 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕಾಂಗ್ರೆಸ್‌ ಎರಡನೇ ಪಟ್ಟಿಯಲ್ಲಿ ಕೆಲವರು ಟಿಕೆಟ್ ವಂಚಿತರಾಗಿದ್ದಾರೆ. ನಿರೀಕ್ಷೆಯಂತೆ ಕೆಲ ಪ್ರಭಾವಿಗಳಿಗೆ ಟಿಕೆಟ್ ಕೈತಪ್ಪಿ ಹೋಗಿದೆ. ಜೊತೆಗೆ ನಿರೀಕ್ಷೆ ಮಾಡದ ಅಭ್ಯರ್ಥಿಗಳಿಗೆ ಕಾಂಗ್ರೆಸ್ ಮಣೆ ಹಾಕಿದೆ.

ವೈ.ಎಸ್‌.ವಿ ದತ್ತಗೆ ಕೈ ತಪ್ಪಿದ ಟಿಕೆಟ್

ಕಾಂಗ್ರೆಸ್‌ನ ಈ ನಡೆ ಮುಂಬರುವ ಚುನಾವಣೆಗೆ ಹೊಡೆತ ನೀಡಲಿದೆಯೇ ಎನ್ನುವ ಅನುಮಾನ ಹುಟ್ಟು ಹಾಕಿದೆ. ಅಂದಹಾಗೆ ಕಾಂಗ್ರೆಸ್‌ ಟಿಕೆಟ್ ವಂಚಿತರಲ್ಲಿ ವೈ.ಎಸ್‌.ವಿ ದತ್ತ ಒಬ್ಬರು. ವೈ. ಎಸ್. ವಿ. ದತ್ತಾ ಯಗಟಿ ಸೂರ್ಯನಾರಾಯಣ ವೆಂಕಟೇಶ ದತ್ತ ಜೆಡಿಎಸ್‌ ನಾಯಕ. ಚಿಕ್ಕಮಗಳೂರು ಜಿಲ್ಲೆಯ ಕಡೂರು ಜಿಲ್ಲೆಯ ಮಾಜಿ ಶಾಸಕ. ಸರಳ ರಾಜಕಾರಣಿ ಕೂಡ ಹೌದು. ಇತ್ತೀಚೆಗೆಷ್ಟೇ ದತ್ತ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದರು. ಆಟೋದಲ್ಲಿ ಸಂಚಾರ ನಡೆಸುವ ದತ್ತ ಜನರ ಪ್ರೀತಿಯ ದತ್ತಣ್ಣ. ಈ ಬಾರಿ ದತ್ತಾ ಅವರಿಗೆ ಕಾಂಗ್ರೆಸ್ ಟಿಕೆಟ್ ಪಕ್ಕಾ ಎಂದು ನಿರೀಕ್ಷಿಸಲಾಗಿತ್ತು. ಆದರೆ ಕಾಂಗ್ರೆಸ್ ಆನಂದ್ ಕೆಎಸ್ ಅವರಿಗೆ ಟಿಕೆಟ್ ನೀಡಿದೆ.

Karnataka Assembly Elections 2023: Congress 2nd List Released- Who Are Deprived Of Tickets?

ಕಾಂಗ್ರೆಸ್‌ ಟಿಕೆಟ್ ವಂಚಿತ ವಡ್ನಾಳ್ ರಾಜಣ್ಣ

ಕಾಂಗ್ರೆಸ್‌ ಟಿಕೆಟ್ ವಂಚಿತರಲ್ಲಿ ವಡ್ನಾಳ್ ರಾಜಣ್ಣ ಕೂಡ ಸೇರಿದ್ದಾರೆ. ಚನ್ನಗಿರಿ ವಿಧಾನಸಭಾ ಕ್ಷೇತ್ರದಲ್ಲಿಸ್ಪರ್ಧೆ ಬಯಸಿ 8 ಜನ ಆಕಾಂಕ್ಷಿಗಳು ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದರು. ಇದು ಚನ್ನಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷವು ಎಷ್ಟು ಬಲಾಢ್ಯವಾಗಿದೆ ಎಂಬುದರ ಸಂಕೇತ. ಈ ಪೈಕಿ ರಾಜಣ್ಣ ಕೂಡ ಒಬ್ಬರು. ಆದರೆ ಕಾಂಗ್ರೆಸ್ ಈ ಬಾರಿ ಚನ್ನಗಿರಿಯಲ್ಲಿ ಬಸವರಾಜ್ ಶಿವಗಂಗಾ ಅವರಿಗೆ ಟಿಕೆ ನೀಡಿದೆ. ಈ ಮೂಲಕ ಅರ್ಜಿ ಹಾಕಿರುವ ಎಲ್ಲರೂ ಒಂದೇ ಪಕ್ಷದವರು, ಯಾರನ್ನು ನಿಲ್ಲಿಸಿದರೂ ಎಲ್ಲರೂ ಸಹ ಒಟ್ಟಾಗಿ ಹೋರಾಟ ಮಾಡಿ ಗೆಲ್ಲಿಸಬೇಕು ಎಂದು ಪಕ್ಷ ಸೂಚಿಸಿದೆ.

ತೀರ್ಥಹಳ್ಳಿಯ ಮಂಜುನಾಥ್ ಗೌಡ ತಪ್ಪಿತು 'ಕೈ'ಟಿಕೆಟ್

ಇನ್ನೂ ತೀರ್ಥಹಳ್ಳಿಯ ಮಂಜುನಾಥ್ ಗೌಡ. ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಮಂಜುನಾಥಗೌಡ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಡಿ.ಕೆ ಶಿವಕುಮಾರ್ ಬಣದಲ್ಲಿ ಗುರುತಿಸಿಕೊಂಡಿರುವ ಆರ್.ಎಂ ಮಂಜುನಾಥ್ ಗೌಡ ಕಾಂಗ್ರೆಸ್ ಟಿಕೆಟ್‌ಗಾಗಿ ಲಾಭಿ ಮಾಡುತ್ತಿದ್ದರು. ಆದರೆ ಕಿಮ್ಮನೆ ರತ್ನಾಕರ್ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ. ಕಾಂಗ್ರೆಸ್ ಕಿಮ್ಮನೆ ರತ್ನಾಕರ್ ಮತ್ತು ಬಿಜೆಪಿ ಹಾಲಿ ಮಂತ್ರಿ ಆರಗ ಜ್ಞಾನೇಂದ್ರ ನಡುವೆ ಸೋಲು ಗೆಲುವಿನ ಲೆಕ್ಕಾಚಾರವಿದೆ.

ಯೋಗೇಶ್ ಬಾಬು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ

ಮೊಳಕಾಲ್ಮೂರು ಯೋಗೇಶ್ ಬಾಬು ಕೂಡ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಕಾಂಗ್ರೆಸ್ ಎನ್​ ವೈ ಗೋಪಾಲಕೃಷ್ಣ ಅವರಿಗೆ ಟಿಕೆಟ್ ನೀಡಿದೆ. ಮೊಳಕಾಲ್ಮೂರು ಕ್ಷೇತ್ರದಿಂದ ಯೋಗೀಶ್ ಬಾಬು ಟಿಕೆಟ್ ಸಿಗುವುದಾಗಿ ತುಂಬಾ ಆಸೆ ಹಾಗೂ ನಂಬಿಕೆಯನ್ನು ಹೊಂದಿದ್ದರು. ಆದರೆ ಕಾಂಗ್ರೆಸ್ ನಿರ್ಧಾರದಿಂದ ಬಂಡಾಯವೇಳುವ ಸಾಧ್ಯತೆ ಕೂಡ ಇದೆ.

Karnataka Assembly Elections 2023: Congress 2nd List Released- Who Are Deprived Of Tickets?

ಯಾಕೆಂದರೆ ಈ ಹಿಂದೆ ಸುದ್ದಿಗಾರರೊಂದಿಗೆ ಮಾತನಾಡಿ' ನಿಷ್ಠೆಯಿಂದ ಪಕ್ಷಕ್ಕೆ ದುಡಿದವರಿಗೆ ಕಾಂಗ್ರೆಸ್ ಹೈಕಮಾಂಡ್ ಟಿಕೆಟ್ ನೀಡುತ್ತದೆ. ಒಂದು ವೇಳೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಬಿಜೆಪಿಯ ಎನ್.ವೈ.ಗೋಪಾಲಕೃಷ್ಣ ಅವರಿಗೆ ಮೊಳಕಾಲ್ಮುರು ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ನೀಡಿದರೆ ಅಂದೇ ನನ್ನ ನಿರ್ಧಾರ ಪ್ರಕಟಿಸುತ್ಥೇನೆ' ಎಂದು ಯೋಗೇಶ್ ಬಾಬು ಹೇಳಿದ್ದರು.

ಕಲಘಟಗಿ ಕ್ಷೇತ್ರದಲ್ಲಿ ನಾಗರಾಜ್ ಛಬ್ಬಿಗೆ ಕೈ ತಪ್ಪಿದ ಟಿಕೆಟ್

ಇನ್ನೂ ಮಲೆನಾಡ ಸೆರಗಿನ ತಂಪು ವಾತಾವರಣವುಳ್ಳ ಕಲಘಟಗಿ ಕ್ಷೇತ್ರದಲ್ಲಿ ನಾಗರಾಜ್ ಛಬ್ಬಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಆಗಿದ್ದರು. ಆದರೆ ಕಾಂಗ್ರೆಸ್ ಸಂತೋಷ್ ಲಾಡ್ ಅವರಿಗೆ ಟಿಕೆಟ್ ನೀಡಿದೆ. 1999ರಿಂದ ಈಚೆಗೆ ಬಿಜೆಪಿ ಹಾಗೂ ಕಾಂಗ್ರೆಸ್‌ ಬಿಟ್ಟರೆ ಬೇರಾವ ಪಕ್ಷಗಳಿಗೆ ಕ್ಷೇತ್ರದಲ್ಲಿ ನೆಲೆ ಇಲ್ಲದಾಗಿದೆ. ಜಿಲ್ಲೆಯಲ್ಲಿ ಜೆಡಿಎಸ್‌ ಇದ್ದರೂ ಆಟಕ್ಕುಂಟು ಲೆಕ್ಕಕ್ಕಿಲ್ಲ. ಆಮ್‌ ಆದ್ಮಿ ಪಾರ್ಟಿ, ಎಐಎಂಐಎಂ ಪಕ್ಷಗಳು ಕಣಕ್ಕಿಳಿಯಲು ಸಿದ್ಧತೆ ನಡೆಸಿವೆ. ಆದರೆ, ಈ ಚುನಾವಣೆಯಲ್ಲಿ ಯಾರು ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳಾಗುತ್ತಾರೆ ಎನ್ನುವುದೇ ತೀವ್ರ ಕುತೂಹಲ ಕೆರಳಿಸಿತ್ತು.

ಕಳೆದ ಬಾರಿ ಪರಾಭವಗೊಂಡ ಸಂತೋಷ ಲಾಡ್‌ ಹಾಗೂ ವಿಧಾನ ಪರಿಷತ್‌ ಮಾಜಿ ಸದಸ್ಯ ನಾಗರಾಜ್‌ ಛಬ್ಬಿ ಅರ್ಜಿ ಸಲ್ಲಿಸಿದ್ದರು. ಅವಕಾಶ ಸಿಕ್ಕಾಗಲೆಲ್ಲ ನಾನೇ ಕಾಂಗ್ರೆಸ್‌ ಅಭ್ಯರ್ಥಿ ಎಂದು ಸ್ವಯಂ ಘೋಷಣೆ ಮಾಡುತ್ತಿದ್ದಾರೆ. ನಾವಿಬ್ಬರೂ ಸ್ನೇಹಿತರು ಎನ್ನುತ್ತಲೇ ಆರೋಪ ಪ್ರತ್ಯಾರೋಪಗಳ ಮೂಲಕ ಪರಸ್ಪರ ಟಾಂಗ್‌ ನೀಡುತ್ತಿರುವ ಲಾಡ್‌ ಹಾಗೂ ಛಬ್ಬಿ ಅವರ ಜುಗಲ್‌ಬಂದಿ ಆಗಾಗ ನಡೆಯುತ್ತಲೇ ಇದೆ. ಲಾಡ್‌ ಬೆಂಬಲಕ್ಕೆ ಸಿದ್ದರಾಮಯ್ಯ, ಛಬ್ಬಿ ಬೆಂಬಲಕ್ಕೆ ಡಿ.ಕೆ.ಶಿವಕುಮಾರ್‌ ಇದ್ದಾರೆ. ಹೀಗಾಗಿ ಟಿಕೆಟ್‌ ಪಡೆಯುವಲ್ಲಿ ಯಾರು ಮೇಲುಗೈ ಸಾಧಿಸುತ್ತಾರೆ ಎನ್ನುವುದಕ್ಕೆ ಈಗ ಉತ್ತರ ಸಿಕ್ಕಿದೆ.

Karnataka Assembly Elections 2023: Congress 2nd List Released- Who Are Deprived Of Tickets?

ಇನ್ನೂ ಚಿತ್ರದುರ್ಗದಲ್ಲಿ ರಘು ಆಚಾರ್ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಕೆ ಸಿ ವೀರೇಂದ್ರ ಅವರಿಗೆ ಕೈ ಮಣೆ ಹಾಕಿದೆ.

ಕಾಂಗ್ರೆಸ್ ಎರಡನೇ ಪಟ್ಟಿಯಲ್ಲಿ ಟಿಕೆಟ್ ವಂಚಿತರು

ವೈ.ಎಸ್.ವಿ ದತ್ತ- ಕಡೂರು

ವಡ್ನಾಳ್ ರಾಜಣ್ಣ - ಚನ್ನಗಿರಿ

ರಘು ಆಚಾರ್-ಚಿತ್ರದುರ್ಗ

ಮಂಜುನಾಥಗೌಡ-ತೀರ್ಥಹಳ್ಳಿ

ಯೋಗೀಶ ಬಾಬು-ಮೊಳಕಾಲ್ಮೂರು

ನಾಗರಾಜ್ ಛಬ್ಬಿ-ಕಲಘಟಗಿ

ಅಭ್ಯರ್ಥಿಗಳ ಪಟ್ಟಿ ಫೈನಲ್​​ ಮಾಡುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನ ಕೇಂದ್ರ ಚುನಾವಣಾ ಸಮಿತಿಯ ದೆಹಲಿಯಲ್ಲಿ ನಡೆಯಿತು. ಸಭೆಯಲ್ಲಿ ಭಾಗಿಯಾಗಲು, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌, ವಿಪಕ್ಷ ನಾಯಕ ಸಿದ್ದರಾಮಯ್ಯ, ಬಿ.ಕೆ. ಹರಿಪ್ರಸಾದ್‌ ದೆಹಲಿಗೆ ತೆರಳಿದ್ದರು. ಮಾರ್ಚ್​​ 25ರಂದು ಕಾಂಗ್ರೆಸ್​ ವಿಧಾನಸಭಾ ಚುನಾವಣೆಗೆ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಲಾಗಿತ್ತು. ಮೊದಲ ಪಟ್ಟಿಯಲ್ಲಿ 124 ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿತ್ತು. ಇಂದು (ಏಪ್ರಿಲ್ 6) ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಒಟ್ಟಿನಲ್ಲಿ ಕಾಂಗ್ರೆಸ್‌ನಲ್ಲಿ ಕೆಲ ಟಿಕೆಟ್ ಆಕಾಂಕ್ಷಿಗಳು ಹೈಕಮಾಂಡ ನಿರ್ಧಾರವನ್ನು ಸ್ವಾಗತಿಸಿದರೆ ಇನ್ನೂ ಕೆಲವರು ಬಂಡಾಯವೇಳುವ ಸಾಧ್ಯತೆಗಳು ಇದ್ದು ಏನಾಗುತ್ತದೆ ಎಂದು ಕಾದು ನೋಡಬೇಕಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+