ಕರ್ನಾಟಕ ಚುನಾವಣೆ: ವೃತ್ತಿಯಲ್ಲಿ ಡಾಕ್ಟರ್ಸ್ ಹಿನ್ನಲೆಯ 14 ನೂತನ ಶಾಸಕರ ಪಟ್ಟಿ
ಬೆಂಗಳೂರು, ಮೇ 15: ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದೆ. ಇನ್ನೇನು ಕೆಲವೇ ದಿನಗಳಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರಲಿದೆ. ಮುಖ್ಯಮಂತ್ರಿ ಆಯ್ಕೆಯ ವಿಚಾರದಲ್ಲಿ ಒಮ್ಮತವಿಲ್ಲ ಎನ್ನುವ ಸುದ್ದಿಗಳು ಹರಿದಾಡುತ್ತಿವೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸಮ್ಮುಖದಲ್ಲಿ ಸಿಎಂ ಯಾರು ಎನ್ನುವ ಪ್ರಶ್ನೆಗೆ ಉತ್ತರ ಸಿಗಲಿದೆ.
ಕಾಂಗ್ರೆಸ್ 135, ಬಿಜೆಪಿ 66, ಜೆಡಿಎಸ್ 19 ಮತ್ತು ನಾಲ್ವರು ಇತರರು ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ನೂತನವಾಗಿ ಆಯ್ಕೆಯಾಗಿರುವ 224 ಶಾಸಕರಲ್ಲಿ ಹದಿನಾಲ್ಕು ಶಾಸಕರು ವೈದ್ಯರಾಗಿರುವುದು ವಿಶೇಷ. ಇದರಲ್ಲಿ ಮೂವರು ಕಲಬುರಗಿ ಜಿಲ್ಲೆಯವರು ಮತ್ತು ಬಿಜೆಪಿ ಮತ್ತು ಕಾಂಗ್ರೆಸ್ಸಿನಿಂದ ತಲಾ ಏಳು ಶಾಸಕರು ವೈದ್ಯಕೀಯ ವೃತ್ತಿಯ ಹಿನ್ನಲೆಯವರು.

ಹನ್ನೆರಡು ಶಾಸಕರು ಎಂಬಿಬಿಎಸ್ ಪದವೀಧರರು, ಒಬ್ಬರು ದಂತ ವೈದ್ಯರು, ಮತ್ತೋರ್ವವರು ಹೋಮಿಯೋಪಥಿ ವೈದ್ಯರಾಗಿದ್ದಾರೆ. ಹದಿನಾಲ್ಕು ಶಾಸಕರ ಪಟ್ಟಿ ಈ ಕೆಳಗಿನಂತಿದೆ:
| ಕ್ಷೇತ್ರದ ಸಂಖ್ಯೆ | ಕ್ಷೇತ್ರದ ಹೆಸರು | ವಿಜೇತ ಅಭ್ಯರ್ಥಿ | ಪಕ್ಷ |
| 1 | ಸೇಡಂ | ಡಾ.ಶರಣಪ್ರಕಾಶ್ ಪಾಟೀಲ್ | ಕಾಂಗ್ರೆಸ್ |
| 2 | ಜೇವರ್ಗಿ | ಡಾ. ಅಜಯ್ ಸಿಂಗ್ | ಕಾಂಗ್ರೆಸ್ |
| 3 | ತಿ.ನರಸೀಪುರ (ಮೀಸಲು) | ಡಾ.ಎಚ್.ಸಿ.ಮಹದೇವಪ್ಪ | ಕಾಂಗ್ರೆಸ್ |
| 4 | ಕುಣಿಗಲ್ | ಡಾ.ಎಚ್.ಡಿ.ರಂಗನಾಥ್ | ಕಾಂಗ್ರೆಸ್ |
| 5 | ಕೂಡ್ಲಿಗಿ | ಡಾ.ಎನ್.ಟಿ.ಶ್ರೀನಿವಾಸ್ | ಕಾಂಗ್ರೆಸ್ |
| 6 | ಮಡಿಕೇರಿ | ಡಾ.ಮಂಥರ್ ಗೌಡ | ಕಾಂಗ್ರೆಸ್ |
| 7 | ಚಿಂತಾಮಣಿ | ಡಾ.ಎಂ.ಸಿ.ಸುಧಾಕರ್ | ಕಾಂಗ್ರೆಸ್ |
| 8 | ಮಲ್ಲೇಶ್ವರ | ಡಾ.ಸಿ.ಎನ್.ಅಶ್ವಥ್ ನಾರಾಯಣ | ಬಿಜೆಪಿ |
| 9 | ರಾಯಚೂರು ನಗರ | ಡಾ.ಎಸ್.ಶಿವರಾಜ್ ಪಾಟೀಲ್ | ಬಿಜೆಪಿ |
| 10 | ಚಿಂಚೋಳಿ ಮೀಸಲು | ಡಾ.ಅವಿನಾಶ್ ಜಾಧವ್ | ಬಿಜೆಪಿ |
| 11 | ಮಂಗಳೂರು ಉತ್ತರ | ಡಾ. ವೈ ಭರತ್ ಶೆಟ್ಟಿ | ಬಿಜೆಪಿ |
| 12 | ಶಿರಹಟ್ಟಿ (ಮೀಸಲು) | ಡಾ.ಚಂದ್ರು ಲಮಾಣಿ | ಬಿಜೆಪಿ |
| 13 | ಹುಮ್ನಾಬಾದ್ | ಡಾ.ಸಿದ್ದು ಪಾಟೀಲ | ಬಿಜೆಪಿ |
| 14 | ಬೀದರ್ ದಕ್ಷಿಣ | ಡಾ.ಶೈಲೇಂದ್ರ ಬೆಲ್ದಾಳೆ | ಬಿಜೆಪಿ |












Click it and Unblock the Notifications