ವರ್ಷ 2, ಹೂಡಿಕೆ 67,000ಕೋಟಿ; ಕರ್ನಾಟಕ ದೇಶಕ್ಕೆ ನಂ.1

Subscribe to Oneindia Kannada

ಬೆಂಗಳೂರು, ಫೆಬ್ರವರಿ 6: ಕಳೆದ ಎರಡು ವರ್ಷಗಳಲ್ಲಿ ರಾಜ್ಯದ 4,000 ಸ್ಟಾರ್ಟ್ ಅಪ್ ಗಳಿಗೆ 67,000 ಕೋಟಿ ರೂಪಾಯಿಗೂ ಹೆಚ್ಚು ಹಣ ಹರಿದು ಬಂದಿದೆ. ಈ ಮೂಲಕ ಐಟಿ-ಬಿಟಿ ವಲಯದಲ್ಲಿ ದೇಶಕ್ಕೇ ಕರ್ನಾಟಕ ನಂಬರ್ ವನ್ ಸ್ಥಾನದಲ್ಲಿ ಮುಂದುವರಿದಿದೆ ಎಂದು ವಜೂಭಾಯಿ ವಾಲಾ ಹೇಳಿದ್ದಾರೆ.[ಬದ್ಧತೆಯಿಲ್ಲದ ರಾಜ್ಯಪಾಲರ ಭಾಷಣ; ಕುಮಾರಸ್ವಾಮಿ ವ್ಯಂಗ್ಯ]

ಕರ್ನಾಟಕ ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ಅವರು ಈ ಅಂಕಿ ಅಂಶಗಳನ್ನು ಹೊರಹಾಕಿದರು. "ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ವಲಯದಲ್ಲಿ ಕರ್ನಾಟಕ ದೇಶಕ್ಕೆ ಮೊದಲ ಸ್ಥಾನದಲ್ಲಿದೆ. ಇಲ್ಲಿನ ಐಟಿ-ಬಿಟಿ ಉದ್ಯಮ ವರ್ಷಕ್ಕೆ ಶೇಕಡಾ 10-12ರ ದರದಲ್ಲಿ ಅಭಿವೃದ್ಧಿ ಸಾಧಿಸುತ್ತಿದ್ದು ಹೊಸ ಉದ್ಯೋಗ ಸೃಷ್ಟಿಯಾಗುತ್ತಿದೆ," ಎಂದು ವಾಲಾ ಹೇಳಿದ್ದಾರೆ.[ಕೇಂದ್ರದಿಂದ 'ಕೆಪಿಸಿಎಲ್'ಗೆ ಹರಿದು ಬರಲಿದೆ 39,000 ಕೋಟಿ]

Karnataka: 4,000 start-ups receive investment of Rs. 67,000 crores in 2 years

"ಕರ್ನಾಟಕ ಸ್ಟಾರ್ಟ್ ಅಪ್ ಪಾಲಿಸಿ ಜಾರಿಗೆ ತಂದ ನಂತರ ವಿಶ್ವದ ಸ್ಟಾರ್ಟ್ ಅಪ್ ರಾಜಧಾನಿಗಳಲ್ಲಿ ಕರ್ನಾಟಕವೂ ಒಂದಾಗಿದೆ. ಕಳೆದ ಎರಡು ವರ್ಷದಲ್ಲಿ ರಾಜ್ಯದ 4,000 ಸ್ಟಾರ್ಟ್ ಅಪ್ ಗಳು 67,000 ಕ್ಕೂ ಮಿಕ್ಕಿ ಬಂಡವಾಳ ಹೂಡಿಕೆ ಕಂಡಿವೆ," ಎಂದು ವಾಲಾ ಮಾಹಿತಿ ನೀಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
“Over 4000 start-ups have received investments of over USD 1 billion over the past 2 years,” said Governor Vajubhai Vala on his customary address to the joint sitting of the state legislature.
Please Wait while comments are loading...