ಪಿಯು ಫಲಿತಾಂಶ ಗೊಂದಲವಿದ್ದರೆ ಅರ್ಜಿ ಸಲ್ಲಿಕೆಯೇ ಪರಿಹಾರ

ಬೆಂಗಳೂರು, ಮೇ 23: ದ್ವಿತೀಯ ಪಿಯುಸಿ ಫಲಿತಾಂಶದಲ್ಲಿನ ಗೊಂದಲ ನಿವಾರಣೆ ಆಗುವವರೆಗೆ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಫಲಿತಾಂಶ ಪ್ರಕಟಿಸಬಾರದು ಎಂದು ಪಾಲಕರು ಮತ್ತು ವಿದ್ಯಾರ್ಥಿಗಳ ಬೇಡಿಕೆಗೆ ಮಣಿದಿರುವ ಶಿಕ್ಷಣ ಇಲಾಖೆ ಜೂನ್‌ 1ರ ನಂತರ ಸಿಇಟಿ ಫಲಿತಾಂಶ ಪ್ರಕಟಿಸಯತ್ತೇನೆ ಎಂದು ಹೇಳಿದೆ.

ಈ ಬಗ್ಗೆ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಸ್ಪಷ್ಟನೆ ನೀಡಿದ್ದಾರೆ. ಮೌಲ್ಯಮಾಪನದಲ್ಲಿ ತಪ್ಪಾಗಿದೆ ಎಂಬ ಆರೋಪಕ್ಕೆ ಧ್ವನಿಗೂಡಿಸಿದ್ದ ಎಚ್ ಡಿ ಕುಮಾರಸ್ವಾಮಿ ಪಿತಯ ಬೋರ್ಡ್ ಒಳಕ್ಕೆ ತೆರಳಿ ಉತ್ತರ ಪತ್ರಿಕೆ ಪರಿಶೀಲಿಸಿ ಯಾವುದೇ ಲೋಪವಾಗಿಲ್ಲ ಎಂದು ತಿಳಿಸಿದ್ದರು. [ಪಿಯುಸಿ ಮೌಲ್ಯಮಾಪನದಲ್ಲಿ ನಿಜಕ್ಕೂ ಲೋಪವಾಗಿದೆಯೇ?]

puc

ಹಾಗಾದರೆ ಕಡಿಮೆ ಅಂಕ ಬಂದ ವಿದ್ಯಾರ್ಥಿಗಳು ಮುಂದೆ ಏನು ಮಾಡಬೇಕು? ಫೋಟೋ ಕಾಪಿ ಪಡೆಯುವುದು ಹೇಗೆ? ಮರು ಮೌಲ್ಯಮಾಪನ ವಿಧಾನ ಹೇಗೆ? ಶುಲ್ಕ ಎಷ್ಟು? ಸಿಇಟಿ ಫಲಿತಾಂಶಕ್ಕೂ ಇದಕ್ಕೂ ನಡುವಿನ ಸಂಬಂಧವೇನು? ಎಂಬ ಪ್ರಶ್ನೆಗಳು ಇದರೊಂದಿಗೆ ಎದ್ದಿವೆ.

ಪೂರಕ ಪರೀಕ್ಷೆಗೆ ಅವಕಾಶ ಉತ್ತರ ಪತ್ರಿಕೆಯ ಛಾಯಾ ಪ್ರತಿಗೆ ಅರ್ಜಿ ಸಲ್ಲಿಸಲು ಮೇ 25 ಕೊನೆ ದಿನ. ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಮೇ 30. ಮರು ಎಣಿಕೆಗೆ ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಮೇ 30. ಜೂನ್‌ 25ರಿಂದ ಜುಲೈ 4ರವರೆಗೆ ಪೂರಕ ಪರೀಕ್ಷೆ ನಡೆಯಲಿದೆ. ಪೂರಕ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಮೇ 27 ಎಂದು ಮಂಡಳಿ ಪಿಯು ಫಲಿತಾಂಶ ಪ್ರಕಟವಾದ ದಿನವೇ ತಿಳಿಸಿತ್ತು.[ಫಲಿತಾಂಶ ಗೊಂದಲದ ಬಗ್ಗೆ ಕಿಮ್ಮನೆ ಹೇಳಿದ್ದೇನು?]

* ಫೋಟೋ ಕಾಪಿ ಒಂದು ಪೇಪರ್ ಗೆ - 504 ರು.
* ಮರುಮೌಲ್ಯಮಾಪನ ಒಂದು ಪತ್ರಿಕೆಗೆ- 1260 ರಯ
* ಮರು ಪರಿಶೀಲನೆಗೆ ಒಂದು ಪತ್ರಿಕೆಗೆ-336 ರು

ನಿಗದಿಯಂತೆ ಸಿಇಟಿ ಫಲಿತಾಂಶ ಮೇ 25 ರಂದು ಪ್ರಕಟವಾಗಬೇಕಿತ್ತು. ಆದರೆ ಈಗ ಮುಂದಕ್ಕೆ ಹೋಗಿದೆ. ಹಾಗಾಗಿ ಮರು ಪರಿಶೀಲನೆ ಮಾಡಿಕೊಂಡರೂ ಸಿಇಟಿ ಶ್ರೇಯಾಂಕದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬಹುದು. ಎಲ್ಲ ಉತ್ತರ ಪತ್ರಿಕೆ ಮರು ಮೌಲ್ಯಮಾಪನ ಸಾಧ್ಯವಿಲ್ಲದ ಮಾತು. ಒಂದು ವೇಳೆ ಮರು ಮೌಲ್ಯಮಾಪನದ ನಂತರ ಹೆಚ್ಚುವರಿಯಾಗಿ ಆರು ಅಂಕ ಬರದಿದ್ದರೆ ಯಾವ ಕಾರಣಕ್ಕೂ ಶುಲ್ಕ ಮರುಪಾವತಿ ಮಾಡಲಾಗುವುದಿಲ್ಲ ಎಂಬ ಸಂಗತಿಯೂ ವಿದ್ಯಾರ್ಥಿಗಳ ತಲೆಯಲ್ಲಿ ಇರಬೇಕು.

ಕೇವಲ ಒಂದು ವಿಷಯದಲ್ಲಿ ಫೇಲ್ ಆದವರು ಅಥವಾ ಐಚ್ಛಿಕ ವಿಷಯದಲ್ಲಿ ಕಡಿಮೆ ಅಂಕ ಬಂದವರು ಬೆಂಗಳೂರು ಒನ್ ಅಥವಾ ಕರ್ನಾಟಕ ಒನ್ ನಲ್ಲಿ ಅರ್ಜಿ ಸಲ್ಲಿಕೆ ಮಾಡುವುದು ಉತ್ತಮ. ಬೆಂಗಳೂರು ಒನ್ ನವರು ನೀಡುವ ರಿಸಿಟ್ ಇಟ್ಟುಕೊಂಡರ ಸಾಕಾಗುತ್ತದೆ. ಸಿಇಟಿ ಫಲಿತಾಂಶಕ್ಕೂ ಮುನ್ನವೇ ಅರ್ಜಿ ಸಲ್ಲಿಸಿದ ಎಲ್ಲ ವಿದ್ಯಾರ್ಥಿಗಳ ಉತ್ತರ ಪತ್ರಿಕೆ ಮರುಮೌಲ್ಯಮಾಪನ ಮಾಡಿ ನೀಡುವ ಜವಾಬ್ದಾರಿ ಪಿಯು ಮಂಡಳಿ ಮೇಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+