• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಈ ಬಾರಿಗಿಂತ ಕಳೆದ ವರ್ಷವೇ ಇಂಗ್ಲೀಷ್ ಪರೀಕ್ಷೆಗೆ ಗೈರಾದವರ ಸಂಖ್ಯೆ ಹೆಚ್ಚು

|

ಬೆಂಗಳೂರು, ಜೂನ್ 19: ಕೊರೊನಾ ವೈರಸ್‌ ಆತಂಕದ ನಡುವೆ ನಿನ್ನೆ ದ್ವಿತೀಯ ಪಿಯುಸಿ ಪರೀಕ್ಷೆ ನಡೆದಿದೆ. ಲಾಕ್‌ಡೌನ್‌ನಿಂದ ಇಂಗ್ಲೀಷ್‌ ವಿಷಯ ಉಳಿದುಕೊಂಡಿದ್ದು, ಆ ಪರೀಕ್ಷೆ ಸಹ ಕೊನೆಗೂ ಮುಗಿದಿದೆ. ಆದರೆ, ನಿನ್ನೆಯ ಪರೀಕ್ಷೆಗೆ ರಾಜ್ಯದ 27022 ಹಾಜರಾಗಿಲ್ಲ.

   ಕೊರೋನಾ ಸೋಂಕಿತರಲ್ಲಿ ಕೆಲವರಿಗೆ ಹಾರ್ಟ್ ಅಟ್ಯಾಕ್ ಆಗ್ತಿರೋದು ಯಾಕೆ? | Oneindia Kannada

   ಕಲಾ ವಿಭಾಗ, ವಿಜ್ಞಾನ ವಿಭಾಗ ಹಾಗೂ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಸೇರಿ ಒಟ್ಟು 5,95,997 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದರು. ಆದರೆ, ಇದರಲ್ಲಿ 5,68,975 ಮಾತ್ರ ಪರೀಕ್ಷೆ ಬರೆದಿದ್ದರು. 27022 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿದ್ದರು. ಕೊರೊನಾ ಭೀತಿ ಇರುವ ಕಾರಣ ಹೆಚ್ಚಿನ ವಿದ್ಯಾರ್ಥಿಗಳು ಆತಂಕದಲ್ಲಿ ಪರೀಕ್ಷೆ ಬರೆದಿಲ್ಲ ಎಂದು ಅನೇಕರು ಊಹಿಸಿಕೊಂಡಿದ್ದರು.

   ರಾಜ್ಯದ 27 ಸಾವಿರ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು

   ಆದರೆ, ಅಚ್ಚರಿ ಅಂದರೆ, ಈ ವರ್ಷ ಕಳೆದ ವರ್ಷಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳು ಇಂಗ್ಲೀಷ್ ಪರೀಕ್ಷೆ ಬರೆದಿದ್ದಾರೆ. ಕೊರೊನಾ ವೈರಸ್‌ ಆತಂಕದ ನಡುವೆ ಪರೀಕ್ಷೆ ನಡೆಸಿದ್ದರೂ, ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು ಕಳೆದ ವರ್ಷಕ್ಕಿಂತ ಹೆಚ್ಚಿದ್ದಾರೆ.

   ಕಳೆದ ಬಾರಿ 36,642 ವಿದ್ಯಾರ್ಥಿಗಳು ಗೈರು

   ಕಳೆದ ಬಾರಿ 36,642 ವಿದ್ಯಾರ್ಥಿಗಳು ಗೈರು

   ಈ ವರ್ಷಕ್ಕಿಂತ ಕಳೆದ ಬಾರಿ ಪರೀಕ್ಷೆ ಬರೆಯದ ವಿದ್ಯಾರ್ಥಿಗಳು ಹೆಚ್ಚಿದ್ದಾರೆ. ಈ ವರ್ಷ 27022 ವಿದ್ಯಾರ್ಥಿಗಳು ಇಂಗ್ಲೀಷ್ ಪರೀಕ್ಷೆ ಬರೆದಿಲ್ಲ. ಆದರೆ, ಕಳೆದ ವರ್ಷ 36,642 ವಿದ್ಯಾರ್ಥಿಗಳು ಇಂಗ್ಲೀಷ್ ಪರೀಕ್ಷೆ ಗೈರಾಗಿದ್ದರು. ಕಳೆದ ವರ್ಷ 6,71,635 ವಿದ್ಯಾರ್ಥಿಗಳ ಪೈಕಿ 6,34,993 ವಿದ್ಯಾರ್ಥಿಗಳು ಪರೀಕ್ಷೆಗೆ ಬಂದಿದ್ದರು. ಹೀಗಾಗಿ ಈ ವರ್ಷ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಶೇಕಡ ಪ್ರಮಾಣಕ್ಕೆ 2% ಹೆಚ್ಚಿದೆ.

   ಕೊರೊನಾ ಕಾರಣ ಎನ್ನಬಹುದೇ?

   ಕೊರೊನಾ ಕಾರಣ ಎನ್ನಬಹುದೇ?

   ಈ ವರ್ಷ ಪರೀಕ್ಷೆಗೆ ಬಾರದ ವಿದ್ಯಾರ್ಥಿಗಳ ಸಂಖ್ಯೆ 27022 ಇದೆ. ಹೀಗಾಗಿ ಅನೇಕರು ಮಕ್ಕಳ ಕೊರೊನಾ ಭಯದ ನಡುವೆ ಪರೀಕ್ಷೆ ಬರೆದಿಲ್ಲ ಎಂದು ಹೇಳಿತ್ತಿದ್ದಾರೆ. ಆದರೆ, ಕಳೆದ ವರ್ಷದ ಅಂಕಿ ಸಂಖ್ಯೆ ನೋಡಿದರೆ, ಇದನ್ನು ಕೊರೊನಾ ಮೇಲೆ ಹಾಕಲು ಆಗುವುದಿಲ್ಲ. ಏಕೆಂದರೆ, ಕಳೆದ ವರ್ಷ ಕೊರೊನಾ ಇಲ್ಲದೆಯೂ 36,642 ಮಕ್ಕಳು ಪರೀಕ್ಷೆ ಬರೆದಿಲ್ಲ.

   ಕೊಡಗಿನಲ್ಲಿ ಪ್ರಮಾಣ ಕಡಿಮೆ

   ಕೊಡಗಿನಲ್ಲಿ ಪ್ರಮಾಣ ಕಡಿಮೆ

   ಕರ್ನಾಟಕದಲ್ಲಿ ಕೊಡಗಿನಲ್ಲಿ ಪರೀಕ್ಷೆ ಬರೆಯದ ವಿದ್ಯಾರ್ಥಿಗಳ ಸಮಖ್ಯೆ ಕಡಿಮೆ ಇದೆ. ಕೋಲಾರ 730, ಮಂಡ್ಯ 682, ಯಾದಗಿರಿ 568, ಶಿವಮೊಗ್ಗ 538, ಹಾಸನ 535, ದಕ್ಷಿಣ ಕನ್ನಡ 466, ಕೊಪ್ಪಳ 463, ಚಿಕ್ಕಬಳ್ಳಾಪುರ 442, ಉತ್ತರ ಕನ್ನಡ 435, ಚಾಮರಾಜನಗರ 268, ಉಡುಪಿ 163, ಕೊಡಗು 140 ವಿದ್ಯಾರ್ಥಿಗಳು ನಿನ್ನೆಯ ಇಂಗ್ಲೀಷ್ ಪರೀಕ್ಷೆಗೆ ಹಾಜರಾಗಿಲ್ಲ.

   ಕಲಬುರಗಿಯಲ್ಲಿ 1750 ವಿದ್ಯಾರ್ಥಿಗಳು ಚಕ್ಕರ್

   ಕಲಬುರಗಿಯಲ್ಲಿ 1750 ವಿದ್ಯಾರ್ಥಿಗಳು ಚಕ್ಕರ್

   ಕರ್ನಾಟಕದ 12 ಜಿಲ್ಲೆಗಳಲ್ಲಿ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಬರೆದಿಲ್ಲ. ಕಲಬುರಗಿ 1750, ಬೆಂಗಳೂರು ದಕ್ಷಿಣ 1675, ಬೆಂಗಳೂರು ಉತ್ತರ 1646, ತುಮಕೂರು 1457, ಮೈಸೂರು 1401, ಬಿಜಾಪುರ 1476, ಚಿಕ್ಕೋಡಿ 1359, ರಾಯಚೂರು 1347, ದಾವಣಗೆರೆ 1292, ಬಳ್ಳಾರಿ 1261, ಬೆಳಗಾವಿ 1044, ಚಿತ್ರದುರ್ಗ 1040 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿದ್ದಾರೆ

   English summary
   Karnataka 2nd PUC English Exam: More students did not attend the english exam last year than this year.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X