ಸ್ವಾತಂತ್ರ್ಯ ದಿನಕ್ಕೆ ಹವಾಮಾನ ಬದಲಾವಣೆ ವಿರುದ್ಧ ಹೋರಾಡುವ ಹೊಸ ಸಂಕಲ್ಪ ಕೈಕೊಂಡ ಕರಣ್ ಜೋಹರ್
ಭಾರತದ ಬಹುಭಾಷಾ ಸಾಮಾಜಿಕ ಮಾಧ್ಯಮ ವೇದಿಕೆ ಕೂ ಆಪ್ ಅತ್ಯಾಕರ್ಷಕ ಅಭಿಯಾನವೊಂದನ್ನು ಪ್ರಕಟಿಸಿದೆ. ಜನರು ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವದ ಸಂದರ್ಭದಲ್ಲಿ ಹೊಸ ಸಂಕಲ್ಪ ಕೈಗೊಳ್ಳುವುದನ್ನು ಹೊಸ ಅಭಿಯಾನ #NayeBharatKaSapna ಪ್ರೋತ್ಸಾಹಿಸುತ್ತದೆ.
ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್ ಅವರು ಈ ಅಭಿಯಾನದ ಹ್ಯಾಶ್‌ಟ್ಯಾಗ್ #NayeBharatKaSapna ಬಿಡುಗಡೆ ಮಾಡಿ, ಹೊಸ ಭಾರತಕ್ಕಾಗಿ ಬದಲಾಗುವ ಸಂಕಲ್ಪವನ್ನು ಸಾಮೂಹಿಕವಾಗಿ ಸ್ವೀಕರಿಸಲು ಬಳಕೆದಾರರನ್ನು ಉತ್ತೇಜಿಸಿದ್ದಾರೆ.
ಭಾರತ-ನಿರ್ಮಿತ ಉತ್ಪನ್ನಗಳನ್ನು ಬಳಸುವ ಮೂಲಕ #GoSwadeshi ನಿರ್ಣಯ ಕೈಗೊಳ್ಳುವುದು, ಏಕ ಬಳಕೆ ಪ್ಲಾಸ್ಟಿಕ್ ತ್ಯಜಿಸುವ ಮೂಲಕ #CleanTheEarth, ಮರುಬಳಕೆ (reuse), ಕಡಿಮೆಗೊಳಿಸು (reduce), ದುರಸ್ತಿ (repair) ಮತ್ತು ಪುನಃ ಬಳಸು (recycle) ಅಳವಡಿಸಿಕೊಳ್ಳುವ ಮೂಲಕ #FightClimateChange ಸಂಕಲ್ಪ ಮಾಡಬಹುದು. ಕರಣ್ ಜೋಹರ್ ಅವರು ವಸ್ತುಗಳ ಮರುಬಳಕೆ ಮತ್ತು ಪುನರ್ ನಿರ್ಮಾಣ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವ ಮೂಲಕ ಹವಾಮಾನ ಬದಲಾವಣೆಯ ಸಮಸ್ಯೆ ವಿರುದ್ಧ ಹೊರಡುವ ಪ್ರತಿಜ್ಞೆ ಮೂಲಕ ಅಭಿಯಾನವನ್ನು ಪ್ರಾರಂಭಿಸಿದ್ದಾರೆ.
ಪೋಸ್ಟ್ ಲಿಂಕ್ - ಕರಣ್ ಜೋಹರ್: https://www.kooapp.com/koo/karanjohar/291854e9-08c2-4ffa-8222-45bbeb955b94
ಭಾರತದ ಬಹು-ಭಾಷಾ ವೇದಿಕೆ ಕೂ - ಈ ಅಭಿಯಾನದ ಮೂಲಕ, ಬಳಕೆದಾರರು ಈ ದೇಶಕ್ಕಾಗಿ ಏನು ಮಾಡಲು ಬಯಸುತ್ತಾರೆ ಎಂಬುದನ್ನು ಹಂಚಿಕೊಂಡು 75 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮಿಸುವ ಅವಕಾಶ ಕಲ್ಪಿಸಿದೆ. ಆಗಸ್ಟ್ 1 ರಿಂದ15 ದಿನಗಳ ಕಾಲದ ಈ ಅಭಿಯಾನವು ಸಮಾಜದ ಕಲ್ಯಾಣಕ್ಕಾಗಿ ಪ್ರತಿದಿನ ಶ್ರಮಿಸುವ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರು ಸೇರಿದಂತೆ ಭಾರತದ ಸಶಸ್ತ್ರ ಪಡೆಗಳು ಮತ್ತು ಕೋವಿಡ್ ಯೋಧರಿಗೆ ವಂದನೆಗಳನ್ನು ಸಲ್ಲಿಸಲು ಜನರನ್ನು ಪ್ರೋತ್ಸಾಹಿಸುತ್ತದೆ.

ಅಭಿಯಾನದ ಕುರಿತು ಪ್ರತಿಕ್ರಿಯಿಸಿದ ಕೂ ವೇದಿಕೆಯ ಮುಖ್ಯ ವ್ಯವಹಾರ ಅಧಿಕಾರಿಗಳಾದ ಸುನೀಲ್ ಕಾಮತ್, " ಶತಕೋಟಿ ಧ್ವನಿಗಳಿಗೆ ಡಿಜಿಟಲ್ ಅಭಿವ್ಯಕ್ತಿ ಸ್ವಾತಂತ್ರ್ಯ ಕಲ್ಪಿಸಿಕೊಡುವುದರ ಮೂಲಕ, ಕೂ ಭಾರತದ ಭಾವನೆಯನ್ನು ಪ್ರತಿಬಿಂಬಿಸುತ್ತದೆ. #ನವಭಾರತದಕನಸು ಅಭಿಯಾನ ಪ್ರಗತಿಪರ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವಂತೆ ಜನರನ್ನು ಪ್ರೇರೇಪಿಸುವ ಮೂಲಕ ಅಭಿವ್ಯಕ್ತಿಯ ಹೊಸ ಪ್ರಯಾಣವನ್ನು ಮುನ್ನಡೆಸುತ್ತದೆ. ಕರಣ್ ಜೋಹರ್ ಅವರು ಈ ಅಭಿಯಾನವನ್ನು ಪ್ರಾರಂಭಿಸಿದ್ದು ನಮಗೆ ಖುಷಿ ತಂದಿದೆ, ಜೊತೆಗೆ ಹೊಸ ಭಾರತಕ್ಕಾಗಿ ಸಾಮಾಜಿಕ ಕಾರಣವನ್ನು ತೆಗೆದುಕೊಳ್ಳಲು ತಮ್ಮ ಫಾಲೋವರ್ಸ್ ಪ್ರೇರೇಪಿಸುತ್ತಿರುವ ಎಲ್ಲಾ ಗಣ್ಯ ವ್ಯಕ್ತಿಗಳಿಗೆ ಕೃತಜ್ಞತೆಗಳು." ಎಂದು ಮಾತನಾಡಿದರು
#ಹವಾಮಾನಬದಲಾವಣೆವಿರುದ್ಧಹೋರಾಟ ಕುರಿತು ತಮ್ಮ ಬದ್ಧತೆಯ ಬಗ್ಗೆ ಮಾತನಾಡುತ್ತಾ ಕರಣ್ ಜೋಹರ್, "ಈ ಹವಾಮಾನ ಬದಲಾವಣೆಯ ಹೋರಾಟದಲ್ಲಿ ಪ್ರತಿಯೊಬ್ಬರಿಗೂ ಒಂದು ಪಾತ್ರವಿದೆ. ನಾನು #ನವಭಾರತದಕನಸು ಅಭಿಯಾನದಲ್ಲಿ ಭಾಗವಹಿಸಲು ಉತ್ಸುಕನಾಗಿದ್ದೇನೆ, ಕೂ ನಲ್ಲಿ ಬಹುಭಾಷಾ ಬಳಕೆದಾರರೊಂದಿಗೆ ಸಂವಹನ ನಡೆಸುತ್ತೇನೆ ಮತ್ತು ಸಮಸ್ಯೆಯ ಬಗ್ಗೆ ಜಾಗೃತಿ ಮೂಡಿಸುತ್ತೇನೆ. ಈ ಸ್ವಾತಂತ್ರ್ಯ ಮಾಸದಲ್ಲಿ ನಾವೆಲ್ಲರೂ ಕೈಜೋಡಿಸೋಣ ಮತ್ತು ನಮ್ಮ ಗ್ರಹ, ನಮ್ಮ ದೇಶ ಮತ್ತು ನಮ್ಮ ಜನರಿಗೆ ನಮ್ಮ ಕೈಲಾದಷ್ಟು ಸಹಾಯ ಮಾಡೋಣ. ಜೈ ಹಿಂದ್!" ಎಂದು ಹೇಳಿದರು.












Click it and Unblock the Notifications