ಸರ್.ಎಂ ವಿಶ್ವೇಶ್ವರಯ್ಯ ತೆಲುಗು ಪ್ರೈಡ್ ಆಗಿದ್ದು ಯಾವಾಗ, ಏನಿದು ವೈರಲ್ ಪೋಸ್ಟ್!
Sir M Visvesvaraya Controversy: ಹಿಂದಿ ಹೇರಿಕೆಯ ವಿರುದ್ಧ ಹಿಂದಿಯೇತರ ಭಾಷೆಗಳು ಒಂದಾಗುವಾಗಲೇ ಕೆಲವರು ಭಾಷೆಗಳ ನಡುವೆ ಕಂದಕವನ್ನು ಸೃಷ್ಟಿ ಮಾಡುತ್ತಿದ್ದಾರೆ. ಕನ್ನಡ ಮತ್ತು ತೆಲುಗು ಭಾಷೆಯ ನಡುವೆ ಒಳ್ಳೆಯ ಸಂಬಂಧವಿದೆ. ಆದರೆ ಇದೀಗ ಭಾರತ ರತ್ನ ಸರ್. ಎಂ. ವಿಶ್ವೇಶ್ವರಯ್ಯ ಅವರು ನಮ್ಮವರು ಎನ್ನುವಂತೆ ತೆಲುಗು ಭಾಷಿಕರು ಮಾಡಿರುವ ಟ್ವೀಟ್ ವಿವಾದಕ್ಕೆ ಕಾರಣವಾಗಿದೆ.
ಭಾರತ ರತ್ನ ಸರ್. ಎಂ. ವಿಶ್ವೇಶ್ವರಯ್ಯ ಅವರು ಕನ್ನಡಿಗರು ಎನ್ನುವುದರಲ್ಲಿ ಎರಡು ಮಾತಿಲ್ಲ. ಕನ್ನಡಿಗರು ಹೆಮ್ಮೆ ಪಡುವಂತಹ ಸಾಧಕರಲ್ಲಿ ಸರ್. ಎಂ. ವಿಶ್ವೇಶ್ವರಯ್ಯ ಸಹ ಒಬ್ಬರು. ಆದರೆ, ಇದೀಗ ಸರ್. ಎಂ. ವಿಶ್ವೇಶ್ವರಯ್ಯ ಅವರು ತೆಲುಗು ಭಾಷೆಗೆ ಸೇರಿದವರು ಅಥವಾ ಅಖಂಡ ಆಂಧ್ರಪ್ರದೇಶದ ಹೆಮ್ಮೆ ಎನ್ನುವಂತಹ ಪೋಸ್ಟ್‌ವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದ್ದು ಇದು ಭಾರೀ ಚರ್ಚೆಗೆ ಕಾರಣವಾಗಿದೆ. ಇಷ್ಟಕ್ಕೂ ಏನಿದು ವಿವಾದ ಎನ್ನುವುದನ್ನು ನೋಡೋಣ.

ಸೋಷಿಯಲ್ ಮೀಡಿಯಾದ ProtoTelugu ಎನ್ನುವ ಹೆಸರಿನ ಎಕ್ಸ್‌ಖಾತೆಯಿಂದ ಎಂಜಿನಿಯರ್ ದಿನಾಚರಣೆಯ ಭಾಗವಾಗಿ ಪೋಸ್ಟ್‌ವೊಂದನ್ನು ಹಂಚಿಕೊಳ್ಳಲಾಗಿದ್ದು. ಇದು ಭಾರೀ ಚರ್ಚೆಗೆ ಕಾರಣವಾಗಿದೆ. ಈ ಖಾತೆಯಿಂದ ಸರ್.ಎಂ ವಿಶ್ವೇಶ್ವರಯ್ಯ ಅವರ ಬಗ್ಗೆ, ತೆಲುಗು ಮಾತನಾಡುವ ಕೋಲಾರ ಪ್ರದೇಶದಲ್ಲಿ (ಮೈಸೂರು ಸಾಮ್ರಾಜ್ಯ, 1861) #ತೆಲುಗು ಕುಟುಂಬದಲ್ಲಿ ಜನಿಸಿದ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರು ವಸಾಹತುಶಾಹಿ ಕಾಲದಲ್ಲಿ ಭಾರತದ ಹೆಮ್ಮೆಯಾಗಿ ಬೆಳೆದರು.
⚙️ ಹೈದರಾಬಾದ್‌ನ ಮುಸಿ ಪ್ರವಾಹವನ್ನು ನಿಯಂತ್ರಿಸಿದರು
⚙️ ಕೆಆರ್‌ಎಸ್ ಅಣೆಕಟ್ಟು ಮತ್ತು ಬೃಂದಾವನ ಉದ್ಯಾನಗಳನ್ನು ನಿರ್ಮಿಸಿದರು
⚙️ ದಿವಾನರಾಗಿ ಮೈಸೂರನ್ನು ಕೈಗಾರಿಕೀಕರಣಗೊಳಿಸಿದರು
💎 ನಿಜವಾದ ದಾರ್ಶನಿಕ, ಇಡೀ ರಾಷ್ಟ್ರಕ್ಕೆ ಸ್ಫೂರ್ತಿ ನೀಡಿದ ಆರಂಭಿಕ ಜ್ಯೋತಿ ಧಾರಕ. ಭಾರತ ರತ್ನ (1955) ದಿಂದ ಗೌರವಿಸಲ್ಪಟ್ಟ ಅವರ ಹೆಸರು ಭಾರತದ ಪ್ರಗತಿಯ ಕಥೆಯಲ್ಲಿ ಶಾಶ್ವತವಾಗಿ ಹೊಳೆಯುತ್ತದೆ. 🇮🇳 ಎಂದು ಬರೆದುಕೊಳ್ಳಲಾಗಿದೆ. ಇಲ್ಲಿ ಸರ್.ಎಂ ವಿಶ್ವೇಶ್ವರಯ್ಯ ಅವರಿಗೆ ಮೆಚ್ಚಿಗೆ ಸೂಚಿಸುತ್ತಲ್ಲೇ ಅವರು ತೆಲುಗು ಭಾಷೆಗೆ ಸೇರಿದವರು ಎನ್ನುವಂತೆ ಪೋಸ್ಟ್ ಮಾಡಿರುವುದಕ್ಕೆ ಕನ್ನಡಿಗರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಪೋಸ್ಟ್ ಅನ್ನು ರೀ ಟ್ವೀಟ್ ಮಾಡಿರುವ ಅಮರನಾಥ್ ಶಿವಶಂಕರ್ ಅವರು, ಅಯ್ಯೋ - ವಿಶ್ವೇಶ್ವರಯ್ಯನವರು ತೆಲುಗು ಪ್ರೈಡ್ ಯಾವಾಗ ಆದರು? ಸಾಧಕರನ್ನು appropriate ಮಾಡಿಕೊಳ್ಳುವುದು ಕೆಲವರಿಗೆ ಒಂಥರ ಚಟ.
ವಿಶ್ವೇಶ್ವರಯ್ಯನವರು ಮೂಲಕನಾಡು ಬ್ರಾಹ್ಮಣರು. ಮೂಲಕನಾಡು ಜನ ಬಹುತೇಕ ಕರ್ನಾಟಕ, ತಮಿಳುನಾಡು ಹಾಗೂ ಆಂಧ್ರಪ್ರದೇಶ ಗಡಿ ಭಾಗಗಳಲ್ಲಿ ನೆಲೆಸಿದ್ದವರು. ಮೂಲಕನಾಡು ಮನೆಗಳಲ್ಲಿ ಮಾತನಾಡುವುದು ತೆಲುಗನ್ನಡ ಅನ್ನುವ ತೆಲುಗು-ಕನ್ನಡ ಮಿಶ್ರಿತ ಭಾಷೆ. ಆದರೆ ಕರ್ನಾಟಕದಲ್ಲಿರುವ ಮೂಲಕನಾಡು ಜನರ ವ್ಯಾವಹಾರಿಕ ಭಾಷೆ ಹಿಂದಿನಿಂದಲೂ ಕನ್ನಡವೇ ಆಗಿದೆ.
ವಿಶ್ವೇಶ್ವರಯ್ಯನವರು ಹಾಗಾಗಿಯೇ ಮೈಸೂರು ಸಂಸ್ಥಾನದ ಬಹುದೊಡ್ಡ ಇಂಜಿನಿಯರ್ ಆಗ್ದಿದರು. ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪಿಸುವಲ್ಲಿಯೂ ಪಾತ್ರವಿತ್ತು. ಮೈಸೂರಿನ ಮತ್ತೊಬ್ಬ ದಿವಾನರಾಗಿದ್ದ ಹೆಚ್.ವಿ.ನಂಜುಂಡಯ್ಯ ನವರು, ದೇವುಡು ನರಸಿಂಹ ಶಾಸ್ತ್ರಿಗಳು ಹೀಗೆ ಅನೇಕ ಮೂಲಕನಾಡು ಜನರು ಕನ್ನಡ ನಾಡಿನ ಅವಿಭಾಜ್ಯ ಅಂಗವಾಗಿದ್ದಾರೆ ಎಂದು ಬರೆದುಕೊಂಡಿದ್ದಾರೆ.











Click it and Unblock the Notifications