Kannada - Tulu: ತುಳು ನುಡಿಗೆ ಹೆಚ್ಚುವರಿ ಅಧಿಕೃತ ಭಾಷೆಯ ಮಾನ್ಯತೆ ನೀಡಿ ಎಂದ ಕರವೇ; ಕನ್ನಡಿಗರು ಹೇಳಿದ್ದೇನು

Kannada - Tulu: ತುಳು ನುಡಿಗೆ ಹೆಚ್ಚುವರಿ ಅಧಿಕೃತ ಭಾಷೆಯ ಮಾನ್ಯತೆ ನೀಡಿ ಎಂದ ಕರವೇ ಹೇಳಿದೆ. ಆದರೆ ಇದಕ್ಕೆ ಕನ್ನಡಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ. ಎ. ನಾರಾಯಣಗೌಡ ಹೇಳಿದ್ದೇನು ಹಾಗೂ ಕನ್ನಡಿಗರ ಪ್ರತಿಕ್ರಿಯೆ ಏನು ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ತುಳು ನುಡಿಗೆ ಹೆಚ್ಚುವರಿ ಅಧಿಕೃತ ಭಾಷೆಯ ಮಾನ್ಯತೆ ನೀಡಿ ಅಂತ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ. ಎ. ನಾರಾಯಣಗೌಡ ಅವರು ಹೇಳಿದ್ದಾರೆ. ಮಂಗಳೂರಿನಲ್ಲಿ ಕರ್ನಾಟಕ ಸರ್ಕಾರದ ಕ್ಯಾಬಿನೆಟ್ ಸಭೆ ನಡೆಯುತ್ತಿದೆ. ಇದೊಂದು ಐತಿಹಾಸಿಕ ಸಂದರ್ಭ. ರಾಜ್ಯ ಸರ್ಕಾರ ತುಳು ನುಡಿಯನ್ನು ತುಳು ಮಾತನಾಡುವ ಪ್ರದೇಶಗಳಲ್ಲಿ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಮಾನ್ಯತೆ ನೀಡುವ ನಿರ್ಧಾರವನ್ನು ಘೋಷಿಸಬೇಕು ಎಂದು ಒತ್ತಾಯಿಸುತ್ತೇನೆ. ಕನ್ನಡದ ಸೋದರ ನುಡಿಯಾದ ತುಳು ನುಡಿಯ ಉಳಿವು, ಬೆಳವಣಿಗೆ ಮತ್ತು ಗೌರವಕ್ಕಾಗಿ ತುಳುವರು ಅನೇಕ ವರ್ಷಗಳಿಂದ ಮಂಡಿಸುತ್ತಿರುವ ಹಕ್ಕೊತ್ತಾಯವನ್ನು ಕರ್ನಾಟಕ ರಕ್ಷಣಾ ವೇದಿಕೆ ಸಂಪೂರ್ಣವಾಗಿ ಬೆಂಬಲಿಸುತ್ತದೆ ಎಂದು ಅವರು ಹೇಳಿದ್ದಾರೆ.

Kannada Tulu Karave Demands Official Language Recognition for Tulu What Did Kannadigas Say

ಸಾವಿರಾರು ವರ್ಷಗಳಿಂದ ಕನ್ನಡ ಮತ್ತು ತುಳು ನುಡಿಗಳು ಕರಾವಳಿ ಕರ್ನಾಟಕದ ನೆಲದಲ್ಲಿ ಜೊತೆಯಾಗಿ ಬೆಳೆದಿವೆ. ಎರಡೂ ನುಡಿಗಳ ನಡುವೆ ಇರುವ ಸಾಂಸ್ಕೃತಿಕ, ಸಾಹಿತ್ಯಿಕ ಮತ್ತು ಸಾಮಾಜಿಕ ಸಂಬಂಧ ಅತ್ಯಂತ ಗಾಢವಾದದ್ದು. ಕನ್ನಡ ಸಂಸ್ಕೃತಿ, ಸಾಹಿತ್ಯ ಮತ್ತು ಪರಂಪರೆಗೆ ತುಳುವರ ಕೊಡುಗೆ ಅಪಾರ. ಕರಾವಳಿ ಕರ್ನಾಟಕದ ಜನಜೀವನದಲ್ಲಿ ತುಳು ನುಡಿ ಆಳವಾಗಿ ಬೇರೂರಿದೆ.

ತುಳು ಕೇವಲ ಸಂವಹನದ ನುಡಿಯಲ್ಲ. ಅದು ಆ ಭಾಗದ ಜನರ ಬದುಕು, ಸಂಸ್ಕೃತಿ, ಜನಪದ, ಕಲೆ, ಸಾಹಿತ್ಯ, ಆಚರಣೆ, ನಂಬಿಕೆ ಮತ್ತು ಇತಿಹಾಸದ ಜೀವಂತ ಅಭಿವ್ಯಕ್ತಿಯಾಗಿ ಬೆಳೆದು ನಿಂತಿದೆ. ಯಕ್ಷಗಾನ, ದೈವಾರಾಧನೆ ಸೇರಿದಂತೆ ಕರಾವಳಿಯ ಅನೇಕ ಕಲಾ ಪರಂಪರೆಗಳೊಂದಿಗೆ ತುಳು ನುಡಿಯ ಸಂಬಂಧವಿದೆ. ಹೀಗಾಗಿ ತುಳು ನುಡಿಯನ್ನು ಉಳಿಸುವುದು ಮತ್ತು ಬೆಳೆಸುವುದೆಂದರೆ, ಅದರೊಂದಿಗೆ ಬೆಸೆದುಕೊಂಡಿರುವ ಅಪಾರ ಸಾಂಸ್ಕೃತಿಕ ಪರಂಪರೆಯ ಉಳಿಸುವುದೂ ಆಗಿದೆ.

ಈ ಹಿನ್ನೆಲೆಯಲ್ಲಿ ತುಳು ನುಡಿಯನ್ನು ತುಳು ಮಾತನಾಡುವ ಪ್ರದೇಶಗಳಲ್ಲಿ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಮಾನ್ಯತೆ ನೀಡುವ ಕುರಿತು ಕರ್ನಾಟಕ ಸರ್ಕಾರ ಸ್ಪಷ್ಟ ತೀರ್ಮಾನ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತೇನೆ. ಜನರು ತಮ್ಮ ತಾಯಿನುಡಿಯಲ್ಲಿ ಸರ್ಕಾರಿ ಸೇವೆಗಳನ್ನು ಪಡೆಯಲು ಇಂತಹ ಮಾನ್ಯತೆ ಸಹಕಾರಿಯಾಗಬಹುದು. ಅಷ್ಟೇ ಅಲ್ಲ, ತುಳು ನುಡಿಗೆ ಸಂವಿಧಾನದ 8ನೇ ಅನುಸೂಚಿಯಲ್ಲಿ ಸ್ಥಾನ ನೀಡಬೇಕೆಂದು ಒಕ್ಕೂಟ ಸರ್ಕಾರವನ್ನು ಆಗ್ರಹಿಸುತ್ತೇನೆ. ಇದು ನಮ್ಮ ಹೊಸ ಬೇಡಿಕೆಯೇನಲ್ಲ. ಕರವೇ ಮೊದಲಿನಿಂದಲೂ ಈ ಹಕ್ಕೊತ್ತಾಯವನ್ನು ಬೆಂಬಲಿಸುತ್ತಾ ಬಂದಿದೆ.

ಸಂವಿಧಾನದ 8ನೇ ಅನುಸೂಚಿಯಲ್ಲಿ ಪ್ರಸ್ತುತ 22 ನುಡಿಗಳಿವೆ. ತುಳು ಮತ್ತು ಕೊಡವ ಸೇರಿದಂತೆ ಇನ್ನೂ ಹಲವು ನುಡಿಗಳನ್ನು 8ನೇ ಅನುಸೂಚಿಗೆ ಸೇರಿಸಬೇಕೆಂಬ ಬೇಡಿಕೆಗಳು ಕೇಂದ್ರ ಸರ್ಕಾರದ ಮುಂದೆ ಹಲವು ವರ್ಷಗಳಿಂದ ಇದ್ದು, ನೆನೆಗುದಿಗೆ ಬಿದ್ದಿವೆ. 2003ರಲ್ಲಿ ಸೀತಾಕಾಂತ ಮೊಹಾಪಾತ್ರ ಅವರ ಅಧ್ಯಕ್ಷತೆಯಲ್ಲಿ 8ನೇ ಅನುಸೂಚಿಗೆ ಹೆಚ್ಚಿನ ಭಾಷೆಗಳನ್ನು ಸೇರಿಸುವ ಕುರಿತು ಮಾನದಂಡಗಳನ್ನು ರೂಪಿಸಲು ಸಮಿತಿಯನ್ನು ರಚಿಸಲಾಗಿತ್ತು. ಆ ಸಮಿತಿ 2004ರಲ್ಲಿ ವರದಿ ಸಲ್ಲಿಸಿತು. ಕರ್ನಾಟಕ ಸರ್ಕಾರವೇ ತುಳು ಮತ್ತು ಕೊಡವ ಭಾಷೆಗಳನ್ನು ಸಂವಿಧಾನದ 8ನೇ ಅನುಸೂಚಿಗೆ ಸೇರಿಸುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ. ಆದರೂ ಇದುವರೆಗೆ ಈ ನ್ಯಾಯಯುತ ಬೇಡಿಕೆ ಈಡೇರಿಲ್ಲ.

ಕರ್ನಾಟಕ ರಕ್ಷಣಾ ವೇದಿಕೆ ಮೊದಲಿನಿಂದಲೂ 'ವಿವಿಧತೆಯಲ್ಲಿ ಏಕತೆ'ಯನ್ನು ಪ್ರತಿಪಾದಿಸುತ್ತ ಬಂದಿದೆ. ಬಹುತ್ವವನ್ನು ಗೌರವಿಸದೆ ದೇಶವನ್ನು ಕಟ್ಟಲು ಸಾಧ್ಯವಿಲ್ಲ. ಹಿಂದಿ ಹೇರಿಕೆಯನ್ನು ನಾವು ಯಾವ ಕಾರಣಕ್ಕೆ ವಿರೋಧಿಸುತ್ತೇವೆಯೋ, ಅದೇ ಕಾರಣಕ್ಕೆ ತುಳು, ಕೊಡವದಂಥ ಸೋದರ ನುಡಿಗಳಿಗೆ ಅಧಿಕೃತ ಮಾನ್ಯತೆ ದೊರೆಯಬೇಕು ಎಂದು ಆಗ್ರಹಿಸುತ್ತೇವೆ ಎಂದೂ ಟಿ. ಎ. ನಾರಾಯಣಗೌಡ ಅವರು ಹೇಳಿದ್ದಾರೆ.

Kannada - Tulu: ಕನ್ನಡಿಗರು ಹೇಳಿದ್ದೇನು ?

ತುಳು ನುಡಿಗೆ ಹೆಚ್ಚುವರಿ ಅಧಿಕೃತ ಭಾಷೆಯ ಮಾನ್ಯತೆ ನೀಡುವ ವಿಚಾರಕ್ಕೆ ಕರವೇ ಬೆಂಬಲ ಸೂಚಿಸಿದ್ದು, ಈ ವಿಷಯಕ್ಕೆ ಕನ್ನಡಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕರ್ನಾಟಕ ರಾಜ್ಯದಲ್ಲಿ ಕನ್ನಡ ಪ್ರಾಮುಕ್ಯತೆ ಇರಬೇಕು ಈಗ ಎಲ್ಲಾ ಪರೀಕ್ಷೆಗಳಲ್ಲಿ ಇಂಗ್ಲಿಷ್ ಭಾಷೆಯನ್ನು ಸೇರಿಸಿದವರು ಮೂಲಕ ಕನ್ನಡ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಇದು ಅನ್ಯಾಯವಾಗುತ್ತಿದೆ ಇನ್ನೂ ಒಂದು ವಾರದಲ್ಲಿ ಗೆಜೆಟ್ ಆಗುತ್ತೆ ಇದಕ್ಕೆ ನೀವು ಹೋರಾಟ ಮಾಡದೇ ಹೋದ್ರೆ ಮುಂದೆ ಒಂದು ದಿನ ಕನ್ನಡ ಶಾಲೆಗಳು ಮುಚ್ಚಿ ಹೋಗುತ್ತವೆ ಎಂದೂ ಕೆಲವರು ಹೇಳಿದ್ದಾರೆ.

ಒಳ್ಳೆಯ ಬೆಳವಣಿಗೆ ಆದರೆ, ಕರವೇ ಒಕ್ಕೊರಲಿಂದ ಈ ಮೂಲಕ ಘನ ಸರಕಾರಕ್ಕೆ, ಮಾನ್ಯ ಮುಖ್ಯಮಂತ್ರಿಗಳಿಗೆ ಪತ್ರ ಮುಖೇನ... ತುಳು ಅಧಿಕೃತಗೊಳಿಸುವ ಬಗ್ಗೆ, ತುಳುವನ್ನು ಸಮರ್ಪಕವಾಗಿ ಆಡಳಿತ, ಶಿಕ್ಷಣದಲ್ಲಿ ಅನುಷ್ಠಾನಗೊಳಿಸಲು, ತುಳು ಭಾಷೆ, ಅದರ ಇತಿಹಾಸ, ಸಂಸ್ಕೃತಿಯ ಒಟ್ಟಾರೆ ಬೆಳವಣಿಗೆಗೆ ಬೇಡಿಕೆಯನ್ನು ಸಲ್ಲಿಸಬೇಕಾಗಿ ವಿನಂತಿ. "ತುಳು ಒರಿಪಾಲೆ, ತುಳು ಬುಲೆಪಾಲೆ.. ತುಳುನು ಅಧಿಕೃತ ಮಲ್ಪಾಲೆ....." ಸೊಲ್ಮೆಲು......ಧನ್ಯವಾದಗಳು ಎಂದು ತುಳು ಭಾಷಿಕರು ಹೇಳಿದ್ದಾರೆ.

ತುಳು ನುಡಿ ಮಾತ್ರವಲ್ಲ, ತುಳು ಸಂಸ್ಕೃತಿಯೂ ಸಹ. ತುಳುನಾಡಿನ ವಿಶಿಷ್ಟ ಹಬ್ಬವಾದ ಕೆಡ್ಡಸವನ್ನು ಪ್ರಾದೇಶಿಕ ರಜಾದಿನವೆಂದು ಘೋಷಿಸಿ ಆಚರಿಸಬೇಕು ಎಂದೂ ಕೆಲವರು ಆಗ್ರಹಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+