ಗಡಿ ಸಮಸ್ಯೆಗೆ ಸರ್ಧಾರ್‌ ಪಟೇಲ್ ಕಾರಣ: ಬಿಜೆಪಿ ಆಶಯಕ್ಕೆ ಮುಳುವಾದ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಭಾಷಣ?

ಹಾವೇರಿ, ಡಿಸೆಂಬರ್ 09: ದೇಶದಲ್ಲಿ ಉದ್ಬವಿಸಿರುವ ಗಡಿ ಸಮಸ್ಯೆಗಳಿಗೆ ಅಂದಿನ ಕೇಂದ್ರ ಗೃಹ ಸಚಿವ ಸರ್ಧಾರ್‌ ವಲ್ಲಭಬಾಯಿ ಪಟೇಲರು ಕಾರಣವೆಂದು 86ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ದೊಡ್ಡರಂಗೇಗೌಡರು ಅಭಿಪ್ರಾಯಪಟ್ಟಿದ್ದಾರೆ. ಇದು ಬಿಜೆಪಿಗೆ ಇರುಸುಮುರುಸು ಉಂಟು ಮಾಡಿದೆ ಎಂಬ ಮಾತುಗಳು ಕೇಳಿಬಂದಿವೆ.

 ಸಮ್ಮೇಳನಾಧ್ಯಕ್ಷ ದೊಡ್ಡರಂಗೇಗೌಡರು ಹೇಳಿದ್ದೇನು?

ಸಮ್ಮೇಳನಾಧ್ಯಕ್ಷ ದೊಡ್ಡರಂಗೇಗೌಡರು ಹೇಳಿದ್ದೇನು?

ದೇಶದ ಮೊದಲ ಕೇಂದ್ರ ಗೃಹ ಸಚಿವ ಸರ್ದಾರ್‌ ವಲ್ಲಭಬಾಯಿ ಪಟೇಲರು ಭಾಷಾವಾರು ಪ್ರಾಂತ ವಿಂಗಡಣೆಯೆಂಬ ವಿಚಾರವನ್ನು ಮುನ್ನೆಲೆಗೆ ತಂದರು. ಭಾಷಾವಾರು ಭೂಪಟವನ್ನು ಇಟ್ಟುಕೊಂಡು ಅವೈಜ್ಞಾನಿಕವಾಗಿ ಗೆರೆಗಳನ್ನು ಎಳೆದರು. ಇಂದಿನ ಭಾರತದ ಗಡಿ ಸಮಸ್ಯೆಗಳಿಗೆ ಅವರೇ ಮೂಲ ಕಾರಣರಾಗಿದ್ದಾರೆ' ಎಂದು ಡಾ. ದೊಡ್ಡರಂಗೇಗೌಡ ಹೇಳಿದರು.

ಹಾವೇರಿಯಲ್ಲಿ ನಡೆಯುತ್ತಿರುವ ಸಮ್ಮೇಳನದಲ್ಲಿ 'ಗಡಿನಾಡು ಮತ್ತು ಹೊರನಾಡು ಕನ್ನಡಿಗರ ತಳಮಳಗಳು' ಎಂಬ ವಿಚಾರವಾಗಿ ನಡೆದ ಗೋಷ್ಠಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. 'ಭಾಷಾವಾರು ಪ್ರಾಂತ ವಿಂಗಡಣೆ ವಿಚಾರ ದೇಶದಲ್ಲಿ ಇತ್ತೀಚೆಗೆ ಹೊಸ ಹೊಸ ಸಮಸ್ಯೆಗಳನ್ನು ಹುಟ್ಟುಹಾಕುತ್ತಿವೆ. ಗಡಿ ಪ್ರದೇಶಗಳಲ್ಲಿರುವ ಕೆಲವು ಹಳ್ಳಿಗಳು ಮೂರು ರಾಜ್ಯ ಸರ್ಕಾರಗಳ ಆಡಳಿತಕ್ಕೆ ಒಳಪಟ್ಟಿವೆ. ಇವುಗಳು ಜನ ಜೀವನದ ಸಂಸ್ಕೃತಿಗೆ ಮತ್ತು ಭಾಷೆಗೆ ಅನುಗುಣವಾಗಿ ವರ್ಗೀಕರಣವಾಗಿಲ್ಲ. ಭಾಷಾವಾರು ಪ್ರಾಂತ ವಿಂಗಡಣೆ ಪುನರ್‌ ಹೊಂದಾಣಿಕೆ ಮಾಡಬೇಕಾಗಿದೆ' ಎಂದರು.

 ಕಾಸರಗೋಡು, ಬೆಳಗಾವಿ ಗಡಿ ಸಮಸ್ಯೆ ಕುರಿತು ಹೇಳಿದ್ದೇನು?

ಕಾಸರಗೋಡು, ಬೆಳಗಾವಿ ಗಡಿ ಸಮಸ್ಯೆ ಕುರಿತು ಹೇಳಿದ್ದೇನು?

'ಕೇರಳದಲ್ಲಿರುವ ಕಾಸರಗೋಡು ಮತ್ತು ಬೆಳಗಾವಿಯ ಗಡಿ ಸಮಸ್ಯೆಗಳು ನಮ್ಮನ್ನು ಸದಾ ಕಾಡುತ್ತಿವೆ. ಸೊಲ್ಲಾಪುರ, ಅಕ್ಕಲಕೋಟೆ, ಜತ್‌ ಪ್ರದೇಶಗಳಲ್ಲಿ ಕನ್ನಡತನವಿದೆ. ಶೇಕಡ 90ರಷ್ಟು ಜನರು ಕನ್ನಡ ಮಾತನಾಡುತ್ತಾರೆ. ಈ ಹಿನ್ನೆಲೆಯಲ್ಲಿ, ಈ ಎಲ್ಲಾ ಪ್ರದೇಶಗಳನ್ನು ಕರ್ನಾಟಕಕ್ಕೆ ಸೇರಬೇಕು' ಎಂದು ಪ್ರತಿಪಾದನೆ ಮಾಡಿದ್ದಾರೆ.

'ತಮಿಳುನಾಡು ರಾಜಧಾಣಿ ಚೆನ್ನೈ ಹಾಗೂ ಮಹಾರಾಷ್ಟ್ರ ರಾಜಧಾಣಿ ಮುಂಬೈ ನಗರಗಳಲ್ಲಿ ಕನ್ನಡ ಸಂಘಟನೆಗಳು, ಕೆಲವು ಪತ್ರಿಕೆಗಳು ಯಾವುದೇ ಸಮಸ್ಯೆಗಳಿಲ್ಲದೇ ಸರಾಗವಾಗಿ ಕಾರ್ಯ ನಿರ್ವಹಿಸುತ್ತಿವೆ. ಅಲ್ಲಿ ಕನ್ನಡದ ಕಾರ್ಯಕ್ರಮಗಳೇನಾದರೂ ನಡೆಸಿದರೆ, ಸಾವಿರಾರು ಮಂದಿ ಸೇರುತ್ತಾರೆ. ಹೊರ ರಾಜ್ಯದಲ್ಲಿ ಕನ್ನಡ ಭಾಷೆ ಕಟ್ಟುವ ಕೆಲಸ ಸಾಧ್ಯವಾಗುತ್ತದೆ ಎಂದಾದರೆ, ಇದು ನಮ್ಮ ನಾಡಲ್ಲಿ ಏಕೆ ಸಾಧ್ಯವಾಗುತ್ತಿಲ್ಲ?' ಎಂದು ಪ್ರಶ್ನಿಸಿದರು.

ಕನ್ನಡ ಭಾಷೆ ಅಭಿವೃದ್ಧಿಗೆ ಸರ್ಕಾರದಿಂದ ಅನುದಾನ ಘೋಷಣೆಯಾಗುತ್ತದೆ. ಆದರೆ, ಇದಕ್ಕೆ ಹಣಕಾಸಿನ‌ ಇಲಾಖೆ ಕೊಕ್ಕೆ ಹಾಕುತ್ತದೆ. ರಾಜ್ಯದ ಗಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಿಗಬೇಕಾದ ಹಣ ಸಿಗುತ್ತಿಲ್ಲ. ಕೆಲ ಸಮಸ್ಯೆಗಳು ಹಾಗೆಯೇ ಉಳಿದಿವೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.

 ಕೇರಳ ಸರ್ಕಾರದ ವಿರುದ್ಧ ದೊಡ್ಡರಂಗೇಗೌಡ ಆಕ್ರೋಶ

ಕೇರಳ ಸರ್ಕಾರದ ವಿರುದ್ಧ ದೊಡ್ಡರಂಗೇಗೌಡ ಆಕ್ರೋಶ

ಕಾಸರಗೋಡಿನಲ್ಲಿ ಕೇರಳ ಸರ್ಕಾರ ತೆಗೆದುಕೊಂಡ ನಿರ್ಧಾರವನ್ನು ಸಮ್ಮೇಳನಾಧ್ಯಕ್ಷ ಡಾ. ದೊಡ್ಡರಂಗೇಗೌಡ ಟೀಕಿಸಿದರು. 'ಕೇರಳದ ಗಡಿ ಪ್ರದೇಶಗಳಲ್ಲಿ ಸಾಕಷ್ಟು ಜನರು ಪ್ರತಿಭಾವಂತ ಕನ್ನಡಿಗರಿದ್ದಾರೆ. ಕನ್ನಡ ಶಾಲೆ ಇಲ್ಲದ ಕಾರಣ ಕನ್ನಡ ಭಾಷೆಯಿಂದ ವಂಚಿತರಾಗುತ್ತಿದ್ದಾರೆ. ಕಾಸರಗೋಡಿನಲ್ಲಿ ಕನ್ನಡ ಶಾಲೆಗಳನ್ನು ತೆರೆಯಲು ಕೇರಳ ಸರ್ಕಾರ ಕಠೋರವಾಗಿ ವರ್ತಿಸುತ್ತಿದೆ. ಕರ್ನಾಟಕದ ಸರ್ಕಾರ ಜಾಣಕುರುಡುತನ ಬಿಟ್ಟು, ಕನ್ನಡ ಶಾಲೆ ಕಟ್ಟಿ, ಶಿಕ್ಷಕರನ್ನು ನೇಮಕ ಮಾಡಲಿ' ಎಂದು ಎಂದು ಅವರು ಒತ್ತಾಯಿಸಿದರು.

 ಸಮ್ಮೇಳನಾಧ್ಯಕ್ಷರ ಹೇಳಿಕೆಯಿಂದ ಬಿಜೆಪಿ ಆಶಯಕ್ಕೆ ಧಕ್ಕೆ?

ಸಮ್ಮೇಳನಾಧ್ಯಕ್ಷರ ಹೇಳಿಕೆಯಿಂದ ಬಿಜೆಪಿ ಆಶಯಕ್ಕೆ ಧಕ್ಕೆ?

ಸಮ್ಮೇಳನಾಧ್ಯಕ್ಷ ದೊಡ್ಡರಂಗೇಗೌಡರು ಹಿಂದೆ ಬಿಜೆಪಿಯಿಂದ ಎಂಎಲ್‌ಸಿ ಆಗಿದ್ದವರು. ಅವರೀಗ ಸರ್ಧಾರ್‌ ಪಟೇಲ್‌ ಅವರ ಬಗ್ಗೆ ನೀಡಿದ ಹೇಳಿಕೆ ಬಿಜೆಪಿ ಆಶಯಕ್ಕೆ ಧಕ್ಕೆ ತಂದಿದೆ ಎಂದು ಮಾತುಗಳು ಕೇಳಿಬಂದಿವೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಸರ್ಧಾರ ಪಟೇಲರನ್ನು ವಿಜೃಂಭಿಸುತ್ತಿದೆ. ಪಟೇಲರು ತೆಗೆದುಲಕೊಂಡ ಕಟುನಿರ್ಧಾರಗಳೇ ಭಾರತದ ಇಂದಿನ ಸಮಗ್ರತೆಗೆ ಕಾರಣವೆಂದು ಹೇಳುತ್ತಿದೆ. ಇದರ ಸಂಕೇತವಾಗಿ ಗುಜರಾತ್‌ನಲ್ಲಿ ಐಕ್ಯತಾ ಮೂರ್ತಿಯನ್ನು ಸ್ಥಾಪಿಸಿದೆ. 'ಭಾರತದ ಮೊದಲ ಪ್ರಧಾನಿ ಆಗಬೇಕಾಗಿದ್ದು ಪಟೇಲರು. ನೆಹರು ಅವರಿನ್ನು ಭಾರತದ ಮೊದಲ ಪ್ರಧಾನಿಯನ್ನಾಗಿ ಮಾಡುವ ಮೂಲಕ, ಪಟೇಲರಿಗೆ ಅನ್ಯಾಯ ಎಸಗಲಾಯಿತು' ಎಂಬ ನಿರೂಪಣೆಯನ್ನು ಕಟ್ಟಿಕೊಡಲು ಹಲವು ಪ್ರಯತ್ನಗಳನ್ನು ಬಿಜೆಪಿ ಮಾಡಿದೆ. ಈಗ ದೊಡ್ಡರಂಗೇಗೌಡರು ಪಟೇಲರ ನಿರ್ಧಾರಗಳ ವಿರುದ್ಧ ಆಡಿದ ಮಾತುಗಳು ಬಿಜೆಪಿ ಆಶಯಗಳಿಗೆ ಮುಳುವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+