• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

2021ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ; ಪಟ್ಟಿ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 31; ಕರ್ನಾಟಕ ಸರ್ಕಾರ 2021ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಘೋಷಣೆ ಮಾಡಿದೆ. 66 ಸಾಧಕರಿಗೆ ಈ ಬಾರಿ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಪ್ರತಿವರ್ಷ ನೀಡಲಾಗುವ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಈ ವರ್ಷ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ 66 ಸಾಧಕರನ್ನು ಆಯ್ಕೆ ಮಾಡಲಾಗಿದೆ. ಭಾನುವಾರ ಪ್ರಶಸ್ತಿ ಪುರಸ್ಕೃತರಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ಅಮೆರಿಕದ ಜಾರ್ಜಿಯಾದಲ್ಲಿ 'ಕನ್ನಡ ಭಾಷಾ ದಿನ ಮತ್ತು ರಾಜ್ಯೋತ್ಸವ ದಿನ' ಅಮೆರಿಕದ ಜಾರ್ಜಿಯಾದಲ್ಲಿ 'ಕನ್ನಡ ಭಾಷಾ ದಿನ ಮತ್ತು ರಾಜ್ಯೋತ್ಸವ ದಿನ'

ಸೇವಾಸಿಂಧು ಮೂಲಕ ಜನರು ಮಾಡಿದ ಶಿಫಾರಸುಗಳನ್ನು ಪರಿಶೀಲಿಸಿ ಹಾಗೂ ಎಲೆಮರೆಕಾಯಿಯಂತೆ ಸೇವೆ ಸಲ್ಲಿಸಿದ ಅನೇಕ ಮಹನೀಯರನ್ನು ಹೆಕ್ಕಿ ತೆಗೆದು ಪ್ರಶಸ್ತಿ ಸಲಹಾ ಸಮಿತಿ ಮತ್ತು ಮಖ್ಯಮಂತ್ರಿಗಳ ಅಧ್ಯಕ್ಷತೆಯ ಪ್ರಶಸ್ತಿ ಆಯ್ಕೆ ಸಮಿತಿ ಮುಂದೆ ಇಡಲಾಗಿತ್ತು.

ಪುನೀತ್ ವಿಧಿವಶ; ರಾಜ್ಯೋತ್ಸವ ಪ್ರಶಸ್ತಿ ನೀಡಲು ತಾಂತ್ರಿಕ ತೊಡಕುಪುನೀತ್ ವಿಧಿವಶ; ರಾಜ್ಯೋತ್ಸವ ಪ್ರಶಸ್ತಿ ನೀಡಲು ತಾಂತ್ರಿಕ ತೊಡಕು

ಈ ವರ್ಷ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಅದರ ಸ್ಮರಣೆಗಾಗಿ ರಾಜ್ಯದ 10 ಸಂಘ ಸಂಸ್ಥೆಗಳಿಗೆ ಅಮೃತ ಮಹೋತ್ಸವ ರಾಜ್ಯ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಈ ಪ್ರಶಸ್ತಿ ಈ ವರ್ಷಕ್ಕೆ ಮಾತ್ರ ಸೀಮಿತವಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ.

ಕನ್ನಡ ರಾಜ್ಯೋತ್ಸವ 2021: ಇತಿಹಾಸ, ಮಹತ್ವ, ಸಂದೇಶಗಳುಕನ್ನಡ ರಾಜ್ಯೋತ್ಸವ 2021: ಇತಿಹಾಸ, ಮಹತ್ವ, ಸಂದೇಶಗಳು

ಜಾನಪದ ಕ್ಷೇತ್ರದ ಸಾಧಕರ ಪಟ್ಟಿ

ಜಾನಪದ ಕ್ಷೇತ್ರದ ಸಾಧಕರ ಪಟ್ಟಿ

* ಆರ್. ಬಿ. ನಾಯಕ (ವಿಜಯಪುರ)
* ಗೌರಮ್ಮ ಹುಚ್ಚಪ್ಪ ಮಾಸ್ತರ್ (ಶಿವಮೊಗ್ಗ)
* ದುರ್ಗಪ್ಪ ಚೆನ್ನದಾಸರ (ಬಳ್ಳಾರಿ)
* ಬನ್ನಂಜೆ ಬಾಬು ಅಮೀನ್ (ಉಡುಪಿ)
* ಮಲ್ಲಿಕಾರ್ಜುನ ಗೋವಿಂದಪ್ಪ ಭಜಂತ್ರಿ (ಧಾರವಾಡ)
* ಮಹಾರುದ್ರಪ್ಪ ವೀರಪ್ಪ ಇಟಗಿ (ಹಾವೇರಿ)

ರಂಗಭೂಮಿ ಕ್ಷೇತ್ರ

ರಂಗಭೂಮಿ ಕ್ಷೇತ್ರ

* ಫಕೀರಪ್ಪ ರಾಮಪ್ಪ ಕೊಡಾಯಿ (ಹಾವೇರಿ)
* ಪ್ರಕಾಶ್ ಬೆಳವಾಡಿ (ಚಿಕ್ಕಮಗಳೂರು)
* ರಮೇಶ್ ಗೌಡ ಪಾಟೀಲ (ಬಳ್ಳಾರಿ)
* ಮಲ್ಲೇಶಯ್ಯ ಎನ್ (ರಾಮನಗರ)
* ಸಾವಿತ್ರಿ ಗೌಡರ್ (ಗದಗ)

ಸಾಹಿತ್ಯ ಕ್ಷೇತ್ರದ ಸಾಧಕರು

ಸಾಹಿತ್ಯ ಕ್ಷೇತ್ರದ ಸಾಧಕರು

* ಮಹಾದೇವ ಶಂಕನಪುರ (ಚಾಮರಾಜನಗರ)
* ಪ್ರೊ. ಡಿ. ಟಿ. ರಂಗಸ್ವಾಮಿ (ಚಿತ್ರದುರ್ಗ)
* ಜಯಲಕ್ಷ್ಮೀ ಮಂಗಳಮೂರ್ತಿ (ರಾಯಚೂರು)
* ಅಜ್ಜಂಪುರ ಮಂಜುನಾಥ್ (ಚಿಕ್ಕಮಗಳೂರು)
* ಡಾ.ಕೃಷ್ಣ ಕೋಲ್ಹಾರ ಕುಲಕರ್ಣಿ (ವಿಜಯಪುರ)
* ಸಿದ್ದಪ್ಪ ಬಿದರಿ (ಬಾಗಲಕೋಟೆ)

ಸಮಾಜ ಸೇವೆ ಕ್ಷೇತ್ರದ ಸಾಧಕರು

ಸಮಾಜ ಸೇವೆ ಕ್ಷೇತ್ರದ ಸಾಧಕರು

* ಸೂಲಗಿತ್ತಿ ಯಮುನವ್ವ (ಸಾಲಮಂಟಪಿ) (ಬಾಗಲಕೋಟೆ)
* ಮಾದಲಿ ಮಾದಯ್ಯ (ಮೈಸೂರು)
* ಮುನಿಯಪ್ಪ ದೊಮ್ಮಲೂರು (ಬೆಂಗಳೂರು ನಗರ)
* ಬಿ. ಎಲ್. ಪಾಟೀಲ್ ಅಥಣಿ (ಬೆಳಗಾವಿ)
* ಡಾ. ಜೆ. ಎನ್. ರಾಮಕೃಷ್ಣೇ ಗೌಡ (ಮಂಡ್ಯ)

ಸಂಗೀತ, ಶಿಲ್ಪಕಲೆ

ಸಂಗೀತ, ಶಿಲ್ಪಕಲೆ

* ಸಂಗೀತ ಕ್ಷೇತ್ರ; ತ್ಯಾಗರಾಜು ಸಿ (ನಾದಸ್ವರ) (ಕೋಲಾರ), ಹೆರಾಲ್ಡ್ ಸಿರಿಲ್ ಡಿಸೋಜಾ (ದಕ್ಷಿಣ ಕನ್ನಡ)
* ಶಿಲ್ಪಕಲೆ ಕ್ಷೇತ್ರ; ಡಾ. ಜಿ. ಜ್ಞಾನಾನಂದ (ಚಿಕ್ಕಬಳ್ಳಾಪುರ), ವೆಂಕಣ್ಣ ಚಿತ್ರಗಾರ (ಕೊಪ್ಪಳ)
* ಸಿನಿಮಾ ಕ್ಷೇತ್ರ ; ದೇವರಾಜ್ (ಬೆಂಗಳೂರು)
* ವಿಜ್ಞಾನ ತಂತ್ರಜ್ಞಾನ ಕ್ಷೇತ್ರ; ಡಾ. ಹೆಚ್. ಎನ್. ಸಾವಿತ್ರಿ (ಬೆಂಗಳೂರು ನಗರ), ಪ್ರೊ. ಜಿ. ಯು. ಕುಲ್ಕರ್ಣಿ (ಬೆಂಗಳೂರು)
* ಕೃಷಿ ಕ್ಷೇತ್ರ; ಡಾ. ಸಿ. ನಾಗರಾಜ್ (ಬೆಂಗಳೂರು ಗ್ರಾಮಾಂತರ), ಗುರುಲಿಂಗಪ್ಪ ಮೇಲ್ದೊಡ್ಡಿ (ಬೀದರ್), ಶಂಕರಪ್ಪ ಅಮ್ಮನಘಟ್ಟ (ತುಮಕೂರು)

ಶಿಕ್ಷಣ, ಸಂಕೀರ್ಣ ಕ್ಷೇತ್ರಗಳು

ಶಿಕ್ಷಣ, ಸಂಕೀರ್ಣ ಕ್ಷೇತ್ರಗಳು

* ಶಿಕ್ಷಣ; ಸ್ವಾಮಿ ಲಿಂಗಪ್ಪ (ಮೈಸೂರು), ಶ್ರೀಧರ ಚಕ್ರವರ್ತಿ (ಧಾರವಾಡ), ಪ್ರೊ. ಪಿ. ವಿ. ಕೃಷ್ಣ ಭಟ್ (ಶಿವಮೊಗ್ಗ)
* ಸಂಕೀರ್ಣ; ಡಾ. ಬಿ. ಅಂಬಣ್ಣ (ವಿಜಯನಗರ), ಕ್ಯಾಪ್ಟನ್ ರಾಜಾರಾವ್ (ಬಳ್ಳಾರಿ), ಗಂಗಾವತಿ ಪ್ರಾಣೇಶ್ (ಕೊಪ್ಪಳ)
* ಪರಿಸರ; ಮಹಾದೇವ ವೇಳಿಪಾ (ಉತ್ತರ ಕನ್ನಡ), ಬೈಕಂಪಾಡಿ ರಾಮಚಂದ್ರ (ದಕ್ಷಿಣ ಕನ್ನಡ)
* ಪತ್ರಿಕೋದ್ಯಮ; ಪಟ್ನಂ ಅನಂತ ಪದ್ಮನಾಭ (ಮೈಸೂರು), ಯು. ಬಿ. ರಾಜಲಕ್ಷ್ಮೀ (ಉಡುಪಿ)
* ನ್ಯಾಯಾಂಗ; ಸಿ. ವಿ. ಕೇಶವ ಮೂರ್ತಿ (ಮೈಸೂರು)
* ಆಡಳಿತ; ಹೆಚ್‌. ಆರ್. ಕಸ್ತೂರಿ ರಂಗನ್ (ಹಾಸನ)

ಪ್ರಶಸ್ತಿ ಪುರಸ್ಕೃತರ ಸಂಪೂರ್ಣ ಪಟ್ಟಿ

English summary
Karnataka government announced Kannada Rajyotsava award 2021. Here are the full list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X