ವಾಲ್ಮೀಕಿ ಜಯಂತಿ ಕಾರ್ಯಕ್ರಮ ಬಹಿಷ್ಕರಿಸಿದ ಮಾಧ್ಯಮಗಳು
ಬೆಂಗಳೂರು, ಅಕ್ಟೋಬರ್ 13 : ಕರ್ನಾಟಕ ಸರ್ಕಾರ ಮಾಧ್ಯಮಗಳನ್ನು ಮತ್ತೆ ನಿರ್ಬಂಧಿಸಲು ಮುಂದಾಗಿದೆ. ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಮಾಧ್ಯಮಗಳು ಬಹಿಷ್ಕರಿಸಿ ಪ್ರತಿಭಟನೆ ನಡೆಸಿದವು.
ಭಾನುವಾರ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ವಿಧಾನಸೌಧದಲ್ಲಿ ಆಯೋಜಿಸಲಾಗಿತ್ತು. ಆದರೆ, ಮಾಧ್ಯಮ ಪ್ರತಿನಿಧಿಗಳಿಗೆ ಕಾರ್ಯಕ್ರಮಕ್ಕೆ ಹೋಗದಂತೆ ಪೊಲೀಸರು ತಡೆದರು.
ಆದ್ದರಿಂದ, ಮಾಧ್ಯಮಗಳು ಕಾರ್ಯಕ್ರಮ ಬಹಿಷ್ಕರಿಸಿ ವಿಧಾನಸೌಧ ಮತ್ತು ವಿಕಾಸಸೌಧದ ನಡುವಿನ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ಮಾಡಿದರು. ಪ್ರತಿಪಕ್ಷ ಕಾಂಗ್ರೆಸ್ ಸರ್ಕಾರದ ನಡೆಗೆ ವಿರೋಧ ವ್ಯಕ್ತಪಡಿಸಿ ಟ್ವೀಟ್ ಮಾಡಿದೆ.

ಅಕ್ಟೋಬರ್ 10 ರಿಂದ ಮೂರು ದಿನಗಳ ಕಾಲ ನಡೆದ ವಿಧಾನಸಭೆ ಅಧಿವೇಶನಕ್ಕೂ ಖಾಸಗಿ ಮಾಧ್ಯಮಗಳನ್ನು ನಿಷೇಧಿಸಲಾಗಿತ್ತು. ಚಂದನ ವಾಹಿನಿ ಮೂಲಕ ಪ್ರಸಾರದ ಲಿಂಕ್ ಪಡೆದುಕೊಳ್ಳಲು ಸೂಚನೆ ನೀಡಲಾಗಿತ್ತು.
ದೃಶ್ಯ ಮಾಧ್ಯಮ ಮಾತ್ರವಲ್ಲ, ಮುದ್ರಣ ಮಾಧ್ಯಮದ ಛಾಯಾಗ್ರಾಹಕರು ಫೋಟೋ ತೆಗೆಯದಂತೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಆದೇಶ ಹೊರಡಿಸಿದ್ದರು. ಇದನ್ನು ಖಂಡಿಸಿ ಮಾಧ್ಯಮ ಪ್ರತಿನಿಧಿಗಳು ಪ್ರತಿಭಟನೆಯನ್ನು ನಡೆಸಿದ್ದರು.
ಕಾಂಗ್ರೆಸ್ ಟ್ವೀಟ್
ವಿಧಾನಸೌಧದಲ್ಲಿ ಬ್ಯಾಕ್ವೆಂಟ್ ಹಾಲ್ ನಲ್ಲಿ ನಡೆಯುತ್ತಿರುವ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಬಹಿಷ್ಕಾರ ಮಾಡಿ ಗಾಂಧಿ ಪ್ರತಿಮೆ ಬಳಿ ಮಾಧ್ಯಮಗಳಿಂದ ಸಾಂಕೇತಿಕ ಪ್ರತಿಭಟನೆ.
— Karnataka Congress (@INCKarnataka) October 13, 2019
ಪಾರದರ್ಶಕ ಆಡಳಿತ ಕೊಡಲಾಗದ, ನೆರೆ ಪರಿಹಾರದಲ್ಲಿ ವಿಫಲವಾದ @BJP4Karnataka ಸರ್ಕಾರ ಮಾಧ್ಯಮ & ಜನತೆಯ ಹಕ್ಕುಗಳ ಮೇಲೆ ಆಕ್ರಮಣ ಮಾಡಿದೆ.#BJPbetraysKarnataka pic.twitter.com/XQPvffdjt3












Click it and Unblock the Notifications