ಹಾವಿನಿಂದ ಹುಡುಗಿಯ ರಕ್ಷಿಸಿದ ವೈಶಾಖ್ ಮತ್ತಿತರರಿಗೆ ಶೌರ್ಯ ಪ್ರಶಸ್ತಿ

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 11 : ಈ ಬಾರಿಯ ಶೌರ್ಯ ಪ್ರಶಸ್ತಿಗೆ ನಾಲ್ಕು ಜನ ಬಾಲಕಿಯರು ಹಾಗೂ ಮೂವರು ಬಾಲಕರು ಒಟ್ಟು 7 ಮಕ್ಕಳು ಆಯ್ಕೆಯಾಗಿದ್ದಾರೆ.

ಹೆಬ್ಬಾವಿನೊಂದಿಗೆ ಕಾದಾಡಿ ಗೆದ್ದ 11ರ ಪೋರ!

ಕೆಳದಿ ಚೆನ್ನಮ್ಮ ಪ್ರಶಸ್ತಿಗೆ 4 ಬಾಲಕಿಯರು ಮತ್ತು ಹೊಯ್ಸಳ ಪ್ರಶಸ್ತಿಗೆ 3 ಬಾಲಕರನ್ನು ಆಯ್ಕೆ ಮಾಡಲಾಗಿದೆ. ಧೈರ್ಯ, ಸಾಹಸ ಪ್ರದರ್ಶಿಸಿ ಸಮಯ ಪ್ರಜ್ಞೆಯಿಂದ ಇತರರ ಪ್ರಾಣ ರಕ್ಷಿಸುವ ಮಕ್ಕಳಿಗೆ ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪ್ರತಿ ವರ್ಷ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.

ಪುತ್ತೂರು ತಾಲ್ಲೂಕು ಕೌಕ್ರಾಡಿ ಗ್ರಾಮದ ನಿತಿನ್ ಕೆ.ಆರ್. (16), ಶಿವಮೊಗ್ಗದ ಕೃಷ್ಣ ನಾಯ್ಕ ಸಿ.ಡಿ. (14) ಮತ್ತು ಬಂಟ್ವಾಳ ತಾಲ್ಲೂಕಿನ ಕೂಡೂರು ಮನೆಯ ವೈಶಾಖ್ (11) ಹೊಯ್ಸಳ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಚಾಮರಾಜನಗರದ ಜುನೇರಾ ಹರಂ (7), ಶಿಡ್ಲಘಟ್ಟ ತಾಲ್ಲೂಕಿನ ಹನುಮಂತಪುರದ ದೀಕ್ಷಿತಾ ಎಚ್.ಕೆ. (10), ಎಚ್.ಕೆ. ಅಂಬಿಕಾ (12) ಮತ್ತು ಹುನಗುಂದ ತಾಲ್ಲೂಕಿನ ವಡ್ಡರ ಹೊಸೂರಿನ ನೇತ್ರಾವತಿ ಚವ್ಹಾಣ (15) ಕೆಳದಿ ಚೆನ್ನಮ್ಮ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಹಾವು ಕಚ್ಚಿದ್ದ ತಂಗಿಯನ್ನು ರಕ್ಷಿಸಿದ ಕೆ.ಆರ್‌. ನಿತಿನ್

ಹಾವು ಕಚ್ಚಿದ್ದ ತಂಗಿಯನ್ನು ರಕ್ಷಿಸಿದ ಕೆ.ಆರ್‌. ನಿತಿನ್

ಬಾಯಲ್ಲಿ ವಿಷ ಹೀರುವ ಮೂಲಕ ಹಾವು ಕಚ್ಚಿದ್ದ ತಂಗಿಯನ್ನು ರಕ್ಷಿಸಿದ ದಕ್ಷಿಣ ಕನ್ನಡ ಜಿಲ್ಲೆಯ ಕೌಕ್ರಾಡಿ ಗ್ರಾಮದ 16 ವರ್ಷದ ಕೆ.ಆರ್‌. ನಿತಿನ್ ಗೆ ಈ ವರ್ಷದ ಶೌರ್ಯ ಪ್ರಶಸ್ತಿ ಲಭಿಸಿದೆ.

ಹೆಬ್ಬಾವಿನನಿಂದ ಹುಡಗಿಯ ಪ್ರಾಣ ರಕ್ಷಿಸಿದ ವೈಶಾಖ್

ಹೆಬ್ಬಾವಿನನಿಂದ ಹುಡಗಿಯ ಪ್ರಾಣ ರಕ್ಷಿಸಿದ ವೈಶಾಖ್

ತನ್ನನ್ನು ಸುತ್ತಿ ನುಂಗಲು ಪ್ರಯತ್ನಿಸಿದ ಹೆಬ್ಬಾವಿನ ಮುಖಕ್ಕೆ ಕಲ್ಲಿನಿಂದ ಜಜ್ಜಿ ತನ್ನ ಪ್ರಾಣ ರಕ್ಷಿಸಿ ಜತೆಗೆ, ಹುಡುಗಿಯನ್ನು ರಕ್ಷಿಸಿದ ಬಂಟ್ವಾಳ ತಾಲೂಕಿನ ಕೂಡೂರು ಮನೆಯ 11 ವರ್ಷದ ವೈಶಾಖ್ ಶೌರ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪ್ರಶಸ್ತಿ ಪ್ರಧಾನ

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪ್ರಶಸ್ತಿ ಪ್ರಧಾನ

ಧೈರ್ಯ, ಸಾಹಸ ಪ್ರದರ್ಶಿಸಿ ಸಮಯ ಪ್ರಜ್ಞೆಯಿಂದ ಇತರರ ಪ್ರಾಣ ರಕ್ಷಿಸುವ ಮಕ್ಕಳಿಗೆ ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪ್ರತಿ ವರ್ಷ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.

10 ಸಾವಿರ ರು. ನಗದು ಬಹುಮಾನ

10 ಸಾವಿರ ರು. ನಗದು ಬಹುಮಾನ

ಶೌರ್ಯ ಪ್ರಶಸ್ತಿಗೆ ಆಯ್ಕೆಯಾಗಿರುವ ಮಕ್ಕಳಿಗೆ 10 ಸಾವಿರ ರು. ನಗದು, ಪ್ರಶಸ್ತಿ ಪತ್ರ, ನೆನಪಿನ ಕಾಣಿಕೆ ಪ್ರದಾನ ಮಾಡಲಾಗುವುದು. ಮಕ್ಕಳ ದಿನಾಚರಣೆಯಂದು (ನ.14) ಬೆಂಗಳೂರಿನ ಜವಾಹರ ಬಾಲಭವನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Four girl and three boy's total 7 children gets 2017 Karnataka state bravery award. The award function held under Department of Kannada and Culture at Jawahar Bal Bhavan, Bengaluru on November 14th.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ