Kidnap Case: ವಿದ್ಯಾರ್ಥಿನಿ ಕಿಡ್ನ್ಯಾಪ್: ಈ ಟ್ಯೂಷನ್ ಟೀಚರ್ ಹುಡುಕಿಕೊಟ್ಟವರಿಗೆ 25,000 ಬಹುಮಾನ

ಬೆಂಗಳೂರು ಜನವರಿ 3: ಬಿಗ್‌ಬಾಸ್‌ ಕನ್ನಡ ಸೀಸನ್ 11ರ ಮನೆಯಲ್ಲಿ ಚೆನ್ನಾಗಿ ಆಟ ಆಡುತ್ತಾ ವೀಕ್ಷಕರನ್ನು ರಂಜಿಸುತ್ತಿರುವ ಮೋಕ್ಷಿತಾ ಪೈ ಮೇಲೆ ಮಕ್ಕಳ ಕಳ್ಳಿ ಎನ್ನುವ ಆರೋಪ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಧಾರವಾಹಿಯಲ್ಲಿ ನಟಿಸುವ ಮೊದಲು ಮೋಕ್ಷಿತಾ ಟ್ಯೂಷನ್ ಟೀಚರ್ ಆಗಿ ಕೆಲಸ ಮಾಡುತ್ತಾ ತನ್ನ ಬಳಿ ಟ್ಯೂಷನ್‌ಗೆ ಬರುತ್ತಿದ್ದ ವಿದ್ಯಾರ್ಥಿಯನ್ನು ಹಣದ ಆಸೆಗೆ ಅಪಹರಿಸಿದ್ದರು ಎನ್ನುವ ಆರೋಪ ಅವರ ಮೇಲೆ ಇತ್ತು. ಆದರೆ ಆ ಪ್ರಕರಣ ಕೋರ್ಟ್‌ನಲ್ಲಿ ಖುಲಾಸೆ ಆಗಿದೆ. ಇದೀಗ ಅಂಥಹದ್ದೇ ಒಂದು ಪ್ರಕರಣ ಬೆಳಕಿಗೆ ಬಂದಿದೆ. ಆದರಿದು ಹಣದಾಸೆಗೆ ಆದ ಕಿಡ್ನ್ಯಾಪ್ ಅಲ್ಲ ಬದಲಿಗೆ ಪ್ರೀತಿಪ್ರೇಮದ ವಿಚಾರದಲ್ಲಿ ಆದ ಕಿಡ್ನ್ಯಾಪ್ ಆಗಿದೆ.

ಹೌದು... ಕನಕಪುರ ಮೂಲದ ಟ್ಯೂಷನ್ ಟೀಚರ್ ಅಭಿಷೇಕ್ ಎಂಬಾತ ತನ್ನ ಬಳಿ ಟ್ಯೂಷನ್‌ಗೆ ಬರುತ್ತಿದ್ದ 10ನೇ ತರಗತಿ ವಿದ್ಯಾರ್ಥಿನಿಯನ್ನು ಕಿಡ್ನ್ಯಾಪ್ ಮಾಡಿದ ಆರೋಪ ಕೇಳಿ ಬಂದಿದೆ. ಕನಕಪುರ ಮೂಲದ ಬಾಲಕಿ ತಂದೆ ಜೆ.ಪಿ.ನಗರ ಪೊಲೀಸ್ ಠಾಣೆಯಲ್ಲಿ ಕಿಡ್ನ್ಯಾಪ್ ಕೇಸ್ ದಾಖಲಿಸಿದ್ದಾರೆ.

Kanakapura student kidnap 25 000 reward for finding this tuition teacher

ಇದರಿಂದ ಜೆ.ಪಿ.ನಗರ ಪೊಲೀಸ್ ಠಾಣೆಯ ಪೊಲೀಸರು ಆರೋಪಿ ಫೋಟೋವನ್ನು ಹಂಚಿಕೊಂಡು ಹುಡುಕಿ ಕೊಟ್ಟವರಿಗೆ 25,000 ರೂ. ಬಹುಮಾನ ನೀಡುವುದಾಗಿ ಪೊಲೀಸ್ ಪ್ರಕಟಣೆಯೊಂದನ್ನು ನೀಡಿದ್ದಾರೆ. ಪ್ರಕರಣೆಯಲ್ಲಿ 23-11-2024ರಂದು ಜೆ.ಪಿ.ನಗರ 1ನೇ ಹಂತ ಆಂಜನೇಯ ದೇವಸ್ಥಾನ ಹತ್ತಿರದಿಂದ ಟ್ಯೂಷನ್‌ಗೆ ಹೋಗುತ್ತಿದ್ದ ಹುಡುಗಿ (15)ಯನ್ನು ಟ್ಯೂಷನ್ ಟೀಚರ್ ಅಭಿಷೇಕ್ (30) ಅಪಹರಣ ಮಾಡಿಕೊಂಡು ಹೋಗಿದ್ದಾನೆ. ಕಾಣೆಯಾದ ಬಾಲಕಿ ಇಲ್ಲಿವರೆಗೂ ಪತ್ತೆಯಾಗಿಲ್ಲ. ಈತನ ಬಗ್ಗೆ ಸುಳಿವು ಸಿಕ್ಕರೆ ಪೊಲೀಸ್ ಠಾಣೆಗೆ ತಿಳಿಸಲು ಕೋರಲಾಗಿದೆ.

ಆರೋಪಿಯ ಪೂರ್ಣ ಹೆಸರು ಅಭಿಷೇಕ್ ಗೌಡ ಎಂ. ಈತ ರಾಮನಗರ ಜಿಲ್ಲೆ ಕನಕಪುರ ತಾಲ್ಲೂಕು ಹಾರೋ ಹಳ್ಳಿ, ದೊಡ್ಡ ಸಾದೇನಹಳ್ಳಿಯವನು. ಈತ ಬೆಂಗಳೂರಿನಲ್ಲಿ ಜಿಮ್‌ ಟ್ರೈನರ್ ಆಗಿದ್ದು 1 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಟ್ಯೂಷನ್ ಹೇಳಿಕೊಡುತ್ತಾನೆ.

ಕಳೆದ ನವೆಂಬರ್ ತಿಂಗಳಿನಲ್ಲಿ ಎಂದಿನಂತೆ ಆರೋಪಿ ಬಳಿ ವಿದ್ಯಾರ್ಥಿನಿ ಟ್ಯೂಷನ್‌ಗೆ ಬಂದಿದ್ದಳು. ಆದರೆ ಟ್ಯೂಷನ್ ಮುಗಿದು ರಾತ್ರಿಯಾದರೂ ವಿದ್ಯಾರ್ಥಿನಿ ಮನೆಗೆ ವಾಪಾಸ್ ಆಗಿರಲಿಲ್ಲ. ಇದರಿಂದ ಗಾಬರಿಗೊಂಡ ಪೋಷಕರು ಎಲ್ಲಾ ಕಡೆ ಹುಡುಕಾಡಿದ್ದಾರೆ. ತಡ ರಾತ್ರಿಯವರೆಗೂ ಮಗಳು ಮನೆಗೆ ಬಾರದೇ ಇದ್ದಾಗ ಪೋಷಕರು ಪೋಲಿಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಬಳಿಕ ಪೋಷಕರಿಗೆ ಟ್ಯೂಷನ್‌ ಟೀಚರ್‌ ಬಾಲಕಿಯನ್ನು ಅಪಹರಣ ಮಾಡಿರುವುದು ಗೊತ್ತಾಗಿದೆ.

ಕಳೆದ ಒಂದು ತಿಂಗಳಿನಿಂದ ಬಾಲಕಿಯನ್ನು ಪ್ರೀತಿ ಪ್ರೇಮದ ಹೆಸರಿನಲ್ಲಿ ಕರೆದೊಯ್ದ ಟ್ಯೂಷನ್ ಟೀಚರ್ ಯಾವುದೇ ಸುಳಿವು ಸಿಗದೆ ತಲೆಮರಿಸಿಕೊಂಡಿದ್ದಾನೆ. ಫೋನ್‌ ಕೂಡ ಬಳಕೆ ಮಾಡುತ್ತಿಲ್ಲ. ಫೋನ್‌ ಪೇ, ಗೂಗಲ್ ಪೇ, ಎಟಿಎಂ ಸೇರಿ ಆನ್ಲೈನ್ ಪೇಮೆಂಟ್ ಕೂಡ ಆರೋಪಿ ಮಾಡುತ್ತಿಲ್ಲ.

ಬೆಂಗಳೂರು ಜೆಪಿ ನಗರ ಪೊಲೀಸರು ಎಲ್ಲಾ ಕಡೆ ಹುಡುಕಾಡಿದರೂ ಕೂಡ ಆರೋಪಿ ಪತ್ತೆ ಆಗಿಲ್ಲ. ಹೀಗಾಗಿ ಮಗಳನ್ನು ಕಾಣದೆ ಪೋಷಕರು ಕಂಗಾಲಾಗಿದ್ದಾರೆ. ಪೊಲೀಸರಿಗೆ ಮಗಳನ್ನು ಹುಡುಕಿ ಕೊಡುವಂತೆ ಅಂಗಲಾಚಿದ್ದಾರೆ. ಕೊನೆಗೆ ಪೊಲೀಸರು ಆರೋಪಿಯನ್ನು ಹುಡುಕಿ ಕೊಟ್ಟವರಿಗೆ 25,000 ಬಹುಮಾನ ನೀಡುವುದಾಗಿ ಘೋಷಣೆ ಮಾಡಿ ಪೊಲೀಸ್ ಪ್ರಕಟಣೆಯನ್ನು ಹೊರಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+