ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ, ಸಿಐಡಿಯಿಂದ ಇಬ್ಬರ ಬಂಧನ

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 18 : ಚಿಕ್ಕಮಗಳೂರು ಡಿವೈಎಸ್‌ಪಿ ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಪ್ರವೀಣ್ ಖಾಂಡ್ಯಗಾಗಿ ಇನ್ನೂ ಹುಡುಕಾಟ ಮುಂದುವರೆದಿದೆ.

ಸಿಐಡಿ ಪೊಲೀಸರು ಬೆಂಗಳೂರಿನ ಸಂಜಯ ನಗರದ ನಿವಾಸಿಗಳಾದ ರಿಯಲ್ ಎಸ್ಟೇಟ್ ಉದ್ಯಮಿ ನವೀನ್ ಶೆಟ್ಟಿ (43) ಮತ್ತು ಹೈಬ್ರೀಡ್ ನಾಯಿ ಸಾಕಣೆದಾರ ಅಶ್ವಿನ್ ಎನ್.ಶೆಟ್ಟಿ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.[ಹೈಕೋರ್ಟ್ ಮೆಟ್ಟಿಲೇರಿದ ಪ್ರವೀಣ್ ಖಾಂಡ್ಯ]

Kallappa Handibag

ಹೊರ ರಾಜ್ಯದಲ್ಲಿ ಅಡಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ ಬೆಂಗಳೂರಿಗೆ ಕರೆತರಲಾಗಿದೆ ಎಂದು ತಿಳಿದುಬಂದಿದೆ. ಈ ಇಬ್ಬರೂ ಆರೋಪಿಗಳು ಪ್ರಕರಣದ ಪ್ರಮುಖ ಆರೋಪಿ ಪ್ರವೀಣ್ ಖಾಂಡ್ಯ ಆಪ್ತರಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.[ಕಲ್ಲಪ್ಪ ಪ್ರಕರಣದಲ್ಲಿ ಕಿಡ್ನಾಪ್ ಆಗಿದ್ದ ತೇಜಸ್ ಹೇಳಿದ್ದೇನು?]

ಚಿಕ್ಕಮಗಳೂರಿನಿಂದ ತೇಜಸ್ ಅಪಹರಣ ಮಾಡಿದ ಬಳಿಕ, ಸಂಜಯ ನಗರದಲ್ಲಿರುವ ನವೀನ್ ಶೆಟ್ಟಿ ಅವರಿಗೆ ಸೇರಿದ ನಾಯಿ ಸಾಕಾಣಿಕೆ ಕೇಂದ್ರದಲ್ಲಿ ಅಕ್ರಮವಾಗಿ ಬಂಧನದಲ್ಲಿಡಲಾಗಿತ್ತು ಎಂಬುದು ಆರೋಪವಾಗಿದೆ. ಅಲ್ಲದೇ ತೇಜಸ್ ಅಪಹರಣಕ್ಕೆ ರಿಯಲ್ ಎಸ್ಟೇಟ್ ಉದ್ಯಮಿ ನವೀನ್ ಶೆಟ್ಟಿ ತನ್ನ ಸಹಚರರನ್ನು ಕಳಿಸಿದ್ದ ಎಂಬ ಆರೋಪವೂ ಇದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Criminal investigation department (CID) police arrested two accused in connection with the suicide case of DySP, Kallappa Handibag.
Please Wait while comments are loading...