• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕರುಣಾನಿಧಿ ಅಸ್ತಂಗತ: ಕರುನಾಡಿನಲ್ಲೂ ಕಣ್ಣೀರು

By Nayana
|

ಬೆಂಗಳೂರು, ಆಗಸ್ಟ್ 8: ಡಿಎಂಕೆ ಅಧಿನಾಯಕ ಎಂ ಕರುಣಾನಿಧಿ ನಿಧನ ಹಿನ್ನೆಲೆಯಲ್ಲಿ ಬೆಂಗಳೂರು ಇನ್ನಿತರೆ ಕಡೆಗಳಲ್ಲಿ ನೆಲೆಸಿರುವ ಸಾವಿರಾರು ತಮಿಳರು ಮಂಗಳವಾರ ಸಂಜೆ ಸಂತಾಪ ವ್ಯಕ್ತಪಡಿಸಿದರು.

ಶ್ರೀರಾಮಪುರ ಬಳಿ ಇರುವ ಡಿಎಂಕೆ ಕಚೇರಿಯಲ್ಲಿ ಕರುಣಾನಿಧಿ ಭಾವಚಿತ್ರವಿರಿಸಿ ಶ್ರದ್ಧಾಂಜಲಿ ಸಲ್ಲಿಸಿದರು.ಈ ವೇಳೆ ನೂರಾರು ತಮಿಳರು ಭಾಗವಹಿಸಿ ಅಗಲಿದ ನಾಯಕನಿಗೆ ಸಂತಾಪ ಸೂಚಿಸಿದರು.

ಕರುಣಾನಿಧಿ ನಿಧನ ಸುದ್ದಿಯನ್ನು ಕನ್ನಡ ದಿನಪತ್ರಿಕೆಗಳು ಹೀಗೆ ಕಂಡಿವೆ

ಕೆಆರ್‌ ಮಾರ್ಕೆಟ್‌, ಹಲಸೂರು, ಮಹಾಲಕ್ಷ್ಮೀಪುರ, ಮೈಸೂರು ರಸ್ತೆಯ ಆನಂದಪುರ, ಫ್ರೇಜರ್‌ಟೌನ್‌, ಟ್ಯಾನರಿ ರಸ್ತೆ, ಶಿವಾಜಿನಗರ, ಕೆಆರ್‌ಪುರ, ಗಾಂಧಿನಗರ ಸೇರಿದಂತೆ ತಮಿಳರು ಹೆಚ್ಚಾಗಿರುವ ಪ್ರದೇಶಗಳಲ್ಲಿ ಶ್ರದ್ಧಾಂಜಲಿ ಸಭೆ ನಡೆಯಿತು.

ನನ್ನ ಬದುಕಿನ ಕರಾಳ ದಿನ ಇದು, ಕಲೈನಾರ್ ಸಾವಿಗೆ ರಜನಿ ಸಂತಾಪ

ಚಾಮರಾಜನಗರ ಜಿಲ್ಲಾ ಕೇಂದ್ರದಿಂದ ತಮಿಳುನಾಡಿಗೆ ಹೋಗುತ್ತಿದ್ದ 35 ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರ ಸ್ಥಗಿತವಾಗಿದೆ. ತಮಿಳುನಾಡಿನಲ್ಲಿ ಇರುವ ಬಸ್‌ಗಳು ಅಲ್ಲಿಯೇ ತಂಗಲು ವ್ಯವಸ್ಥೆ ಮಾಡಲಾಗಿದೆ.

ತಮಿಳುನಾಡಿಗೆ ಬಸ್‌ ಸಂಚಾರ ಸ್ಥಗಿತ

ತಮಿಳುನಾಡಿಗೆ ಬಸ್‌ ಸಂಚಾರ ಸ್ಥಗಿತ

ಚೆನ್ನೈ ಸೇರಿದಂತೆ ತಮಿಳುನಾಡು ಇನ್ನಿತರೆ ಪ್ರದೇಶಗಳಿಗೆ ಮಂಗಳವಾರ ಸಂಜೆ ತೆರಳಬೇಕಿದ್ದ 150ಕ್ಕೂ ಹೆಚ್ಚು ಕೆಎಸ್‌ಆರ್‌ಟಿಸಿ ಬಸ್‌ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ತಮಿಳುನಾಡಿನಲ್ಲಿ ಪರಿಸ್ಥಿತಿ ನೋಡಿಕೊಂಡು ಪೊಲೀಸರ ಅಭಿಪ್ರಾಯ ಪಡೆದು ಬಸ್‌ ಸಂಚಾರ ಆರಂಭಿಸಲು ನಿರ್ಧರಿಸಿರುವುದಾಗಿ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ಹೊಸೂರಲ್ಲಿ ಸ್ವಯಂ ಪ್ರೇರಿತ ಬಂದ್

ಹೊಸೂರಲ್ಲಿ ಸ್ವಯಂ ಪ್ರೇರಿತ ಬಂದ್

ರಾಜ್ಯದ ಗಡಿಭಾಗ ಹೊಸೂರಿನಲ್ಲಿ‌ ಬಸ್ ಸಂಚಾರ ಬಂದ್ ಆಗಿದೆ. ಸ್ವಯಂ ಪ್ರೇರಿತವಾಗಿ ಅಂಗಡಿ ಮುಂಗಟ್ಟುಗಳ ಬಂದ್ ಮಾಡಲಾಗಿದ್ದು ರಸ್ತೆಯ ಇಕ್ಕೆಲಗಳಲ್ಲಿ ಜನ ಸೇರದಂತೆ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಆನೇಕಲ್ ನಲ್ಲಿಯೂ ಸಹ ಅಂಗಡಿ ಮುಗ್ಗಟ್ಟುಗಳನ್ನು‌ ಮುಚ್ಚಿ‌ ಗೌರವ ಸೂಚಿಸಲಾಗಿದೆ.

ಕರುಣಾನಿಧಿ, ಯಡಿಯೂರಪ್ಪ ಚಿನ್ನತಂಬಿ, ಪೆರಿಯತಂಬಿ ಆದ ವೃತ್ತಾಂತ

ವೀರಪ್ಪನ್‌ ಪ್ರಕರಣದಲ್ಲೂ ರಾಜ್ಯದ ಪರ ಮನ ಮಿಡಿದಿದ್ದ ಕಲೈನಾರ್‌

ವೀರಪ್ಪನ್‌ ಪ್ರಕರಣದಲ್ಲೂ ರಾಜ್ಯದ ಪರ ಮನ ಮಿಡಿದಿದ್ದ ಕಲೈನಾರ್‌

ವೀರಪ್ಪನ್‌ ಪ್ರಕರಣದಲ್ಲಿ ಕರ್ನಾಟಕದ ಪರ ಮನಮಿಡಿದಿದ್ದರು. ವರನಟ ಡಾ.ರಾಜ್ ಕುಮಾರ್ ಅವರನ್ನು ನರಹಂತಕ, ದಂತಚೋರ ವೀರಪ್ಪನ್ ಅಪಹರಣ ಮಾಡಿದಾಗ ತಮಿಳುನಾಡಿನಲ್ಲಿ ಅಧಿಕಾರದಲ್ಲಿ ಇದ್ದದ್ದು ಕರುಣಾನಿಧಿ. ಅದು 2000ನೇ ಇಸವಿ. ಇಡೀ ಕರ್ನಾಟಕವೇ ಮಮ್ಮುಲ ಮರುಗಿತ್ತು. ನಕ್ಕೀರನ್ ಗೋಪಾಲ್ ಮೂಲಕ ಅಂತಿಮವಾಗಿ ಮಾತುಕತೆ ಮೂಲಕ ಡಾ.ರಾಜ್ ಬಿಡಿಗಡೆಯಾಗಿತ್ತು. ಈ ವೇಳೆ ಅಕ್ಕ-ಪಕ್ಕದ ರಾಜ್ಯದ ಸಿಎಂ ಗಳಾಗಿದ್ದ ಎಸ್ ಎಂ ಕೃಷ್ಣ ಮತ್ತು ಕರುಣಾನಿಧಿ ಹಲವು ಸುತ್ತಿನ ಮಾತುಕತೆ ನಡೆಸಿದ್ದರು.

ಕನ್ನಡಿಗರ ಜತೆ ಸೌಹಾರ್ದ ಬೆಸೆದಿದ್ದ ಕರುಣಾಮೂರ್ತಿ

ಕನ್ನಡಿಗರ ಜತೆ ಸೌಹಾರ್ದ ಬೆಸೆದಿದ್ದ ಕರುಣಾಮೂರ್ತಿ

ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರ ನಿಧನದ ಬೆನ್ನಲ್ಲೇ, ಅವರ ಅಂತ್ಯಸಂಸ್ಕಾರದ ವಿಚಾರ ವಿವಾದ ಸೃಷ್ಟಿಸಿದೆ. ಮರೀನಾ ಬೀಚ್‌ನಲ್ಲಿ ಅಂತ್ಯಸಂಸ್ಕಾರಕ್ಕೆ ಅವಕಾಶ ನೀಡಲು ಆದೇಶ ಹೊರಡಿಸುವಂತೆ ಡಿಎಂಕೆ ಮುಖಂಡರು ಮದ್ರಾಸ್ ಹೈಕೋರ್ಟ್ ಮೊರೆ ಹೋಗಿದ್ದರು. ನ್ಯಾಯಮೂರ್ತಿಗಳಾದ ಎಚ್‌ಜಿ ರಮೇಶ್ ಮತ್ತು ಎಸ್‌ಎಸ್‌ ಸುಂದರ್ ನೇತೃತ್ವದ ಪೀಠವು ಡಿಎಂಕೆ ಅರ್ಜಿಯ ವಿಚಾರಣೆಯನ್ನು ಬೆಳಿಗ್ಗೆ ಎಂಟು ಗಂಟೆಗೆ ಮುಂದೂಡಿದೆ. ತೀರ್ಪು ಕಾದು ನೋಡಬೇಕಿದೆ.

 ತಮಿಳರ ಕಣ್ಮಣಿಗೆ ರಾಜ್ಯದಲ್ಲೂ ಗೌರವ

ತಮಿಳರ ಕಣ್ಮಣಿಗೆ ರಾಜ್ಯದಲ್ಲೂ ಗೌರವ

ಕರುಣಾನಿಧಿ ನಿಧನ ಹಿನ್ನೆಲೆ ಸಾವಿರಾರು ತಮಿಳರು ಕರ್ನಾಟಕದಿಂದ ತಮಿಳುನಾಡಿನತ್ತ ಹೆಜ್ಜೆ ಹಾಕಿದ್ದಾರೆ. ಬೆಂಗಳೂರಿನಲ್ಲಿ ತಮಿಳು ಸಾಹಿತಿ ತಿರುವಳ್ಳವರ್ ಪ್ರತಿಮೆ ಚೆನ್ನೈನಲ್ಲಿ ಕನ್ನಡದ ತ್ರಿಪದಿ ಕವಿ ಸರ್ವಜ್ಞ ಪ್ರತಿಮೆ ಅನಾವರಣಕ್ಕೆ ವೇದಿಕೆಯಾಗಿದ್ದು ಕರುಣಾನಿಧಿ ಮತ್ತು ಯಡಿಯೂರಪ್ಪ ಅವಧಿ. ಇಬ್ಬರು ನಾಯಕರು ರಾಜ್ಯಗಳ ನಡುವಿನ ಬಾಂಧವ್ಯ ಗಟ್ಟಿಗೊಳಿಸಲು ದಿಟ್ಟ ನಿರ್ಧಾರ ತೆಗೆದುಕೊಂಡಿದ್ದರು.

ಇನ್ನಷ್ಟು tamil nadu ಸುದ್ದಿಗಳುView All

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Thousands of Tamilians who were residing in many parts of Karnataka including Bengaluru and Mysuru have drown in the grief after sad demise of Kalaignar M. Karunanidhi.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more