KJ George Profile: ಸಿದ್ದರಾಮಯ್ಯ ಸಂಪುಟದಲ್ಲಿ ಹಿರಿಯ ನಾಯಕ ಕೆಜೆ ಜಾರ್ಜ್‌ಗೆ ಈ ಮಂತ್ರಿ ಪಟ್ಟ
ಬೆಂಗಳೂರು, ಮೇ 20: ಕಾಂಗ್ರೆಸ್ ಪಕ್ಷದ ಹಿರಿಯ ರಾಜಕಾರಣಿಯಾದ ಕೆ.ಜೆ.ಜಾರ್ಜ್ ಅವರು ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದಿಂದ ನಿರಂತರವಾಗಿ ನಾಲ್ಕು ಬಾರಿ ಗೆದ್ದು ಶಾಸಕರಾಗಿ ಆಯ್ಕೆಯಾಗಿದ್ದಾರೆ. 2023ರ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಚಿವ ಸಂಪುಟದಲ್ಲಿ ಸಚಿವರಾಗಿ ಕಾರ್ಯ ನಿರ್ವಹಿಸಲಿದ್ದಾರೆ.
ರಾಜ್ಯ ರಾಜಕಾರಣದಲ್ಲಿ ತಮ್ಮದೇ ಆದ ಹೆಗ್ಗುರುತು ಹೊಂದಿರುವ ಕೆ.ಜೆ. ಜಾರ್ಜ್ ಅವರ ಪೂರ್ಣ ಹೆಸರು ಕೇಳಚಂದ್ರ ಜೋಸೆಫ್ ಜಾರ್ಜ್. ಕಳೆದ ಐದು ದಶಕಗಳಿಂದಲೂ ಅವರು ಕಾಂಗ್ರೆಸ್ಸಿನಲ್ಲಿಯೇ ಇದ್ದು, ಪಕ್ಷ ಸಂಘಟನೆ ಜೊತೆ ಜೊತೆಗೆ ಸಾಕಷ್ಟು ಹಂತಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಶಾಸಕರಾಗಿ, ವಿವಿಧ ಇಲಾಖೆಗಳ ಸಚಿವರಾಗಿ ಬಹಳ ಅನುಭವ ಹೊಂದಿದ್ದಾರೆ. ಅವರಿಗೆ ಇದೀಗ ಮತ್ತೊಮ್ಮೆ ಸಚಿವ ಸ್ಥಾನ ಲಭಿಸಿದೆ.

ಕೆ.ಜೆ.ಜಾರ್ಜ್ ಅವರ ಆರಂಭಿಕ ಜೀವನ ನೋಡುವುದಾದರೆ, ಅವರು ನನಾಯ ಸಿರಿಯನ್ ಜಾಕೋಬೈಟ್ ಕ್ರಿಶ್ಚಿಯನ್ ಜಾತಿಯ ಜೋಸೆಫ್ ಕೇಳಚಂದ್ರ ಚಾಕೋ ಮತ್ತು ಮರಿಯಮ್ಮ ದಂಪತಿ ಪುತ್ರನಾಗಿ 1946ರಂದು ಕೇರಳದ ಕೊಟ್ಟಾಯಂನ ಚಿಂಗವನಂನಲ್ಲಿ ಆಗಸ್ಟ ತಿಂಗಳಲ್ಲಿ ಜನಿಸಿದರು.
ಬಾಲ್ಯವನ್ನು ಕೊಡಗಿನಲ್ಲಿ ಕಳೆದದ ಜಾರ್ಜ್ ಅವರು ರಾಜಕೀಯವನ್ನು ಗೋಣಿಕೊಪ್ಪಲು ಪಟ್ಟಣದಿಂದ ಆರಂಭಿಸಿದರು. ನಂತರ ಜಾರ್ಜ್ ಅವರು ಸುಜಾ ಅವರನ್ನು ವಿವಾಹವಾದರು. ಅವರಿಗೆ ರಾಣಾ ಜಾರ್ಜ್ ಮತ್ತು ರೆನಿತಾ ಜಾರ್ಜ್ ಇಬ್ಬರು ಮಕ್ಕಳಿದ್ದಾರೆ.
ಕೆ.ಜೆ.ಜಾರ್ಜ್ ರಾಜಕೀಯ ಜೀವನ
1968ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಕೆ.ಜೆ ಜಾರ್ಜ್ ಅವರು 1969ರಲ್ಲಿ ಗೋಣಿಕೊಪ್ಪಲು ಪಟ್ಟಣದ ಯುವ ಕಾಂಗ್ರೆಸ್ ಅಧ್ಯಕ್ಷ ಹುದ್ದೆ ಅಲಂಕರಿಸಿದರು. ನಂತರ 1971-27ರವರೆಗೆ ಇಲ್ಲಿನ ವಿರಾಜಪೇಟೆ ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಜವಾಬ್ದಾರಿ ನಿಭಾಯಿಸಿದರು.

ಬಳಿಕ 1975-78ರವರೆಗೆ ಕರ್ನಾಟಕ ಯುವ ಕಾಂಗ್ರೆಸ್ ಖಜಾಂಚಿಯಾಗಿ, 1982-85ರವರೆಗೆ ಕರ್ನಾಟಕ ಯುವ ಕಾಂಗ್ರೆಸ್ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದರು. ನಂತರ 1985-89ರವರೆಗೆ ಬೆಂಗಳೂರಿನ ಭಾರತಿನಗರ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದರು. 1989-94ರವೆರೆಗೆ ಬೆಂಗಳೂರಿನ ಭಾರತಿನಗರ ವಿಧಾನಸಭಾ ಕ್ಷೇತ್ರ ಪ್ರತಿನಿಧಿಸಿ ಗೆದ್ದರು. ಹೀಗೆ ಕಾಂಗ್ರೆಸ್‌ನೊಂದಿಗೆ ಸುಮಾರು ಐದು ದಶಕಗಳ ನಂಟು ಹೊಂದಿದ ಹಿರಿಯ ಸಚಿವರಾಗಿದ್ದಾರೆ.
ಕೆ.ಜೆ. ಜಾರ್ಜ್ ನಿರ್ವಹಿಸಿದ ಖಾತೆಗಳು
ಸುಮಾರು ಐದು ದಶಕಗಳ ರಾಜಕೀಯ ಜೀವನದಲ್ಲಿ ಅನೇಕ ಏಳು ಬೀಳುಗಳನ್ನು ಕೆಜೆ ಜಾರ್ಜ್ ಕಂಡಿದ್ದಾರೆ. ಹಲವು ಮಹತ್ವದ ಖಾತೆಗಳನ್ನು ನಿಭಾಯಿಸಿದ್ದಾರೆ. 2018ರಲ್ಲಿ ಮೈತ್ರಿ ಸರ್ಕಾರವಿದ್ದಾಗ ಅವರು ಬೃಹತ್ ಮತ್ತು ಮಧ್ಯಮ ಗಾತ್ರದ ಉದ್ಯಮದ ಸಚಿವರಾಗಿದ್ದರು. ಸಿದ್ದರಾಮಯ್ಯ ಅವಧಿಯಲ್ಲೂ ಬೆಂಗಳೂರು ನಗರಾಭಿವೃದ್ಧಿವೃದ್ಧಿ ಸಚಿವರಾಗಿದ್ದರು. ಅಲ್ಲದೇ ಈ ಹಿಂದೆ ಅವರು ಕರ್ನಾಟಕ ಗೃಹ ಸಚಿವ, ವೀರೇಂದ್ರ ಪಾಟೀಲ್ ಸರ್ಕಾರದಲ್ಲಿ ಸಾರಿಗೆ, ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಎಸ್.ಬಂಗಾರಪ್ಪ ಸರ್ಕಾರದಲ್ಲಿ ವಸತಿ ಮತ್ತು ನಗರಾಭಿವೃದ್ಧಿ ಖಾತೆ ಮುಂತಾದ ಖಾತೆಗಳ ಸಚಿವರಾಗಿದ್ದರು.
ಭಾರೀ ಅಂತರದಲ್ಲಿ ಕೆಜೆ ಜಾರ್ಜ್‌ಗೆ ಜಯ
ಪ್ರಸಕ್ತ 2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕೆ.ಜೆ ಜಾರ್ಜ್ ಅವರು ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದಲ್ಲಿ ಬರೊಬ್ಬರಿ 1,18,783 ಮತಗಳನ್ನು ಪಡೆದು ಜಯಭೇರಿ ಭಾರಿಸಿದ್ದಾರೆ. ಅವರ ವಿರುದ್ಧ ಪದ್ಮನಾಭ ರೆಡ್ಡಿ ಅವರು ಕೇವಲ 63,015 ಮತಗಳನ್ನು ಪಡೆದು ಪರಾಭವಗೊಂಡರು.
ವಿವಿಧ ಖಾತೆಗಳನ್ನು ಸಮರ್ಪಕವಾಗಿ ನಿಭಾಯಿಸಿದ ಕೆಜೆ ಜಾರ್ಜ್ ಅವರಿಗೆ ಈ ಭಾರಿ ಸಿದ್ದರಾಮಯ್ಯನವರ ಸಂಪುಟದಲ್ಲಿ ಈ ಖಾತೆ ಲಭಿಸಿದ್ದು, ಮುಂದಿನ ಐದು ವರ್ಷ ಅವರು ಇಲಾಖೆ ನಿರ್ವಹಿಸಲಿದ್ದಾರೆ.












Click it and Unblock the Notifications