ದಿನಕ್ಕೆ 5 ನಿಮಿಷ ಸಾಕು: ಆಯುರ್ವೇದದಿಂದ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ
ಇಂದಿನ ವೇಗದ ಜೀವನದಲ್ಲಿ ಜನರು ತಮಗೆ ಆಗುವ ಆರೋಗ್ಯದ ತೊಂದರೆಗಳಿಗೆ ತಕ್ಷಣ ಪರಿಹಾರ ಸಿಗುವಂತಹ ಮಾರ್ಗಗಳನ್ನು ಹುಡುಕುತ್ತಾರೆ. ತಲೆನೋವು ಬಂದರೆ ತಕ್ಷಣಕ್ಕೆ ಮಾತ್ರೆಗಳ ಸೇವಿಸುವುದು, ಹಸಿವಾದರೆ ಇನಸ್ಟಂಟ್ ಆಹಾರಗಳನ್ನು ಸೇವಿಸುವುದು, ಈ ತರಹದ ಆಯ್ಕೆಗಳು ಆರೋಗ್ಯಕ್ಕೆ ಎಷ್ಟು ಒಳ್ಳೆಯದು.
ಆದರೆ ಆಯುರ್ವೇದ ಹೇಳುವುದೆ ಬೇರೆ, ಆಯುರ್ವೇದ ತಕ್ಷಣ ಪರಿಹಾರಕ್ಕಿಂತ ನಮ್ಮ ದೇಹವನ್ನು ಸದೃಡವಾಗಿಸಲು ನಿಧಾನ ಹಾಗೂ ಸ್ಥಿರವಾಗಿ ಆರೋಗ್ಯವನ್ನು ನಿರ್ಮಿಸಲು ನಮಗೆ ಸಹಾಯ ಮಾಡುತ್ತದೆ.

ಪ್ರಾಚೀನ ಕಾಲದ ಜ್ಞಾನ ಮತ್ತು ಉತ್ತಮ ಆರೋಗ್ಯದ ಮೂಲಮಂತ್ರ
ಆಯುರ್ವೇದದ ಮೂಲ ತತ್ವವೇ ನಮ್ಮ ಆರೋಗ್ಯವನ್ನು ಸಮತೋಲನದಲ್ಲಿಡುವಾಗಿದೆ. ಆರೋಗ್ಯ ಕೆಟ್ಟ ಮೇಲೆ ಚಿಕಿತ್ಸೆ ಪಡೆಯುವುದಕ್ಕಿಂತ, ಆರೋಗ್ಯ ಕೆಡದಂತೆ ತಡೆಯುವುದೇ ಇದರ ಮೂಲ ಉದ್ದೇಶ ಆಗಿದೆ. ನಮ್ಮ ದೇಹಕ್ಕೆ ನಾವು ಮೊದಲೇ ಸರಿಯಾದ ಆಹಾರ ಪದಾರ್ಥಗಳನ್ನು ಒದಗಿಸಿದರ, ಅದು ಯಾವುದೇ ರೀತಿಯ ಕಾಯಿಲೆಗಳನ್ನು ಎದುರಿಸುವ ಶಕ್ತಿಯನ್ನು ತಾನಾಗಿಯೇ ಬೆಳಸಿಕೊಳ್ಳುತ್ತದೆ.
ನಿಮ್ಮ ದಿನಚರಿಯಲ್ಲಿ ಪುಟ್ಟ ಬದಲಾವಣೆ
ಆಯುರ್ವೇದದ ವಿಶೇಷ ಎಂದರೆ ಯಾವುದೋ ಒಂದು ಕಠಿಣವಾದ ನಿಯಮವಲ್ಲ, ಇದು ನಮ್ಮ ಅಡುಗೆ ಮನೆಯಲ್ಲಿರುವ ವಸ್ತುಗಳನ್ನು ಬಳಸಿ ನಾವು ನಮ್ಮ ದಿನನಿತ್ಯದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಈ ರೀತಿಯ ಸರಳ ಸೂತ್ರಗಳು ಇಲ್ಲಿವೆ.
ಬೆಳಿಗ್ಗೆ ಎದ್ದ ತಕ್ಷಣ: ಉಗುರು ಬೆಚ್ಚಗಿನ ನೀರಿಗೆ ಸ್ವಲ್ಪ ಜೇನುತುಪ್ಪವನ್ನು ಬೆರೆಸಿ ಕುಡಿಯುವುದು. ಇದು ನಿಮ್ಮ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ.
ಊಟದ ಸಮಯದಲ್ಲಿ: ಊಟದ ಸಮಯದಲ್ಲಿ ಒಂದು ಚಮಚ ತುಪ್ಪವನ್ನು ಬೆರೆಸುವುದರಿಂದ ದೇಹದಲ್ಲಿ ಪೋಷಕಾಂಶಗಳು ಹೆಚ್ಚಾಗುತ್ತವೆ.
ರಾತ್ರಿ ಮಲಗುವ ಮೊದಲು: ದೇಹದಲ್ಲಿ ಆಯಾಸವಾಗಿದ್ದರೆ ನೀವು ರಾತ್ರಿ ಮಲಗುವ ಮುನ್ನ ಒಂದು ಲೋಟ ನೀರಿನಲ್ಲಿ ಅರಿಶೀನ ಮತ್ತು ಹಾಲನ್ನು ಸೇರಿಸಿ ಸೇವಿಸುದರಿಂದ ಇದು ನಿಮ್ಮ ಆರೋಗ್ಯದಲ್ಲಿ ಅದ್ಬುತವಾದ ಕೆಲಸವನ್ನು ಮಾಡುತ್ತದೆ.
ಜೀರ್ಣಕ್ರಿಯೆಗೆ ಸಂಬಂಧಿಸಿದಂತೆ: ಹಣ್ಣುಗಳ ಮೇಲೆ ಸ್ವಲ್ಪ ದಾಲ್ಚಿನ್ನಿ ಪುಡಿಯನ್ನು ಉದುರಿಸಿ ಅಥವಾ ಊಟದ ನಂತರ ಏಲಕ್ಕಿ/ಲವಂಗ ಸೇವಿಸಿ, ಇದು ನಿಮ್ಮ ಜೀರ್ಣಕ್ರಿಯೆ ಸುಧಾರಿಸಲು ಸಹಾಯ ಮಾಡುತ್ತದೆ.
ತೆಂಗಿನ ಎಣ್ಣೆ ಮಸಾಜ್: ತೆಂಗಿನ ಎಣ್ಣೆ ಅಥವಾ ಎಳ್ಳೆಣ್ಣೆಯಿಂದ ಮಸಾಜ್ ಮಾಡುವುದು ದೇಹಕ್ಕೆ ವಿಶ್ರಾಂತಿ ನೀಡುತ್ತದೆ.
ನಿಮ್ಮ ಮನೆಯಲ್ಲೇ ಇರಲಿ ನಿಮ್ಮ ಆಯುರ್ವೇದ ಕಿಟ್
ನೀವು ಆರೋಗ್ಯದ ಬಗ್ಗೆ ಸ್ವಲ್ಪ ಹೆಚ್ಚು ಕಾಳಜಿ ವಹಿಸುವವರಾದರೆ, ನಿಮ್ಮ ಮನೆಯಲ್ಲಿ ಈ ಕೆಳಗಿನ ವಸ್ತುಗಳ ಕಿಟ್ ಇಟ್ಟುಕೊಳ್ಳುವುದು ಒಳ್ಳೆಯದು
ಗಿಡ ಮೂಲಿಕೆಗಳು: ತ್ರಿಫಲ, ಮೊರಿಂಗಾ, ಅಶ್ವಗಂಧ
ತೈಲಗಳು: ಅನು ತೈಲ, ಅರಿಮೆದಾದಿ ತೈಲ, ಹರಳೆಣ್ಣೆ, ತೆಂಗಿನ/ಎಳ್ಳೆಣ್ಣೆ
ಮಸಾಲೆಗಳು: ದಾಲ್ಚಿನ್ನಿ, ಏಲಕ್ಕಿ, ಲವಂಗ, ಅಜ್ವೈನ್, ಶುಂಠಿ
ಇತರೆ: ಜೇನುತುಪ್ಪ, ತುಪ್ಪ, ಉತ್ತಮ ಗುಣಮಟ್ಟದ ಅರಿಶಿನ
ಈ ವಸ್ತುಗಳು ನಿಮ್ಮ ದೈನಂದಿನ ಆರೋಗ್ಯ ಹಾಗೂ ಋತುಗಳ ಬದಲಾವಣೆಯ ಸಮಯದಲ್ಲಿ ದೇಹವನ್ನು ಸದೃಡವಾಗಿಸಲು ಸಹಾಯ ಮಾಡುತ್ತವೆ.
ನಿಧಾನವಾದರೂ ವಿಶ್ವಾಸನೀಯ ಮಾರ್ಗ
ಆಯುರ್ವೇದವು ತಕ್ಷಣದ ಫಲಿತಾಂಶಗಳನ್ನು ನೀಡುವುದಿಲ್ಲ ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಇದು ದೇಹವನ್ನು ಒಳಗಿನಿಂದ ಬಲಪಡಿಸುತ್ತದೆ. ಈ ಸಣ್ಣ ಅಭ್ಯಾಸಗಳು ದಿನಚರಿಯ ಭಾಗವಾದಾಗ ಅವು ಸ್ವಾಭಾವಿಕ ಆಗುತ್ತವೆ.
ದೀರ್ಘಕಾಲದಲ್ಲಿ, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಶಕ್ತಿಯನ್ನು ಸ್ಥಿರಗೊಳಿಸಿ, ದೇಹದಲ್ಲಿ ಸಮತೋಲನವನ್ನು ಕಾಪಾಡಲು ಸಹಾಯ ಮಾಡುತ್ತದೆ.












Click it and Unblock the Notifications