ಕೆಲಸ ಕೊಡಿಸುತ್ತೇವೆಂದು ವಂಚನೆ: ಕುವೈತ್‌ನಲ್ಲಿ ಕರ್ನಾಟಕದ ಇಬ್ಬರು ಯುವಕರ ರಕ್ಷಣೆ
ಬೆಂಗಳೂರು, ಸೆಪ್ಟೆಂಬರ್ 6: ವಂಚನೆ ಜಾಲಕ್ಕೆ ಸಿಲುಕಿದ್ದ ಬಬಲೇಶ್ವರ ತಾಲೂಕಿನ ವಿಜಯಪುರದ ಸಿಂಗಾಪುರ ಗ್ರಾಮದ ಇಬ್ಬರು ಯುವಕರನ್ನು ಕುವೈತ್‌ನಿಂದ ವಿದೇಶಾಂಗ ಸಚಿವಾಲಯ ರಕ್ಷಿಸಿದೆ.
ಬುಧವಾರ ಇಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಯುವಕರಾದ ಸಚಿನ್ ಜಂಗಮಶೆಟ್ಟಿ (21) ಮತ್ತು ವಿಶಾಲ್ ಸೆಲಾರ್ (22) ಅವರು, ಮುಂಬೈ ಮೂಲದ ಏಜೆಂಟ್ ಒಬ್ಬರಿಂದ ವಂಚನೆಗೆ ಒಳಗಾಗಿರುವುದಾಗಿ ಹೇಳಿಕೊಂಡಿದ್ದಾರೆ. ಯುವಕರು ಕುವೈತ್‌ನಲ್ಲಿ ಹೆಚ್ಚಿನ ಸಂಬಳದ ಭರವಸೆ ನೀಡಿ ಪ್ರತಿಯೊಬ್ಬರಿಂದ ಒಂದು ಲಕ್ಷ ರೂಪಾಯಿಯನ್ನೂ ನೀಡಿದ್ದಾಗಿ ತಿಳಿಸಿದ್ದಾರೆ.

ಆರು ತಿಂಗಳ ಹಿಂದೆ ಏಜೆಂಟ್ ಕುವೈತ್‌ನಲ್ಲಿ ತರಕಾರಿ ಪ್ಯಾಕಿಂಗ್ ಉದ್ಯಮದಲ್ಲಿ ತಿಂಗಳಿಗೆ 32,000 ರೂಪಾಯಿ ವೇತನ ನೀಡುವ ಭರವಸೆ ನೀಡಿದ್ದರು. ಅವರ ಪಾಸ್‌ಪೋರ್ಟ್, ವೀಸಾ, ವಿಮಾನದ ಶುಲ್ಕ ಮತ್ತು ಕಮಿಷನ್ ಪಡೆಯಲು ಏಜೆಂಟ್ ಅವರಿಂದ ಒಂದು ಲಕ್ಷ ರೂಪಾಯಿಯನ್ನೂ ಪಡೆದುಕೊಳ್ಳಲಾಗಿತ್ತು ಎಂದು ಅವರು ಹೇಳಿದರು.
ವಂಚಕನ ಮಾತು ನಂಬಿ ಕುವೈತ್‌ಗೆ ಬಂದಿಳಿದಾಗ ಇಬ್ಬರು ಯುವಕರು ಖಚಿತವಾದ ತರಕಾರಿ ಪ್ಯಾಕಿಂಗ್ ಕೆಲಸದ ಬದಲು ಒಂಟೆ ಸಾಕಣೆ ಕೆಲಸ ಮಾಡಲು ಹೇಳಲಾಯಿತು. ನಮಗೆ ಖಚಿತವಾದ ಸಂಬಳವನ್ನು ನೀಡಲಿಲ್ಲ. ಅಲ್ಲದೆ ಅವಮಾನಿಸಿ ದೈಹಿಕ ಹಲ್ಲೆ, ಊಟ ನೀಡದೆ ಮತ್ತು ಚಿತ್ರಹಿಂಸೆಗೆ ಒಳಪಡಿಸಲಾಯಿತು. ಯುವಕರು ಈ ದೌರ್ಜನ್ಯದ ವಿರುದ್ಧ ದೂರು ನೀಡಲು ಪ್ರಯತ್ನಿಸಿದಾಗ ಅವರ ಮೇಲೆ ಮತ್ತಷ್ಟು ಹಲ್ಲೆ ನಡೆಸಲಾಯಿತು. "ನಮ್ಮ ಮನೆಗಳಿಗೆ ಕರೆ ಮಾಡಲು ಸಹ ನಮಗೆ ಅವಕಾಶವಿರಲಿಲ್ಲ" ಎಂದು ಅವರು ಹೇಳಿದರು.
ಈ ವಿಚಾರವಾಗಿ ಯುವಕರ ಕುಟುಂಬಸ್ಥರು ಬಿಜೆಪಿ ಮುಖಂಡ ಉಮೇಶ ಕೋಳಕೋರ ಅವರಿಗೆ ಮನವಿ ಸಲ್ಲಿಸಿದ್ದು, ಸಂಸದ ರಮೇಶ ಜಿಗಜಿಣಗಿ ನೆರವಿನೊಂದಿಗೆ ವಿದೇಶಾಂಗ ಸಚಿವಾಲಯವನ್ನು ಸಂಪರ್ಕಿಸಿ ನಾಲ್ಕು ದಿನಗಳ ಹಿಂದೆ ಅವರನ್ನು ರಕ್ಷಿಸಿ ಸುರಕ್ಷಿತವಾಗಿ ಭಾರತಕ್ಕೆ ಮರಳುವಂತೆ ಮಾಡಿದ್ದಾರೆ. ಮುಂಬೈ ಮೂಲದ ಏಜೆನ್ಸಿ ವಿರುದ್ಧ ಪೊಲೀಸ್ ದೂರು ನೀಡುವುದಾಗಿ ಯುವಕರು ಹೇಳಿದ್ದಾರೆ. ಬೇರೆ ದೇಶಗಳಲ್ಲಿನ ಇಂತಹ ಆಫರ್‌ಗಳಿಗೆ ಬಲಿಯಾಗಬೇಡಿ ಎಂದು ಅವರು ಯುವಕರನ್ನು ಕೇಳಿಕೊಂಡಿದ್ದಾರೆ.












Click it and Unblock the Notifications