ಕರ್ನಾಟಕದಲ್ಲಿ ಸಂಪರ್ಕಜಾಲ ಹೆಚ್ಚು ಬಲಪಡಿಸಿದ ರಿಲಯನ್ಸ್ ಜಿಯೋ

ಬೆಂಗಳೂರು, ಅಕ್ಟೋಬರ್ 06: ರಿಲಯನ್ಸ್ ಜಿಯೋ ಕರ್ನಾಟಕದಲ್ಲಿ ತನ್ನ ಸಂಪರ್ಕಜಾಲವನ್ನು ಮತ್ತಷ್ಟು ಬಲಪಡಿಸಿದೆ.

ಕಳೆದ ಕೆಲವು ದಿನಗಳಿಂದ ಹಲವು ಜಿಯೋ ಗ್ರಾಹಕರು ನೆಟ್‌ವರ್ಕ್ ಸಮಸ್ಯೆಯನ್ನು ಎದುರಿಸುತ್ತಿದ್ದರು. ಈ ಕುರಿತು ಸಾಕಷ್ಟು ಗ್ರಾಹಕರು ಟ್ವಿಟ್ಟರ್‌ ಮೂಲಕ ದೂರು ನೀಡಿದ್ದರು.

ಕೆಲವರು ಕಳೆದ ಎರಡು ಗಂಟೆಗಳಿಂದ ನೋ ಸರ್ವೀಸ್ ಎಂದು ತೋರಿಸುತ್ತಿದೆ ಎಂದು ಹೇಳಿಕೊಂಡರೆ ಮತ್ತಷ್ಟು ಮಂದಿ ಬೆಳಗ್ಗೆಯಿಂದಲೂ ಜಿಯೋ ನೆಟ್‌ವರ್ಕ್ ಇಲ್ಲ ಎಂದು ಹೇಳಿದ್ದರು. ಹಾಗೆಯೇ ಬ್ರಾಡ್‌ಬ್ಯಾಂಡ್ ಕನೆಕ್ಷನ್ ಕೂಡ ಸ್ಲೋ ಇರುವುದಾಗಿ ತಿಳಿಸಿದ್ದರು.

Jio Strengthens Its Connectivity Across Karnataka

ಸುಮಾರು 4 ಸಾವಿರಕ್ಕೂ ಅಧಿಕ ಮಂದಿ ದೂರು ನೀಡಿದ್ದರು. ಬೆಂಗಳೂರು, ಛತ್ತೀಸ್‌ಗಢ, ಮಧ್ಯಪ್ರದೇಶ, ಮುಂಬೈ, ದೆಹಲಿ ಸೇರಿದಂತೆ ಹಲವು ನಗರಗಳಲ್ಲಿ ತೊಂದರೆಯುಂಟಾಗಿತ್ತು.

ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿ ತನ್ನ ಗ್ರಾಹಕ ಅನುಭವವನ್ನು ವೃದ್ಧಿಸುವುದಕ್ಕಾಗಿ 1800 ಬ್ಯಾಂಡ್‌ನಲ್ಲಿ ಹೆಚ್ಚುವರಿ 5MHz ತರಂಗಾಂತರವನ್ನು ಅಳವಡಿಸುವುದರಲ್ಲಿ ಯಶಸ್ವಿಯಾಗಿದೆ.

ಹಾಗೆಯೇ ಈ ವರ್ಷದ ಮಾರ್ಚ್‌ ತಿಂಗಳಲ್ಲಿ ಡಿಒಟಿ ನಡೆಸಿದ ತರಂಗಾಂತರ (ಸ್ಪೆಕ್ಟ್ರಂ) ಹರಾಜಿನಲ್ಲಿ ಖರೀದಿಸಿದ ಹೆಚ್ಚುವರಿ 20MHz ತರಂಗಾಂತರದ ಅಳವಡಿಕೆಯನ್ನು ಪೂರ್ಣಗೊಳಿಸಿದಂತಾಗಿದೆ.
ಈ ತರಂಗಾಂತರ ವೃದ್ಧಿಯು ಕರ್ನಾಟಕದಲ್ಲಿನ ಸಂಪೂರ್ಣ ಗ್ರಾಹಕ ನೆಲೆಗೆ ಜಿಯೋ ನೆಟ್‌ವರ್ಕ್ ಅನುಭವವನ್ನು ಪರಿಣಾಮಕಾರಿಯಾಗಿ ಹೆಚ್ಚಿಸಿದೆ.

850MHZ, 1800MHZ ಮತ್ತು 2300MHZ ಬ್ಯಾಂಡ್‌ಗಳಲ್ಲಿ ಹೆಚ್ಚುವರಿಯಾಗಿ 60MHz ಅಳವಡಿಸಲಾಗಿದೆ. ಇದರಿಂದ ಕರ್ನಾಟಕದಾದ್ಯಂತ ನೆಟ್‌ವರ್ಕ್ ಗುಣಮಟ್ಟ ಸುಧಾರಿಸಿದ್ದು, ಚಂದಾದಾರರ ಅನುಭವ ಸುಧಾರಣೆಗೆ ನೆರವಾಗಿದೆ.

ರಾಜ್ಯಾದ್ಯಂತ ಇರುವ ನಿಯೋಜಿತ ನೆಟ್‌ವರ್ಕ್‌ ಸೈಟ್‌ಗಳ ವಿಚಾರದಲ್ಲಿ ಮತ್ತು ತನ್ನ ಚಂದಾದಾರರಿಗೆ ಒದಗಿಸುವ ನೆಟ್‌ವರ್ಕ್ ಗುಣಮಟ್ಟದಲ್ಲಿ ಜಿಯೋ ರಾಜ್ಯದ ನಾಯರಿಲಯನ್ಸ್ ಜಿಯೋ, ಕಳೆದ ತರಂಗಾಂತರ ಹರಾಜಿನಲ್ಲಿ 20 ವರ್ಷಗಳ ಅವಧಿಗೆ 57,123 ಕೋಟಿ ರೂಪಾಯಿ ವೆಚ್ಚದಲ್ಲಿ 22 ವಲಯಗಳಿಗೆ ಒಟ್ಟು 488.35 MHZ (850 MHZ, 1800 MHZ ಮತ್ತು 2300 MHZ ಒಳಗೊಂಡಂತೆ) ತರಂಗಾಂತರಗಳನ್ನು ಖರೀದಿಸಿದೆ.

ಇದರೊಂದಿಗೆ ಜಿಯೋ ತನ್ನ ಹೆಜ್ಜೆಗುರುತನ್ನು ಶೇ 55ರಷ್ಟು ಏರಿಕೆಯೊಂದಿಗೆ ಒಟ್ಟು 1717 MHZಗೆ ಗಣನೀಯವಾಗಿ ಹೆಚ್ಚಿಸಿಕೊಂಡಿದೆ. ಜಿಯೋ ಪ್ರಸ್ತುತ 443 ಮಿಲಿಯನ್ ಗ್ರಾಹಕರನ್ನು ಹೊಂದಿದೆ.

ತನ್ನ ವೃದ್ಧಿಸಿದ ತರಂಗಾಂತರ ಹೆಜ್ಜೆಗುರುತಿನೊಂದಿಗೆ ಆರ್‌ ಜೆ ಐ ಎಲ್, ತನ್ನ ಹಾಲಿ ಬಳಕೆದಾರರಿಗೆ ಸೇವೆ ಒದಗಿಸಲು ನೆಟ್‌ವರ್ಕ್ ಸಾಮರ್ಥ್ಯವನ್ನು ಹೆಚ್ಚಿಸಲಿದೆ. ಈ ವೃದ್ಧಿಯು ಮುಂದೆ 300 ಮಿಲಿಯನ್ ಬಳಕೆದಾರರನ್ನು ಸೇರ್ಪಡೆಗೊಳಿಸುವ ಮೂಲಕ ಡಿಜಿಟಲ್ ಸೇವೆಗಳತ್ತ ಹಾಗೂ 5ಜಿ ಸೇವೆಗಳ ಪರಿವರ್ತನೆಗೆ ಸಾಗಲು ಕೂಡ ನೆರವಾಗಲಿದೆ.ಕನಾಗಿ ಮುಂದುವರಿಯಲಿದೆ.

ಹೆಚ್ಚಿಸಲಾದ ಸಂಪರ್ಕ ಜಾಲ ಮತ್ತು ಅನುಭವವು ಹೊರಭಾಗದಲ್ಲಿನ ಅಗತ್ಯ ಕೆಲಸಗಳಲ್ಲಿ ತೊಡಗಿರುವ ವೈದ್ಯಕೀಯ ಹಾಗೂ ಇತರೆ ಮುಂಚೂಣಿ ಕೆಲಸಗಾರರಿಗೆ ಖಂಡಿತವಾಗಿಯೂ ಬಹು ದೊಡ್ಡ ನೆರವು ನೀಡಲಿದೆ.

ಕೊರೊನಾ ಬಂದಾಗಿನಿಂದ ವರ್ಕ್‌ಫ್ರಂ ಹೋಂ ಹೆಚ್ಚಾಗಿದೆ. ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ನಿರ್ಬಂಧಿತ ಸಂಚಾರಗಳನ್ನು ಪರಿಗಣಿಸಿ, ಈ ತರಂಗಾಂತರ ವೃದ್ಧಿಯು, ಎ) ಮನೆಯಿಂದ ಕೆಲಸ ಮಾಡುವ ವೃತ್ತಿಪರರು, ಬಿ) ಆನ್‌ಲೈನ್ ತರಗತಿಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು, ಸಿ) ಮನೆಯಲ್ಲಿ ಸುರಕ್ಷಿತವಾಗಿದ್ದುಕೊಂಡು ಯಾವುದೇ ತಡೆರಹಿತವಾಗಿ ಉದ್ಯಮವನ್ನು ಮನೆಯಿಂದಲೇ ನಡೆಸಲು ಸಹಕಾರಿಯಾಗುತ್ತದೆ.

ಮತ್ತಷ್ಟು 4ಜಿ ಟವರ್‌ಗಳ ಬೇಡಿಕೆಯನ್ನು ಈಡೇರಿಸಲು, ಜಿಯೋ ಕರ್ನಾಟಕ 2021ರಲ್ಲಿ ತನ್ನ 4ಜಿ ನೆಟ್‌ವರ್ಕ್ಅನ್ನು ಶೇ 28ರಷ್ಟು ವಿಸ್ತರಿಸುತ್ತಿದೆ. ಪ್ರಸ್ತುತ ಜಿಯೋ ರಾಜ್ಯದಲ್ಲಿ 22,300ಕ್ಕಿಂತ ಹೆಚ್ಚು 4ಜಿ ನೆಟ್‌ವರ್ಕ್ ಸೈಟ್‌ಗಳನ್ನು ಹೊಂದಿದ್ದು, ಇದು ಅತಿ ದೊಡ್ಡ 4ಜಿ ಹೆಜ್ಜೆಗುರುತಾಗಿದೆ.

ಕರ್ನಾಟಕದಲ್ಲಿ ಜಿಯೋ 2.21 ಕೋಟಿಗೂ ಅಧಿಕ ಗ್ರಾಹಕರ ನೆಲೆಯನ್ನು ಹೊಂದಿದೆ ಮತ್ತು ಪ್ರತಿ ಜಿಲ್ಲೆಯಲ್ಲಿಯೂ ಮತ್ತಷ್ಟು ಚಂದಾದಾರ ಸೇರ್ಪಡೆಯನ್ನು ಮುಂದುವರಿಸಿದೆ.

Recommended Video

      ಮಗಳ ಸಂಸಾರದ ಬಗ್ಗೆ ಮಾತಾಡಿದ ಸಮಂತಾ ಅಪ್ಪ ಜೋಸೆಫ್ | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+