ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏ ಕ್ಯಾ ಜಮೀರ್ ಭಾಯ್, ನಿಮ್ಮನ್ನು ಬೆಳೆಸಿದ ದೇವೇಗೌಡರಿಗೇ ಚಾಲೆಂಜಾ!

ನಮ್ಮ ಪಕ್ಷವನ್ನು ತೊರೆದು ನಮ್ಮ ವಿರುದ್ದ ಬೀದಿಬೀದಿಯಲ್ಲಿ ಅಪಪ್ರಚಾರ ಮಾಡುತ್ತಿರುವ ಎಲ್ಲಾ ಎಂಟು ಶಾಸಕರ ವಿರುದ್ದ ನಾನೇ ಖುದ್ದಾಗಿ ಪ್ರಚಾರ ನಡೆಸಿ, ಜೆಡಿಎಸ್ ಅಭ್ಯರ್ಥಿಗಳನ್ನು ಹೇಗೆ ಗೆಲ್ಲಿಸಬೇಕು ಎನ್ನುವುದು ನನಗೆ ತಿಳಿದಿದೆ ಎನ್ನುವುದನ್ನು

|
Google Oneindia Kannada News

ನೀನೇ ಸಾಕಿದ ಗಿಣಿ ನಿನ್ನಾ ಮುದ್ದಿನ ಗಿಣಿ, ಹದ್ದಾಗಿ ನಿನ್ನ ಕುಕ್ಕಿತಲ್ಲೋ.. ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ್ರು, ಶುಕ್ರವಾರ (ಜುಲೈ 21) ಬೆಂಗಳೂರು ಚಾಮರಾಜಪೇಟೆ ಅಸೆಂಬ್ಲಿ ಕ್ಷೇತ್ರದಲ್ಲಿ ಜೆಡಿಎಸ್ ಭಿನ್ನಮತ ಶಾಸಕ ಜಮೀರ್ ಅಹಮದ್ ವಿರುದ್ದ ವಾಗ್ದಾಳಿ ನಡೆಸಿದ ರೀತಿ 'ಮಾನಸ ಸರೋವರ' ಚಿತ್ರದ ಹಾಡನ್ನು ನೆನೆಪಿಸುವಂತಿತ್ತು.

ಚಾಮರಾಜಪೇಟೇಲಿ ಜೆಡಿಎಸ್ ಅಭ್ಯರ್ಥಿ ಸೋಲು ಗ್ಯಾರಂಟಿ: ಜಮೀರ್ ಚಾಮರಾಜಪೇಟೇಲಿ ಜೆಡಿಎಸ್ ಅಭ್ಯರ್ಥಿ ಸೋಲು ಗ್ಯಾರಂಟಿ: ಜಮೀರ್

ದರಿದ್ರ ನಾರಾಯಾಣ ಸಮಾವೇಶದ ಮೂಲಕ, ಅಕ್ಷರಸ: ಏಕಾಂಗಿಯಾಗಿ ಹೋರಾಡಿ ಜಮೀರ್ ಅಹಮದ್ ಜಯಗಳಿಸುವಂತೆ ಮಾಡಿ, ಅವರಿಗೆ ರಾಜಕೀಯ ಮರುಜನ್ಮ ನೀಡಿದ್ದ ದೇವೇಗೌಡ್ರು, ಕ್ಷೇತ್ರದಲ್ಲಿ ಜೆಡಿಎಸ್ ಕಾರ್ಯಕರ್ತರನ್ನು ಹಿಂಸಿಸಿದರೆ ಹುಷಾರ್ ಎಂದು ನೇರವಾಗಿ ಜಮೀರ್ ಮತ್ತು ಪೊಲೀಸರಿಗೆ ಎಚ್ಚರಿಸಿದ್ದಾರೆ.

ಗೌಡ್ರ ರಾಜಕೀಯ ದಾಳಕ್ಕೆ ತತ್ತರಿಸಿದ ಸಪ್ತ ಬಂಡಾಯ ಶಾಸಕರುಗೌಡ್ರ ರಾಜಕೀಯ ದಾಳಕ್ಕೆ ತತ್ತರಿಸಿದ ಸಪ್ತ ಬಂಡಾಯ ಶಾಸಕರು

ನಮ್ಮ ಪಕ್ಷವನ್ನು ತೊರೆದು ನಮ್ಮ ವಿರುದ್ದ ಬೀದಿಬೀದಿಯಲ್ಲಿ ಅಪಪ್ರಚಾರ ಮಾಡುತ್ತಿರುವ ಎಲ್ಲಾ ಎಂಟು ಶಾಸಕರ ವಿರುದ್ದ ನಾನೇ ಖುದ್ದಾಗಿ ಪ್ರಚಾರ ನಡೆಸಿ, ಜೆಡಿಎಸ್ ಅಭ್ಯರ್ಥಿಗಳನ್ನು ಹೇಗೆ ಗೆಲ್ಲಿಸಬೇಕು ಎನ್ನುವುದು ನನಗೆ ತಿಳಿದಿದೆ ಎನ್ನುವುದನ್ನು ತೋರಿಸಿಕೊಡುತ್ತೇನೆಂದು ಗೌಡ್ರು ಗುಡುಗಿದ್ದಾರೆ.

ನಮ್ಮ ಪಕ್ಷದ ಕಾರ್ಯಕರ್ತರಿಗೆ ಪೊಲೀಸರ ಮೂಲಕ ಕಿರುಕುಳ ನೀಡಲಾಗುತ್ತಿದೆ, ಪೊಲೀಸರು ನೀವು ಎಲ್ಲಿ ಬೇಕಾದರೂ ವಸೂಲಿ ಮಾಡಿಕೊಳ್ಳಿ, ನಮ್ಮ ಕಾರ್ಯಕರ್ತರ ತಂಟೆಗೆ ಬರಬೇಡಿ. ಪರಿಸ್ಥಿತಿ ಸರಿಹೋಗದಿದ್ದಲ್ಲಿ, ಸಿದ್ದರಾಮಯ್ಯನವರ ಮನೆ ಮುಂದೆ ಧರಣಿ ಕೂರುತ್ತೇನೆಂದು ಗೌಡ್ರು ಎಚ್ಚರಿಸಿದ್ದಾರೆ.

ಮುಂಬರುವ ಅಸೆಂಬ್ಲಿ ಚುನಾವಣೆಯಲ್ಲಿ ಚಾಮರಾಜ ಪೇಟೆಯನ್ನು ಸವಾಲಾಗಿ ಸ್ವೀಕರಿಸುತ್ತೇನೆ, ಮನೆಮನೆಗೆ ತೆರಳಿ ಪಕ್ಷದ ಅಭ್ಯರ್ಥಿಯ ಪರವಾಗಿ ಮತಯಾಚಿಸುತ್ತೇನೆ ಎಂದು ಜಮೀರ್ ಅಹಮದ್ ಖಾನಿಗೆ, ಗೌಡ್ರು ಟಾಂಗ್ ನೀಡಿದ್ದಾರೆ. ಹಿಂದಿನ ಘಟನೆಯನ್ನು ಮೆಲುಕುಹಾಕಿದ ಗೌಡ್ರು, ಮುಂದೆ ಓದಿ..

ಭಿನ್ನಮತ ಇದ್ದರೆ ಚರ್ಚಿಸಬಹುದಿತ್ತು

ಭಿನ್ನಮತ ಇದ್ದರೆ ಚರ್ಚಿಸಬಹುದಿತ್ತು

ಪಕ್ಷದೊಳಗೆ ಅಥವಾ ಕುಮಾರಸ್ವಾಮಿ ಜೊತೆ ಏನಾದರೂ ಭಿನ್ನಮತ ಇದ್ದಿದ್ದರೆ ನನ್ನ ಬಳಿ ಬಂದು ಚರ್ಚಿಸಬಹುದಿತ್ತು. ಆದರೆ ನೀವೆಲ್ಲಾ, ನನ್ನ ಬಳಿ ಬರುವ ಬದಲು ಸಿದ್ದರಾಮಯ್ಯ ಬಳಿ ಹೋದ್ರಿ. ರಾಜಕೀಯದಲ್ಲಿ ಯಾವುದೂ ಶಾಸ್ವತವಲ್ಲ ಎನ್ನುವ ಪಾಠ ಮುಂದಿನ ಚುನಾವಣೆ ನಿಮಗೆ ತೋರಿಸಲಿದೆ ಎಂದು ಎಲ್ಲಾ ಭಿನ್ನಮತ ಶಾಸಕರಿಗೆ ಗೌಡ್ರು ತಿರುಗೇಟು ನೀಡಿದರು.

ಜಮೀರ್ ಚುನಾವಣೆಯಲ್ಲಿ ಸೋತಿದ್ರು

ಜಮೀರ್ ಚುನಾವಣೆಯಲ್ಲಿ ಸೋತಿದ್ರು

ಜಮೀರ್ ಚುನಾವಣೆಯಲ್ಲಿ ಸೋತಿದ್ರು, ಅವರ ತಾಯಿ ಊಟ ಮಾಡದೇ ಮನೆಯಲ್ಲಿ ಅಳುತ್ತಿದ್ದರು. ನಿಮ್ಮ ಮಗನನ್ನು ಗೆಲ್ಲಿಸುವ ಜವಾಬ್ದಾರಿ ನನ್ನದು, ಅವನಿಗೆ ಮತ್ತೆ ರಾಜಕೀಯ ಮರುಜನ್ಮ ಸಿಗುವಂತೆ ಮಾಡುತ್ತೇನೆಂದು ಆ ತಾಯಿಗೆ ಮಾತು ಕೊಟ್ಟು ಬಂದೆ - ದೇವೇಗೌಡ.

ದರಿದ್ರ ನಾರಾಯಣ ಸಮಾವೇಶ ನಡೆಸಿ, ಗೆಲ್ಲಿಸಿದೆ

ದರಿದ್ರ ನಾರಾಯಣ ಸಮಾವೇಶ ನಡೆಸಿ, ಗೆಲ್ಲಿಸಿದೆ

ಕೊಟ್ಟ ಮಾತಿನಂತೆ ಕೊಳೆಗೇರಿಯಲ್ಲಿ ದರಿದ್ರ ನಾರಾಯಣ ರ್ಯಾಲಿ ನಡೆಸಿದೆ, ಇಳಿ ವಯಸ್ಸಿನಲ್ಲೂ ಮನೆ ಮನೆಗೆ ಹೋಗಿ ಜಮೀರ್ ಪರ ಪ್ರಚಾರ ಮಾಡಿ, ಅವರನ್ನು ಗೆಲ್ಲಿಸಿದೆ. ನೀವು (ಜಮೀರ್) ಅದನ್ನು ಮೆರೆತಿರಬಹುದು, ಆದರೆ ಈ ಕ್ಷೇತ್ರದ ಜನ ಅದನ್ನು ಮರೆಯುವುದಿಲ್ಲ - ದೇವೇಗೌಡ.

ಇದೇನು ಪಾಕಿಸ್ತಾನನಾ?

ಇದೇನು ಪಾಕಿಸ್ತಾನನಾ?

ಚುನಾವಣೆಗೆ ಒಂದು ತಿಂಗಳು ಇರುವಾಗ ಚಾಮರಾಜಪೇಟೆಯಲ್ಲಿ ಸಮಾವೇಶ ನಡೆಸೋಣ ಎಂದು ಕಾರ್ಯಕರ್ತರು ಹೇಳಿದರು. ಇಲ್ಲಿ ಸಮಾವೇಶ ನಡೆಯಲು ಬಿಡುವುದಿಲ್ಲ ಎಂದು ಕೆಲವರು ಧಮ್ಕಿ ಹಾಕಿದ್ದಾರೆ. ಏನ್ ಸ್ವಾಮಿ ನಾವು ಪಾಕಿಸ್ತಾನದಲ್ಲಿದ್ದೀವಾ ಎಂದು ಪರೋಕ್ಷವಾಗಿ ದೇವೇಗೌಡ, ಜಮೀರ್ ಅವರನ್ನು ಎಚ್ಚರಿಸಿದರು.

ಕುಮಾರಸ್ವಾಮಿಯವರನ್ನು ಎಷ್ಟು ಸಾಧ್ಯವೋ ಬಳಸಿಕೊಂಡರು

ಕುಮಾರಸ್ವಾಮಿಯವರನ್ನು ಎಷ್ಟು ಸಾಧ್ಯವೋ ಬಳಸಿಕೊಂಡರು

ಈಗ ಏನು ನಮ್ಮ ಪಕ್ಷದ ಭಿನ್ನಮತ ಶಾಸಕರು ಇದ್ದಾರೋ, ಅವರೆಲ್ಲಾ ಕುಮಾರಸ್ವಾಮಿಯವರನ್ನು ಎಷ್ಟು ಸಾಧ್ಯವೋ ಅಷ್ಟು ಬಳಸಿಕೊಂಡರು, ವಿಷವೊಂದು ನೀಡಿಲ್ಲಾ ಅಷ್ಟೇ. ಬಳಸಿಕೊಂಡರೆ ಬಳಸಿಕೊಳ್ಳಲಿ, ಅವರ ವಿರುದ್ದ ತಿರುಗಿಬಿದ್ದರು. ಇದನ್ನೆಲ್ಲಾ ಜನ ಗಮನಿಸುತ್ತಿದ್ದಾರೆ - ದೇವೇಗೌಡ.

English summary
JDS supremo HD Devegowda warning to dissident JDS MLA from Chamarajpet (Bengaluru) constituency Zameer Ahmed Khan, during party workers meeting on July 21.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X