ಅಶ್ವತ್ಥ ನಾರಾಯಣ ಫೋಟೋ ರಿಲೀಸ್‌ ಮಾಡಿದ ಎಚ್‌ಡಿಕೆ: ಸಚಿವರ ವಿರುದ್ಧದ ಆರೋಪವೇನು..?

ಚುನಾವಣೆ ಹತ್ತಿರವಾಗುತ್ತಿದ್ದಂತೆ .ರಾಜಕೀಯ ಪಕ್ಷಗಳ ಆರೋಪ, ಪ್ರತ್ಯಾರೋಪ ಹೆಚ್ಚಾಗಿದೆ. ಈಗಾಗಲೇ 40% ಕಮಿಷನ್ ಸರ್ಕಾರ ಎಂದು ವಿಪಕ್ಷಗಳು ಸರ್ಕಾರದ ವಿರೋಧ ಸಾಕಷ್ಟು ಆರೋಪವನ್ನ ಮಾಡಿದ್ದು, ಅಶ್ವತ್ಥ ನಾರಾಯಣ್ ಅವರ ಫೋಟೋವನ್ನ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ

ಬೆಂಗಳೂರು,ಫೆಬ್ರವರಿ7: ಚುನಾವಣೆ ಹತ್ತಿರವಾಗುತ್ತಿದ್ದಂತೆ .ರಾಜಕೀಯ ಪಕ್ಷಗಳ ಆರೋಪ, ಪ್ರತ್ಯಾರೋಪ ಹೆಚ್ಚಾಗಿದೆ. ಈಗಾಗಲೇ 40% ಕಮಿಷನ್ ಸರ್ಕಾರ ಎಂದು ವಿಪಕ್ಷಗಳು ಸರ್ಕಾರದ ವಿರೋಧ ಸಾಕಷ್ಟು ಆರೋಪವನ್ನ ಮಾಡಿದ್ದು, ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಬಿಎಂಎಸ್‌ ಎಜುಕೇಷನ್‌ ಟ್ರಸ್ಟ್‌ ಅನ್ನು ಅಕ್ರಮವಾಗಿ ಖಾಸಗಿ ಟ್ರಸ್ಟ್‌ ಆಗಿ ಮಾರ್ಪಡಿಸಲು ಸಚಿವ ಅಶ್ವತ್ಥ ನಾರಾಯಣ ಸಹಕರಿಸಿದ್ದಾರೆ ಎಂದು ದಾಖಲೆಗಳ ಸಹಿತ ಸದನದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಆರೋಪ ಮಾಡಿದರು.

ಇನ್ನೂ ಅಕ್ರಮದಲ್ಲಿ ಸಚಿವ ಅಶ್ವತ್ಥ ನಾರಾಯಣ ಅವರು ನೇರವಾಗಿ ಭಾಗಿಯಾಗಿದ್ದು ಈ ಕುರಿತು ತನಿಖೆಯಾಗಬೇಕು ಎಂದು ಜೆಡಎಸ್ ಈ ಹಿಂದೆ ನಡೆದ ಅಧವೇಶನದಲ್ಲಿ ಧರಣಿಗೆ ನಿರ್ಧಾರಿಸಿದ್ದು, ಈ ಅಕ್ರಮಕ್ಕೂ ನನಗೂ ಸಂಬಂಧವಿಲ್ಲ ಎಂದು ಸಚಿವ ಅಶ್ವತ್ಥ ನಾರಾಯಣ ಈ ಆರೋಪವನ್ನ ತಳ್ಳಿ ಹಾಕಿದರು.

JDS leader HD kumaraswamy Slams Minister Ashwath Narayan

ಆದರೆ ಇಂದು ( ಮಂಗಳವಾರ) ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸುವ ಮೂಲಕ ಬಿಎಂಎಸ್ ಟ್ರಸ್ಟ್ ಮುಖ್ಯಸ್ಥ ರೊಂದಿಗೆ ಅಶ್ವಥ್ ನಾರಾಯಣ್ ಊಟ ಮಾಡುತ್ತಿರುವ ಫೋಟೋ ಪ್ರದರ್ಶನ ಮಡುವ ಮೂಲಕ ವಾಗ್ದಾಳಿ ನಡೆಸಿದ್ದಾರೆ. ಪಾಪಾ ಅಶ್ವಥ್ ನಾರಾಯಣ್ ನನ್ನ ಮೇಲೆ ಆರೋಪ ಮಾಡಿದ್ದೇ ಮಾಡಿದ್ದು. ಬಿಎಂಎಸ್ ಟ್ರಸ್ಟ್ ನಲ್ಲಿ ಯಾರು ತಿಂದಿದ್ದು ನೀವೇ ಹೇಳಿ. ನಾನು ಸದನದಲ್ಲಿ ಇದನ್ನು ಸುಮ್ಮನೇ ಪ್ರಸ್ತಾಪ ಮಾಡಿದ್ದಲ್ಲ. ನಾನು ಇದನ್ನು ಸುಮ್ಮನೆ ಬಿಡಲ್ಲ ನಮ್ಮ ಸರ್ಕಾರ ಬರಲಿ ಅಂತಾ ಕಾಯುತ್ತಿದ್ದೇನೆ ಎಂದು ಅಶ್ವತ್ಥ ನಾರಾಯಣ್ ವಿರುದ್ದ ಕಿಡಿಕಾರಿದ್ದಾರೆ.

JDS leader HD kumaraswamy Slams Minister Ashwath Narayan

ಒಟ್ಟಿಗೆ ಕೂತು ಊಟ ಮಾಡಿದ್ರೆ ತಪ್ಪಿಲ್ಲ. ಆದರೆ, ಯಾವ ಸಂದರ್ಭದಲ್ಲಿ ಮಾಡಿದ್ದಾರೆ ಎನ್ನುವುದು ಮುಖ್ಯ, ಬಿಎಂಎಸ್ ಟ್ರಸ್ಟ್ ಅಪ್ರೂವಲ್‌ಗೆ ನನ್ನ ಬಳಿ ಬಂದಿದ್ದರು. ಏನು ಆಫರ್ ಕೊಟ್ಟಿದ್ರೂ ಅನ್ನೋದು ಗೊತ್ತಿದೆ. ಬಡವರು ಓದುವ ಟ್ರಸ್ಟ್ ಅನ್ನು ಕೋಟ್ಯಾಂತರ ರೂಪಾಯಿಗೆ ಕೊಟ್ಟು ಲಾಭ ಮಾಡಿಕೊಂಡಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+