ಎಚ್ಡಿಕೆ, ರೇವಣ್ಣ ಮಾತಿಗೆ ಸುತರಾಂ ಒಪ್ಪದ ದೇವೇಗೌಡ
ಕೋರ್ ಕಮಿಟಿ ಪಟ್ಟಿಯಲ್ಲಿ ತಾನು ಅಂತಿಮಗೊಳಿಸಿದ ಪಟ್ಟಿಯಲ್ಲಿನ ಹೆಸರನ್ನು ರೇವಣ್ಣ ಮತ್ತು ಕುಮಾರಸ್ವಾಮಿ ಮುಂದೆ ಗೌಡ್ರು ಸುದೀರ್ಘವಾಗಿ ಚರ್ಚಿಸಿದ್ದಾರೆ/ವಿವರಿಸಿದ್ದಾರೆ. ಸುಮಾರು ಒಂದುವರೆ ಗಂಟೆಗಳ ಕಾಲ ಮಕ್ಕಳಿಬ್ಬರಿಬ್ಬರ ಜೊತೆ ಕ್ಲೋಸ್ ಡೋರ್ ಮೀಟಿಂಗ್ ನಡೆಸಿದರೂ ಅವರಿಬ್ಬರೂ ಅಸಮಾಧಾನ ವ್ಯಕ್ತ ಪಡಿಸಿದಾಗ ಗೌಡ್ರು ತನ್ನದೇ ಅಂತಿಮ ನಿರ್ಧಾರ ಎಂದು ಎದ್ದು ಬಂದರು ಎನ್ನುವುದು ಸುದ್ದಿ.
ಇದರ ಜೊತೆಗೆ ಪಕ್ಷದ ಪ್ರಭಾವಿ ಮುಖಂಡರಾದ ಚೆಲುವರಾಯಸ್ವಾಮಿ ಮತ್ತು ಜಮೀರ್ ಅಹಮದ್ ಇವರಿಬ್ಬರೂ ಕುಮಾರಸ್ವಾಮಿ ಜೊತೆ ಗರಂ ಆಗಿರುವ ವಿಚಾರವೂ ಬಹಿರಂಗವಾಗಿರುವುದಕ್ಕೆ ಕಾರಣ ಏನು ಅನ್ನುವ ವಿಚಾರವನ್ನೂ ಗೌಡ್ರು ಕುಮಾರಸ್ವಾಮಿಯಿಂದ ಮಾಹಿತಿ ಪಡೆದು ಕೊಂಡರು ಎನ್ನಲಾಗುತ್ತಿದೆ.
ತನ್ನ ಪಟ್ಟಿಯಲ್ಲಿನ ಹನ್ನೊಂದು ಸದಸ್ಯರ ಪಟ್ಟಿಯಲ್ಲಿ ಒಬ್ಬರ ಹೆಸರನ್ನೂ ಹಿಂದಕ್ಕೆ ಪಡೆಯಲು ಸುತರಾಂ ಗೌಡ್ರು ಒಪ್ಪದೇ ಇದ್ದಾಗ ಮನಸ್ಸಿನಲ್ಲದ ಮನಸ್ಸಿನಲ್ಲಿ ರೇವಣ್ಣ ಮತ್ತು ಕುಮಾರಣ್ಣ ಕೋರ್ ಕಮಿಟಿ ಸಭೆಯಲ್ಲಿ ಭಾಗವಹಿಸಿದರು.

ಜೆಡಿಎಸ್ ಎಂದರೆ ಅಪ್ಪ ಮಕ್ಕಳ ಪಕ್ಷ ಎನ್ನುವ ಟ್ಯಾಗ್ ಇದೆ, ಮೊದಲು ಇದರಿಂದ ಹೊರ ಬರಬೇಕಾಗಿದೆ. ಪಕ್ಷದ ನಾಯಕರ ವಿರುದ್ದ ಸಾರ್ವಜನಿಕವಾಗಿ ಅಪಸ್ವರ ಮತ್ತು ಅಸಮಾಧಾನ ಎತ್ತಿರುವ ನಾಯಕರನ್ನೂ ಕಮಿಟಿಯಿಂದ ದೂರವಿಟ್ಟು ಪಕ್ಷದಲ್ಲಿ ಶಿಸ್ತನ್ನು ತರುವುದು ದೇವೇಗೌಡರ ಉದ್ದೇಶವೂ ಒಂದು ಎನ್ನುವುದು ಜೆಡಿಎಸ್ ವಲಯದಿಂದ ಕೇಳಿ ಬರುತ್ತಿರುವ ಸುದ್ದಿ.
ಪಕ್ಷದಲ್ಲಿ ಪರಸ್ಪರ ಅಸಮಾಧಾನ ಹೊಂದಿರುವ ಮುಖಂಡರ ಜೊತೆ ಸಮನ್ವಯ ಸಾಧಿಸುವ ಮಹತ್ವದ ಕೆಲಸವನ್ನೂ ಕೋರ್ ಕಮಿಟಿ ಸಮಿತಿಗೆ ವಹಿಸುವ ನಿರ್ಧಾರಕ್ಕೂ ಗೌಡ್ರು ಬಂದಿದ್ದರು. ಎಚ್ಡಿಕೆ ಜೊತೆ ಭಿನ್ನಾಭಿಪ್ರಾಯ ಹೊಂದಿರುವ ನಾಯಕರನ್ನು ಮತ್ತೆ ಪಕ್ಷದ ಚಟುವಟಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಮಾಡುವುದು ಗೌಡ್ರ ಉದ್ದೇಶ ಎಂದು ಮೂಲಗಳು ತಿಳಿಸಿವೆ.
ಪಕ್ಷದಲ್ಲಿನ ಹಿರಿಯ ಮುಖಂಡರನ್ನು ಕೋರ್ ಕಮಿಟಿಯಿಂದ ದೂರವಿಟ್ಟು, ಹೊಸ ತಂಡದೊಂದಿಗೆ ಮುಂದಿನ ದಿನಗಳಲ್ಲಿ ಉತ್ಸಾಹದಿಂದ ಕಾರ್ಯಪ್ರವೃತ್ತರಾಗುವುದು. ಮುಂಬರುವ ಬಿಬಿಎಂಪಿ ಚುನಾವಣೆಯಲ್ಲಿ ಶತಾಯುಗತಾಯು ಪಕ್ಷ ಗಣನೀಯ ಸಾಧನೆ ಮಾಡುವುದು ಗೌಡ್ರ ಮುಂದಿನ ಗುರಿ ಎನ್ನುವುದು ಗೌಡ್ರ ಆಪ್ತವಲಯದಿಂದ ಕೇಳಿ ಬರುತ್ತಿರುವ ಮಾತು.
ಕೋರ್ ಕಮಿಟಿ ಪಟ್ಟಿಯಲ್ಲಿ ಎಲ್ಲ ಪ್ರಮುಖರಿಗೂ ಕೊಕ್.. ಮುಂದೆ ಓದಿ..












Click it and Unblock the Notifications