ಜೆಡಿಎಸ್ ಕೋರ್ ಕಮಿಟಿ: ಕೊನೆಗೂ ಗೆದ್ದಿದ್ದು ದೇವೇಗೌಡ್ರ ಹಠ

ರಾಜ್ಯದಲ್ಲಿ ಮತ್ತೆ ನೆಲೆಕಾಣಲು ಹರಸಾಹಸ ಪಡುತ್ತಿರುವ ಜೆಡಿಎಸ್ ಕೊನೆಗೂ ತನ್ನ ಕೋರ್ ಕಮಿಟಿ ಪಟ್ಟಿಯನ್ನು ಅಂತಿಮಗೊಳಿಸಿದೆ. ಇಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಅಂಶವೇನಂದರೆ ಗೆದ್ದಿದ್ದು ಕೊನೆಗೂ ದೇವೇಗೌಡ್ರ ಹಠ, ಕುಮಾರಸ್ವಾಮಿಯದ್ದು ಅಲ್ಲ ಎನ್ನುವುದು.

ಎರಡು ತಿಂಗಳಿನಿಂದ ಇವತ್ತು, ನಾಳೆಯೆಂದು ಗಣೇಶನ ಮದುವೆಯಂತಾಗಿದ್ದ ಕೋರ್ ಕಮಿಟಿ ಪಟ್ಟಿಗೆ ಗೌಡ್ರು ಅಂತಿಮವಾಗಿ ಗ್ರೀನ್ ಸಿಗ್ನಲ್ ನೀಡುವ ಮೂಲಕ ಜೆಡಿಎಸ್ ನಲ್ಲಿ ಏನಿದ್ದರೂ ತನ್ನ ನಿರ್ಧಾರವೇ ಅಂತಿಮ ಎಂದು ಟವೆಲ್ ಕೊಡವಿಕೊಂಡಿದ್ದಾರೆ.

ದೇವೇಗೌಡ್ರ ಕುಟುಂಬದ ಒಬ್ಬರಾದರೂ ಕೋರ್ ಕಮಿಟಿಯಲ್ಲಿ ಇರಬೇಕು ಎನ್ನುವ ಶಾಸಕರ ಮತ್ತು ಪದಾಧಿಕಾರಿಗಳ ಒಕ್ಕೂರಿಲಿನ ಬೇಡಿಕೆಗೆ ಗೌಡ್ರು ಸಭೆಯಲ್ಲಿ 'ಜಸ್ಟ್ ಡೋಂಟ್ ಕೇರ್' ಎಂದಿದ್ದು ಈಗ ರಹಸ್ಯವಾಗಿ ಉಳಿದಿಲ್ಲ.

JDS Leader H D Deve Gowda announced eleven members core committee list

ಶಾಂತಿಯಿಂದ ಮತ್ತು ತದೇಕಚಿತ್ತದಿಂದ ಹಾಸನದ ತನ್ನ ನಿವಾಸದಲ್ಲಿ ತಾನು ಅಂತಿಮಗೊಳಿಸಿದ್ದ ಪಟ್ಟಿಗೇ ಅಂಟಿಕೊಂಡಿದ್ದ ದೇವೇಗೌಡ್ರು, ಕೊನೆಗೆ ಅದೇ ಪಟ್ಟಿಯನ್ನು ಅಖೈರುಗೊಳಿಸಿದ್ದಾರೆ.

ಆ ಮೂಲಕ, ಜೆಡಿಎಸ್ ಬಿಡುಗಡೆ ಮಾಡಿದ ಹೊಸ ಕೋರ್ ಕಮಿಟಿ ಪಟ್ಟಿಯಲ್ಲಿ ದೇವೇಗೌಡ್ರ ಕುಟುಂಬದ ಯಾವೊಬ್ಬರೂ ಸದಸ್ಯರು ಇಲ್ಲದಿರುವುದು ಮತ್ತೆ ಗೌಡ್ರು ಜೆಡಿಎಸ್ ನಲ್ಲಿ ಹಿಡಿತ ಸಾಧಿಸಿರುವುದಕ್ಕೆ ಕೊಡಬಹುದಾದ ಒಂದು ಉದಾಹರಣೆ.

ಹೊಸ ಕಮಿಟಿಯ ಪಟ್ಟಿಗೆ ಸಭೆಯಲ್ಲೇ ವಿರೋಧ ವ್ಯಕ್ತವಾದಾಗ, ಅದನ್ನು ಗಣನೆಗೆ ತೆಗೆದುಕೊಳ್ಳದ ದೇವೇಗೌಡ, ಕಮಿಟಿಯಲ್ಲಿ ತಾನು ಸೂಚಿಸಿರುವ ಒಂದೊಂದು ಸದಸ್ಯರು ಯಾಕಿರಬೇಕು ಎಂದು ವಿವರಿಸಿದ್ದಾರೆ ಎನ್ನುವುದು ಜೆಡಿಎಸ್ ಆಪ್ತವಲಯದಿಂದ ಕೇಳಿ ಬರುತ್ತಿರುವ ಮಾತು.

ಪಟ್ಟಿ ಅಂತಿಮಗೊಳಿಸುವ ಮುನ್ನ ಗೌಡ್ರು, ತಮ್ಮಿಬ್ಬರೂ ಪುತ್ರರ ಜೊತೆ ಗಹನವಾಗಿ ಚರ್ಚಿಸಿದ್ದರಂತೆ. ಮುಂದಿನ ಪುಟದಲ್ಲಿ ಓದಿ..

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+