ಡಿ.ಕೆ ಶಿವಕುಮಾರ್‌ಗೆ ಯಾವ ದೊಣ್ಣೆನಾಯಕ ಎಂದ ಜೆಡಿಎಸ್: ಜನರಿಂದ ಕ್ಲಾಸ್!
ಬಿಗ್‌ಬಾಸ್ ಕನ್ನಡ ರಿಯಾಲಿಟಿ ಶೋ ಇದೀಗ ರಾಜಕೀಯ ವಿವಾದ ಸ್ವರೂಪವನ್ನು ಪಡೆದುಕೊಂಡಿದೆ. ಈ ವಿಚಾರವು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ನಡುವೆ ಟ್ವಿಟ್ ಸಮರಕ್ಕೆ ಕಾರಣವಾಗಿದೆ. ಅಲ್ಲದೇ "ನೆನೆಸ್ಕೋಳ್ಳೋಕ್ಕೆ ನೀನ್ ಯಾವ್ ದೊಣ್ಣೆನಾಯಕ. ದ್ವೇಷ ರಾಜಕೀಯ ಮಾಡುವುದನ್ನು ಬಿಟ್ಟು, ಡಿಸಿಎಂ ಆಗಿ ರಾಜ್ಯದ ಅಭಿವೃದ್ಧಿ ಕೆಲಸಗಳನ್ನು ಮಾಡು" ಎಂದು ಜೆಡಿಎಸ್‌ನ ಅಧಿಕೃತ ಖಾತೆಯಿಂದ ಮಾಡಿರುವ ಟ್ವೀಟ್ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಪಕ್ಷವು, ಕಿಂಗ್ ಮೇಕರ್ ಆಗುವ ನಿಮ್ಮ ಕಣ್ಣೀರಿನ ಕುತಂತ್ರಕ್ಕೆ ತಕ್ಕ ಪಾಠ ಕಲಿಸಿದ ಅದೇ ಜನ ಈಗ ನಿಮ್ಮ ಹರಕು ಬಾಯಿ, ಕೊಳಕು ನಾಲಗೆಗೆ ಸರಿಯಾದ ಜಾಗ ತೋರಿಸಿದ್ದಾರೆ ನೋಡಿಕೊಳ್ಳಿ! ಎಂದು ಟ್ವೀಟ್ ಮಾಡಿದೆ. ಜೆಡಿಎಸ್ ಪಕ್ಷದ ಯಾವ ದೊಣ್ಣೆ ನಾಯಕ ಎನ್ನುವ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದೆ. ಅಲ್ಲದೇ ಜೆಡಿಎಸ್ ಪಕ್ಷದ ಟ್ವೀಟ್‌ಗೆ ಜನರು ಸಹ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಪಕ್ಷದ ಅಧಿಕೃತ ಖಾತೆಯಿಂದ ಬಳಸುವ ನುಡಿ 👏👏 ಬೀದಿ ಪುಡಿ ಪುಂಡರನ್ನು ಖಾತೆ ನಿರ್ವಹಣೆಗೆ ಬಿಟ್ಟಿದ್ದೀರ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. ಯಾರಪ್ಪ admin ಇದು! Irrespective of the party, ಏಕವಚನ ಬಳಸುವುದು ತಪ್ಪು ಎಂದು ಒಬ್ಬರು ಹೇಳಿದರೆ, ಮತ್ತೊಬ್ಬರು ಇದು ಬೇರೆ ಲೆವೆಲ್ಲೆ. ಬಂದು ಎರಡೂವರೆ ವರ್ಷಗಳಾದವು. ಜಲಸಂಪನ್ಮೂಲ ಇಲಾಖೆಯಲ್ಲಿ ಜನರಿಗೆ ಕಾಣಿಸುವಂಥ ಒಂದು ಕೆಲಸವೂ ಆಗಿಲ್ಲ. ಅದ್ಯಾವ ಕೆಲಸ ಮಾಡ್ತಿದಾರೋ. ಬರಿ ಕಾಮಧೇನು ರೀತಿ ಹಣ ನೀಡೋ ಬೆಂಗಳೂರೊಂದೇ ಬೇಕಾಗಿದ್ರೆ ಇಲಾಖೆಯನ್ನ ತೊಗೊಂಡಿದ್ಯಾಕೆ ಎಂದೂ ಕೆಲವರು ಪ್ರಶ್ನೆ ಮಾಡಿದ್ದಾರೆ.
ಕಾಂಗ್ರೆಸ್ ಸರಕಾರ ಕಳೆದು 2.6 ವರ್ಷ ದಿಂದ ಒಳ್ಳೆಯ ಕೆಲಸ ಮಾಡುತ್ತಿದೆ... ಅದರ ಬಗ್ಗೆ ಚಿಂತೆ ಮಾಡಬೇಡಿ... JDS ಪಕ್ಷ ಮುಂದಿನ ಚುನಾವಣೆಯಲ್ಲಿ ಹೇಗೆ ಇರಲಿದೆ ಎನ್ನುವುದನ್ನು ವಿಚಾರ ಮಾಡಿ ಎಂದು ಕೆಲವರು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರನ್ನು ಸಮರ್ಥಿಸಿಕೊಂಡಿದ್ದಾರೆ.
ಇನ್ನು ಜೆಡಿಎಸ್ ಪಕ್ಷದ ಅಧಿಕೃತ ಖಾತೆಯಿಂದ ಮಾಡಲಾಗಿರುವ ಟ್ವೀಟ್ ಅನ್ನು ಕೆಲವರು ಸಮರ್ಥನೆ ಸಹ ಮಾಡಿಕೊಂಡಿದ್ದಾರೆ. Admin anna mass 🔥 ಅಡ್ಮಿನ್ ಅಣ್ಣ ಮಾಸ್ ಎಂದೂ ರಿಯಾಕ್ಟ್ ಮಾಡುತ್ತಿದ್ದಾರೆ.
ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದ್ದೇನು: ತಪ್ಪು ಸರಿಪಡಿಸಿಕೊಳ್ಳಲು ಜಾಲಿವುಡ್ ಸ್ಟುಡಿಯೋಗೆ ಅವಕಾಶ ನೀಡಲು ಸೂಚನೆ ನೀಡಿರುವುದಾಗಿ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದ್ದರು. ಮುಂದುವರಿದು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ನಿಯಮಗಳನ್ನು ಪಾಲಿಸಿಲ್ಲ ಎಂಬ ಕಾರಣಕ್ಕೆ ಬಿಗ್‌ಬಾಸ್ ನಡೆಯುವ ಜಾಲಿವುಡ್ ಸ್ಟುಡಿಯೋ ಬಂದ್ ಮಾಡಲಾಗಿದೆ.
ಆದರೆ ಇಲ್ಲಿ ಖಾಸಗಿಯವರು ಹೂಡಿಕೆ ಮಾಡಿರುತ್ತಾರೆ, ಉದ್ಯೋಗ ನಡೆಯುವುದು ಮುಖ್ಯ. ಹೀಗಾಗಿ ತಪ್ಪುಗಳನ್ನು ಸರಿಪಡಿಸಿಕೊಂಡು ಹೋಗಲು ಅವಕಾಶ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದಿದ್ದರು. ಅಲ್ಲದೇ ಇದೇ ಸಂದರ್ಭದಲ್ಲಿ ಜೆಡಿಎಸ್‌ನ ಟೀಕೆಗೆ ಜೆಡಿಎಸ್‌ನವರಿಗೆ ನಿದ್ದೆ ಬರಲ್ಲ ಎಂದೂ ಡಿ.ಕೆ ಶಿವಕುಮಾರ್ ಕ್ಲಾಸ್ ತೆಗೆದುಕೊಂಡಿದ್ದರು.












Click it and Unblock the Notifications