• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜೆಡಿಎಸ್ ಕೋರ್ ಕಮಿಟಿಯ ಕಾರ್ಯಗಳೇನು?

|

ಬೆಂಗಳೂರು, ನ.14 : ಗುರುವಾರ ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಎಚ್.ಡಿ.ಕುಮಾರಸ್ವಾಮಿ ಅವರು ಇಂದು ಪಕ್ಷದ ಕೋರ್ ಕಮಿಟಿ ಸದಸ್ಯರೊಂದಿಗೆ ಸಭೆ ನಡೆಸಿದರು. ಕೋರ್ ಕಮಿಟಿ ಕಾರ್ಯಗಳ ಬಗ್ಗೆ ಸಭೆಯಲ್ಲಿ ವಿವರವಾಗಿ ಚರ್ಚಿಸಿ ರೂಪುರೇಷೆಗಳನ್ನು ತಯಾರಿಸಲಾಯಿತು.

ಶುಕ್ರವಾರ ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕೋರ್ ಕಮಿಟಿ ಸದಸ್ಯರಾದ ಬಂಡೆಪ್ಪ ಕಾಶೆಂಪುರ್, ಸಿ.ಎಸ್.ಪುಟ್ಟರಾಜು, ಅಪ್ಸರ್ ಆಗಾ, ವೆಂಕಟಶಿವಾರೆಡ್ಡಿ, ಡಾ.ಸುಬ್ರಮಣ್ಯ, ಮಧು ಬಂಗಾರಪ್ಪ ಮತ್ತು ಸಿರಿವಂತ ಪಾಟೀಲ್ ಭಾಗವಹಿಸಿದ್ದರು.

ಬಸವರಾಜ ಹೊರಟ್ಟಿ ರವರು ಮುಂಬೈ ಪ್ರವಾಸದಲ್ಲಿದ್ದು ಅವರು ಪಾಲ್ಗೊಂಡಿರಲಿಲ್ಲ. ಪೂರ್ವ ನಿಯೋಜಿತ ಕಾರ್ಯಕ್ರಮಗಳಿಂದಾಗಿ ಹೆಚ್.ಕೆ.ಕುಮಾರಸ್ವಾಮಿ, ವೆಂಕಟರಾವ್ ನಾಡಗೌಡ ಮತ್ತು ಚಿಕ್ಕಮಾಧು ಅವರು ಸಭೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಿಲ್ಲ ಎಂದು ಪೂರ್ವಾನುಮತಿ ಪಡೆದಿದ್ದರು.

ಸಭೆಯಲ್ಲಿ ತೆಗೆದುಕೊಳ್ಳುವ ತೀರ್ಮಾನಗಳಿಗೆ ಎಲ್ಲರೂ ಬದ್ಧರಾಗಿರುತ್ತೇವೆ ಎಂದು ಸಭೆಗೆ ಗೈರು ಹಾಜರಾದ ಎಲ್ಲಾ ಸದಸ್ಯರು ತಿಳಿಸಿದ್ದರು. ಸಭೆಯ ನಂತರ ಕೋರ್ ಕಮಿಟಿ ಮಾರ್ಗಸೂಚಿಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಲಾಗಿದ್ದು ಅವುಗಳು ಹೀಗಿವೆ. [ಕುಮಾರಸ್ವಾಮಿ ಮುಂದಿರುವ ಐದು ಸವಾಲುಗಳು]

* ಜೆಡಿಎಸ್ 11 ಸದಸ್ಯರ ಕೋರ್ ಕಮಿಟಿಯನ್ನು ರಚಿಸಿದೆ. ಈ ಸಮಿತಿಗೆ ಸಂಚಾಲಕರೊಬ್ಬರನ್ನು ನೇಮಿಸುವ ಮೂಲಕ ಸಮಿತಿಯ ಸಭೆ ಕರೆದು ಪಕ್ಷದ ರಾಜಕೀಯ ನಿಲುವು, ಒಲವು ಹಾಗೂ ಪಕ್ಷ ಸಂಘಟನೆಯ ಬಗ್ಗೆ ಚರ್ಚೆ ನಡೆಸಿ, ನಡಾವಳಿಯ ನಿರ್ಧಾರವನ್ನು ಅನುಷ್ಠಾನಗೊಳಿಸುವ ಅಧಿಕಾರ ನೀಡಲಾಗಿದೆ.

* ಕೋರ್ ಕಮಿಟಿಯು ಪ್ರತಿ ತಿಂಗಳು ಕಡ್ಡಾಯವಾಗಿ ಸಭೆ ಸೇರುವುದು, ವಿಷಯಾಧರಿತ ತುರ್ತು ಸಂಧರ್ಭದಲ್ಲಿ ತಕ್ಷಣವೇ ಸಭೆ ಸೇರುವುದು. ವಿಶೇಷ ಸಂದರ್ಭಗಳಲ್ಲಿ ಕೋರ್ ಕಮಿಟಿ ಸದಸ್ಯರು ಪರಸ್ಪರ ದೂರವಾಣಿ ಮೂಲಕ ಚರ್ಚಿಸಿ ವಿದ್ಯಮಾನಗಳ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸುವುದು.

* ಪಕ್ಷದ ಬಲವರ್ಧನೆಗೆ ಸಂಬಂಧಿಸಿದಂತೆ ವಿಷಯ ಪ್ರಸ್ತಾಪಿಸಿ ಸಂಘಟನಾತ್ಮಕವಾಗಿ ಹಾಗೂ ಸಾಮೂಹಿಕ ನಾಯಕತ್ವದಲ್ಲಿ ಪಕ್ಷವನ್ನು ತಳಮಟ್ಟದಿಂದ ಕಟ್ಟಲು ಕಾರ್ಯಸೂಚಿ ರೂಪಿಸಿ ಅನುಷ್ಠಾನಗೊಳಿಸುವುದು. ಕೋರ್ ಕಮಿಟಿ ಸಭೆಯನ್ನು ಬೆಂಗಳೂರಿಗೆ ಸೀಮಿತಗೊಳಿಸದೆ ಬೆಳಗಾವಿ, ಕಲಬುರಗಿ, ಹುಬ್ಬಳ್ಳಿ, ಮಂಗಳೂರು, ಮೈಸೂರು ನಗರಗಳಲ್ಲಿ ನಡೆಸುವುದು.

* ಜಿಲ್ಲಾವಾರು ಪ್ರವಾಸದ ವೇಳೆ ಕೋರ್ ಕಮಿಟಿಯ ಸಭೆಗೆ ಆಯಾ ಜಿಲ್ಲೆಯ ಪಕ್ಷದ ಶಾಸಕರು ವಿಶೇಷ ಆಹ್ವಾನಿತರಾಗಿರುತ್ತಾರೆ. ಪಕ್ಷದ ಸಂಸದೀಯ ಮಂಡಳಿ ಹಾಗೂ ರಾಜಕೀಯ ವ್ಯವಹಾರಗಳ ಸಮಿತಿಯೊಂದಿಗೆ ಕೋರ್ ಕಮಿಟಿಯು ಕಾಲಕಾಲಕ್ಕೆ ಸಭೆ ಸೇರಿ ಪಕ್ಷದ ವಿದ್ಯಮಾನಗಳ ಬಗ್ಗೆ ಚರ್ಚಿಸುವುದು.

* ಪಕ್ಷವು ಸದನದ ಒಳಗೆ ಮತ್ತು ಹೊರಗೆ ಸಾರ್ವಜನಿಕ ಹಿತಾಸಕ್ತಿಯ ವಿಷಯಗಳ ಮೇಲೆ ಹೋರಾಟದ ರೂಪುರೇಷೆ ನಿರ್ಧರಿಸುವ ಬಗ್ಗೆ ಶಾಸಕಾಂಗ ಪಕ್ಷಕ್ಕೆ ಸೂಕ್ತ ಮಾರ್ಗದರ್ಶನ ನೀಡುವುದು. ಪಕ್ಷದ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳು ಮತ್ತು ಪರಾಜಿತ ಅಭ್ಯರ್ಥಿಗಳೊಂದಿಗೆ ನಿಕಟ ಸಂಪರ್ಕ ಸಾಧಿಸುವುದು.

* ಪಕ್ಷದ ಬಲವರ್ಧನೆಗೆ ವಿಷಯಾಧರಿತವಾಗಿ ಕಾಲಕಾಲಕ್ಕೆ ಮಾರ್ಗದರ್ಶನ ನೀಡುವುದು. ಜನರ ಸಮಸ್ಯೆಗಳ ಬಗ್ಗೆ ಹೋರಾಟದ ರೂಪುರೇಷೆ ನಿರ್ಧರಿಸಿ, ಏಕಕಾಲಕ್ಕೆ ರಾಜ್ಯಾದ್ಯಂತ ಪ್ರತಿಭಟನೆಯ ವೇದಿಕೆ ರೂಪಿಸುವುದು.

* ಕೋರ್ ಕಮಿಟಿಯು ನಿಯಮಿತವಾಗಿ ಸಭೆ ಸೇರಿ ಪಕ್ಷದ ಎಲ್ಲಾ ವಿದ್ಯಮಾನಗಳನ್ನು ಪರಿಶೀಲಿಸಿ, ಮುಕ್ತವಾಗಿ ಚರ್ಚಿಸಿದ ನಂತರ ಒಟ್ಟಾರೆ ಮೂಡಿಬಂದ ಒಮ್ಮತಾಭಿಪ್ರಾಯವನ್ನು ಪಕ್ಷದ ರಾಜ್ಯಾಧ್ಯಕ್ಷರು ಹಾಗೂ ರಾಷ್ಟ್ರೀಯ ಅಧ್ಯಕ್ಷರ ಗಮನಕ್ಕೆ ತರುವುದು.

* ಚುನಾವಣಾ ಸಂದರ್ಭಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಗೆ ಮೊದಲು ತಾಲ್ಲೂಕು ಹಾಗೂ ಜಿಲ್ಲಾ ಘಟಕಗಳಿಂದ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯನ್ನು ಕಡ್ಡಾಯವಾಗಿ ತರಿಸಿಕೊಳ್ಳುವುದು. ನಂತರ ಕೋರ್ ಕಮಿಟಿ ಸಭೆಯಲ್ಲಿ ಚರ್ಚಿಸಿ ಒಮ್ಮತದ ನಿರ್ಧಾರ ತೆಗೆದುಕೊಳ್ಳುವುದು.

* ಅನ್ಯ ಪಕ್ಷದ ನಾಯಕರು ಪಕ್ಷ ಸೇರ್ಪಡೆಗೆ ಮುಂದಾದಾಗ ಸ್ಥಳೀಯ ಘಟಕಗಳ ಅಭಿಪ್ರಾಯ ಪಡೆದು, ಕೋರ್ ಕಮಿಟಿಯಲ್ಲಿ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳುವುದು. ಪಕ್ಷದ ನಾಯಕರು ಶಿಸ್ತಿನ ಗಡಿ ದಾಟಿದರೆ ಅಂತಹವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳುವುದು.

* ಪಕ್ಷ ಸಂಘಟನೆಗೆ ನಿಯಮಿತವಾಗಿ ರಾಜ್ಯ ಪ್ರವಾಸ ನಡೆಸಬೇಕು. ಈ ವೇಳೆ ಕೋರ್ ಕಮಿಟಿಯ ಅರ್ಧದಷ್ಟು ಸದಸ್ಯರು ಭಾಗಿಯಾಗುವುದು. ಪ್ರತಿ ಕೋರ್ ಕಮಿಟಿ ಸಭೆಯ ನಂತರ ವಕ್ತಾರರೊಬ್ಬರು ಮಾಧ್ಯಮಗಳಿಗೆ ಮಾಹಿತಿ ನೀಡುವುದು.

* ಪಕ್ಷದ ವಿವಿಧ ಘಟಕಗಳಿಗೆ ಮಾರ್ಗದರ್ಶನ, ತರಬೇತಿ ಹಾಗೂ ಕಾಲಕಾಲಕ್ಕೆ ರಾಜಕೀಯ ಹೋರಾಟಗಳನ್ನು ರೂಪಿಸುವುದು. ವಿಭಾಗವಾರು ಸಭೆ ನಡೆಸುವ ಕೋರ್ ಕಮಿಟಿ ಸರ್ಕಾರದ ಯೋಜನೆಗಳ ಅನುಷ್ಠಾನದ ಲೋಪ ಹಾಗೂ ಭ್ರಷ್ಠಾಚಾರದ ಬಗ್ಗೆ ಪಕ್ಷದ ಕಾರ್ಯಕರ್ತರಿಗೆ, ನಾಯಕರಿಗೆ ಮನವರಿಕೆ ಮಾಡಿಕೊಡುವುದಲ್ಲದೇ ಮಾಧ್ಯಮಗಳಿಗೂ ಮಾಹಿತಿ ನೀಡುವುದು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka Pradesha Janata Dal (Secular) party core committee meeting held in Bengaluru on Friday, November 14. Here is core committee guidelines and responsibilities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more