JDS Candidates 3rd List: ಜೆಡಿಎಸ್ 3ನೇ ಪಟ್ಟಿ ಬಿಡುಗಡೆ; ಶಿವಮೊಗ್ಗದಲ್ಲಿ ಬಿಜೆಪಿಗೆ ಪ್ರಬಲ ಪ್ರತಿಸ್ಪರ್ಧಿ
2023ರ ಕರ್ನಾಟಕ ವಿಧಾನಸಭಾ ಚುನಾವಣೆಗಾಗಿ ಜೆಡಿಎಸ್ ಪಕ್ಷ ತನ್ನ ಅಭ್ಯರ್ಥಿಗಳ ಮೂರನೇ ಪಟ್ಟಿ ಇಂದು (ಬುಧವಾರ, ಏಪ್ರಿಲ್ 19) ಬಿಡುಗಡೆ ಮಾಡಿದೆ. ನಾಮಪತ್ರ ಒಂದು ದಿನ ಬಾಕಿ ಇರುವಾಗ ಜೆಡಿಎಸ್ ತನ್ನ ಅಭ್ಯರ್ಥಿಗಳನ್ನು ಪ್ರಕಟಿಸಿದೆ.
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಜೆಡಿಎಸ್ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಅಸಮಾಧಾನಿತರಿಗೆ ಮಣೆ ಹಾಕಲಾಗಿದೆ. ಈಗಾಗಲೇ 2 ಪಟ್ಟಿಯನ್ನು ಬಿಡುಗಡೆ ಮಾಡಿರುವ ಜೆಡಿಎಸ್ ಇದೀಗ ಉಳಿದ 59 ಕ್ಷೇತ್ರಗಳಿಗೆ ಜೆಡಿಎಸ್ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ.

ಇದಕ್ಕೂ ಮೊದಲು ಜೆಡಿಎಸ್ ತನ್ನ ಮೊದಲ ಪಟ್ಟಿಯಲ್ಲಿ 93 ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದರೆ, ಎರಡನೇ ಪಟ್ಟಿಯಲ್ಲಿ 49 ಅಭ್ಯರ್ಥಿಗಳನ್ನು ಘೋಷಣೆ ಮಾಡಿತ್ತು. ಇದೀಗ ಮಂಡ್ಯ, ನಿಪ್ಪಾಣಿ, ಚಿಕ್ಕೋಡಿ, ಕಾಗವಾಡ, ಹುಕ್ಕೇರಿ ಸೇರಿದಂತೆ 59 ಕ್ಷೇತ್ರಗಳ ಟಿಕೆಟ್ ಘೋಷಣೆಯಾಗಿದೆ.
ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ
| ಅಭ್ಯರ್ಥಿ | ಕ್ಷೇತ್ರ |
| ನಿಪ್ಪಾಣಿ | ರಾಜು ಮಾರುತಿ ಪವಾರ್ |
| ಚಿಕ್ಕೋಡಿ | ಸದಾಶಿವ ವಾಳಕೆ |
| ಕಾಗವಾಡ | ಮಲ್ಲಪ್ಪ ಎಂ ಚುಂಗ |
| ಹುಕ್ಕೇರಿ | ಬಸವರಾಜಗೌಡ ಪಾಟೀಲ್ |
| ಅರಭಾವಿ | ಪ್ರಕಾಶ ಕಾಸಶೆಟ್ಟಿ |
| ಶಿವಮೊಗ್ಗ ನಗರ | ಆಯನೂರು ಮಂಜುನಾಥ್ |
| ಯಮಕನಮರಡಿ | ಮಾರುತಿ ಮಲ್ಲಪ್ಪ ಅಷ್ಟಗಿ |
| ಬೆಳಗಾವಿ ಉತ್ತರ | ಶಿವಾನಂದ ಮುಗಲಿಹಾಳ್ |
| ಬೆಳಗಾವಿ ದಕ್ಷಿಣ ಕ್ಷೇತ್ರ | ಶ್ರೀನಿವಾಸ್ ತೋಳಲ್ಕರ್ |
| ಬೆಳಗಾವಿ ಗ್ರಾಮೀಣ | ಶಂಕರಗೌಡ ರುದ್ರಗೌಡ ಪಾಟೀಲ್ |
| ರಾಮದುರ್ಗ | ಪ್ರಕಾಶ್ ಮುಧೋಳ |
| ಮುಧೋಳ | ಧರ್ಮರಾಜ ವಿಠಲ್ ದೊಡ್ಮನಿ |
| ತೇರದಾಳ | ಸುರೇಶ್ ಅರ್ಜುನ್ ಮಡಿವಾಳರ್ |
| ಜಮಖಂಡಿ | ಯಾಕೂಬ್ ಬಾಬಾಲಾಲ್ |
| ಬೀಳಗಿ | ರುಕ್ಮುದ್ದೀನ್ ಸೌದುಗರ್ |
| ಬಾಗಲಕೋಟೆ | ದೇವರಾಜ್ ಪಾಟೀಲ್ |
| ಹುನಗುಂದ | ಶಿವಪ್ಪ ಮಾದೇವಪ್ಪ ಮನಗುಂದಿ |
| ವಿಜಯಪುರ ನಗರ | ಬಂಡೆ ನವಾಜ್ |
| ಸುರಪುರ | ಶ್ರವಣ್‌ಕುಮಾರ್ ನಾಯಕ್ |
| ಕಲಬುರಗಿ | ಕೃಷ್ಣಾರೆಡ್ಡಿ |
| ಔರಾದ್ | ಜಯಸಿಂಗ್ ರಾಥೋಡ್ |
| ರಾಯಚೂರು ನಗರ | ವಿನಯಕುಮಾರ್ |
| ಮಸ್ಕಿ | ರಾಘವೇಂದ್ರ ನಾಯಕ |
| ಕನಕಗಿರಿ | ರಾಜಗೋಪಾಲ್ |
| ಯಲಬುರ್ಗಾ | ಮಲ್ಲನಗೌಡ ಸಿದ್ದಪ್ಪ ಕೋಣನಗೌಡ |
| ಕೊಪ್ಪಳ | ಚಂದ್ರಶೇಖರ್ |
| ಶಿರಹಟ್ಟಿ | ರುದ್ರಗೌಡ |
| ನವಲಗುಂದ | ಕಲ್ಲಪ್ಪ ನಾಗಪ್ಪ ರೆಡ್ಡಿ |
| ಕುಂದಗೋಳ | ಹಜರತ್ ಅಲಿ ಅಲ್ಲಾಸಾಬ್ |
| ಧಾರವಾಡ | ಮಂಜುನಾಥ್ ಲಕ್ಷ್ಮಣ್ |
| ಹುಬ್ಬಳ್ಳಿ-ಧಾರವಾಡ (ಕೇಂದ್ರ) | ಸಿದ್ದಲಿಂಗೇಶ್ ಗೌಡ |
| ಹುಬ್ಬಳ್ಳಿ-ಧಾರವಾಡ | ಗುರುರಾಜ ಹುಣಸಿಮರದ |
| ಕಲಘಟಗಿ | ವೀರಪ್ಪ ಬಸಪ್ಪ ಶೀಗೆಹಟ್ಟಿ |
| ಹಾವೇರಿ | ತುಕಾರಾಂ ಮಾಳಗಿ |
| ಬ್ಯಾಡಗಿ | ಸುನೀತಾ ಎಂ ಪೂಜಾರ್ |
| ಕೂಡ್ಲಿಗಿ | ಕೋಡಿಹಳ್ಳಿ ಭೀಮಪ್ಪ |
| ಚಿತ್ರದುರ್ಗ | ರಘು ಆಚಾರ್ |
| ಹೊಳಲ್ಕೆರೆ | ಇಂದ್ರಜಿತ್ ನಾಯ್ಕ್ |
| ಜಗಳೂರು | ದೇವರಾಜ್ |
| ಶಿವಮೊಗ್ಗ ನಗರ | ಆಯನೂರು ಮಂಜುನಾಥ್ |
| ಸೊರಬ | ಬಾಸೂರು ಚಂದ್ರೇಗೌಡ |
| ಸಾಗರ | ಕಿಶೋರ್ |
| ರಾಜರಾಜೇಶ್ವರಿ ನಗರ | ಡಾ. ನಾರಾಯಣಸ್ವಾಮಿ |
| ಮಲ್ಲೇಶ್ವರಂ | ಉತ್ಕರ್ಷ |
| ಚಾಮರಾಜಪೇಟೆ | ಗೋವಿಂದರಾಜು |
| ಚಿಕ್ಕಪೇಟೆ | ಇಮ್ರಾನ್ ಪಾಷಾ |
| ಪದ್ಮನಾಭನಗರ | ಬಿ ಮಂಜುನಾಥ್ |
| ಬಿಟಿಎಂ ಲೇಔಟ್ | ವೆಂಕಟೇಶ್ |
| ಜಯನಗರ | ಕಾಳೇಗೌಡ |
| ಮೊಮ್ಮನಹಳ್ಳಿ | ನಾರಾಯಣರಾಜು |
| ಅರಸೀಕೆರೆ | ಎನ್ ಆರ್ ಸಂತೋಷ್ |
| ಮೂಡಬಿದಿರೆ | ಅಮರಶ್ರೀ |
| ಸುಳ್ಯ | ವೆಂಕಟೇಶ್ ಎಚ್. ಎನ್ |
| ವಿರಾಜಪೇಟೆ | ಮನ್ಸೂರ್ ಅಲಿ |
| ಚಾಮರಾಜ | ಎಚ್ ಕೆ ರಮೇಶ್ |
| ನರಸಿಂಹರಾಜ | ಅಬ್ದುಲ್ ಖಾದರ್ ಶಾಹಿದ್ |
| ಚಾಮರಾಜನಗರ | ಮಲ್ಲಿಕಾರ್ಜುನ್ ಸ್ವಾಮಿ |
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣಾ ಕ್ಷೇತ್ರದಲ್ಲಿ ಕೊನೆಯ ಕ್ಷಣದಲ್ಲಿ ಅಭ್ಯರ್ಥಿ ಬದಲಾವಣೆ ಮಾಡಲಾಗಿದೆ. ಮೈಸೂರು ಜಿಲ್ಲೆಯ ವರುಣಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಭಾರತಿ ಶಂಕರ್ ಅವರನ್ನು ಘೋಷಿಸಲಾಗಿದೆ.
ಇನ್ನು ಮಂಡ್ಯದ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯನ್ನು ಬದಲಾಯಿಸಲಾಗಿದೆ. ಸ್ವತಃ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರೇ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಹಾಲಿ ಶಾಸಕ ಎಂ ಶ್ರೀನಿವಾಸ್ ಬದಲಿಗೆ ಮನ್ಮುಲ್ ಅಧ್ಯಕ್ಷ ರಾಮಚಂದ್ರ ಅವರಿಗೆ ಜೆಡಿಎಸ್ ಟಿಕೆಟ್ ನೀಡಲಾಗಿದೆ.
ಬಿಜೆಪಿಗೆ ರಾಜೀನಾಮೆ ನೀಡಿರುವ ಆಯನೂರು ಮಂಜುನಾಥ್ ಅವರಿಗೆ ಶಿವಮೊಗ್ಗ ನಗರದಿಂದ ಟಿಕೆಟ್ ಸಿಕ್ಕಿದ್ದರೆ, ಎನ್.ಆರ್ ಸಂತೋಷ್‌ಗೆ ಅರಸೀಕೆರೆ ಕ್ಷೇತ್ರದ ಟಿಕೆಟ್ ಘೋಷಣೆಯಾಗಿದೆ. ಇನ್ನು ಕಾಂಗ್ರೆಸ್‌ನಿಂದ ಬಂದಿರುವ ಮಾಜಿ ಎಂಎಲ್‌ಸಿ ರಘು ಆಚಾರ್‌ಗೆ ಚಿತ್ರದುರ್ಗ ಕ್ಷೇತ್ರದ ಟಿಕೆಟ್ ನೀಡಲಾಗಿದೆ.
ಮೈಸೂರು ಜಿಲ್ಲೆಯ ನಂಜನಗೂಡು ಕ್ಷೇತ್ರಕ್ಕೆ ಜೆಡಿಎಸ್ ಟಿಕೆಟ್ ಘೋಷಿಸಿದೆ, ಮಾಜಿ ಸಂಸದ ದಿವಂಗತ ಧ್ರುವನಾರಾಯಣ ಪುತ್ರ ದರ್ಶನ್ ಅವರಿಗೆ ಬೆಂಬಲ ಘೋಷಿಸಿದೆ.
ಕಲಬುರಗಿ ಗ್ರಾಮೀಣ, ಬಾಗೇಪಲ್ಲಿ, ಕೆಆರ್ ಪುರಂ ಕ್ಷೇತ್ರಗಳಲ್ಲಿ ಸಿಪಿಐ(ಎಂ) ಅಭ್ಯರ್ಥಿಗಳಿಗೆ ಬೆಂಬಲ ನೀಡಿದ್ದರೆ, ಬೆಂಗಳೂರಿನ ಸಿವಿ ರಾಮನ್ ನಗರ, ವಿಜಯನಗರ ಮತ್ತು ಮಹಾದೇವಪುರ ಕ್ಷೇತ್ರಗಳಲ್ಲಿ ಆರ್‌ಪಿಐ ಪಕ್ಷಕ್ಕೆ ಬೆಂಬಲ ನೀಡಲು ಜೆಡಿಎಸ್ ನಿರ್ಧರಿಸಿದೆ.












Click it and Unblock the Notifications