Karnataka Industry: ರಾಜ್ಯದ ಈ ಜಿಲ್ಲೆಯಲ್ಲಿ ತಂತ್ರಜ್ಞಾನ ಆಧಾರಿತ ಉದ್ಯಮ ಕೇಂದ್ರ ಆರಂಭ

ಬೆಂಗಳೂರು, ನವೆಂಬರ್ 15: ಕರ್ನಾಟಕದಲ್ಲಿ ಅದರಲ್ಲೂ ಉತ್ತರ ಕರ್ನಾಟಕಕ್ಕೆ ಒಂದಷ್ಟು ಬಂಡವಾಳ ಹೂಡಿಕೆ ಹರಿದು ಬರುತ್ತಿದೆ. ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ವಿಜಯಪುರದಲ್ಲಿ ವಿದೇಶಿ ಕಂಪನಿಗಳು ಹೂಡಿಕೆಗೆ ಮುಂದಾಗಿವೆ. ಈ ಪೈಕಿ ಜಪಾನ್ ಮೂಲದ ನೈಡೆಕ್ ಕಂಪನಿಯು ಧಾರವಾಡದ ಬೇಲೂರು ಕೈಗಾರಿಕಾ ಪ್ರದೇಶದಲ್ಲಿ ಸ್ಥಾಪಿಸಿರುವ 'ಆರ್ಚರ್ಡ್ ಹಬ್' ಕಾರ್ಯಾಚರಣೆ ಆರಂಭಿಸಿದೆ.

ಶನಿವಾರ ಈ "ಆರ್ಚರ್ಡ್ ಹಬ್'ಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ‌.ಬಿ. ಪಾಟೀಲ ಅವರು ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಈ ಘಟಕಕ್ಕಾಗಿ ಜಪಾನ್ ಮೂಲದ ನೈಡೆಕ್ ಕಂಪನಿ 600 ಕೋಟಿ ರೂಪಾಯಿ ಹೂಡಿಕೆ ಮಾಡಿದೆ. ನೈಡೆಕ್ ಕಂಪನಿಯ ಈ ಸಂಸ್ಥೆಯ ಸ್ಥಾಪನೆಗೆ ಐದು ತಿಂಗಳ ಹಿಂದೆ ನಾನೇ ಭೂಮಿಪೂಜೆ ನೆರವೇರಿಸಿದ್ದೆ. ಕಂಪನಿಯು ಕೇಳಿದ್ದ ಸವಲತ್ತುಗಳನ್ನೆಲ್ಲ ನಮ್ಮ ಸರ್ಕಾರ ಒದಗಿಸಿದೆ. ಇದಕ್ಕೆ ತಕ್ಕಂತೆ ಕಂಪನಿಯು ಕ್ಷಿಪ್ರಗತಿಯಲ್ಲಿ ಇಷ್ಟೊಂದು ಅಗಾಧ ಬಂಡವಾಳ ಹೂಡಿ, ಈ ಆಧುನಿಕ ಕೇಂದ್ರವನ್ನು ಸ್ಥಾಪಿಸಿದ್ದು ಸ್ಪೂರ್ತಿದಾಯಕ ಎಂದು ಬಣ್ಣಿಸಿದರು.

Japan base Nidec Company s Orchard Hub has begins Operations at Dharwad MB Patil

ತಂತ್ರಜ್ಞಾನ ಆಧಾರಿತ ಉದ್ಯಮ ಕೇಂದ್ರ

ನೈಡೆಕ್ ಕಂಪನಿಯ ಆರ್ಚರ್ಡ್ ಹಬ್ ನಾವೀನ್ಯತೆ ಮತ್ತು ತಂತ್ರಜ್ಞಾನ ಆಧಾರಿತ ಉದ್ಯಮ ಕೇಂದ್ರವಾಗಿದೆ. ಇಲ್ಲಿ ಹೊಸ ಹೊಸ ಔದ್ಯಮಿಕ ಕಲ್ಪನೆಗಳು ಮತ್ತು ಸಂಶೋಧನೆ ಜೊತೆಗೂಡಲಿವೆ. ಅಂತಿಮವಾಗಿ ಇದು ಕೈಗಾರಿಕಾ ಅಭಿವೃದ್ಧಿಗೆ ಪೂರಕ ವಾತಾವರಣ ನಿರ್ಮಿಸಲಿದೆ.

ಜಪಾನಿನ ಕಂಪನಿಯೊಂದು ಕರ್ನಾಟಕ ಉತ್ತರ ಭಾಗದಲ್ಲಿ ಬೃಹತ್ ಹೂಡಿಕೆ ಇದಾಗಿದೆ. ಇದರಿಂದ ಈ ಭಾಗಗಳಲ್ಲಿ ಸಾಕಷ್ಟು ಉದ್ಯೋಗ ಸೃಷ್ಟಿ ಕೂಡ ಆಗಲಿದೆ. ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸ್ಥಳೀಯರಿಗೆ ಲಾಭವಾಗಲಿದೆ. ರಾಜ್ಯ ಸರ್ಕಾರ ಸಹ ತನ್ನ ಹೊಸ ಕೈಗಾರಿಕಾ ನೀತಿಯಲ್ಲಿ ಬೆಂಗಳೂರನ್ನು ಹೊರತುಪಡಿಸಿ ಬೇರೆ ಬೇರೆ ಭಾಗಗಳಲ್ಲಿ ಉದ್ಯಮ ಸ್ಥಾಪಿಸುವಂತೆ ಹಲವು ರಚನಾತ್ಮಕ ಕ್ರಮಗಳನ್ನು ಅಳವಡಿಸಲಾಗಿದೆ. ಈ ಮೂಲಕ ಸರ್ಕಾರ ಬೇರೆ ಜಿಲ್ಲೆಗಳಿಗೂ ಆದ್ಯತೆ ನೀಡುತ್ತಿದೆ ಎಂದರು.

ಕರ್ನಾಟಕದಲ್ಲಿ ನೈಡೆಕ್ ಕಂಪನಿ ಸೇರಿದಂತೆ ಜಪಾನಿನ ಹಲವು ಕಂಪನಿಗಳು ಬಂಡವಾಳ ಹೂಡಿ ನೆಲೆಯೂರಿವೆ. ನಮ್ಮಲ್ಲಿ ಜಪಾನಿನ ಕೈಗಾರಿಕಾ ಟೌನ್ ಶಿಪ್ ಕೂಡ ಇದೆ. ತಾವು ಇತ್ತೀಚಿಗೆ ಜಪಾನಿಗೆ ಭೇಟಿ ನೀಡಿದಾಗ ರಾಜ್ಯಕ್ಕೆ 4,500 ಕೋಟಿ ರೂಪಾಯಿಗಳ ಬಂಡವಾಳ ಹೂಡಿಕೆ ಮಾಡುವುದು ಖಚಿತವಗಿದೆ. ನಾನು ಈ ಹಿಂದೆ ಜಪಾನ್ ಮತ್ತು ದಕ್ಷಿಣ ಕೊರಿಯಾ ಭೇಟಿಯಲ್ಲಿ ಕೂಡ 6,000 ಕೋಟಿ ರೂಪಾಯಿ ಹೂಡಿಕೆ ಮಾಡಲು ಒಪ್ಪಿಗೆ ನೀಡಿತ್ತು ಎಂದು ಸ್ಮರಿಸಿದರು.

ಮುಂದಿನ ವರ್ಷ 2026ರಲ್ಲಿ ಸಚಿವ ಎಂ.ಬಿ. ಪಾಟೀಲ್ ಅವರು ಬಂಡವಾಳ ಆಕರ್ಷಣೆ ಸೇರಿದಂತೆ ಇತರ ಕೈಗಾರಿಕೆ ಉದ್ದೇಶಗಳಿಗಾಗಿ ಸಿಂಗಾಪುರ ದೇಶಕ್ಕೆ ಭೇಟಿ ನೀಡಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+