ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾಮಿಯಾ ಮಸೀದಿ ವಿವಾದ: ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಬಜರಂಗದಳ

|
Google Oneindia Kannada News

ಬೆಂಗಳೂರು, ನ.17: ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ಜಾಮಿಯಾ ಮಸೀದಿ ವಿವಾದ ಹೈಕೋರ್ಟ್ ಮೆಟ್ಟಿಲೇರಿದೆ. ಈ ಹಿಂದೆ ಇಲ್ಲಿ ಹನುಮಂತನ ದೇವಾಲಯವಿತ್ತು ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.

ಜಾಮಿಯಾ ಮಸೀದಿ ತೆರವಿಗೆ ಆಗ್ರಹಿಸಿ ಬಜರಂಗದಳದ ಕಾರ್ಯಕರ್ತರು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಈ ಮೂಲಕ ಮತ್ತೆ ಜಾಮಿಯಾ ಮಸೀದಿ ವಿವಾದ ಮುನ್ನೆಲೆಗೆ ಬಂದಿದೆ.

ಜಾಮಿಯಾ ಮಸೀದಿ ವಿರುದ್ಧ ಹನುಮಂತನ ಹೆಸರಿನಲ್ಲಿ 108 ಭಕ್ತರಿಂದ ಹೈಕೋಟ್‌ನಲ್ಲಿ ದಾವೆಜಾಮಿಯಾ ಮಸೀದಿ ವಿರುದ್ಧ ಹನುಮಂತನ ಹೆಸರಿನಲ್ಲಿ 108 ಭಕ್ತರಿಂದ ಹೈಕೋಟ್‌ನಲ್ಲಿ ದಾವೆ

ಮಸೀದಿಯು ಒಂದು ಕಾಲದಲ್ಲಿ ಹಿಂದೂ ದೇವಾಲಯವಾಗಿತ್ತು ಎಂಬುದಕ್ಕೆ ಪುರಾವೆಗಳಿವೆ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಬಜರಂಗದಳ ಹೇಳಿಕೊಂಡಿದೆ.

Jamia Mosque row: Bajarang dal sabmits PIL to HC, demands to vacate

"ಮಂಡ್ಯ ಜಿಲ್ಲೆಯ ಐತಿಹಾಸಿಕ ಶ್ರೀರಂಗಪಟ್ಟಣ ಪಟ್ಟಣದ ಜಾಮಿಯಾ ಮಸೀದಿಯಲ್ಲಿ ಹಿಂದೂ ದೇವರುಗಳು ಮತ್ತು ದೇವಾಲಯದ ರಚನೆಯ ಕುರುಹುಗಳಿವೆ. ಆದ್ದರಿಂದ ಮಸೀದಿಯನ್ನು ಕೂಡಲೇ ತೆರವುಗೊಳಿಸಬೇಕು. ಮಸೀದಿಯ ಆವರಣದಲ್ಲಿರುವ ಕಲ್ಯಾಣಿಯಲ್ಲಿ ಹಿಂದೂ ಭಕ್ತರಿಗೆ ಸ್ನಾನ ಮಾಡಲು ಅವಕಾಶ ನೀಡಬೇಕು" ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಅರ್ಜಿಯಲ್ಲಿ ಜ್ಞಾನವಾಪಿ ಮಸೀದಿ ಮಾದರಿಯಲ್ಲಿಯೇ ಜಾಮಿಯಾ ಮಸೀದಿಯನ್ನು ಮರುಪರಿಶೀಲಿಸುವಂತೆ ಬಜರಂಗದಳದ ಕಾರ್ಯಕರ್ತರು ಒತ್ತಾಯಿಸಿದ್ದಾರೆ. ಬಜರಂಗದಳದ ರಾಜ್ಯಾಧ್ಯಕ್ಷ ಮಂಜುನಾಥ್ ಸೇರಿದಂತೆ 108 ಹನುಮಂತನ ಭಕ್ತರು ಮನವಿ ಸಲ್ಲಿಸಿದ್ದಾರೆ.

ಕೆಲ ತಿಂಗಳ ಹಿಂದೆಯಷ್ಟೇ ಬಜರಂಗದಳದ ಕಾರ್ಯಕರ್ತರು ಶ್ರೀರಂಗಪಟ್ಟಣದಲ್ಲಿ ಬೃಹತ್ ಪ್ರತಿಭಟನೆಯನ್ನೂ ಮಾಡಿದ್ದರು. ಜಾಮೀಯಾ ಮಸೀದಿಯಲ್ಲ ಅದು ಹನುಮ ಮಂದಿರ ಎಂದು ಹೋರಾಟಗಾರರು ವಾದಿಸಿದ್ದರು. ಮಸೀದಿ ಜಾಗ ಹಿಂದೂಗಳಿಗೆ ಮರಳಿ ನೀಡುವಂತೆ ಸರಕಾರಕ್ಕೆ ಗಡುವು ನೀಡಿದ್ದರು. ಆದರೆ ಸರಕಾರದಿಂದ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಹಿಂದೂ ಸಂಪ್ರದಾಯದಲ್ಲಿ 108 ಸಂಖ್ಯೆಯನ್ನು ಮಂಗಳಕರವೆಂದು ಪರಿಗಣಿಸಲಾಗಿದೆ ಮತ್ತು ಆದ್ದರಿಂದ, 108 ಭಕ್ತರು ಪಕ್ಷಗಳಾಗಿ ಮಾರ್ಪಟ್ಟಿದ್ದಾರೆ ಎಂದು ಬಜರಂಗದಳ ಮೂಲಗಳು ವಿವರಿಸುತ್ತವೆ.

Jamia Mosque row: Bajarang dal sabmits PIL to HC, demands to vacate

ಮೈಸೂರು ಗೆಜೆಟಿಯರ್, ಮಸೀದಿಯಲ್ಲಿನ ಹಿಂದೂ ವಾಸ್ತುಶಿಲ್ಪ, ಹಿಂದೂ ವಿಗ್ರಹಗಳ ಶಾಸನ, ಪವಿತ್ರ ಜಲಮೂಲ ಮತ್ತು ಬ್ರಿಟಿಷ್ ಅಧಿಕಾರಿಗಳ ಉಲ್ಲೇಖಗಳನ್ನು ನ್ಯಾಯಾಲಯಕ್ಕೆ ಭಜರಂಗದಳ ಕಾರ್ಯಕರ್ತರು ಪುರಾವೆ ನೀಡಿದ್ದಾರೆ.

ಈ ಹಿಂದೆ, ಹಿಂದುತ್ವ ಗುಂಪುಗಳು ಮಸೀದಿಯಲ್ಲಿ ಪ್ರಾರ್ಥನೆ ನಡೆಸಲು ಅನುಮತಿ ನೀಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದವು. ಈ ವಿಚಾರ ರಾಜ್ಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು.

ಇತ್ತ, ಜಾಮಿಯಾ ಮಸೀದಿಯನ್ನು ಹಿಂದೂ ಕಾರ್ಯಕರ್ತರಿಂದ ರಕ್ಷಿಸುವಂತೆ ಮಸೀದಿ ಅಧಿಕಾರಿಗಳು ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದಾರೆ.

ಜಾಮಿಯಾ ಮಸೀದಿಯನ್ನು ಮಸ್ಜಿದ್-ಇ-ಆಲಾ ಎಂದೂ ಕರೆಯುತ್ತಾರೆ, ಇದು ಶ್ರೀರಂಗಪಟ್ಟಣ ಕೋಟೆಯೊಳಗೆ ಇದೆ. ಇದನ್ನು 1786-87 ರಲ್ಲಿ ಟಿಪ್ಪು ಆಳ್ವಿಕೆಯಲ್ಲಿ ನಿರ್ಮಿಸಲಾಯಿತು. ಮಸೀದಿಯು ಪ್ರವಾದಿ ಮೊಹಮ್ಮದ್ ಅವರ ಒಂಬತ್ತು ಹೆಸರುಗಳನ್ನು ಉಲ್ಲೇಖಿಸುವ ಮೂರು ಶಾಸನಗಳನ್ನು ಹೊಂದಿದೆ.

English summary
Jamia Mosque row: Bajrang Dal submits PIL to karnataka High Court and demands to vacate mosque. they claims that masjid was once a hindu temple. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X