• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೈದಿಗಳಿಗೆ ರಾಜ್ಯೋತ್ಸವ ಕೊಡುಗೆ, ಊಟದ ಮೆನು ಬದಲಾವಣೆ

|

ಬೆಂಗಳೂರು, ನ.1 : ಕನ್ನಡ ರಾಜ್ಯೋತ್ಸವದ ದಿನದಿಂದ ರಾಜ್ಯದ ಜೈಲುಗಳಲ್ಲಿರುವ ಕೈದಿಗಳ ದಿನನಿತ್ಯದ ಊಟ, ತಿಂಡಿ ವೆಚ್ಚವನ್ನು 78 ರೂ.ಗೆ ಹೆಚ್ಚಿಸಲಾಗಿದೆ. ಕೈದಿಗಳಿಗೆ ನೀಡುತ್ತಿದ್ದ ಊಟ, ತಿಂಡಿ ಮೆನುವನ್ನು ಬದಲಾವಣೆ ಮಾಡಲಾಗಿದೆ. ಸರ್ಕಾರ ಈ ಪ್ರಸ್ತಾವನೆಗೆ ಕೆಲವು ದಿನಗಳ ಹಿಂದೆ ಒಪ್ಪಿಗೆ ನೀಡಿದ್ದು, ಇಂದಿನಿಂದ ಅದು ಜಾರಿಗೆ ಬರುತ್ತಿದೆ.

ರಾಜ್ಯ ಕಾರಾಗೃಹಗಳ ಮಹಾನಿರೀಕ್ಷಕ ಕೆ.ವಿ.ಗಗನ್‌ ದೀಪ್‌ ಅವರು ಈ ಕುರಿತು ಮಾಹಿತಿ ನೀಡಿದ್ದು, ಇದುವರೆಗೆ ಕೈದಿಗಳ ದಿನನಿತ್ಯದ ಊಟ, ತಿಂಡಿ ವೆಚ್ಚಕ್ಕೆಂದು 45 ರೂ. ನೀಡಲಾಗುತ್ತಿತ್ತು. ಆದರೆ, ಈ ಹಣದಲ್ಲಿ ಏನನ್ನೂ ಕೊಡಲು ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ಗುಣಮಟ್ಟದ ಊಟ, ತಿಂಡಿ ನೀಡುವ ಸಲುವಾಗಿ ಊಟದ ವೆಚ್ಚವನ್ನು 78 ರೂ.ಗೆ ಏರಿಕೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ಮೆನು ಬದಲಾವಣೆ : ಊಟ, ತಿಂಡಿ ವೆಚ್ಚದಲ್ಲಿ ಏರಿಕೆ ಮಾಡಿರುವುದರಿಂದ 1978ರಿಂದ ಜಾರಿಯಲ್ಲಿದ್ದ ಕೈದಿಗಳ ಊಟದ ಮೆನುವಿನಲ್ಲಿಯೂ ಬದಲಾವಣೆಯಾಗಲಿದೆ. ರಾಜ್ಯದ ಎಲ್ಲಾ ಕಾರಾಗೃಹ ಮತ್ತು ಉಪ ಕಾರಾಗೃಹದಲ್ಲಿ ನ.1ರಿಂದ ಈ ಮೆನು ಜಾರಿಗೆ ಬರಲಿದೆ. [12 ನಗರಗಳಿಗೆ ಇಂದಿನಿಂದ ಹೊಸ ಹೆಸರು]

ಪ್ರಸ್ತಾವನೆಗೆ ಒಪ್ಪಿಗೆ : ಶಿಕ್ಷೆಗೆ ಒಳಗಾಗಿರುವ ಮತ್ತು ವಿಚಾರಣಾಧೀನ ಕೈದಿಗಳ ಆರೋಗ್ಯ ಗಮನದಲ್ಲಿಟ್ಟುಕೊಂಡು ಮೈಸೂರಿನ ಕೇಂದ್ರೀಯ ಆಹಾರ ತರಬೇತಿ ಮತ್ತು ಸಂಶೋಧನಾ ಸಂಸ್ಥೆ (ಸಿಎಫ್‌ಟಿಆರ್‌ಐ), ಧಾರವಾಡ ಮತ್ತು ರಾಯಚೂರು ಕೃಷಿ ವಿವಿ ಪೌಷ್ಟಿಕಾಂಶ ವಿಭಾಗದ ಸಂಶೋಧನಾ ವಿಜ್ಞಾನಿಗಳ ತಂಡ ಊಟದ ಮೆನುವಿನಲ್ಲಿ ಕೆಲವು ಬದಲಾವಣೆಯನ್ನು ಸೂಚಿಸಿದ್ದರು.

ಈ ಪ್ರಸ್ತಾವನೆಯನ್ನು ಆಧಾರವಾಗಿಟ್ಟುಕೊಂಡು ಕೆ.ವಿ.ಗಗನ್ ದೀಪ್ ಸರ್ಕಾರಕ್ಕೆ ಕೈದಿಗಳ ಊಟ ಮತ್ತು ತಿಂಡಿಯ ಮೆನುವಿನಲ್ಲಿ ಬದಲಾವಣೆ ಮಾಡುವ ಪ್ರಸ್ತಾಪ ಸಲ್ಲಿಸಿದ್ದರು. ಸರ್ಕಾರ ಇದಕ್ಕೆ ಒಪ್ಪಿಗೆ ನೀಡಿದೆ. ಊಟದ ಮೆನು ನ.1 ರಿಂದ ಬದಲಾವಣೆಯಾಗಲಿದೆ ಎಂಬ ಸುತ್ತೋಲೆಯೂ ಸರ್ಕಾರದಿಂದ ಹೊರಬಿದ್ದಿದೆ.

ಮೆನು ಪಟ್ಟಿ ಹೀಗಿದೆ : ಬೆಳಗಿನ ಉಪಹಾರಕ್ಕೆ ಚಿತಾನ್ನ, ಟೊಮೆಟೋ ರೈಸ್, ಪುಳಿಯೋಗರೆ, ಅವಲಕ್ಕಿ , ತರಕಾರಿ ಪಲಾವ್, ಉಪ್ಪಿಟ್ಟು ಸೇರ್ಪಡೆಯಾಗಿದೆ. ಹಬ್ಬಗಳ ಸಂದರ್ಭದಲ್ಲಿದ ಸಿಹಿಯೂಟ. ಸಿಹಿಯೂಟಕ್ಕೆ ಒಬ್ಬ ಕೈದಿಗೆ ನೀಡಲಾಗುತ್ತಿದ್ದ 3 ರೂ.ವನ್ನು 10 ರೂ.ಗೆ ಏರಿಕೆ ಮಾಡಲಾಗಿದೆ.

ಪ್ರತಿ ಶುಕ್ರವಾರ ಮಟನ್ ಅಥವ ಚಿಕನ್ ನೀಡಲಾಗುತ್ತದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳ ಕೈದಿಗಳಿಗೆ ಸಮುದ್ರದ ಮೀನು ದೊರೆಯಲಿದೆ. ಪ್ರತಿ ಶನಿವಾರ ಎಲ್ಲರಿಗೂ ಮೊಟ್ಟೆ ಬಾಳೆಹಣ್ಣು, 9 ರಾಷ್ಟ್ರೀಯ ಹಬ್ಬ, 6 ವಿಶೇಷ ಸರ್ಕಾರಿ ರಜೆ ದಿನಗಳಲ್ಲಿ ಕೈದಿಗಳು ಬಯಸಿದ ಸಿಹಿ ಅಡುಗೆ ದೊರೆಯಲಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Karnataka Government had decided to make change in the jail menu across the state. The new jail food menu will come to effect form November 1, Saturday said ADGP Prisons K V Gagandeep.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more