ಜುಲೈ 1, 2ರಂದು ಉಡುಪಿಯಲ್ಲಿ ಹಲಸಿನ ಹಬ್ಬ

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಉಡುಪಿ, ಜೂನ್ 29 : ಉಡುಪಿಯಲ್ಲಿ ಜುಲೈ 1 ಮತ್ತು 2ರಂದು ರಾಜ್ಯಮಟ್ಟದ ಹಲಸಿನ ಹಬ್ಬ ನಡೆಯಲಿದೆ. ವಿವಿಧ ವಿಚಾರ ಗೋಷ್ಠಿ, ಹಲಸಿನ ಖಾದ್ಯಗಳ ಪ್ರದರ್ಶನ ಮುಂತಾದವುಗಳು ಹಬ್ಬದ ಆಕರ್ಷಣೆಗಳಾಗಿವೆ.

ಪೇಜಾವರ ಮಠ, ಕೃಷಿ ಮತ್ತು ತೋಟಗಾರಿಕೆ ವಿವಿ ಶಿವಮೊಗ್ಗ, ಸಾಮಾಜಿಕ ಉದ್ಯಮಶೀಲತಾ ಕೇಂದ್ರ ಮಣಿಪಾಲ, ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ, ಶ್ರೀಕ್ಷೇತ್ರಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಜಂಟಿಯಾಗಿ ಹಲಸಿನ ಹಬ್ಬವನ್ನು ಶ್ರೀ ಕೃಷ್ಣಮಠದ ರಾಜಾಂಗಣದಲ್ಲಿ ಹಮ್ಮಿಕೊಂಡಿವೆ. [ಅಳಿವಿನಂಚಿನತ್ತ ಮಲೆನಾಡಿನ ಕಾಡುಮಾವು]

jackfruit

ಜುಲೈ 1 ರಂದು ಬೆಳಗ್ಗೆ 10.30ಕ್ಕೆ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಅವರು ಹಬ್ಬವನ್ನು ಉದ್ಘಾಟಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್, ಸಂಸದೆ ಶೋಭಾ ಕರಂದ್ಲಾಜೆ, ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿವಿಯ ಉಪಕುಲಪತಿ ಸಿ.ವಾಸುದೇವಪ್ಪ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. [ಉಡುಪಿಯಲ್ಲಿ ಖರ್ಜೂರ ಬೆಳೆದು ತೋರಿಸಿದ ಸಾಧಕ!]

ಹಲಸಿನ ಹಬ್ಬದಲ್ಲಿ ಹಲಸಿನ ಖಾದ್ಯಗಳಲ್ಲದೆ, ಹಲಸಿನ ಬೇಸಾಯ ಕ್ರಮ, ನಿರ್ವಹಣೆ ಹಾಗೂ ಕೊಯ್ಲು ತಂತ್ರಜ್ಞಾನದ ಬಗ್ಗೆ ಸಂಪೂರ್ಣ ಮಾಹಿತಿಗಳನ್ನು ನೀಡಲಾಗುತ್ತದೆ. ಹಲಸಿನ ಬಗೆಬಗೆಯ ಖಾದ್ಯಗಳನ್ನು ಸ್ಥಳದಲ್ಲಿಯೇ ಸವಿಯುವ, ಖರೀದಿಸುವ ಜತೆಗೆ ಕಸಿ ಹಲಸಿನ ಸಸಿಗಳನ್ನು ಕೊಳ್ಳುವ ಅವಕಾಶವೂ ಇದೆ. [ರಜೆ ಕಳೆಯಲು ಬಂದ ಇಂಜಿನಿಯರ್ ಕಲ್ಲಂಗಡಿ ಬೆಳೆದರು!]

ವಿಚಾರ ಗೋಷ್ಠಿಗಳು : 'ಹಲಸಿನ ಬೆಳೆ ಭವಿಷ್ಯ ಮತ್ತು ಹಲಸಿನ ಬೇಸಾಯದಲ್ಲಿನ ತಾಂತ್ರಿಕತೆ', 'ಹಲಸಿನ ಹಣ್ಣಿನ ಮೌಲ್ಯವರ್ಧನೆ, ಖಾದ್ಯಗಳು, ಮಾರುಕಟ್ಟೆ ಮತ್ತು ಸಂಘ ರಚನೆ'ಮುಂತಾದ ವಿಚಾರಗಳ ಬಗ್ಗೆ ಗೋಷ್ಠಿಗಳು ನಡೆಯಲಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Shivamogga agricultural university, Udupi Krishna Mutt and other organizations jointly organized stale level Jackfruit festival at Udupi Krishna Mutt premises on July 1 and 2, 2016.
Please Wait while comments are loading...