Get Updates
Get notified of breaking news, exclusive insights, and must-see stories!

ಹಾವೇರಿ ಗೋಲಿಬಾರ್‌ ಗೆ ಒಂದು ದಶಕ: ಗೋಳಿಗಿಲ್ಲ ಕೊನೆ!

ಹಾವೇರಿ, ಜೂನ್ 10: 'ಗೋಲಿಬಾರ್ ಘಟನೆಯಲ್ಲಿ ಗುಂಡೇಟು ತಿಂದು ಬದುಕಿದ್ದೇ ಮಹಾಪರಾಧವಾಗಿದೆ. ಘಟನೆಯಲ್ಲಿ ನೋವುಂಡಿರುವ ನಾನು ಇತ್ತ ದುಡಿಯಲೂ ಆಗದೇ ಬದುಕಲೂ ಆಗದೆ ಅತಂತ್ರ ಸ್ಥಿತಿಯಲ್ಲಿ ಬದುಕುತ್ತ ಮನೆಯವರಿಗೆ ಭಾರವಾಗಿದ್ದೇನೆ. ಇಂಥ ಬದುಕು ಯಾರಿಗೂ ಬೇಡ' ಘಟನೆಯಲ್ಲಿ ಭುಜಕ್ಕೆ ಗುಂಡೇಟು ಬಿದ್ದು ಬದುಕುಳಿದ ತಾಲ್ಲೂಕಿನ ಆಲದಕಟ್ಟಿಯ ಅಬ್ದುಲ್ ರಜಾಕ್ ಕಲಕೋಟಿ ಅವರ ನೋವಿನ ನಡಿಗಳಿವು.

ಹೌದು, ಹಾವೇರಿ ಗೋಲಿಬಾರ್ ಘಟನೆ ಕಳೆದು ಒಂದು ದಶಕವಾಯಿತು. ಆದರೂ ಅದರಿಂದಾಗಿರುವ ಸಾವು-ನೋವಿನ ಗಾಯಗಳು ಇನ್ನು ಮಾಸಿಲ್ಲ. ಅಲ್ಲದೆ ಘಟನೆಯಲ್ಲಿನ ಸಂತ್ರಸ್ಥರಿಗಾದ ಗಾಯದ ಕಲೆಗಳೊಂದಿಗೆ ಮನಸ್ಸಿನ ಮೇಲಾದ ಆಘಾತವೂ ಹಾಗೇಯೇ ಉಳಿದಿದೆ.

ರಸಗೊಬ್ಬರ-ಬೀಜಕ್ಕಾಗಿ ಜೂನ್ 10, 2008 ರಂದು ನಡೆದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದ್ದರಿಂದ ಪ್ರತಿಭಟನಾಕಾರರ ಮೇಲೆ ಗೋಲಿಬಾರ್ ಮಾಡಲಾಗಿತ್ತು. ಘಟನೆಯಲ್ಲಿ ಪೊಲೀಸರ ಗುಂಡೇಟಿಗೆ ಇಬ್ಬರು ರೈತರು ಮೃತರಾದರೆ 9 ಜನರಿಗೆ ಗಂಭೀರ ಗಾಯಗಳಾಗಿದ್ದವು. ಅಲ್ಲದೆ ಕೋಟ್ಯಾಂತರ ರೂಪಾಯಿ ಸಾರ್ವಜನಿಕ ಆಸ್ತಿ-ಪಾಸ್ತಿಗೆ ಹಾನಿಯಾಗಿತ್ತು.

'ಘಟನೆಗಿಂತ ಮೊದಲು ನಾನು ಹಮಾಲಿ ಮಾಡಿ ಜೀವನ ನಡೆಸುತ್ತಿದೆ. ಬರುತ್ತಿದ್ದ ಅಲ್ಪ ಸಂಪಾದನೆಯಲ್ಲಿಯೇ ಜೀವನ ಸಾಗುತ್ತಿತ್ತು. ಆದರೆ, ಘಟನೆಯಲ್ಲಿ ಬಿದ್ದ ಗುಂಡು ನನ್ನನ್ನು ಶ್ವಾಶತ ಅಂಗವೈಕಲ್ಯಕ್ಕೆ ತಳ್ಳಿತು. ಇನ್ನೊಂದೆಡೆ ಗುಂಡೇಟು ಬಿದ್ದ ಬಳಿಕ ಆಸ್ಪತ್ರೆಗೆ ಬಂದ ರಾಜಕೀಯ ಮುಖಂಡರೆಲ್ಲ ಕೇವಲ ಭರವಸೆಗಳನ್ನು ನೀಡಿದರೆ ಹೊರತು ಬಂದ ಪರಿಹಾರದ ಹಣ ಚಿಕಿತ್ಸೆಗೂ ಸಾಕಾಗಲಿಲ್ಲ. ನಂತರ ದುಡಿಯುವ ಕೈಗಳನ್ನು ಕತ್ತರಿಸದಂತಾದ ನನ್ನ ಬದುಕು ನನ್ನ ಪತ್ನಿಯ ಆದಾಯದ ಮೇಲೆಯೇ ನಡೆದಿದೆ' ಎಂದು ಅವಲತ್ತುಕೊಂಡರು.

'ಇದರ ಮಧ್ಯೆ ನಾಲ್ಕು ಹೆಣ್ಣು ಮಕ್ಕಳು ಹಾಗೂ ನನ್ನನ್ನು ಸಾಕುವ ಭಾರ ಪತ್ನಿಯ ಮೇಲೆ ಬಿದ್ದಿದೆ. ಕುಟುಂಬದವರಿಗೆ ಹೊರೆಯಾಗಿದೆ. ನನಗೆ, ಯಾವುದಾದರು ಸರ್ಕಾರಿ ಕಚೇರಿಯಲ್ಲಿ ಕಸ ಕುಡಿಸುವ ಕೆಲಸ ಕೊಟ್ಟರೂ ಮಾಡುತ್ತೇನೆ. ಇನ್ನು ಮೇಲಾದರೂ ಸರ್ಕಾರ ನಮ್ಮ ಮೇಲೆ ಕಣ್ಣು ತೆರೆಯಬೇಕು' ಎಂದು ಮನವಿ ಮಾಡಿದರು. ಘಟನೆಯಲ್ಲಿ ಗಾಯಗೊಂಡ ಇನ್ನುಳಿದ ಗಾಯಾಳುಗಳ ಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ.

ಮರೆಯಲಾರದ ಆ ದಿನ

ಮರೆಯಲಾರದ ಆ ದಿನ

ಜೂನ್ 10, 2008 ರಂದು ಹಾವೇರಿ ಹೃದಯ ಭಾಗದ ಹೊಸಮನಿ ಸಿದ್ಧಪ್ಪ ವೃತ್ತದಲ್ಲಿ ಸಂಭವಿಸಿದ ಗೋಲಿಬಾರ್ ಘಟನೆಯಲ್ಲಿ ಸಿದ್ದಲಿಂಗಪ್ಪ ಚನ್ನಬಸಪ್ಪ ಚೂರಿ ಮತ್ತು ಪುಟ್ಟಪ್ಪ ಹೇಮಪ್ಪ ಹೊನ್ನತ್ತಿ ಮೃತರಾದರೆ, 9 ಮಂದಿ ಗಾಯಗೊಂಡಿದ್ದು, ಅವರ ಸ್ಥಿತಿಯೂ ಕಷ್ಟಕರವಾಗಿದೆ.

ನೋವು ನಿರಂತರ

ನೋವು ನಿರಂತರ

ಸಿದ್ದಲಿಂಗಪ್ಪ ಮತ್ತು ಪುಟ್ಟಪ್ಪ ಅವರ ಪತ್ನಿಯರಿಗೆ ಅನುಕಂಪದ ಆಧಾರದಲ್ಲಿ ಸರ್ಕಾರಿ ಉದ್ಯೋಗ ಸಿಕ್ಕಿದೆ. ಉಳಿದವರಿಗೆ ಪರಿಹಾರ ಧನ ನೀಡಲಾಗಿದೆ. ಆದರೆ, ಪದೇ ಪದೇ ಸಮಸ್ಯೆಗೆ ಈಡಾಗುತ್ತಿರುವ ರೈತರ ಹೋರಾಟವು ಜಿಲ್ಲೆಯಲ್ಲಿ ನಿರಂತರವಾಗಿದೆ. ರೈತರ ಮೇಲೆ ಪ್ರಮಾಣ ವಚನ ಸ್ವೀಕರಿಸಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಅಧಿಕಾರ ವಹಿಸಿಕೊಂಡ ಒಂದೇ ವಾರದಲ್ಲಿ ಘಟನೆ ಸಂಭವಿಸಿದ್ದು, ಅಂದಿನ ಬಿಜೆಪಿ ಸರ್ಕಾರದ ಮೇಲೆ ಕಪ್ಪು-ಚುಕ್ಕೆಯಾಗಿದೆ.

ಬರೆ ಎಳೆದ ಆಯೋಗದ ವರದಿ

ಬರೆ ಎಳೆದ ಆಯೋಗದ ವರದಿ

ಘಟನೆ ಕುರಿತು ಕಾರಣ ಅರಿಯಲು ಸರ್ಕಾರ ನಿವೃತ್ತ ನ್ಯಾಯಮೂರ್ತಿ ಕೆ.ಜಗನ್ನಾಥಶೆಟ್ಟಿ ಅವರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಗೆ ಆದೇಶಿಸಿತು. ಪ್ರತಿಪಕ್ಷಗಳ ಸಿಬಿಐ ತನಿಖೆಯ ಬೇಡಿಕೆಯನ್ನು ಸಾರಾಸಗ ತಿರಸ್ಕರಿಸಿದ್ದ ಅಂದಿನ ಬಿಜೆಪಿ ಸರ್ಕಾರ ಘಟನೆ ಕುರಿತು ಕೂಲಂಕುಷವಾಗಿ ತನಿಖೆ ನಡೆಸಿ ವರದಿ ನೀಡುವಂತೆ ಪತ್ರ ಬರೆದಿತ್ತು.

ಮೃತಪಟ್ಟವರು ರೈತರೇ ಅಲ್ಲ!

ಮೃತಪಟ್ಟವರು ರೈತರೇ ಅಲ್ಲ!

ಘಟನೆ ಕಾರಣವಾದ ಅಂಶಗಳನ್ನು ಪತ್ತೆ ಹಚ್ಚಲು ನೂರಾರು ಜನರನ್ನು ವಿಚಾರಣೆ ಮಾಡಿ ಸುರ್ದೀಘ ನಾಲ್ಕು ವರ್ಷಗಳ ಕಾಲ ವಿಚಾರಣೆ ನಡೆಸಿದ ಆಯೋಗ ಕೊನೆಗೂ ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತು. ಅಷ್ಟರಲ್ಲಾಗಲೇ 'ಮೃತಪಟ್ಟವರು ರೈತರೇ ಅಲ್ಲ' ಎಂದು ಆಯೋಗದ ವರದಿಯಲ್ಲಿದೆ ಎಂಬ ಸುದ್ದಿ ಸೋರಿಕೆಯಾಗುವ ಮೂಲಕ ಸಂತ್ರಸ್ಥರ ಆಕ್ರೋಶಕ್ಕೆ ಕಾರಣವಾಗಿತ್ತು. ನಂತರ ಬಂದ ಕಾಂಗ್ರೆಸ್ ನೇತೃತ್ವದ ಸರ್ಕಾರ ಆಯೋಗ ವರದಿಯನ್ನು ತಿರಸ್ಕರಿಸಿತ್ತು.

ಘಟನೆಗೆ ಕಾರಣ ನಿಗೂಢ

ಘಟನೆಗೆ ಕಾರಣ ನಿಗೂಢ

ಘಟನೆಗೆ ಕಾರಣವಾದ ಅಂಶಗಳ ಕುರಿತು ಈವರೆಗೂ ಬೆಳಕು ಚೆಲ್ಲುವ ಪ್ರಯತ್ನ ನಡೆಯಲಿಲ್ಲ. ಈ ಮಧ್ಯೆ ಹಾವೇರಿ ಜಿಲ್ಲೆಯಲ್ಲಿ ಈಗಲೂ ರೈತರ ಹೋರಾಟಗಳು ಹಿಂಸಾರೂಪ ತಳೆಯುತ್ತಿದ್ದು, ಸರ್ಕಾರದ ಮುನ್ನೆಚ್ಚರಿಕಾ ಕ್ರಮಗಳ ಕೊರತೆಯೇ ಇದಕ್ಕೆ ಕಾರಣ ಎಂಬುದು ಜನರ ಆರೋಪ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+