Get Updates
Get notified of breaking news, exclusive insights, and must-see stories!

ಕನ್ನಡ ಚಿತ್ರರಂಗದಲ್ಲಿ ಬಡವರ ಪ್ರಾಣಕ್ಕೆ ಬೆಲೆನೇ ಇಲ್ವಾ?

A tragic incident: ಕನ್ನಡ ಸಿನಿಮಾಗಳ ಚಿತ್ರೀಕರಣದ ಸಂದರ್ಭದಲ್ಲಿ ಅವಘಡಗಳು ಸಂಭವಿಸುವುದು ಮುಂದುವರಿದಿದೆ. ಈ ರೀತಿ ಅವಘಡಗಳು ಸಂಭವಿಸಿ ಅಮಾಯಕರು ಹಾಗೂ ಬಡವರೇ ಜೀವ ಕಳೆದುಕೊಳ್ಳುತ್ತಿದ್ದಾರೆ. ಕಳೆದ ಐದಾರು ವರ್ಷಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಹಲವು ಬಾರಿ ಚಿತ್ರೀಕರಣದ ವೇಳೆ ದುರಂತಗಳು ನಡೆದಿರುವುದು ವರದಿಯಾಗಿದೆ. ಆದರೆ, ಚಿತ್ರ ನಿರ್ಮಾಣ ಸಂಸ್ಥೆಗಳು, ನಿರ್ದೇಶಕರು ನಿರ್ಲಕ್ಷ್ಯ ತೋರುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

ಕನ್ನಡ ಚಿತ್ರರಂಗದಲ್ಲಿ ದುರಂತ ಸಂಭವಿಸುವುದು ಮುಂದುವರಿದಿದ್ದು, ನಿರ್ದೇಶಕ ಯೋಗರಾಜ್‌ ಭಟ್ ನಿರ್ದೇಶನದ 'ಮನದ ಕಡಲು' ಸಿನಿಮಾದ ಶೂಟ್ ಸೆಟ್‌ನಲ್ಲಿಯೂ ಇಂತಹದ್ದೇ ದುರಂತ ಸಂಭವಿಸಿದೆ. 'ಮನದ ಕಡಲು' ಸಿನಿಮಾದ ಚಿತ್ರೀಕರಣ ಮಾಡುವಾಗ 30 ಅಡಿ ಎತ್ತರದಿಂದ ಲೈಟ್ ಮ್ಯಾನ್ ಆಯಾತಪ್ಪಿ ಬಿದ್ದು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ಆದರೆ, ಕನ್ನಡ ಚಿತ್ರರಂಗದಲ್ಲಿ ಇದು ಮೊದಲಲ್ಲ. ಈ ಹಿಂದೆಯೂ ಸಾಹಸ ದೃಶ್ಯಗಳ ಚಿತ್ರೀಕರಣದ ಸಂದರ್ಭಗಳಲ್ಲಿ ದುರಂತ ನಡೆದಿರುವುದು ವರದಿಯಾಗಿತ್ತು. ಆದರೆ ಆ ಸಂದರ್ಭದಲ್ಲಿ ಇನ್ಮುಂದೆ ಈ ರೀತಿ ಆಗದಂತೆ ಎಚ್ಚರಿಕೆ ವಹಿಸುವುದಾಗಿ ಎಲ್ಲರೂ ಹೇಳಿದ್ದರು. ದುರಂತರಗಳು ಮಾತ್ರ ಮುಂದುವರಿಯುತ್ತಲ್ಲೇ ಇದೆ.

Is there no prize for the lives of the poor in Kannada cinema

ಮಾಸ್ತಿಗುಡಿ ಸಿನಿಮಾ ಕ್ಲೈಮ್ಯಾಕ್ಸ್ ಶೂಟಿಂಗ್ ದುರಂತ

ಕನ್ನಡ ಚಿತ್ರರಂಗದಲ್ಲಿ ಇತ್ತೀಚಿನ ವರ್ಷಗಳಲ್ಲಿ ನಡೆದ ದುರಂತಗಳಲ್ಲಿ ಮಾಸ್ತಿಗುಡಿ ಸಿನಿಮಾ ಕ್ಲೈಮ್ಯಾಕ್ಸ್ ಶೂಟಿಂಗ್ ದುರಂತವೂ ಒಂದು. ಈ ಸಿನಿಮಾದ ಶೂಟಿಂಗ್‌ನಲ್ಲಿ ನಡೆದ ದುರ್ಘಟನೆಯಲ್ಲಿ ಖನ ನಾಯಕರಾಗಿ ಗುರುತಿಸಿಕೊಂಡಿದ್ದ ನಟರಾದ ಅನಿಲ್ ಮತ್ತು ಉದಯ್ ಅವರು ಸಾವನ್ನಪ್ಪಿದ್ದರು. ಈ ದುರಂತದ ಬೆನ್ನಲ್ಲೇ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘಗಳ ಅಧ್ಯಕ್ಷರು ಜಂಟಿ ಪತ್ರಿಕಾಗೋಷ್ಠಿ ನಡೆಸಿ, ಇನ್ಮುಂದೆ ದುರಂತಗಳು ಸಂಭವಿಸದಂತೆ ಎಚ್ಚರಿಕೆಯ ಹೆಜ್ಜೆಗಳನ್ನು ಇರಿಸುವುದಾಗಿ ಹೇಳಿದ್ದರು. ಆದರೆ, ಈ ಮಾತುಗಳು ಕೇವಲ ಕಾರ್ಯರೂಪಕ್ಕೆ ಬಂದಿಲ್ಲ.

ಮುಂದಿನ ದಿನಗಳಲ್ಲಿ ಚಿತ್ರೀಕರಣದ ಸಂದರ್ಭದಲ್ಲಿ ದುರಂತಗಳಲ್ಲಿ ಸಂಭವಿಸಿದರೆ, ಅದಕ್ಕೆ ಸಾಹಸ ನಿರ್ದೇಶಕರೇ ಹೊಣೆಯಾಗಲಿದ್ದಾರೆ. ಈ ರೀತಿಯ ದುರಂತಗಳು ಎಚ್ಚರಿಕೆ ವಹಿಸುವುದು ಚಿತ್ರರಂಗದ ಜವಾಬ್ದಾರಿ ಎಂದು ಹೇಳಲಾಗಿತ್ತು. ಆದರೆ, ಇದೆಲ್ಲವೂ ಕೇವಲ ಬಾಯಿ ಮಾತಿಗೆ ಸೀಮಿತವಾಗಿದೆ.

'ರಣಂ' ಸಿನಿಮಾ ವೇಳೆ ಇಬ್ಬರು ಅಮಾಯಕರ ಸಾವು

ರಣಂ ಸಿನಿಮಾ ಚಿತ್ರೀಕರಣದ ವೇಳೆಯಲ್ಲಿ ಸಿನಿಮಾ ಚಿತ್ರೀಕರಣಕ್ಕೆ ಸಂಬಂಧವೇ ಇಲ್ಲದವರು ಇಬ್ಬರು ಸಾವನ್ನಪ್ಪಿದ್ದರು. ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ನಿರ್ಮಾಣವಾಗುತ್ತಿದ್ದ ರಣಂ ಚಿತ್ರೀಕರಣದ ಸಮಯದಲ್ಲಿ ಶೂಟಿಂಗ್ ನೋಡಲು ಬಂದಿದ್ದ ಇಬ್ಬರು ಸಾವನ್ನಪ್ಪಿದ್ದರು. ಚಿತ್ರೀರಕಣದ ವೇಳೆ ಸಿಲಿಂಡರ್ ಸಿಡಿದ ರಭಸದಿಂದ ಸಮೇರಾ (28) ಎನ್ನುವವರ ತಲೆಗೆ ಹಾಗೂ ಆಯಿರಾ (8) ಎನ್ನುವ ಮಗುವಿನ ಕೈಗೆ ಬಲವಾಗಿ ಬಡಿದು ಅವರಿಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಈ ರೀತಿ ಸರಣಿ ದುರಂತಗಳು ಸಂಭವಿಸಿದರೂ ಕನ್ನಡ ಚಿತ್ರರಂಗದಲ್ಲಿ ಚಿತ್ರೀಕರಣದ ಸಮಯದಲ್ಲಿ ದುರಂತಗಳು ನಡೆಯದ ರೀತಿಯಲ್ಲಿ ಎಚ್ಚರಿಕೆ ವಹಿಸುತ್ತಿಲ್ಲ. ಹೀಗಾಗಿ, ಇಂದಿಗೂ ಈ ದುರಂತಗಳಲ್ಲಿ ಅಮಾಯಕರೇ ಸಾವನ್ನಪ್ಪುತ್ತಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+