ಕೃಷ್ಣ ಮತ್ತೆ ಕಾಂಗ್ರೆಸ್ಸಿಗೆ: 'ಗೊತ್ತಿಲ್ಲ' ಎಂದ ಸಿದ್ದು, ಸುಳ್ಳು ಎಂದ ಬಿಜೆಪಿ!

Posted By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಏಪ್ರಿಲ್ 11: ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಮತ್ತೆ ಕಾಂಗ್ರೆಸ್ಸಿಗೆ ಮರಳುತ್ತಾರೆ ಎಂಬ ವದಂತಿ ಸದ್ಯಕ್ಕೆ ರಾಜಕೀಯ ವಲಯಗಳಲ್ಲಿ ಕೇಳಿಬರುತ್ತಿದೆ.

ಕೃಷ್ಣ ಸೇರ್ಪಡೆ ಕುರಿತಂತೆ ಕಾಂಗ್ರೆಸ್ಸಿನಲ್ಲಿ ಒಂದು ಸುತ್ತಿನ ಮಾತುಕತೆ ಸಹ ನಡೆದಿದೆ ಎಂಬ ವದಂತಿಯೂ ಹಬ್ಬಿತ್ತು. ಕೃಷ್ಣ ಅವರು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಮತ್ತು ಡಿ ಕೆ ಶಿವಕುಮಾರ್ ಅವರೊಂದಿಗೂ ಮಾತುಕತೆ ನಡೆಸಿದ್ದಾರೆ ಎನ್ನಲಾಗಿತ್ತು.

ಇದೇನಿದು..? ಮತ್ತೆ ಕಾಂಗ್ರೆಸ್ಸಿಗೆ ಬರುತ್ತಾರಾ ಎಸ್ ಎಂ ಕೃಷ್ಣ..?!

ಆದರೆ ಈ ಕುರಿತು ಪ್ರತಿಕ್ರಿಯೆ ನೀಡಿದ ಬಿಜೆಪಿ ಮುಖಂಡ, ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್, 'ಕೃಷ್ಣ ಅವರು ಬಿಜೆಪಿ ಬಿಡುತ್ತಿರುವ ಸುದ್ದಿ ಸುಳ್ಳು. ಕೃಷ್ಣ ಅವರ ಕುಟುಂಬದ ಸದಸ್ಯರ್ಯಾರಾದರೂ ಚುನಾವಣೆಗೆ ಸ್ಪರ್ಧಿಸಲು ಸಿದ್ಧರಿದ್ದರೆ ಬಿಜೆಪಿ ಅವರಿಗೆ ಟಿಕೇಟ್ ನೀಡುವುದಕ್ಕೆ ಸಿದ್ಧ. ಎಸ್ ಎಂ ಕೃಷ್ಣ ಅವರು ಸದ್ಯಕ್ಕೆ ವಿದೇಶ ಪ್ರವಾಸದಲ್ಲಿದ್ದಾರೆ. ಅವರು ವಾಪಸ್ಸಾಗುತ್ತಿದ್ದಂತೆಯೇ ಅವರೊಂದಿಗೆ ಈ ಕುರಿತು ಮಾತುಕತೆ ನಡೆಸಲಾಗುವುದು' ಎಂದಿದ್ದಾರೆ.

Is S M Krishna re-joining Congress? BJP says no, Congress says we don’t know

ಕೃಷ್ಣ ಕಾಂಗ್ರೆಸ್ ಸೇರ್ಪಡೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, 'ಈ ಬೆಳವಣಿಗೆ ಕುರಿತು ನನಗೇನೂ ಗೊತ್ತಿಲ್ಲ' ಎಂದಿದ್ದಾರೆ. ಕಾಂಗ್ರೆಸ್ ಮುಖಂಡ ರೆಹ್ಮಾನ್ ಖಾನ್, 'ಈ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಸಿಕ್ಕಿಲ್ಲ. ಆದರೆ ಕಾಂಗ್ರೆಸ್ ಎಲ್ಲರನ್ನೂ ಸ್ವಾಗತಿಸುತ್ತದೆ' ಎಂದಿದ್ದಾರೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು

ಬಿಜೆಪಿ ವಕ್ತಾರ ಎಸ್.ಪ್ರಕಾಶ್ ಪ್ರತಿಕ್ರಿಯಿಸಿ, ''ಇವೆಲ್ಲ ಕಾಂಗ್ರೆಸ್ ನ ರಾಜಕೀಯವಷ್ಟೇ. ಕೃಷ್ಣ ಕಾಂಗ್ರೆಸ್ ಗೆ ಮತ್ತೆ ಸೇರುತ್ತಾರೆ ಎಂಬ ಸುದ್ದಿಯನ್ನು ಕಾಂಗ್ರೆಸ್ಸಿಗರೇ ಹಬ್ಬಿಸಿದ್ದಾರೆ. ಕೃಷ್ಣ ಅವರ ಬೆಲೆ ಏನು ಎಂಬುದು ಕಾಂಗ್ರೆಸ್ಸಿಗೆ ಇಗ ಅರ್ಥವಾಗುತ್ತಿದೆ' ಎಂದಿದ್ದಾರೆ

ಡಿಬೇಟ್ : ಎಸ್‌.ಎಂ.ಕೃಷ್ಣ ಕಾಂಗ್ರೆಸ್‌ಗೆ ಮರಳಬೇಕೆ?

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In a bid to pacify former Karnataka chief minister, S M Krishna, the BJP is likely to offer his family member a ticket for the upcoming Karnataka assembly election. Some rumours tell he will be rejoining Congress. But as of now BJP says Krishna will not leave BJP and Congress says, 'We don't know about his re joining'

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ