ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್ ಸೋಲಿಗೆ ಲಿಂಗಾಯತ ಹೋರಾಟ ಕಾರಣವೇ? ಇಲ್ಲಿದೆ ಸತ್ಯಾಂಶ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 19: ಲಿಂಗಾಯತ ಹೋರಾಟದ ಬಗ್ಗೆ ಸಚಿವ ಡಿ.ಕೆ.ಶಿವಕುಮಾರ್‌ ಅವರು ನಿನ್ನೆ ನೀಡಿದ ಹೇಳಿಕೆ ರಾಜ್ಯದಾದ್ಯಂತ ಭಾರಿ ವಿವಾದಕ್ಕೆ ಕಾರಣವಾಗಿದೆ.

ಲಿಂಗಾಯತ ಪ್ರತ್ಯೇಕ ಧರ್ಮ ವಿವಾದದಲ್ಲಿ ಹಸ್ತಕ್ಷೇಪ ಮಾಡಿದ್ದಕ್ಕಾಗಿಯೇ ಕಾಂಗ್ರೆಸ್ ಚುನಾವಣೆಯಲ್ಲಿ ಸೋಲು ಕಂಡಿತು ಎಂದಿದ್ದ ಡಿ.ಕೆ.ಶಿವಕುಮಾರ್‌ ಇದಕ್ಕಾಗಿ ಸಾರ್ವಜನಿಕವಾಗಿ ಕ್ಷಮಾಪಣೆಯನ್ನೂ ಕೇಳಿದ್ದರು.

ಆದರೆ ಇದಕ್ಕೆ ಭಾರಿ ವಿರೋಧ ವ್ಯಕ್ತಪಡಿಸಿದ ಎಂಬಿ ಪಾಟೀಲ್‌, ವಿನಯ್ ಕುಲಕರ್ಣಿ ಇನ್ನಿತರ ಕಾಂಗ್ರೆಸ್‌ ಮುಖಂಡರು ಲಿಂಗಾಯತ ಹೋರಾಟಕ್ಕೆ ಬೆಂಬಲ ನೀಡಿದ್ದಕ್ಕೆ ಕಾಂಗ್ರೆಸ್‌ಗೆ ಹಿನ್ನಡೆ ಆಗಿಲ್ಲ ಎಂದಿದ್ದಾರೆ.

ಲಿಂಗಾಯತ ಪ್ರತ್ಯೇಕ ಧರ್ಮ ಹೇಳಿಕೆ: ಡಿಕೆಶಿ ಮೇಲೆ ಎಂಬಿ.ಪಾಟೀಲ್ ಕಿಡಿ ಲಿಂಗಾಯತ ಪ್ರತ್ಯೇಕ ಧರ್ಮ ಹೇಳಿಕೆ: ಡಿಕೆಶಿ ಮೇಲೆ ಎಂಬಿ.ಪಾಟೀಲ್ ಕಿಡಿ

ಹಾಗಿದ್ದರೆ ಸತ್ಯ ಯಾವುದು? ಲಿಂಗಾಯತ ಹೋರಾಟದಿಂದ ಕಾಂಗ್ರೆಸ್‌ಗೆ ಸೋಲಾಯಿತಾ? ಇಲ್ಲಿದೆ ಪೂರ್ಣ ಮಾಹಿತಿ.

ಎಷ್ಟು ಲಿಂಗಾಯತ ಅಭ್ಯರ್ಥಿಗಳು ಗೆದ್ದಿದ್ದಾರೆ?

ಎಷ್ಟು ಲಿಂಗಾಯತ ಅಭ್ಯರ್ಥಿಗಳು ಗೆದ್ದಿದ್ದಾರೆ?

ಕಾಂಗ್ರೆಸ್‌ ಪಕ್ಷವು 2018 ವಿಧಾನಸಭೆ ಚುನಾವಣೆಯಲ್ಲಿ ಒಟ್ಟು 47 ಮಂದಿ ಲಿಂಗಾಯತ ಅಭ್ಯರ್ಥಿಗಳಿಗೆ ಟಿಕೆಟ್ ವಿತರಿಸಿತ್ತು. ಅದರಲ್ಲಿ 17 ಮಂದಿ ಗೆಲುವು ಸಾಧಿಸಿದ್ದಾರೆ ಗೆಲುವಿನ ಶೇಕಡಾವಾರು 36.17 ಆಗುತ್ತದೆ. 46 ಮಂದಿ ಒಕ್ಕಲಿಗ ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಿದ್ದು ಅದರಲ್ಲಿ ಗೆದ್ದಿದ್ದು 14 ಮಂದಿ. 17 ಮಂದಿ ಮುಸ್ಲಿಮರಲ್ಲಿ 7 ಮಂದಿ ಗೆದ್ದಿದ್ದಾರೆ. 35 ಮಂದಿ ಎಸ್‌ಸಿ ಅಭ್ಯರ್ಥಿಗಳಲ್ಲಿ 12 ಮಂದಿ ಗೆದ್ದಿದ್ದಾರೆ. 17 ಟಿಕೆಟ್‌ ಪಡೆದಿದ್ದ ಎಸ್‌ಟಿ ಅಭ್ಯರ್ಥಿಗಳಲ್ಲಿ 9 ಮಂದಿ ಗೆದ್ದಿದ್ದಾರೆ. 50 ಇತರೆ ಹಿಂದುಳಿದ ಅಭ್ಯರ್ಥಿಗಳಲ್ಲಿ 14 ಮಂದಿ ಗೆದ್ದಿದ್ದಾರೆ. 6 ಬ್ರಾಹ್ಮಣರಲ್ಲಿ 4 ಮಂದಿ ಗೆದ್ದಿದ್ದಾರೆ. ಇಬ್ಬರು ಕ್ರೈಸ್ತ ಅಭ್ಯರ್ಥಿಗಳಲ್ಲಿ ಒಬ್ಬರು ಗೆದ್ದಿದ್ದಾರೆ. ಇಬ್ಬರು ಜೈನ ಅಭ್ಯರ್ಥಿಗಳು ಸೋತಿದ್ದಾರೆ. ಲೆಕ್ಕದ ಪ್ರಕಾರ 30ಕ್ಕಿಂತಲೂ ಹೆಚ್ಚು ಟಿಕೆಟ್‌ ಪಡೆದ ಸಮುದಾಯದ ಅಭ್ಯರ್ಥಿಗಳಲ್ಲಿ ಲಿಂಗಾಯತ ಅಭ್ಯರ್ಥಿಗಳೇ ಹೆಚ್ಚು ಗೆದ್ದಿದ್ದಾರೆ.

ಕೈಮುಗಿದು ಸಾರ್ವಜನಿಕವಾಗಿ ಕ್ಷಮಾಪಣೆ ಕೇಳಿದ ಸಚಿವ ಡಿ.ಕೆ.ಶಿವಕುಮಾರ್‌ ಕೈಮುಗಿದು ಸಾರ್ವಜನಿಕವಾಗಿ ಕ್ಷಮಾಪಣೆ ಕೇಳಿದ ಸಚಿವ ಡಿ.ಕೆ.ಶಿವಕುಮಾರ್‌

ಲಿಂಗಾಯತ ಬಾಹುಳ್ಯ ಪ್ರದೇಶದಲ್ಲಿ ಕೈಗೆ ಮುನ್ನಡೆ

ಲಿಂಗಾಯತ ಬಾಹುಳ್ಯ ಪ್ರದೇಶದಲ್ಲಿ ಕೈಗೆ ಮುನ್ನಡೆ

ಲಿಂಗಾಯತ ಪ್ರತ್ಯೇಕ ಧರ್ಮದ ಸಮಾವೇಶಗಳು ನಡೆದ ಪ್ರಮುಖ ಜಿಲ್ಲೆಗಳಲ್ಲಿ ಕಾಂಗ್ರೆಸ್‌ ಉತ್ತಮ ಫಲಿತಾಂಶವನ್ನೇ ಪಡೆದುಕೊಂಡಿದೆ. ಪ್ರತ್ಯೇಕ ಧರ್ಮ ಮೊದಲ ಸಮಾವೇಶ ನಡೆದ ಬೀದರ್‌ ಜಿಲ್ಲೆಯ ಆರು ಸ್ಥಾನಗಳಲ್ಲಿ 4 ರಲ್ಲಿ ಕಾಂಗ್ರೆಸ್ ಗೆದ್ದಿದೆ. ಬಳ್ಳಾರಿಯ ಆರರಲ್ಲಿ ನಾಲ್ಕು ಸ್ಥಾನ ಗೆದ್ದಿದೆ. ರಾಯಚೂರಿನ 7 ಸ್ಥಾನಗಳಲ್ಲಿ ಮೂರು ಸ್ಥಾನಗಳನ್ನು ಗೆದ್ದಿದೆ. ಬೆಳಗಾವಿಯಲ್ಲಿ 2013 ರ ಚುನಾವಣೆಯಲ್ಲಿ 6 ಸ್ಥಾನ ಗೆದ್ದಿದ್ದ ಕಾಂಗ್ರೆಸ್ ಈ ಬಾರಿ 8 ಸ್ಥಾನ ಗೆದ್ದಿದೆ. 2013 ರ ಚುನಾವಣೆಗೆ ಹೋಲಿಸಿದರೆ ಉತ್ತರ ಕರ್ನಾಟಕದ ಒಟ್ಟು 96 ಕ್ಷೇತ್ರಗಳಲ್ಲಿ 17 ಸ್ಥಾನಗಳನ್ನು ಕಾಂಗ್ರೆಸ್ ಕಳೆದುಕೊಂಡಿದೆ. ಆದರೆ ಇದಕ್ಕೆ ಪ್ರಮುಖ ಕಾರಣವೆಂದರೆ 2013ರಲ್ಲಿ ಕೆಜೆಪಿ ಬಿಜೆಪಿ ಎರಡು ಬಣಗಳಿತ್ತು. ಆದರೆ ಈ ಚುನಾವಣೆಯಲ್ಲಿ ಬಿಜೆಪಿ ಒಂದೇ ಸ್ಪರ್ಧಿಸಿತ್ತು.

ಡಿಕೆಶಿಗೆ ಕೊನೆಗೂ ತಪ್ಪಿನ ಅರಿವಾಗಿರೋದು ಸಂತೋಷ: ಬಿಎಸ್‌ವೈ ಡಿಕೆಶಿಗೆ ಕೊನೆಗೂ ತಪ್ಪಿನ ಅರಿವಾಗಿರೋದು ಸಂತೋಷ: ಬಿಎಸ್‌ವೈ

ಶೇಕಡಾವಾರ ಮತ ಪ್ರಮಾಣ ಹೆಚ್ಚಳ

ಶೇಕಡಾವಾರ ಮತ ಪ್ರಮಾಣ ಹೆಚ್ಚಳ

ಲಿಂಗಾಯತ ಹೋರಾಟ ತೀವ್ರವಾಗಿದ್ದ ಉತ್ತರ ಕರ್ನಾಟಕದಲ್ಲಿ ಬಿಜೆಪಿಗಿಂತ ಕಾಂಗ್ರೆಸ್‌ಗೆ ಹೆಚ್ಚಿನ ಬಿದ್ದಿದೆ ಎಂದು ಹೇಳಿದೆ ಲಿಂಗಾಯತ ಮಹಾಸಭಾ. 2008 ರಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ 35.13% ಮತಗಳಿಕೆ ಆಗಿದೆ. 2013ರಲ್ಲಿ 36.76% ಮತಗಳಿಕೆ ಆಗಿದ್ದರೆ 2018ರ ಚುನಾವಣೆಯಲ್ಲಿ 38% ಮತಗಳಿಕೆ ಆಗಿದೆ ಎಂದು ಲಿಂಗಾಯತ ಮಹಾಸಭಾ ಲೆಕ್ಕ ಕೊಟ್ಟಿದೆ.

ನಾನು ಲಿಂಗಾಯತ ಪ್ರತ್ಯೇಕ ಧರ್ಮದ ಬಗ್ಗೆ ಎಲ್ಲಿಯೂ ಮಾತನಾಡಿಲ್ಲ:ಸಿಎಂ ನಾನು ಲಿಂಗಾಯತ ಪ್ರತ್ಯೇಕ ಧರ್ಮದ ಬಗ್ಗೆ ಎಲ್ಲಿಯೂ ಮಾತನಾಡಿಲ್ಲ:ಸಿಎಂ

ಒಕ್ಕಲಿಗ ಪ್ರಾಬಲ್ಯದಲ್ಲಿ ಕಾಂಗ್ರೆಸ್‌ಗೆ ಪೆಟ್ಟು

ಒಕ್ಕಲಿಗ ಪ್ರಾಬಲ್ಯದಲ್ಲಿ ಕಾಂಗ್ರೆಸ್‌ಗೆ ಪೆಟ್ಟು

ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟದಿಂದಾಗಿ ಕಾಂಗ್ರೆಸ್‌ಗೆ ಹಿನ್ನಡೆ ಆಯಿತು ಎನ್ನುವುದಾದರೆ, ಒಕ್ಕಲಿಗರ ಪ್ರಾಬಲ್ಯವಿರುವ ಮಂಡ್ಯ, ಹಾಸನ, ರಾಮನಗರ, ತುಮಕೂರು, ಹಳೆ ಮೈಸೂರು ಭಾಗಗಳಲ್ಲಿ ಕಾಂಗ್ರೆಸ್‌ ಏಕೆ ಹಿನ್ನಡೆ ಆಯಿತು. ಕರಾವಳಿ ಭಾಗದಲ್ಲೂ ಸಹ ಕಾಂಗ್ರೆಸ್‌ಗೆ ಭಾರಿ ಮುಖಭಂಗವಾಗಿದೆ ಹಾಗಿದ್ದ ಮೇಲೆ ಲಿಂಗಾಯತ ಹೋರಾಟವೊಂದೆ ಕಾಂಗ್ರೆಸ್‌ ಸೋಲಿಗೆ ಕಾರಣ

ಲಿಂಗಾಯತ ಪ್ರತ್ಯೇಕ ಧರ್ಮ ಹೇಗೆ ಕಾರಣ?

ಲಿಂಗಾಯತ ಪ್ರತ್ಯೇಕ ಧರ್ಮ ಹೇಗೆ ಕಾರಣ?

ಚುನಾವಣೆ ಪ್ರಣಾಳಿಕೆಯಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮದ ಉಲ್ಲೇಖ ಇರಲಿಲ್ಲ. ಎಲ್ಲ ಕಾಂಗ್ರೆಸ್‌ ನಾಯಕರೂ ಸಹ ಲಿಂಗಾಯತ ಧರ್ಮ ವಿವಾದ ಬೇರೆ ಚುನಾವಣೆ ಬೇರೆ ಎಂದೇ ಹೇಳುತ್ತಲೇ ಬಂದಿದ್ದರು. ಹಾಗಿದ್ದ ಮೇಲೆ ಈಗ ಕಾಂಗ್ರೆಸ್‌ ಪಕ್ಷ ಚುನಾವಣೆಯಲ್ಲಿ ಸೋತ ನಂತರ ಈಗ ಸೋಲಿಗೆ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ ಕಾರಣ ಎಂಬುದು ಹೇಗೆ ಸರಿ ಆಗುತ್ತದೆ ಎಂದು ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದ ಪರ ಇದ್ದವರ ಪ್ರಶ್ನೆ.

English summary
Lingayta separate religion is not the reason of defeat of congress. comment of DK Shivakumar about Lingayata separate religion fight rise debate about Lingayata protest.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X