ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅದ್ಯಾಕೆ ದೇವೇಗೌಡ್ರು 'ದಯಮಾಡಿ' ಮತಯಾಚಿಸುತ್ತಿದ್ದಾರೆ? ಸೋಲಿನ ಮುನ್ಸೂಚನೆಯೇ?

|
Google Oneindia Kannada News

Recommended Video

ಈ ಬಾರಿಯ ಚುನಾವಣೆಯಲ್ಲಿ ಎಚ್ ಡಿ ದೇವೇಗೌಡ್ರ ಭಾಷಣ ವೈಖರಿ ಬದಲಾಗಲು ಕಾರಣ? | Oneindia Kannada

ದೇವೇಗೌಡ್ರು ಎಂತೆಂತಾ ರಾಜಕೀಯವನ್ನು ನೋಡಿದವರು, ಎಂತೆಂತಾ ದಾಳವನ್ನು ಉರುಳಿಸಿದವರು, ವಿರೋಧಿಗಳು ಹೀಗೇ ಹೆಜ್ಜೆಯಿಡುತ್ತಾರೆಂದು ಮೂಗಿನ ಮೇಲೆ ಬೆರಳು ಇಟ್ಟುಕೊಂಡೇ ಲೆಕ್ಕಹಾಕುವವರು.. ಆದರೆ ಪ್ರಸಕ್ತ ಲೋಕಸಭಾ ಚುನಾವಣೆ, ಗೌಡ್ರ ರಾಜಕೀಯ ಲೆಕ್ಕಾಚಾರವನ್ನೇ ಉಲ್ಟಾ ಮಾಡುತ್ತಿದೆಯಾ?

ಬಿಜೆಪಿ, ಕಾಂಗ್ರೆಸ್, ಸಿಪಿಎಂ ಪ್ರಣಾಳಿಕೆಯ ತುಲನೆ. ಯಾವ ಪಕ್ಷದ ಪ್ರಣಾಳಿಕೆ ಉತ್ತಮವಾಗಿದೆ?

ಪುತ್ರನಿಗೆ ಮನೆಬಾಗಿಲಿಗೇ ಸಿಎಂ ಹುದ್ದೆ ಹುಡುಕಿಕೊಂಡು ಬಂದ ನಂತರ ನೇರವಾಗಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಜೊತೆ ಸಂಪರ್ಕದಲ್ಲಿದ್ದ ಗೌಡ್ರು, ಲೋಕಸಭಾ ಚುನಾವಣೆಯ ಸಮಯದಲ್ಲಿ ಪಕ್ಷ ಬಲವರ್ಧನೆಗೆ ಭರ್ಜರಿ ಪ್ಲ್ಯಾನ್ ಹಾಕಿಕೊಂಡಿದ್ದರು. ಹನ್ನೆರಡು ಸೀಟು ಕೇಳಿದ್ದ ಜೆಡಿಎಸ್ಸಿಗೆ ಎಂಟು ಸೀಟು ಫೈನಲ್ ಆಗಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ.

ಹರಿಪ್ರಸಾದ್ ಗೆ ಬ್ರಾಹ್ಮಣರ ಬೆಂಬಲ ಎಂಬುದು ಕಟ್ಟುಕತೆ, ನಿಜಕ್ಕೂ ನಡೆದಿದ್ದೇನು?ಹರಿಪ್ರಸಾದ್ ಗೆ ಬ್ರಾಹ್ಮಣರ ಬೆಂಬಲ ಎಂಬುದು ಕಟ್ಟುಕತೆ, ನಿಜಕ್ಕೂ ನಡೆದಿದ್ದೇನು?

ಎಂಟರಲ್ಲಿ ಅಭ್ಯರ್ಥಿ ಕೊರತೆ ಕಾಡಿದ ನಂತರ, ಕೃಷ್ಣಭೈರೇಗೌಡರನ್ನು ಹೇಗೋ ಮನವರಿಕೆ ಮಾಡಿ ಬೆಂಗಳೂರು ಉತ್ತರ ಕ್ಷೇತ್ರವನ್ನು ನಮ್ಮಿಂದ ಆಗುವುದಿಲ್ಲ ಎಂದು ಕಾಂಗ್ರೆಸ್ಸಿಗೆ ಕೊಟ್ಟು, ತಾವು ತುಮಕೂರಿನಿಂದ ನಾಮಪತ್ರ ಸಲ್ಲಿಸಿದರು. ಬೆಂಗಳೂರು ಉತ್ತರದಲ್ಲಿ ಗೆಲುವು ಕಟ್ಟಿಟ್ಟಬುತ್ತಿ ಅಲ್ಲ ಎನ್ನುವ ಕಾರಣಕ್ಕಾಗಿ ಗೌಡ್ರು, ಕಲ್ಪತರು ನಾಡಿನಡೆಗೆ ದಿಕ್ಕು ಬದಲಾಯಿಸಿದರು.

ಸಾಮ್ರಾಟ್ ಆರ್ ಅಶೋಕ್ 'ಭೀಷ್ಮ ಪ್ರತಿಜ್ಞೆ' ಹಿಂದಿನ ಅಸಲಿಯತ್ತು!ಸಾಮ್ರಾಟ್ ಆರ್ ಅಶೋಕ್ 'ಭೀಷ್ಮ ಪ್ರತಿಜ್ಞೆ' ಹಿಂದಿನ ಅಸಲಿಯತ್ತು!

ತಮ್ಮ ಪಾಲಿಗೆ ಅಂತಿಮವಾದ ಏಳರಲ್ಲೂ ಎರಡು ಕ್ಷೇತ್ರಗಳಿಗೆ ಅಭ್ಯರ್ಥಿ ಕೊರತೆ ಜೆಡಿಎಸ್ಸಿಗೆ ಕಾಡಿದ್ದು ಗೊತ್ತೇ ಇದೆ. ಉಡುಪಿ-ಚಿಕ್ಕಮಗಳೂರಿನಲ್ಲಿ ಕಟ್ಟಾ ಕಾಂಗ್ರೆಸ್ಸಿಗ ಪ್ರಮೋದ್ ಮಧ್ವರಾಜ್ ಅವರಿಗೆ ಮತ್ತು ವಿಜಯಪುರದಲ್ಲಿ ಪ್ರಯಾಸಪಟ್ಟು ಸುನೀತಾ ದೇವಾನಂದ್ ಚೌಹಾಣ್ ಅವರನ್ನು ಕಣಕ್ಕಿಳಿಸಿತು. ದಯನೀಯವಾಗಿ ಮತಯಾಚಿಸುತ್ತಿರುವ ದೇವೇಗೌಡ್ರು. ಸೋಲಿನ ಮುನ್ಸೂಚನೆಯೇ?

ಯಾರೀ.. ಅದು ಮೋದಿ, ನಾನು ನೋಡದ ಮೋದಿನಾ

ಯಾರೀ.. ಅದು ಮೋದಿ, ನಾನು ನೋಡದ ಮೋದಿನಾ

ನನ್ನ ಅರವತ್ತು ವರ್ಷದ ರಾಜಕೀಯ ಜೀವನದಲ್ಲಿ ಬಹಳಷ್ಟು ಏರುಪೇರುಗಳನ್ನು ನೋಡಿದ್ದೇನೆ. ಯಾರೀ.. ಅದು ಮೋದಿ, ನಾನು ನೋಡದ ಮೋದಿನಾ ಎಂದು ಸಾರ್ವಜನಿಕ ಸಭೆಯಲ್ಲಿ ಮಾತನಾಡುವ ಗೌಡ್ರು, ಮತದಾರರಲ್ಲಿ ಮತಯಾಚಿಸುವ ವೈಖರಿ, ಈ ಬಾರಿಯ ಚುನಾವಣೆಯಲ್ಲಿ ಸಂಪೂರ್ಣ ಬದಲಾಗಿದೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.

ದಯನೀಯವಾಗಿ ಮತಯಾಚಿಸುತ್ತಿರುವ ದೇವೇಗೌಡ್ರು

ದಯನೀಯವಾಗಿ ಮತಯಾಚಿಸುತ್ತಿರುವ ದೇವೇಗೌಡ್ರು

ದೇವೇಗೌಡರ ಇತ್ತೀಚಿನ ಭಾಷಣಗಳನ್ನು ಅವಲೋಕಿಸಿದಾಗ, ಒಂದು ವಾಕ್ಯದಲ್ಲಿ ಕನಿಷ್ಠ ಎರಡು ಬಾರಿ 'ದಯಮಾಡಿ.. ದಯಮಾಡಿ' ಎಂದು ಮತಯಾಚಿಸುತ್ತಿದ್ದಾರೆ. 'ನಿಮಗೆಲ್ಲಾ ದಯಮಾಡಿ ಕೇಳಿಕೊಳ್ಳುತ್ತಿದ್ದೇನೆ, ನಮ್ಮ ಅಭ್ಯರ್ಥಿಗೆ ಮತ ನೀಡಿ.. ದಯಮಾಡಿ.. ನಾವೆಲ್ಲಾ ಸೇರಿ ಕೋಮುಶಕ್ತಿಯನ್ನು ದೂರವಿಡಬೇಕಿದೆ', ಹೀಗೆ ಸಾಗುತ್ತದೆ ಗೌಡ್ರ ಭಾಷಣ.

ಗೌಡ್ರು ತಿನ್ನೋದನ್ನಾ 3ದಿನ ತಿಂದು ಮೋದಿ ಬದುಕಿದ್ರೆ, ನಾ ಒಪ್ಕೋತೀನಿ: ಸಿ ಎಂ ಇಬ್ರಾಹಿಂಗೌಡ್ರು ತಿನ್ನೋದನ್ನಾ 3ದಿನ ತಿಂದು ಮೋದಿ ಬದುಕಿದ್ರೆ, ನಾ ಒಪ್ಕೋತೀನಿ: ಸಿ ಎಂ ಇಬ್ರಾಹಿಂ

ದೇಶವನ್ನು ಕಾಪಾಡಲು ಮೋದಿ ಒಬ್ಬರಿಗೇ ಶಕ್ತಿ ಎಂದು ಬಿಂಬಿಸಲಾಗುತ್ತಿದೆ

ದೇಶವನ್ನು ಕಾಪಾಡಲು ಮೋದಿ ಒಬ್ಬರಿಗೇ ಶಕ್ತಿ ಎಂದು ಬಿಂಬಿಸಲಾಗುತ್ತಿದೆ

ಕೆ ಆರ್ ಪೇಟೆಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತಿದ್ದ ಗೌಡ್ರು, ದೇಶವನ್ನು ಕಾಪಾಡಲು ಮೋದಿ ಒಬ್ಬರಿಗೇ ಶಕ್ತಿ ಎಂದು ಬಿಂಬಿಸಲಾಗುತ್ತಿದೆ. ನಿಮ್ಮಲ್ಲಿ ದಯಮಾಡಿ ಒಂದು ವಿನಂತಿ ಮಾಡುತ್ತೇನೆ, ನೀವ್ಯಾರೂ ಮೋಸಹೋಗಬಾರದು. ನಾವೆಲ್ಲಾ ರೈತರ ಮಕ್ಕಳು, ದಯಮಾಡಿ ಬಿಜೆಪಿಯನ್ನು ದೂರವಿಡುವ ಕೆಲಸ ಮಾಡಬೇಕಿದೆ, ಯಾರೂ ಅಪಾರ್ಥ ಮಾಡಿಕೊಳ್ಳಬೇಡಿ ಎಂದು ಗೌಡ್ರು ಮತಯಾಚಿಸಿದ್ದರು.

ನಿಮ್ಮ ಆಶೀರ್ವಾದದಿಂದ ನಾನು ಪಾರ್ಲಿಮೆಂಟಿಗೆ ಹೋಗುವುದು ಸತ್ಯ

ನಿಮ್ಮ ಆಶೀರ್ವಾದದಿಂದ ನಾನು ಪಾರ್ಲಿಮೆಂಟಿಗೆ ಹೋಗುವುದು ಸತ್ಯ

ದಯಮಾಡಿ ಮಿಸ್ಟೇಕ್ ಮಾಡಿಕೊಳ್ಳಬೇಡಿ, 86ನೇ ವಯಸ್ಸಿಗೆ ಕಾಲಿಡುತ್ತಿದ್ದೇನೆ, ನಿಮ್ಮ ಆಶೀರ್ವಾದದಿಂದ ನಾನು ಪಾರ್ಲಿಮೆಂಟಿಗೆ ಹೋಗುವುದು ಸತ್ಯ. ದಯಮಾಡಿ ನಿಮ್ಮಲ್ಲಿ ಮನವಿಮಾಡಿಕೊಳ್ಳುತ್ತಿದ್ದೇನೆ, ನಮ್ಮ ಸಂಖ್ಯಾಬಲ ಹೆಚ್ಚಾದರೆ, ಸಮರ್ಥವಾಗಿ ಮೋದಿಯವರನ್ನು ಸಂಸತ್ತಿನಲ್ಲಿ ಎದುರಿಸುತ್ತೇನೆ. ದಯಮಾಡಿ ನಿಮ್ಮಲ್ಲಿ ಒಂದು ಮಾತು ಹೇಳುತ್ತೇನೆ, ಮೋದಿಯವರು ಪ್ರಧಾನಿ ಸ್ಥಾನಕ್ಕೆ ಗೌರವ ತರುವಂತಹ ಕೆಲಸವನ್ನು ಮಾಡುತ್ತಿಲ್ಲ.

ಮಂಡ್ಯ: ಮತದಾರರಿಗೆ ಕೈ ಮುಗಿದು ಮನವಿ ಮಾಡಿದ ದೇವೇಗೌಡಮಂಡ್ಯ: ಮತದಾರರಿಗೆ ಕೈ ಮುಗಿದು ಮನವಿ ಮಾಡಿದ ದೇವೇಗೌಡ

English summary
Is JDS supremo Deve Gowda intentionally changed his style of seeking votes. In recent speeches, Deve Gowda several times using word like 'dayamadi'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X