ಐಪಿಎಸ್ ಅಧಿಕಾರಿಗಳ ವರ್ಗಾವಣೆ: ಪೊಲೀಸ್ ಕಮೀಷನರೇಟ್‌ಗೆ ಮೇಜರ್ ಸರ್ಜರಿ

ಬೆಂಗಳೂರು, ಡಿ. 31: ಬಹು ನಿರೀಕ್ಷೆಯಂತೆ ಹೊಸ ವರ್ಷ ಆರಂಭಕ್ಕೂ ಮುನ್ನ ದಿನವೇ ಪೊಲೀಸ್ ಇಲಾಖೆಯಲ್ಲಿ ಭಾರೀ ಬದಲಾವಣೆ ಮಾಡಿ ಸರ್ಕಾರ ಅದೇಶ ಹೊರಡಿಸಿದೆ. ರಾಜ್ಯದ ಪ್ರಮುಖ ಹುದ್ದೆ ಅಲಂಕರಿಸಿದ್ದ ಕೆಲವರಿಗೆ ಬಡ್ತಿ ನೀಡಿ ಆಯಕಟ್ಟಿನ ಹುದ್ದೆಗಳಿಗೆ ವರ್ಗಾವಣೆ ಮಾಡಲಾಗಿದೆ. ಇನ್ನೂ ಕೆಲವರು ಐಪಿಎಸ್ ಅಧಿಕಾರಿಗಳನ್ನು ಬೇರೆ ಹುದ್ದೆಗಳಿಗೆ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಮಾಡಿದೆ. ಇದರ ಜತೆಗೆ ಇತ್ತೀಚೆಗೆ ಐಪಿಎಸ್ ಹುದ್ದೆಗೆ ಪದೋನ್ನತಿ ಹೊಂದಿದ್ದ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದು, ಕೆಲವು ಹುದ್ದೆಗಳನ್ನು ಮೇಲ್ದರ್ಜೆಗೇರಿಸಿ ಅದೇ ಹುದ್ದೆಗಳಲ್ಲಿ ಮುಂದುವರೆಸಲಾಗಿದೆ. ಬೆಂಗಳೂರು ನಗರ ಕಮೀಷನರೇಟ್ ವ್ಯಾಪ್ತಿಯಲ್ಲಿ ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದ ಐಪಿಎಸ್ ಅಧಿಕಾರಿಗಳು ಬಡ್ತಿ ಹೊಂದಿದ್ದು, ಬಡ್ತಿ ಜತೆಗೆ ವರ್ಗಾವಣೆ ಮಾಡಲಾಗಿದೆ.

ಹಿರಿಯ ಐಪಿಎಸ್ ಅಧಿಕಾರಿಗಳ ವರ್ಗಾವಣೆ

1. ಎಸ್. ಮುರುಗನ್ - ಎಡಿಜಿಪಿ, ಸಂವಹನ ಮತ್ತು ಆಧುನೀಕರಣ ಘಟಕ ಬೆಂಗಳೂರು.

2. ಕೆ.ವಿ. ಶರತ್ ಚಂದ್ರ, ಎಡಿಜಿಪಿ, ಸಿಐಡಿ.

3. ಎಂ. ನಂಜುಂಡಸ್ವಾಮಿ, ಎಡಿಜಿಪಿ, ಕೆಎಸ್ಆರ್‌ಪಿ.

4. ಸೌಮೇಂದು ಮುಖರ್ಜಿ, ಐಜಿಪಿ, ಗುಪ್ತಚರ ಇಲಾಖೆ.

5. ರವಿ ಎಸ್. ಐಜಿಪಿ, ಕೆಎಸ್ಆರ್ ಪಿ.

6. ವಿಫುಲ್ ಕುಮಾರ್, ಐಜಿಪಿ, ಆಂತರಿಕ ಭದ್ರತೆ.

7. ಡಾ. ಎ. ಸುಬ್ರಮಣೇಶ್ವರ ರಾವ್, ಅಡಿಷನಲ್ ಕಮೀಷನರ್, ಪೂರ್ವ ವಿಭಾಗ, ಬೆಂಗಳೂರು.

8. ಲಾಬುರಾಮ್, ಐಜಿ ಹುದ್ದೆಗೆ ಬಡ್ತಿ ನೀಡಿ, ಹುಬ್ಬಳ್ಳಿ - ಧಾರವಾಡ ಪೊಲೀಸ್ ಆಯುಕ್ತ ಹುದ್ದೆಯಲ್ಲಿ ಮುಂದುವರೆಸಲಾಗಿದೆ.

9. ಡಾ. ಪಿ.ಎಸ್. ಹರ್ಷ, ಐಜಿಪಿ ಹುದ್ದೆಗೆ ಬಡ್ತಿ ನೀಡಿ ವಾರ್ತಾ ಇಲಾಖೆಯ ಆಯುಕ್ತರ ಹುದ್ದೆಯಲ್ಲಿ ಮುಂದುವರೆಸಲಗಿದೆ.

10. ವಿಕಾಸ್ ಕುಮಾರ್ ವಿಕಾಸ್ ನಿರ್ದೇಶಕರು, ಎಂಎಸ್ಐಎಲ್.

11. ರಮಣ್ ಗುಪ್ತಾ, ಜಂಟಿ ಪೊಲೀಸ್ ಆಯುಕ್ತ, ಬೆಂಗಳೂರು.

12. ಡಾ. ಕೆ. ತ್ಯಾಗರಾಜನ್, ಡಿಐಜಿ , ನೇಮಕಾತಿ ವಿಭಾಗ.

13. ಎಂ. ಬಿ. ಬೋರಲಿಂಗಯ್ಯ, ಪೊಲೀಸ್ ಆಯುಕ್ತ ಬೆಳಗಾವಿ ನಗರ.

14. ರಾಮನಿವಾಸ್ ಸೆಪಟ್, ರಾಷ್ಟ್ರೀಯ ಪೊಲೀಸ್ ಅಕಾಡೆಮಿ ಸಹಾಯಕ ನಿರ್ದೇಶಕ ಹುದ್ದೆಯಲ್ಲಿರುವರಿಗೆ ಬಡ್ತಿ ನೀಡಲಾಗಿದೆ.

15. ಡಾ. ರೋಹಿಣಿ ಕಟೋಚ್ ಸೆಪಟ್, ರಾಷ್ಟ್ರೀಯ ಪೊಲೀಸ್ ಅಕಾಡೆಮಿ ಸಹಾಯಕ ನಿರ್ದೇಶಕ ಹುದ್ದೆ, ಅವರಿಗೂ ಬಡ್ತಿ ನೀಡಲಾಗಿದೆ.

16. ರಂಜಿತ್ ಕುಮಾರ್ ಬಂಡಾರು, ಕೌಂಟರ್ ಟೆರರಿಸಂ ಘಟಕದ ಎಸ್ಪಿ, ಬೆಂಗಳೂರು.

17. ಅನ್ಶು ಕುಮಾರ್, ಎಸ್ಪಿ ಕೋಸ್ಟಲ್ ಗಾರ್ಡ್, ಉಡುಪಿ.

18. ಸಾಹಿಲ್ ಬಾಗ್ಲಾ, ಡಿಸಿಪಿ, ಕಾನೂನು ಮತ್ತು ಸುವ್ಯವಸ್ಥೆ, ಹುಬ್ಬಳ್ಳಿ- ಧಾರವಾಡ ಸಿಟಿ.

19. ದೀಪನ್, ಎಂ.ಎನ್. ಅಸಿಸ್ಟೆಂಟ್ ಕಮೀಷನರ್ ಆಫ್ ಪೊಲೀಸ್, ಮಂಗಳೂರು ಸೌತ್ ವಿಭಾಗ.

IPS officers transfer list 2021: Promotion and transfer list of IPS officers

ಇನ್ನು 2009 ನೇ ಬ್ಯಾಚ್ ಐಪಿಎಸ್ ಅಧಿಕಾರಿಗಳಿಗೆ ಪದೋನ್ನತಿ: 2009 ನೇ ಸಾಲಿನ ಐಪಿಎಸ್ ಅಧಿಕಾರಿಗಳಾದ ಡಾ. ಎಸ್. ಡಿ. ಶರಣಪ್ಪ, ಡಿಸಿಪಿ ಪೂರ್ವ ವಿಭಾಗ, ಎಂ.ಎನ್. ಅನುಚೇತ್, ಡಿಸಿಪಿ, ಕೇಂದ್ರ ವಿಭಾಗ, ಬಿ.ರಮೇಶ್, ಸಿಐಡಿ, ಇಡಾ ಮಾರ್ಟಿನ್, ಪೊಲೀಸ್ ತರಬೇತಿ ಶಾಲೆ, ಗುಲ್ಬರ್ಗಾ, ರವಿ ಡಿ. ಚನ್ನಣ್ಣನವರ್ ಇವರಿಗೆ ಕೇಂದ್ರ ಸೇವಾ ನಿಯಮದಡಿ ಪದೋನ್ನತಿ ನೀಡಿ ವೇತನ ಪರಿಷ್ಕರಣೆಗೆ ಒಳಪಟ್ಟಿದ್ದು, ಅದೇ ಹುದ್ದೆಗಳಲ್ಲಿಯೇ ಮುಂದುವರೆಸಲಾಗಿದೆ.

Recommended Video

      ಡಿಪ್ರೆಷನ್ ಗೆ ಒಳಗಾಗಿದ್ದ ಶಮಿ ಈಗ ಟೀಂ‌ ಇಂಡಿಯಾದ ಮ್ಯಾಚ್ ವಿನ್ನರ್ ಆಗಿದ್ದು ಹೇಗೆ? | Oneindia kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+