ಟೀಯೆಸ್ಸಾರ್ ಸ್ಮಾರಕ, ಮೊಹರೆ ಹಣಮಂತರಾಯ ಪ್ರಶಸ್ತಿಗಳಿಗೆ ಸಮಿತಿ ರಚನೆ: ನಾಮ ನಿರ್ದೇಶನಗಳ ಆಹ್ವಾನ

ಟೀಯೆಸ್ಸಾರ್ ಸ್ಮಾರಕ ಪ್ರಶಸ್ತಿ ಹಾಗೂ ಮೊಹರೆ ಹಣಮಂತರಾಯ ಪ್ರಶಸ್ತಿಗಳಿಗೆ ಆಯ್ಕೆ ಸಮಿತಿ ರಚಿಸಲಾಗಿದ್ದು, ಪ್ರಶಸ್ತಿಗೆ ನಾಮ ನಿರ್ದೇಶನಗಳನ್ನು ಆಹ್ವಾನಿಸಲಾಗಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ 2019ನೇ ರಿಂದ 2023ನೇ ವರೆಗೆ ಪ್ರಶಸ್ತಿಗೆ ಆಹ್ವಾನಿಸಿದೆ.

ಪ್ರಶಸ್ತಿಗಳಿಗೆ ನಾಮನಿರ್ದೇಶನಗಳನ್ನು, ಮಾಧ್ಯಮ ಸಂಸ್ಥೆಗಳು ಹಾಗೂ ಇತರೆ ಸಂಘ ಸಂಸ್ಥೆಗಳು ಮತ್ತು ವ್ಯಕ್ತಿಗಳು ಪೂರ್ಣ ದಾಖಲೆಗಳೊಂದಿಗೆ ಆಯುಕ್ತರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ವಾರ್ತಾಸೌಧ, ನಂ. 17, ಭಗವಾನ್ ಮಹಾವೀರರಸ್ತೆ, ಬೆಂಗಳೂರು - 560 001 ಇಲ್ಲಿಗೆ 2024ನೇ ಜುಲೈ 25ರ ಸಂಜೆ 5.30 ಗಂಟೆ ಒಳಗಾಗಿ ಕಳುಹಿಸಿಕೊಡಬಹುದಾಗಿದೆ. ಅಥವಾ ಜಿಲ್ಲಾ ವಾರ್ತಾಧಿಕಾರಿಗಳ ಕಚೇರಿ ಮೂಲಕ ಇಲ್ಲವೇ [email protected] ಇಮೇಲ್ ವಿಳಾಸಕ್ಕೆ ಕೊನೆಯ ದಿನಾಂಕದೊಳಗೆ ಕಳುಹಿಸಿಕೊಡಬಹುದಾಗಿದೆ.

Invitation for Nominations for Journalism Awards Formation of Selection Committee

ಟಿಯೆಸ್ಸಾರ್ ಸ್ಮಾರಕ ಪತ್ರಿಕೋದ್ಯಮ ಪ್ರಶಸ್ತಿ

ಕನ್ನಡದ ಖ್ಯಾತ ಪರ್ತಕರ್ತ ಟಿ.ಎಸ್. ರಾಮಚಂದ್ರರಾವ್ ಅವರ ಸವಿ ನೆನಪಿಗಾಗಿ ಸರ್ಕಾರ ಟಿಯೆಸ್ಸಾರ್‌ ಪ್ರಶಸ್ತಿ ನೀಡುತ್ತಾ ಬಂದಿದೆ. ಈ ಪ್ರಶಸ್ತಿ ಫಲಕ ಹಾಗೂ 2 ಲಕ್ಷ ನಗದು ಹೊಂದಿರುತ್ತದೆ. ಆಕಾಂಕ್ಷಿ ಕನಿಷ್ಠ ಪತ್ರಿಕೋದ್ಯಮದಲ್ಲಿ 30 ವರ್ಷಗಳ ಸೇವೆ ಸಲ್ಲಿಸಿರಬೇಕು. ಅಲ್ಲದೆ ಕನ್ನಡ ಕ್ಷೇತ್ರಕ್ಕೆ ಭಾಷೆಯ ಬೆಳವಣಿಗೆಗೆ ವಿಶೇಷ ಕೊಡುಗೆ ನೀಡಿರಬೇಕು. ಪ್ರತಿ ವರ್ಷಕ್ಕೆ ಒಬ್ಬರಿಗೆ ಮಾತ್ರ ಈ ಪ್ರಶಸ್ತಿಯನ್ನು ನೀಡಲಾಗುವುದು.

ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿ

ಪತ್ರಿಕಾ ರಂಗದ ಭೀಷ್ಮ ಎಂದೇ ಖ್ಯಾತಿ ಪಡೆದಿರುವ ಮೊಹರೆ ಹಣಮಂತರಾಯ ಅವರ ನೆನಪಿನಲ್ಲಿ ಸರ್ಕಾರವು ಪ್ರಶಸ್ತಿ ನೀಡುತ್ತಾ ಬಂದಿದೆ. ಪ್ರಶಸ್ತಿಯ ಮೊತ್ತವು 2 ಲಕ್ಷ ರೂ ಆಗಿದ್ದು, ಕನ್ನಡದ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಯಾವುದೇ ಪತ್ರಿಕೆಯನ್ನು ಅಥವಾ ಪತ್ರಿಕಾ ಸಮೂಹವನ್ನು ಸಮರ್ಥವಾಗಿ ಕಟ್ಟಿ ಬೆಳೆಸಿದ ಹಾಗೂ ಪ್ರವೃತ್ತಿಯಲ್ಲಿ ಪತ್ರಕರ್ತರಾಗಿ, ವೃತ್ತಿಯಲ್ಲಿ ಪತ್ರಿಕಾಲಯದ ಮಾಲೀಕರು, ಆಡಳಿತಗಾರರಾಗಿ ಕನಿಷ್ಠ 30 ವರ್ಷ ಸೇವೆ ಸಲ್ಲಿಸಿರಬೇಕು.

ಆಯ್ಕೆ ಸಮಿತಿ

ಹೈಕೋರ್ಟ್ ನಿವೃತ್ತ ನ್ಯಾಯಾಧೀಶರಾದ ಪಿ.ಎನ್.ದೇಸಾಯಿ ಅವರ ಅಧ್ಯಕ್ಷತೆಯ ಆಯ್ಕೆ ಸಮಿತಿಯಲ್ಲಿ ಹಿರಿಯ ಪತ್ರಕರ್ತರಾದ ಡಾ.ಈಶ್ವರ ದೈತೋಟ, ಶಾಂತಲಾ ಧರ್ಮರಾಜ್ ಹಾಗೂ ಎಂ.ಎಸ್.ಮಣಿ ಸದಸ್ಯರಾಗಿದ್ದಾರೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರು ಸದಸ್ಯ ಕಾರ್ಯದರ್ಶಿಗಳಾಗಿರುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+