ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎರಡು ಪ್ರಕರಣದಲ್ಲಿ ರಾಘವೇಶ್ವರ ಶ್ರೀಗಳಿಗೆ ಜಾಮೀನು

|
Google Oneindia Kannada News

ಬೆಂಗಳೂರು, ನ.18 : ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳಿಗೆ ಅತ್ಯಾಚಾರ ಆರೋಪ ಮತ್ತು ಶ್ಯಾಮಪ್ರಸಾದ್ ಶಾಸ್ತ್ರಿಗಳ ಆತ್ಮಹತ್ಯೆ ಪ್ರಕರಣದಲ್ಲಿ ಸೆಷನ್ಸ್ ನ್ಯಾಯಾಲಯ ಷರತ್ತುಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಇದರಿಂದ ಬಂಧನದ ಭೀತಿಯಿಂದ ಶ್ರೀಗಳು ಪಾರಾಗಿದ್ದಾರೆ.

ಗಾಯಕಿ ಪ್ರೇಮಲತಾ ದಿವಾಕರ್ ಮಾಡಿರುವ ಅತ್ಯಾಚಾರ ಆರೋಪ ಮತ್ತು ಶ್ಯಾಮಪ್ರಸಾದ್ ಶಾಸ್ತ್ರಿಗಳ ಆತ್ಮಹತ್ಯೆ ಪ್ರಕರಣದಲ್ಲಿ ಶ್ರೀಗಳ ವಿರುದ್ಧ ದೂರು ದಾಖಲಾಗಿದೆ. ಈ ಎರಡೂ ಪ್ರಕರಣಗಳಲ್ಲಿ ಬಂಧನ ಭೀತಿ ಎದುರಿಸಿದ್ದ ಶ್ರೀಗಳು ನ್ಯಾಯಾಲಯದ ಮೊರೆ ಹೋಗಿದ್ದರು.

Raghaveshwara Swamiji

ರಾಘವೇಶ್ವರ ಶ್ರೀಗಳಿಗೆ ಈ ಎರಡೂ ಪ್ರಕರಣದಲ್ಲಿ ಮಧ್ಯಾಂತರ ಜಾಮೀನು ನೀಡಲಾಗಿತ್ತು. ಅತ್ಯಾಚಾರ ಪ್ರಕರಣದಲ್ಲಿ 30 ದಿನಗಳ ಹಾಗೂ ಶ್ಯಾಮ ಪ್ರಸಾದ್ ಶಾಸ್ತ್ರಿ ಪ್ರಕರಣದಲ್ಲಿ 20 ದಿನಗಳ ಜಾಮೀನು ದೊರಕಿತ್ತು. [ಶ್ಯಾಮ ಶಾಸ್ತ್ರಿ ಕೇಸ್, ರಾಘವೇಶ್ವರ ಶ್ರೀಗಳಿಗೆ ಜಾಮೀನು]

ಸೋಮವಾರ ಈ ಜಾಮೀನನ ಅವಧಿ ಮುಕ್ತಾಯಗೊಂಡ ಹಿನ್ನಲೆಯಲ್ಲಿ ಎರಡೂ ಪ್ರಕರಣಗಳ ವಿಚಾರಣೆ ನಡೆಯಿತು. ಎರಡೂ ಪ್ರಕರಣಗಳಲ್ಲಿ ಶ್ರೀಗಳಿಗೆ ಷರತ್ತುಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ನ್ಯಾಯಾಲಯ ಆದೇಶ ಹೊರಡಿಸಿತು. [ಆರೋಪಗಳನ್ನು ಎದುರಿಸಲು ಸಿದ್ಧ : ರಾಘವೇಶ್ವರ ಶ್ರೀ]

ರಾಘವೇಶ್ವರ ಶ್ರೀಗಳು ತಮ್ಮ ಪಾಸ್‌ಪೋರ್ಟ್‌ ನ್ಯಾಯಾಲಯಕ್ಕೆ ಒಪ್ಪಿಸಬೇಕು, ಸಾಕ್ಷಿಗಳಿಗೆ ಬೆದರಿಕೆ ಹಾಕಬಾರದು, ನ್ಯಾಯಾಲಯ ಸೂಚಿಸಿದಾಗ ತನಿಖೆಗೆ ಹಾಜರಾಗಬೇಕು ಎನ್ನುವ ಷರತ್ತುಗಳನ್ನು ವಿಧಿಸಿರುವ ನ್ಯಾಯಾಲಯ 1 ಲಕ್ಷ ರೂ. ಮೌಲ್ಯದ ಬಾಂಡ್ ಜತೆಗೆ ಒಬ್ಬರ ಜಾಮೀನು ಪಡೆದಿದೆ.

English summary
In Shyama Prasad Shastri suicide case and sexual harassment case Bengaluru sessions court granted interim anticipatory bail for Raghaveshwara Bharati Swamiji of Ramachandrapura Mutt, Hosanagara.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X