• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಂತರ ಜಿಲ್ಲಾ ಸಂಚಾರ; ಕರ್ನಾಟಕ ಸರ್ಕಾರದ ಸ್ಪಷ್ಟನೆಗಳು

|

ಬೆಂಗಳೂರು, ಮೇ 20 : ಕರ್ನಾಟಕದಲ್ಲಿ ಲಾಕ್ ಡೌನ್ ನಿಯಮ ಸಡಿಲಿಕೆ ಆಗಿದೆ. ಅಂತರ ಜಿಲ್ಲೆಗಳ ನಡುವೆ ಸರ್ಕಾರಿ ಬಸ್‌ ಸಂಚಾರವೂ ಆರಂಭವಾಗಿದೆ. ಆದರೆ, ಅಂತರ ಜಿಲ್ಲಾ ಸಂಚಾರಕ್ಕೆ ಪಾಸು ಬೇಕೆ?, ಬೇಡವೆ? ಎಂಬ ಗೊಂದಲ ಜನರಲ್ಲಿ ಮುಂದುವರೆದಿದೆ.

   ಲಾಕ್ ಡೌನ್ ನಡುವೆ ಚಲಿಸುವ ರೈಲಿನಲ್ಲಿ ಮಗುವಿಗೆ ಜನ್ಮ ನೀಡಿದ ತಾಯಿ | Oneindia Kannada

   ಕರ್ನಾಟಕ ಸರ್ಕಾರ ಈ ಕುರಿತು ಸ್ಪಷ್ಟನೆ ನೀಡಿದೆ. ಅಂತರ ಜಿಲ್ಲೆಗಳ ನಡುವೆ ಬಸ್‌ನಲ್ಲಿ ಸಂಚಾರ ನಡೆಸುವ ಪ್ರಯಾಣಿಕರಿಗೆ ಪಾಸುಗಳ ಅಗತ್ಯವಿಲ್ಲ. ಆದರೆ, ಖಾಸಗಿ ವಾಹನಗಳಲ್ಲಿ ಸಂಚಾರ ನಡೆಸುವ ಜನರು ಕಡ್ಡಾಯವಾಗಿ ಪಾಸು ಪಡೆಯಬೇಕು.

   ಅಂತರ ಜಿಲ್ಲಾ ಸಂಚಾರದ ಪಾಸು ಪಡೆಯುವುದು ಮತ್ತಷ್ಟು ಸುಲಭಅಂತರ ಜಿಲ್ಲಾ ಸಂಚಾರದ ಪಾಸು ಪಡೆಯುವುದು ಮತ್ತಷ್ಟು ಸುಲಭ

   ಸೇವಾ ಸಿಂಧು ಪೋರ್ಟಲ್ ಮೂಲಕ ಜನರು ಪಾಸುಗಳನ್ನು ಪಡೆಯಬೇಕಿದೆ. ಅಂತರ ಜಿಲ್ಲೆ ನಡುವೆ ಸಂಚಾರ ನಡೆಸುವಾಗ 3ನೇ ಹಂತದ ಲಾಕ್ ಡೌನ್ ಜಾರಿಗೊಳಿಸುವಾಗ ಸೂಚಿಸಿದ ಮಾರ್ಗಸೂಚಿಗಳನ್ನು ಪಾಲನೆ ಮಾಡಲೇಬೇಕು.

   ಅಂತರ ಜಿಲ್ಲೆ ಓಡಾಡೋಕೆ ಬೆರಳ ತುದಿಯಲ್ಲೇ ಪಾಸು ಪಡೆಯಿರಿ! ಅಂತರ ಜಿಲ್ಲೆ ಓಡಾಡೋಕೆ ಬೆರಳ ತುದಿಯಲ್ಲೇ ಪಾಸು ಪಡೆಯಿರಿ!

   ಸರ್ಕಾರಿ ನೌಕಕರರು, ಕಾರ್ಖನೆ ಕೆಲಸಕ್ಕೆ ಹೋಗುವ ಉದ್ಯೋಗಿಗಳು ಹೀಗೆ ಪ್ರತಿದಿನ ಓಡಾಡುವವರು ಪಾಸು ಪಡೆಯುವ ಅಗತ್ಯವಿಲ್ಲ. ತಮ್ಮ ಗುರುತಿನ ಚೀಟಿಯನ್ನು ತೋರಿಸಿ ಪ್ರಯಾಣ ನಡೆಸಬಹುದು. ಖಾಸಗಿ ವಾಹನದಲ್ಲಿ ಹೋಗುವವರು ಪಾಸು ಪಡೆಯಲೇಬೇಕು.

   ಅಂತರ ಜಿಲ್ಲಾ ಪಾಸು ಪಡೆಯಲು ಮಾರ್ಗಸೂಚಿಗಳೇನು? ಅಂತರ ಜಿಲ್ಲಾ ಪಾಸು ಪಡೆಯಲು ಮಾರ್ಗಸೂಚಿಗಳೇನು?

   ಟ್ಯಾಕ್ಸಿಯಲ್ಲಿ ಚಾಲಕನ ಜೊತೆ ಇಬ್ಬರು. ಮ್ಯಾಕ್ಸಿ ಕ್ಯಾಬ್‌ನಲ್ಲಿ ಚಾಲಕನ ಜೊತೆ ಮೂವರು ಪ್ರಯಾಣ ಮಾಡಲು ಅನುಮತಿ ಇದೆ. ಸೇವಾ ಸಿಂಧು ಪೋರ್ಟಲ್‌ನಲ್ಲಿ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಸುಲಭವಾಗಿ ಪಾಸುಗಳನ್ನು ಪಡೆಯಬಹುದು.

   ಮೊಬೈಲ್ ಮತ್ತು ವೆಬ್ ಸೈಟ್ ಮೂಲಕ ಜನರು ಸುಲಭವಾಗಿ ಪಾಸುಗಳನ್ನು ಪಡೆಯಬಹುದು. ಪ್ರತಿ ಜಿಲ್ಲೆಯಲ್ಲಿಯೂ ಚೆಕ್ ಪೋಸ್ಟ್‌ಗಳಿದ್ದು, ಖಾಸಗಿ ವಾಹನದಲ್ಲಿ ಸಂಚಾರ ನಡೆಸುವ ಜನರನ್ನು ತಪಾಸಣೆ ಮಾಡಲಾಗುತ್ತಿದೆ.

   ಜನರಿಗೆ ಖಾಸಗಿ ವಾಹನದಲ್ಲಿ ಬೆಳಗ್ಗೆ 7 ರಿಂದ ಸಂಜೆ 7ಗಂಟೆ ತನಕ ಮಾತ್ರ ಸಂಚಾರ ನಡೆಸಲು ಅವಕಾಶ ನೀಡಲಾಗಿದೆ. ಯಾವುದಾದರೂ ಜಿಲ್ಲೆ ಕಂಟೈನ್‌ಮೆಂಟ್ ವಲಯದಲ್ಲಿದ್ದರೆ ಅಲ್ಲಿಗೆ ಯಾರೂ ಸಹ ಪ್ರಯಾಣ ಮಾಡುವಂತಿಲ್ಲ.

   English summary
   Karnataka government clarification on pass for inter district movement. People who travel on private vehicle should get pass.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X