ಬಡತನ ಮೆಟ್ಟಿ ನಿಂತ ಕಾರು ಡ್ರೈವರ್‌ ಮಗಳು: ಪ್ರೊಫೆಸರ್ ಆಗುವ ಕನಸು ಹೊತ್ತ ಮೈಸೂರಿನ ಮೇಘನಾ ಲಕ್ಷ್ಮಣ್ ಯಶೋಗಾಥೆ

ಶಿಕ್ಷಣ ಎನ್ನುವುದು ಒಬ್ಬ ಮನುಷ್ಯನ ಬದುಕನ್ನ ಹೇಗೆ ಬದಲಾಯಿಸುತ್ತದೆ ಮತ್ತು ಕಷ್ಟದ ಪರಿಸ್ಥಿತಿಗಳಲ್ಲಿ ಹೇಗೆ ಎದುರಿಸಿ ನಿಲ್ಲುವ ಶಕ್ತಿಯನ್ನ ನೀಡುತ್ತದೆ ಎಂಬುದಕ್ಕೆ ಮೈಸೂರಿನ ಮೇಘನಾ ಲಕ್ಷ್ಮಣ್ ಅವರ ಜೀವನವೇ ಒಂದೊಳ್ಳೆ ಉದಾಹರಣೆ.

ಹೌದು, ಬಡತನ, ಕೌಟುಂಬಿಕ ಜವಾಬ್ದಾರಿಗಳು ಮತ್ತು ಪ್ರತಿದಿನದ ಸವಾಲುಗಳ ನಡುವೆಯೂ ಸಾಧಿಸುವ ಛಲವಿದ್ದರೆ ಯಾವುದೂ ಅಸಾಧ್ಯವಲ್ಲ ಎಂಬುದನ್ನು ಮೇಘನಾ ತಮ್ಮ ಪರಿಶ್ರಮದ ಮೂಲಕ ಸಾಬೀತುಪಡಿಸಿದ್ದಾರೆ. ಇವರ ಈ ಸ್ಪೂರ್ತಿದಾಯಕ ಕಥೆಯನ್ನು ಎಕ್ಸ್ ಖಾತೆಯಲ್ಲಿ ದೇವ್ ಎಂಬುವವರು ಹಂಚಿಕೊಂಡಿದ್ದು, ಪ್ರಸ್ತುತ ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

Inspiring Success Story of Meghna Lakshman A Car Driver s Daughter Shaping Her Future in Finance

ಕಷ್ಟಗಳನ್ನ ಮೆಟ್ಟಿ ನಿಂತು ಮೈಸೂರಿನಲ್ಲಿ ಶಿಕ್ಷಣ

ಮೇಘನಾ ಲಕ್ಷ್ಮಣ್ ಅವರ ತಂದೆ ವೃತ್ತಿಯಲ್ಲಿ ಒಬ್ಬ ಸಾಮಾನ್ಯ ಕಾರ ಡ್ರೈವರ್‌. ಅವರು ಹಲವು ವರ್ಷಗಳ ಕಾಲ ಬೆಂಗಳೂರಿನ ಪ್ರತಿಷ್ಠಿತ ಬಿಎಚ್ಇಎಲ್ ಸಂಸ್ಥೆಯಲ್ಲಿ ಚಾಲಕರಾಗಿ ಕೆಲಸ ಮಾಡಿದ್ದರು. ಪ್ರಸ್ತುತ ಅವರು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕಾರು ಚಾಲಕರಾಗಿ ತಮ್ಮ ಸೇವೆ ಮುಂದುವರಿಸುತ್ತಿದ್ದಾರೆ.

ತನಗೆ ಸರಿಯಾದ ಶಿಕ್ಷಣ ಪಡೆಯಲು ಸಾಧ್ಯವಾಗದಿದ್ದರೂ, ತನ್ನ ಮಗಳು ಉನ್ನತ ಮಟ್ಟಕ್ಕೆ ಬೆಳೆಯಬೇಕು, ಸಮಾಜದಲ್ಲಿ ಒಂದು ಉನ್ನತ ಸ್ಥಾನಕ್ಕೇರಬೇಕು ಎಂಬುದು ಆ ತಂದೆಯ ಬಹುದೊಡ್ಡ ಕನಸಾಗಿತ್ತು. ತಂದೆಯ ಕನಸು ಮತ್ತು ಬೆಂಬಲದೊಂದಿಗೆ ಮೇಘನಾ, ಮೈಸೂರಿನ ಹೆಸರಾಂತ ಸೇಂಟ್ ತೆರೇಸಿಯನ್ ಕಾಲೇಜಿನಲ್ಲಿ ಬಿ.ಕಾಂ ಪದವಿಯನ್ನ ಅತ್ಯುತ್ತಮ ಅಂಕಗಳೊಂದಿಗೆ ಪೂರೈಸಿದರು.

ಕೇವಲ ಪದವಿಗೆ ಸೀಮಿತವಾಗದ ಇವರು, ತಮ್ಮ ಪರಿಶ್ರಮದಿಂದ ರಾಜ್ಯ ಮಟ್ಟದ ಪಿಜಿಸಿಇಟಿ ಪ್ರವೇಶ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿ, ಸ್ಕಾಲರ್‌ಶಿಪ್ ಪಡೆದುಕೊಂಡರು. ಬಳಿಕ ಮೈಸೂರಿನ ವಿದ್ಯಾ ವರ್ಧಕ ಕಾಲೇಜಿನಲ್ಲಿ ಫೈನಾನ್ಸ್ ವಿಭಾಗದಲ್ಲಿ ಎಂಬಿಎ ಪದವಿಯನ್ನ ಮುಗಿಸಿದರು.

ವಿಶೇಷ ಚೇತನ ಸಹೋದರನ ಆರೈಕೆ

ಶಿಕ್ಷಣದ ಕಡೆಗೆ ಮೇಘನಾ ಅವರ ಗಮನ ಎಷ್ಟಿತ್ತೋ, ಅಷ್ಟೇ ಜವಾಬ್ದಾರಿ ಅವರ ಕುಟುಂಬದ ಮೇಲೂ ಇತ್ತು. ತನ್ನ ತಾಯಿಯ ಜೊತೆ ಸೇರಿ ಮನೆ ಕೆಲಸಗಳನ್ನು ಮಾಡುವುದರ ಜೊತೆಗೆ, ತನ್ನ 18 ವರ್ಷದ ದಿವ್ಯಾಂಗ(ಸ್ಪೆಷಲ್ ಚೈಲ್ಡ್) ಸಹೋದರನ ಸಂಪೂರ್ಣ ಆರೈಕೆಯಲ್ಲಿಯೂ ಇವರು ನೆರವಾಗುತ್ತಿದ್ದಾರೆ.

ಮನೆಯ ಕಷ್ಟಗಳು, ಆರ್ಥಿಕ ಸಮಸ್ಯೆ ಮತ್ತು ಸಹೋದರನ ಜವಾಬ್ದಾರಿಗಳ ನಡುವೆಯೂ ಅವರು ತಮ್ಮ ಓದಿನ ಕಡೆಗೆ ಗಮನ ಹರಿಸಿದ್ದು ನಿಜಕ್ಕೂ ಮೆಚ್ಚುವಂತಹದ್ದು. ಎಷ್ಟೇ ಕಷ್ಟದ ಪರಿಸ್ಥಿತಿಗಳು ಎದುರಾದರೂ ಅವು ಅವರ ಶೈಕ್ಷಣಿಕ ಗುರಿಯನ್ನ ತಡೆಯಲು ಸಾಧ್ಯವಾಗಲಿಲ್ಲ.

ಆರ್ ವಿ ಯೂನಿವರ್ಸಿಟಿಯಲ್ಲಿ ಹೊಸ ಅಧ್ಯಾಯ

ಎಂಬಿಎ ವ್ಯಾಸಂಗ ಮಾಡುವಾಗ ಬೇಸಿಗೆ ರಜೆಯ ಇಂಟರ್ನ್‌ಶಿಪ್‌ಗಾಗಿ ಮಾರ್ಗದರ್ಶನ ಕೋರಿ ಮೇಘನಾ ಅವರು ಮೊದಲು ದೇವ್ ಅವರನ್ನ ಭೇಟಿಯಾಗಿದ್ದರು. ಎಂಬಿಎ ಪೂರ್ಣಗೊಳಿಸಿದ ನಂತರ, ಕಾರ್ಪೊರೇಟ್ ವಲಯದ ದೊಡ್ಡ ದೊಡ್ಡ ಕಂಪನಿಗಳಲ್ಲಿ ಕೆಲಸ ಹುಡುಕುವ ಬದಲು, ಅವರು ಶಿಕ್ಷಣ ಕ್ಷೇತ್ರದಲ್ಲಿಯೇ ಮುಂದುವರಿಯುವ ನಿರ್ಧಾರ ಮಾಡಿದರು.

ಇತ್ತೀಚೆಗೆ ಅವರು ಪ್ರತಿಷ್ಠಿತ ಆರ್ ವಿ ಯೂನಿವರ್ಸಿಟಿಯಲ್ಲಿ ಶೈಕ್ಷಣಿಕ ಆಡಳಿತ ವಿಭಾಗದ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ತಾವು ವಿಶ್ವವಿದ್ಯಾಲಯದ ಪರಿಸರದಲ್ಲೇ ಉಳಿದುಕೊಳ್ಳಬೇಕು, ಫೈನಾನ್ಸ್ ವಿಭಾಗದಲ್ಲಿ ಪಿಎಚ್‌ಡಿ ಮಾಡಬೇಕು ಮತ್ತು ಭವಿಷ್ಯದಲ್ಲಿ ತಮಗೆ ಮಾರ್ಗದರ್ಶನ ನೀಡಿದ ದೇವ್ ಅವರಂತೆಯೇ ಒಬ್ಬ ಉತ್ತಮ ಪ್ರೊಫೆಸರ್ ಆಗಬೇಕು ಎಂಬುದು ಮೇಘನಾ ಅವರ ಅತಿದೊಡ್ಡ ಕನಸಾಗಿದೆ.

ಎಕ್ಸ್ ಖಾತೆಯಲ್ಲಿ ದೇವ್ ಅವರ ಮೆಚ್ಚುಗೆಯ ನುಡಿಗಳು

ಮೇಘನಾ ಅವರ ಸಾಧನೆ, ಬದ್ಧತೆ ಮತ್ತು ಕನಸನ್ನ ಕಂಡು ಅಪಾರ ಮೆಚ್ಚುಗೆ ವ್ಯಕ್ತಪಡಿಸಿರುವ ದೇವ್, ಅವರನ್ನ ತಮ್ಮ ತಂಡಕ್ಕೆ ಅತ್ಯಂತ ಹೆಮ್ಮೆಯಿಂದ ಸ್ವಾಗತಿಸಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ಮೇಘನಾ ಕಥೆಯನ್ನ ಹಂಚಿಕೊಂಡಿರುವ ಅವರು, "ನಮ್ಮ ಕನಸುಗಳು ನಾವು ಎಲ್ಲಿಂದ ಬಂದೆವು, ನಮ್ಮ ಹಿನ್ನೆಲೆ ಏನು ಎಂಬುದರ ಮೇಲೆ ಎಂದಿಗೂ ಅವಲಂಬಿತವಾಗಿಲ್ಲ. ಅವು ಕೇವಲ ನಮ್ಮ ಧೈರ್ಯ, ಕಠಿಣ ಪರಿಶ್ರಮ ಮತ್ತು ಮುನ್ನಡೆಯುವ ದೃಢ ನಿರ್ಧಾರ ಮೇಲೆ ನಿಂತಿವೆ. ಮೇಘನಾ, ನೀವು ಕಷ್ಟಪಟ್ಟು ಕೆಲಸ ಮಾಡಿ. ನಿಮ್ಮ ಕುಟುಂಬಕ್ಕಾಗಿ ಒಂದು ಉತ್ತಮ ಜೀವನವನ್ನ ಕಟ್ಟಿಕೊಳ್ಳಿ. ನಿಮ್ಮ ಸಹೋದರನಿಗೆ ಆಸರೆಯಾಗಿರಿ. ಇನ್ನಷ್ಟು ಕಲಿಯಿರಿ, ಇತರರಿಗೂ ಕಲಿಸಿ ಮತ್ತು ಸಮಾಜದಲ್ಲಿ ಒಂದೊಳ್ಳೆ ಬದಲಾವಣೆ ತನ್ನಿ," ಎಂದು ಶುಭ ಹಾರೈಸಿದ್ದಾರೆ.

"ಮುಂದೊಂದು ದಿನ ನೀವು ತರಗತಿಯಲ್ಲಿ 'ಡಾಕ್ಟರ್ ಮೇಘನಾ ಲಕ್ಷ್ಮಣ್' ಆಗಿ ನಿಂತು ಮತ್ತೊಬ್ಬ ಯುವ ವಿದ್ಯಾರ್ಥಿಗೆ ದೊಡ್ಡ ಕನಸು ಕಾಣಲು ಸ್ಪೂರ್ತಿಯಾಗುವುದನ್ನ ನೋಡಲು ನಾನು ಕಾಯುತ್ತಿದ್ದೇನೆ" ಎಂಬ ದೇವ್ ಅವರ ಮಾತುಗಳು ಪ್ರತಿಯೊಬ್ಬ ವಿದ್ಯಾರ್ಥಿಗೂ ಪ್ರೇರಣೆ ಎನ್ನಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+