JDS Election Manifesto: ಕೈಗಾರಿಕಾ ಅಭಿವೃದ್ಧಿಗೆ ಜೆಡಿಎಸ್ ಯೋಜನೆಗಳು ಹೀಗಿವೆ
ಬೆಂಗಳೂರು, ಏಪ್ರಿಲ್. 27: ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಸಮಯದಲ್ಲಿ ಜೆಡಿಎಸ್ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಬೆಂಗಳೂರಿನ ಜೆಪಿ ಭವನದಲ್ಲಿ "ಜನತಾ ಪ್ರಣಾಳಿಕೆ"ಯನ್ನು ಬಿಡುಗಡೆ ಮಾಡಲಾಯಿತು. ವರ್ಷಕ್ಕೆ ಐದು ಎಲ್‌ಪಿಜಿ ಸಿಲಿಂಡರ್, ವಿಧವಾ ವೇತನ, ಅಂಗನವಾಡಿ ಕಾರ್ಯಕರ್ತೆಯರಿಗೆ ಖಾಯಂ ಉದ್ಯೋಗ ಸೇರಿದಂತೆ ಹಲವು ಅಂಶಗಳನ್ನು ಸೇರಿಸಲಾಗಿದೆ.
ಪ್ರಣಾಳಿಕೆ ಬಿಡುಗಡೆ ವೇಳೆ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ, ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ಪ್ರಣಾಳಿಕೆ ಸಮಿತಿ ಅಧ್ಯಕ್ಷ ಬಿ ಎಂ ಫಾರೂಕ್, ಪಕ್ಷದ ಕಾರ್ಯಾಧ್ಯಕ್ಷ ಅಲ್ಕೋಡ್ ಹನುಮಂತಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯ ರಮೇಶ್ ಗೌಡ ಮುಂತಾದವರು ಹಾಜರಿದ್ದರು.

ಪ್ರಣಾಳಿಕೆಯಲ್ಲಿ ಕೈಗಾರಿಕಾಭಿವೃದ್ಧಿಗೂ ಮನ್ನಣೆ ನೀಡಲಾಗಿದ್ದು, ಹಲವು ಅಂಶಗಳನ್ನು ಸೇರಿಸಲಾಗಿದೆ. ರೈರು ಮತ್ತು ಕೈಗಾರಿಕೋದ್ಯಮಿಗಳಿಗೆ ಅನುಕೂಲವಾಗುವಂತೆ ಹಲವು ಕಾರ್ಯಕ್ರಮಗಳನ್ನು ಸೇರಿಸಲಾಗಿದೆ. ಅದರ ಪಟ್ಟಿ ಕೆಳಗಿದೆ.
*ಮಹತ್ವಾಕಾಂಕ್ಷೆ ಜಿಲ್ಲೆಗಳ ಕೃಷಿ ಮತ್ತು ಉದ್ಯಮ ಆಧಾರಿತ ಕ್ಲಸ್ಟರ್‌ಗಳ ಸ್ಥಾಪನೆ*
* ಸಕ್ಕರೆ ನಾಡು ಮಂಡ್ಯದ ಮೈಶುಗರ್ ಕಾರ್ಖಾನೆ ಸ್ಥಳದಲ್ಲಿ 1000 ಕೋಟಿ ರೂ. ಅಂದಾಜು ಮೊತ್ತದಲ್ಲಿ ಹೊಸ ಮೈಶುಗರ್ ಕಾರ್ಖಾನೆ.
* ಕಿತ್ತೂರು ಕರ್ನಾಟಕದ ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಚರ್ಮೋದಯದ ಒಂದು ಕ್ಲಸ್ಟರ್ ನ್ನು 1000 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಸ್ಥಾಪನೆ ಮಾಡಲಾಗುವುದು.
* ಚಿನ್ನದ ಗಣಿನಾಡು ಕೋಲಾರ ಜಿಲ್ಲೆತರಕಾರಿ - ಹಣ್ಣುಹಂಪಲು ತವರೂರು. ಜಿಲ್ಲೆಯಲ್ಲಿ ಅತಿ ಹೆಚ್ಚಾಗಿ ಬೆಳೆಯುವ ಟೊಮೊಟೊ ಬೆಳೆ ಸಂಸ್ಕರಣೆಗೆ 1000 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಕ್ಲಸ್ಟರ್ ಸ್ಥಾಪನೆ ಮಾಡಲಾಗುವುದು.

* ರೇಷ್ಮೆ ನಾಡುಗಳಾದ ರಾಮನಗರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 1000 ಕೋಟಿ ರೂ ಅಂದಾಜು ಮೊತ್ತದಲ್ಲಿ ರೇಷ್ಮೆ ಕ್ಲಸ್ಟರ್ ಗಳ ಸ್ಥಾಪನೆ ಮಾಡಲಾಗುವುದು.
* ಇನ್ನುಳಿದ 15 ಜಿಲ್ಲೆಗಳಲ್ಲಿನ ಕೃಷಿ ಬೆಳೆ ಮತ್ತು ಉದ್ಯಮ ಆಧರಿತ ಉದ್ಯಮಗಳನ್ನು 5000 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಮುಂದಿನ ವರ್ಷಗಳಲ್ಲಿ ಸ್ಥಾಪಿಸಲಾಗುವುದು.
* 2003 ರ ನಗರಸಭೆ ಕಾಯಿದೆ ಅನ್ವಯ ರಾಜ್ಯದಲ್ಲಿರುವ ಪ್ರಮುಖ ಕೈಗಾರಿಕೆ ಅಭಿವೃದ್ಧಿ ಕೇಂದ್ರಗಳಲ್ಲಿ ಕೈಗಾರಿಕಾ ಪಟ್ಟಣ ಪ್ರಾಧಿಕಾರ ರಚನೆ ಮಾಡಲಾಗುವುದು.
* ರಾಜ್ಯದಲ್ಲಿರುವ ಎಲ್ಲಾ ಕೈಗಾರಿಕಾ ಪ್ರದೇಶಗಳಲ್ಲಿ ಟ್ರಕ್ ಟರ್ಮಿನಲ್ ಅಭಿವೃದ್ಧಿ ಮತ್ತು ಕೈಗಾರಿಕಾ ತ್ಯಾಜ್ಯ ವಿಂಗಡಣೆ, ವಿಲೇವಾರಿ ಕೇಂದ್ರ ಸ್ಥಾಪನೆಗೆ ಅಗತ್ಯವಿರುವ ಜಮೀನನ್ನು ಮೀಸಲು ಇಡಲಾಗುವುದು.
* ರಾಜ್ಯಮಟ್ಟದ ಮತ್ತು ಜಿಲ್ಲಾಮಟ್ಟದ ಉದ್ಯಮ, ಕೈಗಾರಿಕಾ ಯೋಜನೆ ಅನುಮೋದನೆ ಉಪಸಮಿತಿ ಮತ್ತು ಏಕ ಗವಾಕ್ಷಿಸಮಿತಿಗಳಲ್ಲಿ ಸೂಕ್ಷ್ಮಮತ್ತು ಸಣ್ಣ ಕೈಗಾರಿಕೆಗಳ ಸಂಘ ಸಂಸ್ಥೆಗಳ ಪ್ರತಿನಿಧಿಗಳಿಗೆ ಪ್ರಾತಿನಿಧ್ಯ ಒದಗಿಸಲಾಗುವುದು.
* ಮೈಸೂರು ಸೋಪ್ ಅಂಡ್ ಡಿಟರ್ಜೆಂಟ್ ಲಿಮಿಟೆಡ್ ಅನ್ನು ಪುನಚ್ಚೇತನಗೊಳಿಸುವ ಯೋಜನೆಯಲ್ಲಿ ಎರಡು ಜಿಲ್ಲೆಗಳಲ್ಲಿ ವಿಸ್ತರಣಾ ಘಟಕಗಳನ್ನು ಸ್ಥಾಪಿಸುವುದು ಮತ್ತು ದೇಶ ವಿದೇಶಗಳಲ್ಲಿ ಮೈಸೂರು ಸೋಪ್ಸ್ ಅಂಡ್ ಡಿಟರ್ಜೆಂಟ್ ಉತ್ಪನ್ನಗಳಿಗೆ ಮಾರುಕಟ್ಟೆಯನ್ನು ವಿಸ್ತರಿಸಲು ಯೋಜನೆಗಳನ್ನು ರೂಪಿಸಲಾಗುವುದು.
* ವಿಮಾನಯಾನ ಉದ್ಯಮಕ್ಕೆ ಏರ್ ಬಸ್ - 320 ಒಳಗೊಂಡಂತೆ ಪೂರಕವಾದ ದುರಸ್ತಿ ಮತ್ತು ನಿರ್ವಹಣೆ ಘಟಕಗಳನ್ನು ಹಾಸನದಲ್ಲಿ ಸ್ಥಾಪಿಸಲಾಗುವುದು.
*ತಾಲ್ಲೂಕು ಮಟ್ಟದಲ್ಲಿ ಕೈಗಾರಿಕೆ ವಸಹಾತುಗಳ ಸ್ಥಾಪನೆ*
* 2000 ಚದರ ಅಡಿ ವಿಸ್ತೀರ್ಣವುಳ್ಳ ಮತ್ತು ಎಲ್ಲಾ ಮೂಲ ಸೌಕರ್ಯಗಳನ್ನು ಒಳಗೊಂಡ ಕೈಗಾರಿಕೆ ಶೆಡ್‌ಗಳನ್ನು ನಿರ್ಮಿಸಲಾಗುವುದು. ಅವುಗಳನ್ನು ಅಡಿಕೆ ಪಟ್ಟಿ ತಟ್ಟೆ ತಯಾರಿಕೆ, ಮನೆಯಲ್ಲಿ ತಯಾರಿಸಿದ ತಿಂಡಿ ತಿನಿಸುಗಳು, ಸಿರಿ- ಧಾನ್ಯಗಳು, ಪೊಟ್ಟಣ ಕಟ್ಟುವ ಉಪ್ಪಿನಕಾಯಿ ತಯಾರಿಕೆ ಮುಂತಾದ ಸಣ್ಣ ಉದ್ಯಮಗಳ ಘಟಕಗಳನ್ನು ಸ್ಥಾಪಿಸಲು ಅತೀ ಕಡಿಮೆ ಬಾಡಿಗೆ ದರದಲ್ಲಿ ಆಸಕ್ತ ಉದ್ಯಮಿಗಳಿಗೆ ನೀಡಲಾಗುವುದು.
* ಈ ಉದ್ಯಮಿಗಳು 25 ರಿಂದ 40 ವರ್ಷದೊಳಗೆ ಇರಬೇಕು. ಮಹಿಳಾ ಉದ್ಯಮಿಗಳಿಗೆ ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಉದ್ಯಮಿಗಳಿಗೆ ಮೇಲಿನ ಕೈಗಾರಿಕಾ ಶೆಡ್‌ಗಳನ್ನು ಅತೀ ಕಡಿಮೆ ದರದಲ್ಲಿ ನೀಡಿ ಉತ್ತೇಜಿಸಲಾಗುವುದು.
*ಪ್ರತಿ ವರ್ಷ ಪ್ರತಿ ತಾಲ್ಲೂಕಿನಲ್ಲಿ ಕನಿಷ್ಠ 100 ಉದ್ಯಮಿಗಳನ್ನು ಪ್ರೋತ್ಸಾಹಿಸಿ ಬೆಳೆಸುವ ಆಶಯ ಹೊಂದಲಾಗಿದೆ.
* ಇದರೊಂದಿಗೆ ತಾಲ್ಲೂಕು ಮಟ್ಟದಲ್ಲಿ ಚೈನಾದಲ್ಲಿ ನಿರ್ಮಿಸಿರುವಂತೆ ಪೂರಕ ಕೈಗಾರಿಕಾ ಘಟಕಗಳನ್ನು (Ancillary Industrial Unit) ಸ್ಥಾಪನೆ ಮಾಡಲಾಗುವುದು.
*ಈ ಘಟಕಗಳಲ್ಲಿ ಸಿದ್ದ ಉಡುಪು ತಯಾರಿಕೆ, ಬೊಂಬೆ ತಯಾರಿಕೆ, ಬೆಳಕಿನ ವಸ್ತುಗಳ ತಯಾರಿಕೆ, ವೈದ್ಯಕೀಯ ಉಪಕರಣಗಳ ಜೋಡಣೆ, ವಿದ್ಯುತ್ ವಾಹನಗಳ ಬಿಡಿ ಭಾಗಗಳ ಘಟಕಗಳನ್ನು ಸ್ಥಾಪಿಸಿ ಯುವಕರು ಸ್ವಂತ ಉದ್ಯಮಿಗಳಾಗಲು ಪ್ರೋತ್ಸಾಹಿಸಲಾಗುವುದು.
-
LPG ಕೊರತೆ ಎಫೆಕ್ಟ್: ಬೆಂಗಳೂರಿನ ಪಿಜಿಗಳಲ್ಲಿ ಇನ್ಮುಂದೆ ಸಿಗಲ್ಲ ದೋಸೆ, ಚಪಾತಿ -
Bengaluru: SSLC ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಬಿಎಂಟಿಸಿಯಿಂದ ಉಚಿತ ಪ್ರಯಾಣ -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
ಮಾರ್ಚ್ 10ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಅಕ್ಷಯ ತೃತೀಯ 2026: ಏಪ್ರಿಲ್ 19ಕ್ಕೆ ಚಿನ್ನದಂತಹ ಹಬ್ಬ; ಶುಭ ಮುಹೂರ್ತ, ಪೂಜಾ ವಿಧಿವಿಧಾನ, ವಿವರ -
ಪ್ರವಾಸೋದ್ಯಮ ಇಲಾಖೆಯಿಂದ ಎಸ್ಸಿ,ಎಸ್ಟಿ ಅಭ್ಯರ್ಥಿಗಳಿಗೆ ಆತಿಥ್ಯ ಕ್ಷೇತ್ರದಲ್ಲಿ ಉಚಿತ ಕೌಶಲ್ಯಾಭಿವೃದ್ಧಿ ತರಬೇತಿ -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ












Click it and Unblock the Notifications