ವಿಶ್ವ ಆರ್ಥಿಕ ಸೂಚ್ಯಂಕ: 16 ಸ್ಥಾನ ಮೇಲೆಕ್ಕೇರಿದ ಭಾರತ

Written By: Ramesh
Subscribe to Oneindia Kannada

ನವದೆಹಲಿ, ಸೆ. 29 : ವಿಶ್ವ ಆರ್ಥಿಕ (ಡಬ್ಲ್ಯುಇಎಫ್‌) ಸಿದ್ಧಪಡಿಸಿರುವ 2016-17ರ ವಿಶ್ವ ಆರ್ಥಿಕತೆಯಲ್ಲಿ ಭಾರತ ಗಮನಾರ್ಹ ಸಾಧನೆ ತೋರುತ್ತಿದ್ದು, 16 ಸ್ಥಾನ ಮೇಲಕ್ಕೇರುವ ಮೂಲಕ 39ನೇ ಸ್ಥಾನ ಪಡೆದುಕೊಂಡಿದೆ.

ಕಳೆದ 2 ವರ್ಷಗಳಲ್ಲಿಯೇ ಭಾರತ ಈ ಬಾರಿ ಗರಿಷ್ಠ ಸಾಧನೆ ಮಾಡಿದ್ದು, ಕಳೆದ ವರ್ಷ (2015-16) ಭಾರತ 55ನೇ ಸ್ಥಾನದಲ್ಲಿತ್ತು. 2016-17ನೇ ಸಾಲಿನಲ್ಲಿ 138 ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ 39ನೇ ಸ್ಥಾನ ಪಡೆದುಕೊಂಡಿದೆ.

GDP

ಸಾರ್ವಜನಿಕ ಸೇವಗಳಲ್ಲಿ ಅಭಿವೃದ್ಧಿ, ವಿದೇಶಿ ಹೂಡಿಕೆ ಹಾಗೂ ಹಣಕಾಸು ವ್ಯವಹಾರಗಳಲ್ಲಿನ ಪಾರದರ್ಶಕತೆ ಸೇರಿದಂತೆ ಇನ್ನಿತರ ಅಂಶಗಳಿಂದ ಏರಿಕೆಗೆ ಕಾರರಣವಾಗಿದೆ.

ವಿಶ್ವ ಆರ್ಥಿಕ ವೇದಿಕೆ ಪ್ರಕಟಿಸಿರುವ ಪಟ್ಟಿಯಲ್ಲಿ ಭಾರತ ಪ್ರಬಲ ಪೈಪೋಟಿ ನೀಡುತ್ತಿದ್ದ ರಷ್ಯಾ, ಬ್ರೆಜಿಲ್ ಹಾಗೂ ದಕ್ಷಿಣ ಆಫ್ರಿಕಾ ರಾಷ್ಟ್ರಗಳನ್ನು ಹಿಂದಿಕ್ಕಿದ್ದು, ಚೀನಾ 28ನೇ ಸ್ಥಾನಗಳಿಸಿ ಭಾರತಕ್ಕಿಂತ ಮುಂದಿದೆ. ಉಳಿದಂತೆ ಶ್ರೀಲಂಕಾ 71 , ಭೂತಾನ್ 97 ನೇಪಾಳ 98 ಬಾಂಗ್ಲಾದೇಶ 106, ಪಾಕಿಸ್ತಾನ 122 ಸ್ಥಾನ ಪಡೆದುಕೊಂಡಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
On the back of improved monetary policy and recent reforms towards opening up the economy, India has jumped 16 places in the Global Competitiveness Index (GCI) to 39th spot, the World Economic Forum (WEF) has said.
Please Wait while comments are loading...