Independence Day 2024: ಕೆಂಪುಕೋಟೆಗೆ ಕರ್ನಾಟಕದ 56 ಸಾಧಕರಿಗೆ ಆಹ್ವಾನ

ಬೆಂಗಳೂರು, ಆಗಸ್ಟ್ 14: ಗುರುವಾರ 78ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲು ಭಾರತ ಸಿದ್ಧವಾಗುತ್ತಿದೆ. ನವದೆಹಲಿಯ ಕೆಂಪುಕೋಟೆಯ ಮೇಲೆ ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣ ಮಾಡಿ, ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಕರ್ನಾಟಕದ 56 ಗಣ್ಯರನ್ನು ಆಹ್ವಾನ ಮಾಡಲಾಗಿದೆ.

ಕೇಂದ್ರ ಸರ್ಕಾರ ನವದೆಹಲಿಯಲ್ಲಿ ನಡೆಯುವ 78ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಕರ್ನಾಟಕದ 56 ಗಣ್ಯರಿಗೆ ಆಹ್ವಾನ ನೀಡಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಗಣ್ಯರು, ಸ್ವಾತಂತ್ರ್ಯ ದಿನಾಚರಣೆ ಮತ್ತು ಬಳಿಕ ರಾಷ್ಟ್ರಪತಿಗಳು ಆಯೋಜಿಸುವ ಚಹಾಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ.

Independence Day 2024 At Delhi Red Fort 56 Guest From Karnataka Invited

8 ಶಿಕ್ಷಕರು, ವಿದ್ಯಾರ್ಥಿಗಳು, ನರ್ಸ್‌ಗಳು ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರನ್ನು ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಆಯೋಜನೆ ಮಾಡಲಾಗಿದೆ. ಇದರಲ್ಲಿ ವಿವಿಧ ಜಿಲ್ಲೆಗಳಿಗೆ ಸೇರಿದ ಗಣ್ಯರಿದ್ದಾರೆ. ಗುರುವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ಕೆಂಪುಕೋಟೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮಗಳು ಆರಂಭವಾಗಲಿದೆ.

ಗಣ್ಯರ ಪಟ್ಟಿ: 56 ಗಣ್ಯರ ಪೈಕಿ ಅಟಲ್ ನಾವೀನ್ಯತಾ ಮಿಷನ್ ಯೋಜನೆಯಡಿ ಬೆಂಗಳೂರಿನ ಎ. ಅಭಿನವ್, ಮೈಸೂರಿನ ನಂದನ್ ಹೆಗ್ಡೆ, ತನ್ವಿ ಗಿರೀಶ್, ಮಂಡೇಪಂಡ ಚಿತ್ರ ಉಥಾಯ, ಜ್ಯೋತಿ ಜೋಸೆಫ್‌ಗೆ ಆಹ್ವಾನ ನೀಡಲಾಗಿದೆ.

ಬಳ್ಳಾರಿಯ ಪೃಥ್ವಿರಾಜ್, ಚಿತ್ರದುರ್ಗದ ಭರಮಸಾಗರದ ಯಶ್ಮಿನ್, ಮಂಗಳೂರಿನ ಪೂರ್ವಿ ಯು. ಶೆಟ್ಟಿ, ಬಳ್ಳಾರಿಯ ಪ್ರಭಾಕರ ರೆಡ್ಡಿ, ಚಿತ್ರದುರ್ಗದ ಗುರುಶಾಂತಮ್ಮ, ಮಂಗಳೂರಿನ ಶ್ವೇತಾ, ಹಾವೇರಿಯ ಲತಾಮಣಿಗೆ ಆಹ್ವಾನವನ್ನು ಕೊಡಲಾಗಿದೆ.

ಕೇಂದ್ರ ಶಿಕ್ಷಣ ಇಲಾಖೆ ಚಂದನ, ಲೋಹಿತ್ ಬಿ. ಕಟ್ಟೀಮನಿ, ಉಮಾದೇವಿ ಅವರನ್ನು ಆಹ್ವಾನಿಸಿದೆ. ಅಂಗನವಾಡಿ ಕಾರ್ಯಕರ್ತೆಯರಾದ ಬೆಂಗಳೂರಿನ ಅಮಿತಾ, ಶಿವಮೊಗ್ಗದ ಗಾಯತ್ರಿ, ಯಲಹಂಕದ ಸುನಂದಾ ರಾಜ್‌ಪೂತ್, ಬೆಂಗಳೂರಿನ ಲಲಿತಾ. ಆಶಾ ಕಾರ್ಯಕರ್ತೆಯರಾದ ವಿಜಯಪುರದ ಸವಿತಾ ಶ್ರೀಪತಿ, ಮೇಲುಕೋಟೆಯ ನೇತ್ರಾವತಿಗೆ ಆಹ್ವಾನ ನೀಡಲಾಗಿದೆ.

ಚಿತ್ರದುರ್ಗದ ವೀಣಾ, ಕೊಪ್ಪಳದ ಶಶಿಕಲಾ, ಉತ್ತರ ಕನ್ನಡದ ಸುಧಾ ಗಣೇಶ್ ಸಿದ್ಧಿ, ನರಗುಂದದ ಅಕ್ಷತಾ ಆರ್. ಪಾಟೀಲ್, ತುರುವೇಕರೆಯ ಭವ್ಯಾ ಎಂ. ಟಿ., ಹಾಸನದ ರೋಜಾ ಎಸ್. ಡಿ., ಅನಿಲ್ ಕುಮಾರ್, ಬಳ್ಳಾರಿ ಸಂಗೀತಾ ತಿಗರಿ ಮತ್ತು ಅವಿನಾಶ್ ಕುಮಾರ್, ಕಲಬುರಗಿಯ ಸಂಗೀತಾ ಮತ್ತು ಬಸವರಾಜು, ಕೊಪ್ಪಳದ ವೀನಾ ಕಲ್ಲಪ್ಪ ಬಡಿಗೇರ್ ಮತ್ತು ಗುರು ಬಸಪ್ಪ, ಕಲಬುರಗಿಯ ಜಕ್ಕಮ್ಮ ಮತ್ತು ಬಸವರಾಜುಗೆ ಆಹ್ವಾನಿಸಲಾಗಿದೆ.

ರೈತರ ಉತ್ಪಾದಕ ಸಂಘಟನೆಗಳಿಗೆ ಸೇರಿದ ಹೊಸದುರ್ಗದ ಜಿ. ಗಿರೀಶ್ ಮತ್ತು ಜಗದಾಂಬ, ಹನುಂತಪ್ಪ ಮತ್ತು ಕಲಾವತಿ, ಗಿರೀಶ್ ಕೆ. ಆರ್. ಮತ್ತು ನೇತ್ರಾವತಿ, ಲಿಂಗರಾಜು ಮತ್ತು ನವೀನಾ ಕುಮಾರಿ, ನರಸಿಂಹಮೂರ್ತಿ ಮತ್ತು ಜಮುನಾ, ರಾಜಣ್ಣ ಮತ್ತು ಪುಷ್ಪವತಿ, ಕುಮಾರಸ್ವಾಮಿ ಮತ್ತು ಶ್ವೇತಾ, ಪವನ್ ಮತ್ತು ವನಜಾಕ್ಷಿಗೆ ಆಹ್ವಾನ ನೀಡಲಾಗಿದೆ.

ಪ್ರತಿ ವರ್ಷವೂ ಸ್ವಾತಂತ್ರ್ಯ ದಿನಾಚರಣೆಯಂದು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಕೇಂದ್ರ ಸರ್ಕಾರದ ವಿವಿಧ ಸಚಿವಾಲಯದ ಮೂಲಕ ಕೆಂಪುಕೋಟೆಯಲ್ಲಿ ನಡೆಯುವ ಸ್ವಾತಂತ್ರ್ಯ ದಿನಾಚರಣೆ ಪ್ರಧಾನ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+