ಲಾಕ್‌ಡೌನ್: ಆರೆಂಜ್ ಝೋನ್‌ಗಳಲ್ಲಿ ಏನೇನು ರಿಯಾಯತಿ?

ಬೆಂಗಳೂರು, ಏ. 28: ಪಾಶ್ಚಾತ್ಯ ದೇಶಗಳಿಗೆ ಹೋಲಿಕೆ ಮಾಡಿದ್ರೆ ನಮ್ಮ ದೇಶದಲ್ಲಿ ಕೊರೊನಾ ವೈರಸ್ ಹರಡುವಿಕೆ ಹಿಡಿತದಲ್ಲಿದೆ. ರಾಜ್ಯ ಸರ್ಕಾರ ಕೂಡ ಕೊರೊನಾ ವೈರಸ್ ಹರಡುವುದನ್ನು ತಡೆಯಲು ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತಂದಿದೆ. ಕೊರೊನಾ ವೈರಸ್‌ಗೆ ದೇಶದಲ್ಲಿಯೆ ಮೊದಲು ಸಾವು ಕರ್ನಾಟಕದ ಕಲಬುರಗಿಯಲ್ಲಿ ಆಗಿತ್ತು.

ಆರಂಭದಲ್ಲಿ 3ನೇ ಸ್ಥಾನದಲ್ಲಿದ್ದ ರಾಜ್ಯವೀಗ ಸೋಂಕು ಹರಡುವುದನ್ನು ಹತೋಟಿಕೆ ತರುವ ಮೂಲಕ 11ನೇ ಸ್ಥಾನಕ್ಕೆ ಇಳಿದಿದೆ. ಆದರೂ ಕೊರೊನಾ ವೈರಸ್ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿಲ್ಲ. ಈ ಮಧ್ಯೆ ಕಡಿಮೆ ಸಂಖ್ಯೆಯಲ್ಲಿ ಸೋಂಕು ಪತ್ತೆಯಾಗಿದ್ದ ಜಿಲ್ಲೆಗಳನ್ನು ಕಿತ್ತಲೆ ವಲಯ ಎಂದು ಗುರುತಿಸಿ ಲಾಕ್‌ಡೌನ್‌ಗೆ ಕೆಲವು ಸಡಿಲಿಕೆಗಳನ್ನು ಕೊಡಲಾಗಿದೆ.

ಒಟ್ಟು 8 ಜಿಲ್ಲೆಗಳನ್ನು ಆರೆಂಜ್‌ ವಲಯಗಳೆಂದು ಗುರುತಿಸಲಾಗಿದೆ. ಬಳ್ಳಾರಿ, ಮಂಡ್ಯ, ಬೆಂಗಳೂರು ಗ್ರಾಮಾಂತರ, ಗದಗ, ತುಮಕೂರು, ಚಿಕ್ಕಬಳ್ಳಾಪುರ, ಉತ್ತರ ಕನ್ನಡ ಹಾಗೂ ಧಾರವಾಡ ಜಿಲ್ಲೆಗಳನ್ನು ಆರೆಂಜ್‌ ಝೋನ್‌ನಲ್ಲಿ ಗುರುತಿಸಲಾಗಿದೆ. ಈ ಜಿಲ್ಲೆಗಳಲ್ಲಿ ಅಂಗಡಿಗಳು ಹಾಗೂ ಗ್ರಾಮೀಣ ಭಾಗದಲ್ಲಿ ಕೈಗಾರಿಕೆಗಳನ್ನು ತೆರೆಯಬಹುದಾಗಿದೆ.

Incharge ministers has been empowered to take decision on lockdown in Orange Zone districts

ಅಂತರ್ ಜಿಲ್ಲೆಯಲ್ಲಿ ಓಡಾಡಲು ಅವಕಾಶ ಕೊಡಲಾಗಿದೆ. ಆದರೆ ಬೇರೆ ಜಿಲ್ಲೆಗಳಿಗೆ ಹೋಗುವಂತಿಲ್ಲ. ಜೊತೆಗೆ ಯಾವುದೇ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇರುವುದಿಲ್ಲ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ಮಾಸ್ಕ್‌ ಬಳಸುವುದು ಕಡ್ಡಾಯವಾಗಿದೆ. ಜೊತೆಗೆ ಲಾಕ್‌ಡೌನ್ ಸಡಿಲಿಕೆ ಕುರಿತು ಆಯಾ ಜಿಲ್ಲೆಗಳ ಉಸ್ತುವಾರಿ ಸಚಿವರೇ ನಿರ್ಧಾರ ಕೈಗೊಳ್ಳಲು ಸರ್ಕಾರ ಅನುಮತಿ ಕೊಟ್ಟಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+