ಕರ್ನಾಟಕದಲ್ಲಿ ಹೆಣ್ಣಿಗೆ ಪರಿಚಯಸ್ಥ, ಸಂಬಂಧಿಕರಿಂದಲೇ ಹೆಚ್ಚು ಅತ್ಯಾಚಾರ! ಇಲ್ಲಿದೆ ಡೇಟಾ

ಬೆಂಗಳೂರು, ಆಗಸ್ಟ್ 29: ಹೆಣ್ಣು ಕಾಮದ ವಸ್ತುವನ್ನಾಗಿ ನೋಡುವ ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣಿಗೆ ಅತ್ಯಾಚಾರಕ್ಕೆ ಹೊರಗಿನವರಿಗಿಂತ ತಿಳಿದವರೇ ಹೆಚ್ಚು ಅತ್ಯಾಚಾರ ಎಸಗಿದ್ದಾರೆ. ಮಕ್ಕಳಿಂದ ವಯೋವೃದ್ದೆಯವರೆಗೂ ಅತ್ಯಾಚಾರಕ್ಕೆ ಒಳಗಾದವರು ಅಂಕಿ ಸಂಖ್ಯೆಯನ್ನು ಪರಿಗಣಿಸಿದರೆ ಹೆಚ್ಚು ಪರಿಚಯಸ್ಥರೇ ಆರೋಪಿಗಳಾಗಿದ್ದಾರೆ.

ರಾಜ್ಯದಲ್ಲಿ ಪರಿಚಿತರಿಂದಲೇ ಮಹಿಳೆಯರ ಮೇಲೆ ಅತ್ಯಾಚಾರಕ್ಕೆ‌ ಒಳಗಾಗುತ್ತಿರುವ ಆತಂಕಕಾರಿ ಸಂಗತಿ ಬಯಲಾಗಿದೆ. ಕಳೆದ ಏಳು ತಿಂಗಳಲ್ಲಿ ದಾಖಲಾದ ಆತ್ಯಾಚಾರ ಪ್ರಕರಣಗಳಲ್ಲಿ ಶೇ.80ಕ್ಕಿಂತ ಹೆಚ್ಚು ಮಂದಿ ಗೊತ್ತಿರುವವರೇ, ಸಂಬಂಧಿಕರೇ ಅತ್ಯಾಚಾರ ಮಾಡಿದ್ದಾರೆ ಎಂಬ ಅಘಾತಕಾರಿ ಮಾಹಿತಿ ಬೆಚ್ಚಿಬೀಳಿಸುವಂತಿದೆ.

ಜನವರಿ 2022ರಿಂದ ಜುಲೈವರೆಗೂ ರಾಜ್ಯದಲ್ಲಿ ಒಟ್ಟು 325 ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ.‌ ಈ ಪೈಕಿ 256 ಮಹಿಳೆಯರಿಗೆ ಗೊತ್ತಿರುವವರಿಂದಲೇ ಮಾನಹಾನಿಯಾಗಿದೆ. ದಾಖಲಾದ 190 ಪ್ರಕರಣಗಳಲ್ಲಿ‌ ಪರಿಚಯಸ್ಥರೇ ರೇಪ್ ಕೇಸ್‌ಗಳಲ್ಲಿ ಭಾಗಿಯಾಗಿದ್ದಾರೆ.‌ 30 ಪ್ರಕರಣಗಳಲ್ಲಿ ಸಂಬಂಧಿಕರೇ ಕೃತ್ಯವೆಸಗಿದರೆ 32 ಪ್ರಕರಣಗಳಲ್ಲಿ ನೆರೆಹೊರೆಯವರು ಹಾಗೂ 4 ವಿಚ್ಚೇದ‌ನ‌ ಹಂತದಲ್ಲಿರುವ ಪತಿಯರೇ ರೇಪ್ ಮಾಡಿರುವುದಾಗಿ ಎಂದು ಪೊಲೀಸ್ ಅಂಕಿ-ಅಂಶಗಳು ತಿಳಿಸಿವೆ. ಮಹಿಳೆಯರು ಸೇಫ್ ಎಂದುಕೊಳ್ಳುವ ಸ್ಥಳಗಳಲ್ಲಿ ತಮಗೆ ತೀರಾ ಪರಿಚಯವಿರುವ ಅಥವಾ ಸಂಬಂಧಿಕರೇ ಇಂಥಾ ಕೃತ್ಯದಲ್ಲಿ ಭಾಗಿಯಾಗಿದ್ದಾರೆ.

 ದೈಹಿಕ ಸಂಪರ್ಕ ಬೆಳೆಸಿ ಕೈಕೊಡುವ ಕೇಸ್‌

ದೈಹಿಕ ಸಂಪರ್ಕ ಬೆಳೆಸಿ ಕೈಕೊಡುವ ಕೇಸ್‌

ಪೊಲೀಸ್ ಅಂಕಿ ಅಂಶಗಳು ತಿಳಿಸುವಂತೆ ರಾಜ್ಯದಲ್ಲಿ 2021ರಲ್ಲಿ 556 ಆತ್ಯಾಚಾರ ಪ್ರಕರಣ ದಾಖಲಾಗಿದ್ದರೆ 2020ರಲ್ಲಿ 479 ಕೇಸ್ ಗಳು ವರದಿಯಾಗಿತ್ತು. ಬಹುತೇಕ ಅತ್ಯಾಚಾರ ಪ್ರಕರಣಗಳಲ್ಲಿ ಆರೋಪಿತರು ಸಂತ್ರಸ್ತೆಗೆ ಪರಿಚಯದವರಾಗಿರುತ್ತಾರೆ. ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ಅನಂತರ ವಿವಾಹ ಮಾಡಿಕೊಳ್ಳದೆ ನುಣುಚಿಕೊಳ್ಳುವವರ ಆರೋಪಿತರ ವಿರುದ್ಧ ಸಂತ್ರಸ್ತೆಯರು ಪೊಲೀಸ್ ಠಾಣೆ ಮೆಟ್ಟಿಲೇರುವ ಪ್ರಸಂಗಗಳೇ ಅಧಿಕವಾಗಿವೆ. ‌ಸಿನಿಮಾಗಳಿಂದ‌ ಪ್ರೇರಣೆಗೊಂಡಂತಿರುವ ಇಂದಿನ ಯುವ‌ ಜನಾಂಗ ಪ್ರೀತಿ- ಪ್ರೇಮ ಸೋಗಿನಲ್ಲಿ ಮರಗಳ ನಡುವೆಯೂ ಸರಸವಾಡುವ ಯುವ ಜೋಡಿಗಳು ಎಲ್ಲಾ ಮುಗಿದ ಮೇಲೆ ಮದುವೆಯಾಗದೆ ಕೈ ಕೊಟ್ಟ ಎಂದು ಪ್ರಿಯಕರನ ವಿರುದ್ಧ ದೂರು ಕೊಡುವ ಯುವತಿಯರೇ ಹೆಚ್ಚಿದ್ದಾರೆ. ಒಂದು ವೇಳೆ ಯುವತಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕಿಯರ ವಿರುದ್ಧ ಕೃತ್ಯ ಎಸಗಿರುವುದು ಕಂಡುಬಂದರೆ ಪೋಸ್ಕೊ ಪ್ರಕರಣದಡಿ ದಾಖಲಿಸಿಕೊಂಡು ಕಾನೂನು ಪ್ರಕಾರ ಪೊಲೀಸರು ಬಂಧಿಸಲಿದ್ದಾರೆ.

 ಸೆಕ್ಸ್‌ನಲ್ಲಿ ತೊಡಗಿಕೊಳ್ಳುವ ಯುವಕರು

ಸೆಕ್ಸ್‌ನಲ್ಲಿ ತೊಡಗಿಕೊಳ್ಳುವ ಯುವಕರು

ಸಾಮಾಜಿಕ ಜಾಲತಾಣಗಳಲ್ಲಿ ಆರಂಭವಾಗುವ ಸ್ನೇಹ‌‌ ಕಾಲಕ್ರಮೇಣ ಆತ್ಮೀಯತೆಗೆ ತಿರುಗಿ ಮದುವೆ ಎಂಬ ಟ್ರಂಪ್ ಕಾರ್ಡ್ ಬಳಸಿ ಭೇಟಿಯಾಗಿ ಸಂತ್ರಸ್ತೆಯರೊಂದಿಗೆ ದೈಹಿಕ‌ ಸಂಪರ್ಕ ಬೆಳೆಸಿ ನಂತರ ಆರೋಪಿಗಳು ವಂಚಿಸುತ್ತಾರೆ. ಅನಂತರ ನೊಂದ ಮಹಿಳೆಯರು ಅತ್ಯಾಚಾರ ಎಸಗಿರುವುದಾಗಿ ದೂರು ನೀಡುವುದು ಇಂದಿನ ಕಾಲಮಾನಕ್ಕೆ ಕಾಮನ್ ಆಗಿಬಿಟ್ಟಿದೆ. ಅದೇ ರೀತಿ ಡ್ರಗ್ಸ್, ಮದ್ಯಪಾನ ಸೇರಿದಂತೆ ಇನ್ನಿತರ ದುಶ್ಚಟಗಳಿಗೆ ದಾಸರಾಗಿ ಯುವಕ-ಯುವತಿಯರು ಬೇಜವಾಬ್ದಾರಿ ಕೃತ್ಯಗಳಿಗೆ ಒಂದಾಗುವ ಜೋಡಿಗಳು. ಅನಂತರ ತನನ್ನ ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿರುವುದಾಗಿಯೂ ಯುವತಿಯರು ದೂರು ನೀಡುತ್ತಾರೆ. ಮಹಿಳೆಯರ ವಿಕ್ನೆಸ್ ಬಳಸಿಕೊಂಡು ಅವರನ್ನು‌ ಬೆದರಿಸಿ ಹೀನ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುವವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸುತ್ತಾರೆ. 4 ಜಿ ಕಾಲಮಾನ ಮುಗಿದು 5 ಜಿ ಯುಗಕ್ಕೆ ಕಾಲಿಟ್ಟಿದ್ದೇವೆ. ಇಂದಿನ ಯುವಜನಾಂಗದ ಅಭಿರುಚಿಗಳು ಬದಲಾಗಿವೆ. ಸದಾ ಪಬ್, ಕ್ಲಬ್ ಹಾಗೂ ಹೈಎಂಡ್ ಪಾರ್ಟಿ ಗಳಲ್ಲಿ ಮುಳುಗಿರುವವರ ಸಂಖ್ಯೆ ದಿನನಿತ್ಯ ಹೆಚ್ಚಾಗುತ್ತಿರುವುದರಿಂದ ಲೈಂಗಿಕ ದುರ್ಬಳಕೆಯಾಗಿ ಪ್ರಕರಣ ದಾಖಲಾಗುತ್ತವೆ.

"ಪರಿಚಯಸ್ಥ ಮಹಿಳೆ ಅಥವಾ ಬಾಲಕಿಯರ ಮೇಲೆ ಆತ್ಯಾಚಾರ ಸೇರಿ ಇನ್ನಿತರ ದೌರ್ಜನ್ಯವೆಸಗಿದರೆ ದೂರು ಕೊಡಲು ಮುಂದಾಗುವುದಿಲ್ಲ. ಒಂದು ವೇಳೆ ದೂರು ನೀಡಿದರೂ ಕಾನೂನು‌ ಶಿಕ್ಷೆಯಿಂದ ತಪ್ಪಿಸಿಕೊಳ್ಳಬಹುದು ಎಂಬ ಭ್ರಮೆಯಿಂದ ಹೀನ ಕೃತ್ಯಗಳಲ್ಲಿ ಭಾಗಿಯಾಗುವವರೇ ಹೆಚ್ಚು. ಕಾನೂನು ತಿಳುವಳಿಕೆ ಕೊರತೆ ಘಟನೆಗೆ ಮತ್ತೊಂದ ಕಾರಣವಾಗಿದೆ‌. ಹೀಗಾಗಿ ತಮಗೆ ಅನ್ಯಾಯವಾದಾಗ ಧೈರ್ಯದಿಂದ ಗಟ್ಟಿಧ್ವನಿಯಿಂದ ಕೇಳಲೇಬೇಕು" ಎನ್ನುತ್ತಾರೆ ಮಕ್ಕಳ ಹಕ್ಕುಗಳ ಕಾರ್ಯಕರ್ತೆ ಆಶಿಕಾ ಶೆಟ್ಟಿ

 ಅತ್ಯಾಚಾರಕ್ಕೆ ಕಾರಣವಾಗಿದೆ ಹತ್ತಾರು ಪ್ರಭಾವ

ಅತ್ಯಾಚಾರಕ್ಕೆ ಕಾರಣವಾಗಿದೆ ಹತ್ತಾರು ಪ್ರಭಾವ

*ಕಾನೂನಿನ ಬಗ್ಗೆ ತಿಳುವಳಿಕೆ ಇಲ್ಲದಿರುವುದು
*ಡ್ರಗ್ಸ್, ಕುಡಿತ ಹಾಗೂ ಇನ್ನಿತರ ದುಶ್ಚಟ ಗುಂಗಿನಲ್ಲಿ ಅರಿವಿಲ್ಲದೆ ಅತ್ಯಾಚಾರ
*ಅಧಿಕಾರ ಹಾಗೂ ಹಣದ‌ ಪ್ರಭಾವ
*ನೀಲಿಚಿತ್ರ ವೀಕ್ಷಣೆಗೆ ದಾಸರಾಗಿ ದುಷ್ಟ ಚಟುವಟಿಕೆಗಳಲ್ಲಿ ಪ್ರೇರಣೆ
*ಬಡತನ ಸೇರಿದಂತೆ‌ ಇನ್ನಿತರ ವೀಕ್ನೆಸ್ ಬಳಸಿಕೊಂಡು ಲೈಂಗಿಕವಾಗಿ‌ ದುರ್ಬಳಕೆ
*ಪ್ರೀತಿ ಪ್ರೇಮದ ಹೆಸರಿನಲ್ಲಿ ನಂಬಿಸಿ ಅತ್ಯಾಚಾರ ಎಸಗುವುದು
*ಕೆಲಸ ಕೊಡಿಸುವುದಾಗಿ, ಹಣ ಆಸ್ತಿ ನೀಡುವುದಾಗಿ ನಂಬಿಸಿ ಕೃತ್ಯ
ಹೀಗೆ ಪಟ್ಟಿ ಮಾಡುತ್ತಾ ಹೋದರೇ ಹೆಣ್ಣಿನ ಮೇಲಿನ ಕೌರ್ಯಕ್ಕೆ ಹತ್ತಾರು ಕಾರಣಗಳಿವೆ. ಅದೇನಾದರು ಜನರಿಗೆ ಕಾನೂನಿನ ಅರಿವನ್ನು ಮೂಡಿಸದಿದ್ದರೇ ಇಂಥಾ ಕೃತ್ಯ ಮತ್ತಷ್ಟು ಹೆಚ್ಚಾಗಲಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+