ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ: ಇಂದು ಕೊರೊನಾ ಪ್ರಕರಣಗಳಿಗಿಂತ ಡಿಸ್ಚಾರ್ಜ್ ಆದವರೇ ಹೆಚ್ಚು

|
Google Oneindia Kannada News

ಬೆಂಗಳೂರು, ಜೂನ್ 12: ಕರ್ನಾಟಕದಲ್ಲಿ ಇಂದು ಪತ್ತೆಯಾಗಿರುವ ಕೊರೊನಾ ಸೋಂಕಿತ ಪ್ರಕರಣಗಳಿಗಿಂತ ಗುಣಮುಖರಾದವರ ಸಂಖ್ಯೆಯೇ ಹೆಚ್ಚಿದೆ.

Recommended Video

Corona patient body get exchanged in Hyderabad | Oneindia Kannada

ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 271 ಹೊಸ ಕೊರೊನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿದೆ. ಆದರೆ ಸ್ವಲ್ಪ ನೆಮ್ಮದಿ ತರುವ ಸಂಗತಿ ಏನೆಂದರೆ 464 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಹೊಂದಿದ್ದಾರೆ.

ಕರ್ನಾಟಕದಲ್ಲಿ ಕೊರೊನಾ ವೈರಸ್ ಸೋಂಕಿತರ 'ಮೂಲ'ವೇ ಇದು!ಕರ್ನಾಟಕದಲ್ಲಿ ಕೊರೊನಾ ವೈರಸ್ ಸೋಂಕಿತರ 'ಮೂಲ'ವೇ ಇದು!

ರಾಜ್ಯದಲ್ಲಿ ಒಟ್ಟು 2995 ಸಕ್ರಿಯ ಪ್ರಕರಣಗಳಿವೆ. ಇಂದು ಒಟ್ಟು 7 ಮಂದಿ ಮೃತಪಟ್ಟಿದ್ದಾರೆ. ಇಲ್ಲಿಯವರೆಗೆ 79 ಮಂದಿ ಸಾವಿಗೀಡಾಗಿದ್ದಾರೆ. 6516 ಖಚಿತ ಪ್ರಕರಣಗಳಿವೆ. 19 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

In Karnataka Discharged Cases Are More Than Newly Detected Coronavirus Cases

ಪತ್ತೆಯಾದ ಪ್ರಕರಣಗಳಲ್ಲಿ 14 ಮಂದಿ ಅಂತಾರಾಷ್ಟ್ರೀಯ ಪ್ರಯಾಣಿಕರಿದ್ದಾರೆ, 92 ಮಂದಿ ಅಂತರಾಜ್ಯ ಪ್ರಯಾಣಿಕರಿದ್ದಾರೆ.

ಇಂದು 9835 ಮಾದರಿಗಳ ಪರೀಕ್ಷೆ ಮಾಡಲಾಗಿದೆ. ಅದರಲ್ಲಿ 9139 ಪ್ರಕರಣಗಳು ನೆಗೆಟಿವ್ ಬಂದಿದೆ. ಬಳ್ಳಾರಿಯಲ್ಲಿ 97, ಬೆಂಗಳೂರು ನಗರದಲ್ಲಿ 36, ಉಡುಪಿಯಲ್ಲಿ 22, ಕಲಬುರಗಿಯಲ್ಲಿ 20, ಧಾರವಾಡದಲ್ಲಿ 19, ದಕ್ಷಿಣ ಕನ್ನಡದಲ್ಲಿ 17, ಬೀದರ್‌ನಲ್ಲಿ 10, ಹಾಸನದಲ್ಲಿ 9, ಮೈಸೂರಿನಲ್ಲಿ 9, ತುಮಕೂರಿನಲ್ಲಿ 7, ಶಿವಮೊಗ್ಗದಲ್ಲಿ 6, ರಾಯಚೂರು 4, ಉತ್ತರ ಕನ್ನಡ 4, ಚಿತ್ರದುರ್ಗ 3, ರಾಮನಗರ 3, ಮಂಡ್ಯ 2, ಬೆಳಗಾವಿ 1, ವಿಜಯಪುರ 1, ಕೋಲಾರದಲ್ಲಿ 1 ಕೊರೊನಾ ಸೋಂಕಿತ ಪ್ರಕರಣ ಪತ್ತೆಯಾಗಿದೆ.

English summary
The number of Discharged cases of coronavirus Patients in Karnataka is higher than the number of cases Detected in 24 Hours.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X