• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕರ್ನಾಟಕದಲ್ಲೇ ಹೆಚ್ಚು ಕುಡುಕ 'ಮಕ್ಕಳು' ಇರೋದು

By Mahesh
|

ಬೆಂಗಳೂರು, ಜ.16: ಮದ್ಯಪಾನ ನಿಷೇಧ ಹೇರಿಕೆ ಅಸಾಧ್ಯ ಎಂದು ಸಿಎಂ ಸಿದ್ದರಾಮಯ್ಯ ಅವರು ಒಂದು ಕಡೆ ಹೇಳುತ್ತಿದ್ದರೆ, ಅಬಕಾರಿ ಸಚಿವ ಜಾರಕಿಹೊಳಿ ಅವರು ಇಲಾಖೆ ಆದಾಯ ಹೆಚ್ಚಳದ ಬಗ್ಗೆ ಚಿಂತಿಸುತ್ತಿದ್ದಾರೆ. ಈ ನಡುವೆ ಕರ್ನಾಟಕ ರಾಜ್ಯ ಇಡೀ ಭಾರತದಲ್ಲೇ ಅತಿ ಹೆಚ್ಚು ಮದ್ಯಪಾನ ಸೇವಿಸುವ ಮಕ್ಕಳನ್ನು ಹೊಂದಿದೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

ದೆಹಲಿ ಮೂಲದ ಅಖಿಲ ಭಾರತ ವೈದ್ಯಕೀಯ ಮಹಾವಿಜ್ಞಾನ ಸಂಸ್ಥೆ (All India Institute of Medical Sciences and the National Drug Dependence Treatment Centre) ಮತ್ತು ರಾಷ್ಟ್ರೀಯ ಮಾದಕ ವಸ್ತುಗಳ ನಿಯಂತ್ರಣ ಕೇಂದ್ರ ನಡೆಸಿದ ಸಮೀಕ್ಷೆಯಲ್ಲಿ ಇದು ಹೊರಬಿದ್ದಿದೆ. 27 ರಾಜ್ಯಗಳು ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಸಿರುವ ಸಮೀಕ್ಷೆ ಪ್ರಕಾರ, ದೇಶದಲ್ಲೇ ಕರ್ನಾಟಕ ಅತಿ ಹೆಚ್ಚಿನ ಮದ್ಯವ್ಯಸನಿ ಮಕ್ಕಳನ್ನು ಹೊಂದಿರುವ ರಾಜ್ಯವೆಂಬ ಕುಖ್ಯಾತಿ ಪಡೆದುಕೊಂಡಿದೆ. ಕರ್ನಾಟಕದಲ್ಲಿ ಶೇ 88.9ರಷ್ಟು ಮದ್ಯವ್ಯಸನಿಗಳಿದ್ದರೆ, ಮಹಾರಾಷ್ಟ್ರದಲ್ಲಿ ಶೇ 24ರಷ್ಟಿದ್ದಾರೆ ಎಂದು ಡಿಎನ್ ಎ ಪತ್ರಿಕೆ ವರದಿ ಮಾಡಿದೆ.

5 ರಿಂದ 15 ವರ್ಷ ಕೆಳಗಿನ ವಯಸ್ಕರು ಅತಿ ಹೆಚ್ಚು ಮದ್ಯಪಾನ ಸೇವಿಸುತ್ತಿದ್ದಾರೆ. 18 ರಿಂದ 27 ವರ್ಷದೊಳಗಿನ ಶೇ.88.9ರಷ್ಟು ಯುವಕರು ಮದ್ಯಪಾನ ವ್ಯಸನಿಗಳಾಗಿದ್ದಾರೆ. ಕರ್ನಾಟಕ ಮೊದಲ ಸ್ಥಾನ ಪಡೆದಿದ್ದರೆ, ಆಂಧ್ರ ಪ್ರದೇಶ,ಚಂಡಿಗಢ ಶೇ.84.7ರಷ್ಟು ವ್ಯಸನಿಗಳನ್ನು ಹೊಂದಿದ್ದು ನಂತರದ ಸ್ಥಾನದಲ್ಲಿವೆ. ಹರ್ಯಾಣ ಶೇ 80 ರಷ್ಟು ವ್ಯಸನಿಗಳನ್ನು ಹೊಂದಿದೆ.

ಸಮೀಕ್ಷೆಗೆ ವಿವಿಧ ಸರ್ಕಾರೇತರ ಸಂಸ್ಥೆ(ಸುಮಾರು 102)ಗಳು ಕೂಡ ಕೈ ಜೋಡಿಸಿದ್ದು, ಪ್ರಮುಖವಾಗಿ ಮದ್ಯವ್ಯಸನಿಗಳಾಗಲು ಹಲವಾರು ಕಾರಣಗಳನ್ನು ಪತ್ತೆ ಮಾಡಲಾಗಿದೆ. ಇದರಲ್ಲಿ ಪ್ರಮುಖವಾಗಿ ಅನುತ್ತೀರ್ಣವಾಗಿರುವುದು, ಪೋಷಕರ ನಿರ್ಲಕ್ಷ್ಯ, ಹಣಕಾಸಿನ ಮುಗ್ಗಟ್ಟು, ನಿರುದ್ಯೋಗ, ಜಿಗುಪ್ಸೆ ಸೇರಿದಂತೆ ಹಲವಾರು ಅಂಶಗಳು ಮದ್ಯಪಾನ ಸೇವನೆಗೆ ಕಾರಣವಾಗಿವೆ.

5 ರಿಂದ 18 ವರ್ಷದೊಳಗಿನ 4,024 ಮಕ್ಕಳನ್ನು ಸಮೀಕ್ಷೆ ನಡೆಸಿದಾಗ ಮದ್ಯಪಾನ ಸೇವಿಸುತ್ತಿರುವುದನ್ನು ಒಪ್ಪಿಕೊಂಡಿದ್ದಾರೆ. ಕೇವಲ ಯುವಕರಲ್ಲದೆ ಯುವತಿಯರು ಕೂಡ ಈ ದುಶ್ಚಟಕ್ಕೆ ಬಲಿಯಾಗುತ್ತಿದ್ದಾರೆ. ಶೇ 69.8ರಷ್ಟು ಮಕ್ಕಳು ನಗರ ಭಾಗದಲ್ಲಿದ್ದರೆ, ಶೇ 28ರಷ್ಟು ಮದ್ಯವ್ಯಸನಿ ಮಕ್ಕಳು ಸಾಮಾನ್ಯ ಪರಿಸರದ ಶಾಲೆಗೆ ಸೇರಿದ್ದರೆ, ಶೇ 12.9ರಷ್ಟು ಮುಕ್ತ ಶಾಲೆಗಳಲ್ಲಿ ವ್ಯಾಸಂಗ ಮಾಡುವವರಾಗಿದ್ದಾರೆ.

ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ದಿನದಿಂದ ದಿನಕ್ಕೆ ಇದರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ.ಮದ್ಯವ್ಯಸನಿಗಳಲ್ಲದೆ ಹೆರಾಯಿನ್, ಮಾದಕದ್ರವ್ಯಗಳು ಕೂಡಾ ಮಕ್ಕಳ ಕೈ ಸೇರುತ್ತಿದೆ ಇದನ್ನು ತಪ್ಪಿಸಲು ಜಾಗೃತಿ ಕಾರ್ಯಕ್ರಮಗಳನ್ನು ಸರ್ಕಾರ ಹಮ್ಮಿಕೊಳ್ಳಬೇಕಾಗಿದೆ ಎಂದು ವರದಿ ಸಲಹೆ ಮಾಡಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Of the 27 states and two Union territories where the survey was conducted, alcohol use among children was found to be highest in Karnataka with 88.9%. For Mumbai, the figure is 24% accordinh to AMC reports DNA.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more